ರಾಜ್ಯ

ರಾಜ್ಯದ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿರಿಯ ಐಎಎಸ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಪ್ರಮುಖ ಅಧಿಕಾರಿಗಳ ಸ್ಥಳ ಬದಲಾವಣೆಗಳ ಕಾರ್ಯಕ್ಕೆ ಮುಂದಾಗಿದೆ. ಇದೀಗ 6 ಐಎಎಸ್ ಅಧಿಕಾರಿಗಳ ಜೊತೆಗೆ ಇಬ್ಬರು ಐಪಿಎಸ್ ಅಧಿಕಾರಿ​​​​ಗಳನ್ನೂ ಕೂಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯ ಹೆಚ್ಚುವರಿ ಹುದ್ದೆ ಹೊಣೆ ನೀಡಲಾಗಿದೆ. ಇನ್ನು ಐಪಿಎಸ್‌ ಅಧಿಕಾರಿಗಳಲ್ಲಿ […]

ರಾಜ್ಯದ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ Read More »

ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ| ಪರಸ್ಪರ ದಾಳಿ ನಡೆಸಿಕೊಂಡ ಇರಾನ್ – ಇಸ್ರೇಲ್

ಸಮಗ್ರ ನ್ಯೂಸ್: ಭಾರತದಲ್ಲಿ ಮಧ್ಯರಾತ್ರಿ ಸಂಭವಿಸುತ್ತಿದ್ದಂತೆ, ಇರಾನ್ ಮತ್ತು ಹೆಜ್ಬೊಲ್ಲಾ ಏಕಕಾಲದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿದವು. ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಕಡೆಗೆ ಇರಾನ್ ಸರಣಿ ಕ್ಷಿಪಣಿಗಳನ್ನು ಹಾರಿಸಿತು. ಆದಾಗ್ಯೂ, ಇಸ್ರೇಲ್ ಸೇನೆಯು ಎಲ್ಲಾ ಕ್ಷಿಪಣಿಗಳನ್ನು ತಡೆಹಿಡಿದಿದೆ ಮತ್ತು ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಹೇಳಿಕೊಂಡಿದೆ. ಏತನ್ಮಧ್ಯೆ, ಅಮೆರಿಕಾ ಮಧ್ಯಪ್ರಾಚ್ಯದಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ, ತನ್ನ ಮಿಲಿಟರಿಗೆ ದೊಡ್ಡ ದಾಳಿಗೆ ಸಿದ್ಧರಾಗುವಂತೆ ಆದೇಶಿಸಿದೆ. ಇರಾನಿನ ಕ್ರಾಂತಿಕಾರಿ ಪಡೆಗಳು ಇಂದು ರಾತ್ರಿಯ ಕಾರ್ಯಾಚರಣೆ ಕೇವಲ ಎಚ್ಚರಿಕೆ ಮಾತ್ರ

ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ| ಪರಸ್ಪರ ದಾಳಿ ನಡೆಸಿಕೊಂಡ ಇರಾನ್ – ಇಸ್ರೇಲ್ Read More »

ದೇಶದಲ್ಲಿ ಪೆಟ್ರೋಲ್ ಇಲ್ಲ, ವಿದೇಶದಲ್ಲಿ ಮರ್ಯಾದೆ ಇಲ್ಲ, ಆದರೂ ಬಿಜೆಪಿಗರ ತಿರ್ಪೆ ಶೋಕಿಗೇನು ಕಮ್ಮಿ ಇಲ್ಲ – ತಂಗಡಗಿ

ಸಮಗ್ರ ನ್ಯೂಸ್: ದೇಶದಲ್ಲಿ ಪೆಟ್ರೋಲ್‌ ಇಲ್ಲ,‌ ವಿದೇಶದಲ್ಲಿ‌ ಮರ್ಯಾದೆ ಇಲ್ಲ, ರೂಪಾಯಿಗೆ ಬೆಲೆ ಇಲ್ಲ.‌ ಮೀಡಿಯಾದ ಮುಂದೆ ಬರಲು ಧಮ್ಮಿಲ್ಲ. ಆದರೂ ಬಿಜೆಪಿ ನಾಯಕರ ತಿರ್ಪೆ ಶೋಕಿಗೆ ಕಮ್ಮಿ ಇಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಭಾನುವಾರ ಕಾರಟಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆ ಎದುರಾಗಿದ್ದು, ರೈತರ ಪರಿಸ್ಥಿತಿ ಸಂಕಷ್ಟದಲ್ಲಿದೆ. ದಿನನಿತ್ಯದ ಅಗತ್ಯ ವಸ್ತುಗಳ

ದೇಶದಲ್ಲಿ ಪೆಟ್ರೋಲ್ ಇಲ್ಲ, ವಿದೇಶದಲ್ಲಿ ಮರ್ಯಾದೆ ಇಲ್ಲ, ಆದರೂ ಬಿಜೆಪಿಗರ ತಿರ್ಪೆ ಶೋಕಿಗೇನು ಕಮ್ಮಿ ಇಲ್ಲ – ತಂಗಡಗಿ Read More »

ಸೋಮವಾರಪೇಟೆ: ಹೋಮ್ ಸ್ಟೇನಲ್ಲಿ ಯುವತಿ ಅನುಮಾಸ್ಪದ ಸಾವು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಹೋಂಸ್ಟೇ ನಲ್ಲಿ ಮೈಸೂರಿನ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿನುತಾ(27) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆ ನಿವಾಸಿಯಾಗಿರುವ ಜಗನ್ನಾಥ ಮತ್ತು ರೇಣುಕಾ ದಂಪತಿಯ ಪುತ್ರಿ ವಿನುತಾ ಸೇರಿದಂತೆ 14 ಜನರ ತಂಡ ಕೊಡಗು ಜಿಲ್ಲಾ ಪ್ರವಾಸಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ವಿನುತಾ ಕುಸಿದು ಬಿದ್ದು ಮೃತಪಟ್ಟಿದ್ದರು. ಗ್ಯಾಸ್

ಸೋಮವಾರಪೇಟೆ: ಹೋಮ್ ಸ್ಟೇನಲ್ಲಿ ಯುವತಿ ಅನುಮಾಸ್ಪದ ಸಾವು Read More »

ಕನಕಪುರದಲ್ಲಿ ಹೊಸ ದಾಳ ಉರುಳಿಸಿದ ಸಿಎಂ ಡಿಕೆಶಿ| ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಬಿಗ್ ಆಫರ್

ಸಮಗ್ರ ನ್ಯೂಸ್: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು, ಹಳೇ ಮೈಸೂರು ಭಾಗದ ರಾಜಕಾರಣದಲ್ಲಿ ಸಂಚಲನ ಮೂಡಿಸಬಲ್ಲ ದಾಳ ಉರುಳಿಸಿದ್ದಾರೆ. ಕನಕಪುರದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ರಾಜಕೀಯ ಭವಿಷ್ಯ ಹಾಗೂ ಹಳೇ ಮೈಸೂರು ಭಾಗದ ನಾಯಕತ್ವದ ಕುರಿತು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ. ನೂತನ ಸಿಎಂ ಜನರನ್ನುದ್ದೇಶಿಸಿ, ನಾನು ಇಡೀ ರಾಜ್ಯ ಸುತ್ತಬೇಕಿದೆ. ನಿಮಗೆ

ಕನಕಪುರದಲ್ಲಿ ಹೊಸ ದಾಳ ಉರುಳಿಸಿದ ಸಿಎಂ ಡಿಕೆಶಿ| ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಬಿಗ್ ಆಫರ್ Read More »

ಚುರುಕುಗೊಂಡ ಮುಂಗಾರು| ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಹವಾಮಾನ ಕೇಂದ್ರ ಪ್ರಕಾರ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಲಿದ್ದು, ಜೂ 8ರಿಂದ ಎರಡು ದಿನಗಳ ಕಾಲ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ

ಚುರುಕುಗೊಂಡ ಮುಂಗಾರು| ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ Read More »

ಬಿಗ್ ಬಾಸ್ ಗೆ ಈಗ ನೀವೂ ಪಾಲ್ಗೊಳ್ಳಬಹುದು| ಈ ಸೀಸನ್ ಜನಸಾಮಾನ್ಯರದ್ದು!!

ಸಮಗ್ರ ನ್ಯೂಸ್: ಬಿಗ್‌ಬಾಸ್‌ ಸೀಸನ್‌ 12 ಮುಗಿದು ಈಗಾಗಲೇ ಒಂದು ವರ್ಷ ಕಳೆದಿವೆ. ಪ್ರತೀ ಬಾರಿ ಬಿಗ್‌ಬಾಸ್‌ ಆರಂಭವಾದಾಗೆಲ್ಲಾ, ಬರೀ ಸಿನಿಮಾ, ಸೀರಿಯಲ್‌ ಸ್ಟಾರ್‌ಗಳನ್ನೇ ಆಯ್ಕೆ ಮಾಡುತ್ತಾರೆ.ಜನ ಸಾಮಾನ್ಯರಿಗೆ ಅವಕಾಶ ಕೊಡೋದೆ ಇಲ್ಲ ಎಂಬ ಮಾತುಗಳು ಬರ್ತಾ ಇತ್ತು. ಇದೀಗ ಈ ಬಾರಿ ಬಿಗ್‌ಬಾಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ನೂರಾರು ಮಂದಿ ಬಂದು ಹೋಗಿರುವ ದೊಡ್ಮನೆಯೊಳಗೆ ಇದೀಗ ಜನಸಾಮಾನ್ಯರು ಭಾಗವಹಿಸುವ ಅವಕಾಶ ಬಂದೊದಗಿದೆ. ಹೊರಗಡೆಯಿಂದಾ ಅರಮನೆ, ಒಳಗಡೆಯಿಂದ ಸೆರೆಮನೆ ಎಂಬ ಹಾಡಿನೊಂದಿಗೆ ಆರಂಭ ಕಂಡ ಬಿಗ್‌ಬಾಸ್‌

ಬಿಗ್ ಬಾಸ್ ಗೆ ಈಗ ನೀವೂ ಪಾಲ್ಗೊಳ್ಳಬಹುದು| ಈ ಸೀಸನ್ ಜನಸಾಮಾನ್ಯರದ್ದು!! Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದಿನನಿತ್ಯದ ಜೀವನದಲ್ಲಿ ರಾಶಿಗಳು ನಮ್ಮನ್ನು ಪ್ರಭಾವಿಸುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ? ಯಾರಿಗೆ ಲಾಭ? ದೋಷ ಪರಿಹಾರವೇನು? ಎಂಬುದನ್ನು ತಿಳಿಯೋಣ ಬನ್ನಿ… ಮೇಷ: ಗಜಕೇಸರಿ ಯೋಗ ಉಂಟಾಗಿ ಈ ವರ್ಷದ ಜೂ. 27ರವರೆಗೆ ನಡೆಯುತ್ತದೆ. ಸದಾವಕಾಶ ಸದ್ಭುದ್ಧಿ, ದೇವರ ಪ್ರಾರ್ಥನೆ, ಸ್ವಶಕ್ತಿಯಿಂದ ಅನುಕೂಲ, ಸಾಮರ್ಥ್ಯ, ಬುದ್ಧಿವಂತಿಕೆಯಿಂದ ಏನನ್ನು ಬೇಕಾದರೂ ಗಳಿಸಬಹುದು. ಹವಾಮಾನ ವೈಪರೀತ್ಯ ದಿಂದ ಶರೀರಕ್ಕೆ ಉಷ್ಣ ಜ್ವರಾದಿ ಕೆಮ್ಮು, ಕಫ ಉಂಟಾಗಬಹುದು, ಎಚ್ಚರಿಕೆ ವಹಿಸಿ. ವೃಷಭ: ಶಾಸ್ತ್ರ ಲಿಖಿತದಲ್ಲಿ ಬೇಕಾದಷ್ಟು ಯೋಗ

ದ್ವಾದಶ ರಾಶಿಗಳ ವಾರಭವಿಷ್ಯ Read More »

ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್| ಸುರ್ಜೇವಾಲಾ ಸಂಧಾನ ಸಕ್ಸಸ್

ಸಮಗ್ರ ನ್ಯೂಸ್: ‍ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ವಿವಾದಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದ ಸಂಧಾನ ಯಶಸ್ವಿಯಾಗಿದ್ದು, ರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಗೂ ಹಿರಿಯ ನಾಯಕರು ಭಾಗವಹಿಸಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ

ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್| ಸುರ್ಜೇವಾಲಾ ಸಂಧಾನ ಸಕ್ಸಸ್ Read More »

ಸಿಇಟಿ ಫಲಿತಾಂಶ| ಟಾಪ್ 10ನಲ್ಲಿ ದ.ಕ ಜಿಲ್ಲೆಯ ನಾಲ್ಕು ಮಂದಿ

ಸಮಗ್ರ ನ್ಯೂಸ್: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಎಂಜಿನಿಯರಿಂಗ್‌ ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ ನಾಲ್ಕು ದಕ್ಷಿಣ ಕನ್ನಡ ಜಿಲ್ಲೆಗೆ ಲಭಿಸಿದೆ. ಮಂಗಳೂರು ನಗರದ ಕೊಟ್ಟಾರ ಕ್ರಾಸ್‌ನ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು ಮೂರು ಮತ್ತು ಬೆಳ್ತಂಗಡಿಯ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ಒಂದು ರ‍್ಯಾಂಕ್ ಲಭಿಸಿದೆ. ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಇರಾ ಜೈನ್ ನಾಲ್ಕನೇ ರ‍್ಯಾಂಕ್ ಗಳಿಸಿದ್ದು, ಐದನೇ ರ‍್ಯಾಂಕ್ ಕೂಡ ಇದೇ ಸಂಸ್ಥೆಗೆ ಲಭಿಸಿದೆ. ಸಂಸ್ಥೆಯ ರಿಶೊನ್ ಫೆರ್ನಾಂಡಿಸ್ ಈ

ಸಿಇಟಿ ಫಲಿತಾಂಶ| ಟಾಪ್ 10ನಲ್ಲಿ ದ.ಕ ಜಿಲ್ಲೆಯ ನಾಲ್ಕು ಮಂದಿ Read More »