‘ಶಿಳ್ಳೆ ಹಾಕಿದ್ದು ಯಾರು? ಇಷ್ಟವಿಲ್ಲದಿದ್ರೆ ಬನ್ಸ್ ತಿಂದು ಹೋಗಿ”| ಯಕ್ಷರಂಗದಿಂದಲೇ ಪ್ರೇಕ್ಷಕರ ವಿರುದ್ಧ ಕಲಾವಿದ ಅಶೋಕ್ ಭಟ್ ಉಜಿರೆ ಗರಂ
ಸಮಗ್ರ ನ್ಯೂಸ್: ಕುಂದಾಪುರದ ಹೆನ್ನಾಬೈಲಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನದ ವೇಳೆ ಕಲಾವಿದ ಉಜಿರೆ ಅಶೋಕ್ ಭಟ್ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದಾರೆ. ಭಾಗವತರು ಪದ್ಯಗಳೊಂದಿಗೆ ಆಲಾಪನೆ ನಡೆಸುತ್ತಿದ್ದಾಗ, ಕೆಲ ಪ್ರೇಕ್ಷಕರು ಶಿಳ್ಳೆ ಹಾಕಿದಿದ್ದರು. ಪದ್ಯ ಮುಗಿದ ಬಳಿಕ ಕೃಷ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಶೋಕ್ ಭಟ್, ವೇದಿಕೆಯಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ಯಕ್ಷಗಾನವೋ? ಕಂಬಳವೋ? ನಿಮಗೆ ಈ ಕ್ಷೇತ್ರದ ಮೌಲ್ಯ ಗೊತ್ತಿದೆಯೇ?” […]










