ರಾಜ್ಯ

ಕೊಪ್ಪ: ನಕ್ಸಲರಿಗೆ ಆಶ್ರಯ ನೀಡಿದ ಆರೋಪ| ಮೂವರ ವಿರುದ್ದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಒಂಟಿ ಮನೆಗೆ ನಕ್ಸಲರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಗ್ರಾಮಕ್ಕೆ ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶೃಂಗೇರಿ ಹಾಗೂ ಕೊಪ್ಪ ಗಡಿ ಭಾಗದಲ್ಲಿರುವ ಕಡೇಗುಂದಿ ಗ್ರಾಮದ ಒಂಟಿ ಮನೆಯಲ್ಲಿರುವ ಸುಬ್ಬಗೌಡ ಎಂಬುವವರ ಮನೆಗೆ ನಕ್ಸಲ್ ಚಳುವಳಿಯ ಮುಂಡಗಾರು ಲತಾ, ಜಯಣ್ಣ ಸೇರಿದಂತೆ ಇನ್ನಿಬ್ಬರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆ ದಾಳಿ ನಡೆಸಿದ್ದಾರೆ. […]

ಕೊಪ್ಪ: ನಕ್ಸಲರಿಗೆ ಆಶ್ರಯ ನೀಡಿದ ಆರೋಪ| ಮೂವರ ವಿರುದ್ದ ಪ್ರಕರಣ ದಾಖಲು Read More »

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ₹ 605 ಕೋಟಿ ಲಾಭಾಂಶ ವಿತರಣೆ

ಸಮಗ್ರ ನ್ಯೂಸ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 605 ಕೋಟಿ ಲಾಭಾಂಶ ವಿತರಿಸಲಾಯಿತು. ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ‌ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು, ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್ ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೋಶನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ‘ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ₹ 605 ಕೋಟಿ ಲಾಭಾಂಶ ವಿತರಣೆ Read More »

16 ಲಕ್ಷ ರೂ.ಗಾಗಿ ಪ್ರೇಯಸಿಯ ದೇಹ 16 ತುಂಡು ಮಾಡಿದ ಪ್ರಿಯಕರ! ಯಾರಿಗೂ ಕಾಣದಂತೆ

ಸಮಗ್ರ ನ್ಯೂಸ್:ಇತ್ತೀಚೆಗಷ್ಟೇ ತೆಲಂಗಾಣ ಮೂಲದ ಪ್ರಿಯಕರನೊಬ್ಬ 16 ಲಕ್ಷ ರೂ. ಹಣದ ದಾಹಕ್ಕೆ ತಾನು ಇಷ್ಟಪಟ್ಟು ಪ್ರೀತಿಸಿದ ಹುಡುಗಿಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರಿಯಕರನ ಮೋಸದ ಜಾಲಕ್ಕೆ ತುತ್ತಾದ 30 ವರ್ಷದ ಸ್ವಾತಿ, 20 ತುಂಡಾಗಿ ಭೂಮಿ ಸೇರಿದ ಘಟನೆ ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಜೂಲುರುಪಾಡು ಮಂಡಲದ ಕೊಮ್ಮುಗುಡೆಂನಲ್ಲಿ ಸಂಭವಿಸಿದೆ. ಆರೋಪಿ ವೀರಭದ್ರ ಮತ್ತು ಸ್ವಾತಿ ಇಬ್ಬರು ಪ್ರೇಮಿಗಳು. ಇತ್ತೀಚೆಗಷ್ಟೇ ಸಿಂಗರೇಣಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ ಇವರಿಬ್ಬರು, ಪತಿ-ಪತ್ನಿಯರಾದ ರತ್ನಕುಮಾರ್

16 ಲಕ್ಷ ರೂ.ಗಾಗಿ ಪ್ರೇಯಸಿಯ ದೇಹ 16 ತುಂಡು ಮಾಡಿದ ಪ್ರಿಯಕರ! ಯಾರಿಗೂ ಕಾಣದಂತೆ Read More »

ಆಟೋ ಡ್ರೈವರ್ V/S ಟೆಕ್ಕಿ: ಕನ್ನಡ ವಿಚಾರಕ್ಕೆ ಮತ್ತೆ

ಸಮಗ್ರ ನ್ಯೂಸ್:ಆಟೋ ಡ್ರೈವ‌ರ್ ಮತ್ತು ಟೆಕ್ಕಿ ನಡುವೆ ಕನ್ನಡ ವಿಚಾರಕ್ಕೆ ವಾ‌ರ್ ನಡೆದಿದೆ.ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಟೋ ಡ್ರೈವರ್ ಮತ್ತು ಸಾಕ್ಷಿ ಎಂಬಾಕೆಯಿಂದ ಆಟೋದಲ್ಲಿ ಮಾತಿನ ಚಕಮಕಿ ನಡೆದಿದೆ. 80 ರಷ್ಟು ಕನ್ನಡ ಮಾತನಾಡಬೇಕು. ನೀವೆಲ್ಲಾ EXTRA ಇರೋರು ಇಲ್ಲಿ ಎಂದು ಆಟೋ ಚಾಲಕ ಹೇಳಿದ್ದಾರೆ. ನಾನು ಸಿದ್ದರಾಮಯ್ಯನನ್ನೆ ಕರುಸುತ್ತೀನಿ ಎಂದು ಆಟೋ ಚಾಲಕನ ವಾದ ಮಾಡಿದ್ದಾರೆ. ನೀವು ಅಷ್ಟೆಲ್ಲಾ ಮಾತನಾಡಬೇಡಿ ನೀಮ್ಮದು ಎಷ್ಟಿದೆ ಅಷ್ಟು ಮಾತ್ರ ನೋಡಿ ಎಂದು ಮಹಿಳೆ

ಆಟೋ ಡ್ರೈವರ್ V/S ಟೆಕ್ಕಿ: ಕನ್ನಡ ವಿಚಾರಕ್ಕೆ ಮತ್ತೆ Read More »

3 ವರ್ಷದ ಮಗನ ಸಾವು; ಸಂಶಯ ವ್ಯಕ್ತಪಡಿಸಿದ ತಾಯಿ: ಪರೀಕ್ಷೆಗೆ ಹೂತಿದ್ದ ಶವ ಹೊರಕ್ಕೆ

ಸಮಗ್ರ ನ್ಯೂಸ್:ಮಗನ ಸಾವಿನ ಕುರಿತು ತಾಯಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದು, ಹೂತಿದ್ದ ಶವವನ್ನು ಪರೀಕ್ಷೆಗಾಗಿ ಹೊರತೆಗೆಯುವ ಪ್ರಕ್ರಿಯೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಸ್ಮಶಾನಗಟ್ಟಿಯಲ್ಲಿ ನಡೆಯುತ್ತಿದೆ.ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್‌ಐ ಜನಾರ್ದನ ಭಟ್ರಳ್ಳಿ ಸ್ಥಳದಲ್ಲಿ ಇದ್ದಾರೆ. ಮಗ ಯಲ್ಲಪ್ಪ (3) ಸಾವು ಸಹಜವಲ್ಲ, ಪಕ್ಕದ ಮನೆಯವರು ಕೊಲೆ ಮಾಡಿರಬಹುದು ಎಂದು ತಾಯಿ ಶಾಂತಾ ಅವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಇನ್‌ಕ್ವೆಸ್ಟ್ ಪಂಚನಾಮೆ, ಪರೀಕ್ಷೆ ಶವ ಹೊರತೆಗೆಯಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಯಮನೂರಿನ ವೆಂಕಪ್ಪ ಮತ್ತು ಶಾಂತಾ

3 ವರ್ಷದ ಮಗನ ಸಾವು; ಸಂಶಯ ವ್ಯಕ್ತಪಡಿಸಿದ ತಾಯಿ: ಪರೀಕ್ಷೆಗೆ ಹೂತಿದ್ದ ಶವ ಹೊರಕ್ಕೆ Read More »

ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಏಕಾಏಕಿ ಸ್ಫೋಟ

ಸಮಗ್ರ ನ್ಯೂಸ್:ಮಹಾರಾಷ್ಟ್ರದ ಜಲ್ಲಾಂವ್‌ನ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್‌ಗೆ ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಸ್ಫೋಟಗೊಂಡಿದ್ದು, ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬ ಭಾರೀ ದುರಂತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಸ್ಫೋಟದ ಪರಿಣಾಮದಿಂದಾಗಿ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.ಅಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಮತ್ತು ಅವರ ಕುಟುಂಬವನ್ನು ಎರಾಂಡೋಲ್ ಸರ್ಕಾರಿ ಆಸ್ಪತ್ರೆಯಿಂದ ಜಲ್ಲಾಂವ್‌ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಅಂಬ್ಯುಲೆನ್ಸ್ ಚಾಲಕ ತನ್ನ ವಾಹನದ

ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಏಕಾಏಕಿ ಸ್ಫೋಟ Read More »

ಕಡಬ: ಜೋಪಡಿ ಮೇಲೆ ಘರ್ಜಿಸಿದ ಬುಲ್ಡೋಜರ್| ಬೀದಿಗೆ ಬಿದ್ದ ವೃದ್ಧ ದಂಪತಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಕಡಬದಲ್ಲಿ ಸರ್ಕಾರಿ ಜಾಗದ ಮೇಲೆ ಕಟ್ಟಿದ್ದ ಜೋಪಡಿ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದ್ದು ಇದರಿಂದ ವೃದ್ಧ ದಂಪತಿ ಬೀದಿಗೆ ಬಿದ್ದಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಆರು ವರ್ಷಗಳಿಂದ ವಾಸವಿದ್ದ ವೃದ್ಧ ದಂಪತಿಗಳ ಮನೆಯೊಂದನ್ನು ಪೊಲೀಸ್ ನೇತೃತ್ವದಲ್ಲಿ ಅಧಿಕಾರಿಗಳು ನೆಲಸಮ ಮಾಡಿದ ಅಮಾನವೀಯ ಘಟನೆ ನಡೆದಿದೆ. ಕಡಬದ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ಮನೆಯನ್ನು ಬುಧವಾರ ಏಕಾಏಕಿ ಧ್ವಂಸಗೊಳಿಸಲಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ

ಕಡಬ: ಜೋಪಡಿ ಮೇಲೆ ಘರ್ಜಿಸಿದ ಬುಲ್ಡೋಜರ್| ಬೀದಿಗೆ ಬಿದ್ದ ವೃದ್ಧ ದಂಪತಿ Read More »

ಸಚಿವ ಜಮೀರ್ ಗೆ ಧರ್ಮ, ಜಾತಿನಿಂದನೆ, ಅವಹೇಳನಕಾರಿ ಹೇಳಿಕೆ| ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಅವಹೇಳನಕಾರಿ ಮಾತು ಹಾಗೂ ಧರ್ಮ ಮತ್ತು ಜಾತಿ ನಿಂದನೆ ಮಾಡಿದ್ದ ಪುನೀತ್ ಕೆರೆ ಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸಚಿವ ಜಮೀರ್ ಆಪ್ತಸಹಾಯಕ‌ ಎಸ್. ಅಶೋಕ್ ನೀಡಿದ ದೂರು ಆಧರಿಸಿ ಬುಧವಾರ ಎಫ್ ಐ ಆರ್ ದಾಖಲಾಗಿದೆ. ನವೆಂಬರ್ 11 ರಂದು ಪುನೀತ್ ಕೆರೆ ಹಳ್ಳಿ ಅವರು ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲ

ಸಚಿವ ಜಮೀರ್ ಗೆ ಧರ್ಮ, ಜಾತಿನಿಂದನೆ, ಅವಹೇಳನಕಾರಿ ಹೇಳಿಕೆ| ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ Read More »

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಡಿಜಿಟಲ್ ಸ್ಮಾರ್ಟ್ ಲಗೇಜ್ ಲಾಕ್ ವ್ಯವಸ್ಥೆ

ಸಮಗ್ರ ನ್ಯೂಸ್‌: ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಿಜಿಟಲ್ ಸ್ಮಾರ್ಟ್ ಲಗೇಜ್ ಲಾಕ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಲಾಕಿಂಗ್ ವ್ಯವಸ್ಥೆಯನ್ನು ಮೆಜೆಸ್ಟಿಕ್ ಸೇರಿದಂತೆ ಹಲವಾರು ಇತರ ನಿಲ್ದಾಣಗಳಲ್ಲಿ ಪರಿಚಯಿಸಲಾಗಿದೆ. ಇವು ಪ್ರಯಾಣಿಕರು ತಮ್ಮ ಲಗೇಜ್ ಮತ್ತು ವಸ್ತುಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಬಹುದಾದ ಲಾಕರ್‌ಳಾಗಿವೆ. ಪ್ರಯಾಣಿಕರ ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಕಾಯ್ದಿರಿಸಲು 70 ರೂ. ದರವನ್ನು ನಿಗದಿ ಮಾಡಿದರೆ ದೊಡ್ಡ ಗಾತ್ರದ ಬ್ಯಾಗ್‌ಗಳನ್ನು 6 ಗಂಟೆ ಕಾಯ್ದಿರಿಸಲು 100 ರೂ. ದರವನ್ನು ನಿಗದಿ ಮಾಡಲಾಗಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಡಿಜಿಟಲ್ ಸ್ಮಾರ್ಟ್ ಲಗೇಜ್ ಲಾಕ್ ವ್ಯವಸ್ಥೆ Read More »

ಹಸೀನಾ ಬಂಧನಕ್ಕೆ ರೆಡ್ ನೊಟೀಸ್/ ಇಂಟರ್‌ಪೋಲ್‌ಗೆ ಸೂಚಿಸಿದ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ

ಸಮಗ್ರ ನ್ಯೂಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಬಂಧನಕ್ಕೆ ರೆಡ್ ನೊಟೀಸ್ ಜಾರಿ ಮಾಡುವಂತೆ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್‌ಗೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ ಸೂಚಿಸಿದೆ. ಶೇಖ್ ಹಸೀನಾ ತನ್ನ ಆಪ್ತ ಸಹಾಯಕರು ಮತ್ತು ಮಾಜಿ ಸಚಿವರೊಂದಿಗೆ ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡುವ ಮೂಲಕ ಅವರ 15 ವರ್ಷಗಳ ಆಡಳಿತ ಅಂತ್ಯಗೊಂಡಿತ್ತು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಆಗಸ್ಟ್ 3 ರಂದು ದಕ್ಷಿಣ ಏಷ್ಯಾ ರಾಷ್ಟ್ರದ ಹಂಗಾಮಿ ನಾಯಕರಾಗಿ

ಹಸೀನಾ ಬಂಧನಕ್ಕೆ ರೆಡ್ ನೊಟೀಸ್/ ಇಂಟರ್‌ಪೋಲ್‌ಗೆ ಸೂಚಿಸಿದ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ Read More »