ರಾಜ್ಯ

ಪಾಕಿಸ್ತಾನಿ ಪ್ರಜೆಗಳ ಎಲ್ಲಾ ವೀಸಾ ರದ್ದುಗೊಳಿಸಿದ ಭಾರತ

ಸಮಗ್ರ ನ್ಯೂಸ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತೆ ಕುರಿತ ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರಗಳ ಮುಂದುವರಿಕೆಯಾಗಿ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿರುವ ಎಲ್ಲಾ ಅಸ್ತಿತ್ವದಲ್ಲಿರುವ ಮಾನ್ಯ ವೀಸಾಗಳನ್ನು ಏಪ್ರಿಲ್ 27, 2025 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ವೈದ್ಯಕೀಯ ವೀಸಾಗಳು ಏಪ್ರಿಲ್ 29, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಸ್ತುತ […]

ಪಾಕಿಸ್ತಾನಿ ಪ್ರಜೆಗಳ ಎಲ್ಲಾ ವೀಸಾ ರದ್ದುಗೊಳಿಸಿದ ಭಾರತ Read More »

ಉಗ್ರದಾಳಿಯನ್ನು ಸಮರ್ಥಿಸಿ ಜಾಲತಾಣದಲ್ಲಿ ಪೋಸ್ಟ್| ನಿಚ್ಚು ಮಂಗಳೂರು ಪೇಸ್ ಬುಕ್ ಪೇಜ್ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ್ದ ಫೇಸ್ ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ್ ಕುಮಾರ್ ಎಂಬವರು‌ ನೀಡಿದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 192 ಮತ್ತು 353(1)(,b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್​ಬುಕ್ ಪೇಜ್​ನ ಡಿಪಿ‌ಯಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿಚ್ಚು ಮಂಗಳೂರು ಎಂಬ‌ ಫೇಸ್​ಬುಕ್​ ಪೇಜ್​ನಲ್ಲಿ, “2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಮೂವರು ಮುಸ್ಲಿಮರನ್ನು‌ ಕೊಲ್ಲಲಾಗಿತ್ತು.

ಉಗ್ರದಾಳಿಯನ್ನು ಸಮರ್ಥಿಸಿ ಜಾಲತಾಣದಲ್ಲಿ ಪೋಸ್ಟ್| ನಿಚ್ಚು ಮಂಗಳೂರು ಪೇಸ್ ಬುಕ್ ಪೇಜ್ ವಿರುದ್ಧ ಎಫ್ಐಆರ್ Read More »

ಭಟ್ಕಳದಲ್ಲಿದ್ದಾರೆ 14 ಮಂದಿ ಪಾಕಿಸ್ತಾನಿಯರು| ಇವರು ಸ್ವದೇಶಕ್ಕೆ ಮರಳುತ್ತಿಲ್ಲ ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಪೆಹಗ್ಲಾಮ್ ನರಮೇಧದ‌ ಬಳಿಕ ದೇಶದಲ್ಲಿನ ಪಾಕಿಸ್ತಾನಿಯರ ವೀಸಾ ರದ್ದುಗೊಳಿಸಿ ಪಾಕಿಸ್ತಾನಕ್ಕೆ ಮರಳಲು ಭಾರತ ಸರ್ಕಾರ ಆದೇಶ ನೀಡಿದೆ. ಆದರೆ ಕರ್ನಾಟಕದ ಭಟ್ಕಳದಲ್ಲಿ 14 ಪಾಕಿಸ್ತಾನಿಯರಿದ್ದರೂ ಅವರು ಭಾರತವನ್ನು ತೊರೆಯಬೇಕಿಲ್ಲ. ಹೌದು, ಈ 14 ಮಂದಿ ಪಾಕಿಸ್ತಾನಿಯರು ಇಲ್ಲಿನವರನ್ನು ವಿವಾಹ ಆಗಿರುವುದರಿಂದ ಅವರು ದೇಶ ತೊರೆಯದೆ, ಇಲ್ಲೇ ವಾಸಿಸಬಹುದಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ.  ಆದರೆ ಭಟ್ಕಳದಲ್ಲಿರುವ ಬಹುತೇಕರು ಮಹಿಳೆಯರಾಗಿದ್ದು,

ಭಟ್ಕಳದಲ್ಲಿದ್ದಾರೆ 14 ಮಂದಿ ಪಾಕಿಸ್ತಾನಿಯರು| ಇವರು ಸ್ವದೇಶಕ್ಕೆ ಮರಳುತ್ತಿಲ್ಲ ಯಾಕೆ ಗೊತ್ತಾ? Read More »

ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಪ್ರೇಮವಿವಾಹ| ಜ್ಯೂರಿ ನರಹರಿ ದೀಕ್ಷಿತ್ ಮೇಲೆ ಗಂಭೀರ ಆರೋಪ ಮಾಡಿದ ಪೃಥ್ವಿ ತಂದೆ

ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿರುವ, ಕನ್ನಡದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮವಿವಾಹ ಆಗಿದ್ದಾರೆ. ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸಮಾಡುತ್ತಿದ್ದ ಅಭಿಷೇಕ್ ಎನ್ನುವವರ ಜೊತೆ ಮಾರ್ಚ್ 27ರಂದು ವಿವಾಹವಾಗಿದ್ದು, ಇಪ್ಪತ್ತು ದಿನಗಳ ನಂತರ ಗಾಯಕಿಯ ತಂದೆ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡುವ ಕನಸು ಹೊತ್ತಿದ್ದೆ. ಈ ವಿಷಯವನ್ನು ಜೀ ಕನ್ನಡವಾಹಿನಿಯ ಸರಿಗಮಪ ಶೋನಲ್ಲಿ ಜ್ಯೂರಿಯಾಗಿರೋ ಸಂಗೀತ

ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಪ್ರೇಮವಿವಾಹ| ಜ್ಯೂರಿ ನರಹರಿ ದೀಕ್ಷಿತ್ ಮೇಲೆ ಗಂಭೀರ ಆರೋಪ ಮಾಡಿದ ಪೃಥ್ವಿ ತಂದೆ Read More »

ಹವಾಮಾನ ವರದಿ| ಮುಂದಿನ ಐದು ದಿನ ರಾಜ್ಯದ ಅಲ್ಲಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದ ಪೂರ್ವ ಮುಂಗಾರು ಮಳೆ ಕೊಂಚ ತಣ್ಣಗಾಗಿದೆ. ಉತ್ತರ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಆಗಾಗ ಸುರಿಯುತ್ತಿದೆ. ಬುಧವಾರ ಉತ್ತರ ಕರ್ನಾಟಕದ ವಿವಿಧೆಡೆ ಭರ್ಜರಿ ಮಳೆ ದಾಖಲಾಗಿದೆ. ಮುಂದಿನ 3 ರಿಂದ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಅರ್ಧ ರಾಜ್ಯಕ್ಕೆ ಉಷ್ಣದ ಅಲೆ ಎಚ್ಚರಿಕೆ ಇದ್ದು, ಮುಂದೆ ಎಲ್ಲ ಭಾಗಗಳಲ್ಲೂ ಸಹ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ. ಹವಾಮಾನ ಇಲಾಖೆ ಪ್ರಕಾರ,

ಹವಾಮಾನ ವರದಿ| ಮುಂದಿನ ಐದು ದಿನ ರಾಜ್ಯದ ಅಲ್ಲಲ್ಲಿ ಭಾರೀ ಮಳೆ ಸಾಧ್ಯತೆ Read More »

ಈಗ ಕಾಶ್ಮೀರಕ್ಕೆ ಹೋಗುವುದು ಸ್ಮಶಾನಕ್ಕೆ ಹೋದಂತೆ: ಸಚಿವ ಸಂತೋಷ್ ಲಾಡ್

ಸಮಗ್ರ ನ್ಯೂಸ್: ಕಾಶ್ಮೀರದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಈಗ ಕಾಶ್ಮೀರಕ್ಕೆ ಹೋಗುವುದು ಸ್ಮಶಾನಕ್ಕೆ ಹೋದಂತೆ. ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಎಲ್ಲೆಡೆ ಇದ್ದವು. ಎಲ್ಲಾ ಪ್ರವಾಸಿಗರು ತೀವ್ರ ಭಯ ಮತ್ತು ಆಘಾತದಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳು, ಕುಟುಂಬ ಸದಸ್ಯರೊಂದಿಗೆ ಹೋಗಿದ್ದರು. ಪ್ರವಾಸಿಗರಲ್ಲಿರುವ ಭಯವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹೇಳಿದ್ದಾರೆ. ನಾನು ಸೇರಿದಂತೆ ಮರುಕ್ಷಣ ಅಲ್ಲಿ ಯಾರಿಗೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿರಲಿಲ್ಲ.ಬೆಂಗಳೂರಿಗೆ ಸುರಕ್ಷಿತವಾಗಿ ಹಿಂತಿರುಗುವುದು ನಮ್ಮೆಲ್ಲರ ಆದ್ಯತೆಯಾಗಿತ್ತು. ಜನರಿಗೆ

ಈಗ ಕಾಶ್ಮೀರಕ್ಕೆ ಹೋಗುವುದು ಸ್ಮಶಾನಕ್ಕೆ ಹೋದಂತೆ: ಸಚಿವ ಸಂತೋಷ್ ಲಾಡ್ Read More »

ಕಾಶ್ಮೀರದಲ್ಲಿ ಮತ್ತೆ ಉಗ್ರರ ರಣಕೇಕೆ| ಓರ್ವ ಭಾರತೀಯ ಯೋಧ ಹುತಾತ್ಮ

ಸಮಗ್ರ ನ್ಯೂಸ್: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಜಮ್ಮುಕಾಶ್ಮೀರದಲ್ಲಿ ಇದೀಗ ಭಯೋತ್ಪಾದಕರ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಜಮ್ಮುಕಾಶ್ಮೀರದ ಉದಯಪುರ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಇಂದು ಉಧಂಪುರ್‌ನ ಬಸಂತ್‌ಗಢದಲ್ಲಿ ಪ್ರಾರಂಭಿಸಲಾಯಿತು. ಸಂಪರ್ಕವನ್ನು ಸ್ಥಾಪಿಸಲಾಯಿತು ಮತ್ತು ಭೀಕರ ಗುಂಡಿನ ಚಕಮಕಿ ನಡೆಯಿತು. ನಮ್ಮ ಧೈರ್ಯಶಾಲಿಗಳಲ್ಲಿ ಒಬ್ಬರು ಆರಂಭಿಕ ವಿನಿಮಯದಲ್ಲಿ ಗಂಭೀರ ಗಾಯಗೊಂಡರು ಮತ್ತು ನಂತರ ಅತ್ಯುತ್ತಮ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ

ಕಾಶ್ಮೀರದಲ್ಲಿ ಮತ್ತೆ ಉಗ್ರರ ರಣಕೇಕೆ| ಓರ್ವ ಭಾರತೀಯ ಯೋಧ ಹುತಾತ್ಮ Read More »

ಸಿಎಂ, ಡಿಸಿಎಂ ಗೆ ಜೀವ ಬೆದರಿಕೆ ಒಡ್ಡಿದ ವ್ಯಕ್ತಿ ಪೊಲೀಸ್ ವಶಕ್ಕೆ| ಕತ್ತರಿಸಿ ಪ್ರಿಡ್ಜ್ ನಲ್ಲಿ ಇಡುವುದಾಗಿ ಈಮೇಲ್ ಹಾಕಿದ್ದ ಭೂಪ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿ ಇ-ಮೇಲ್ ಕಳುಹಿಸಿದ್ದ ಕಿಡಿಗೇಡಿಯನ್ನು ವಿಧಾನಸೌಧ ಠಾಣೆ ಪೋಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂಧೂರ್ ರಜಪೂತ್ ಹೆಸರಿನಲ್ಲಿ ಮಂಗಳವಾರ ಆರೋಪಿ ಇ-ಮೇಲ್ ಕಳುಹಿಸಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಹಣಕಾಸು ವಿಚಾರವಾಗಿ ಸ್ನೇಹಿತನೊಂದಿಗೆ ಮನಸ್ತಾಪ ಹೊಂದಿದ್ದ ಆರೋಪಿ ಇದರಿಂದ ಬೇಸತ್ತು ಸಿಎಂ ಮತ್ತು ಡಿಸಿಎಂಗೆ ಜೀವ ಬೆದರಿಕೆ ಇ-ಮೇಲ್

ಸಿಎಂ, ಡಿಸಿಎಂ ಗೆ ಜೀವ ಬೆದರಿಕೆ ಒಡ್ಡಿದ ವ್ಯಕ್ತಿ ಪೊಲೀಸ್ ವಶಕ್ಕೆ| ಕತ್ತರಿಸಿ ಪ್ರಿಡ್ಜ್ ನಲ್ಲಿ ಇಡುವುದಾಗಿ ಈಮೇಲ್ ಹಾಕಿದ್ದ ಭೂಪ Read More »

ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ವಿದ್ವಂಸಕ ಕೃತ್ಯ| ಕರ್ನಾಟಕ‌ ಬಿಜೆಪಿಯಿಂದ ಗಂಭೀರ ಆರೋಪ| ಕೆಪಿಸಿಸಿಯಿಂದ ದೂರು ದಾಖಲು

ಸಮಗ್ರ ನ್ಯೂಸ್: ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ಒಂದಲ್ಲಾ ಒಂದು ವಿಧ್ವಂಸಕ ಕೃತ್ಯ ನಡೆಯುತ್ತದೆ ಎಂದು ಕರ್ನಾಟಕ ಬಿಜೆಪಿ ಗಂಭೀರ ಆರೋಪ ಮಾಡಿದೆ. ರಾಹುಲ್ ಗಾಂಧಿ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಆದರೆ ಈಗ ಪೆಹಲ್ಗಾಮ್ ನಲ್ಲಿ ಉಗ್ರ ದಾಳಿ ವಿಚಾರ ತಿಳಿಯುತ್ತಿದ್ದಂತೇ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾರತಕ್ಕೆ ವಾಪಸಾಗಲು ತೀರ್ಮಾನಿಸಿದ್ದಾರೆ. ಇದರ ನಡುವೆ ಕರ್ನಾಟಕ ಬಿಜೆಪಿ ಘಟಕ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಇಂತಹದ್ದೊಂದು ಪೋಸ್ಟ್ ಮಾಡಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿ

ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ವಿದ್ವಂಸಕ ಕೃತ್ಯ| ಕರ್ನಾಟಕ‌ ಬಿಜೆಪಿಯಿಂದ ಗಂಭೀರ ಆರೋಪ| ಕೆಪಿಸಿಸಿಯಿಂದ ದೂರು ದಾಖಲು Read More »

ಜಮ್ಮು – ಕಾಶ್ಮೀರದಲ್ಲಿ ಮೇಘ ಸ್ಪೋಟ| 3 ಸಾವು; 100ಕ್ಕೂ ಅಧಿಕ ಮಂದಿಯ ರಕ್ಷಣೆ

ಸಮಗ್ರ ನ್ಯೂಸ್:;ಜಮ್ಮು-ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ಮೇಘಸ್ಫೋಟದ ಪರಿಣಾಮ ಭಾನುವಾರ ಸುರಿದ ಭಾರೀ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ 3 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಶನಿವಾರವೂ ಸಿಡಿಲು ಬಡಿದು ಓರ್ವ ಮಹಿಳೆ ಸೇರಿ 2 ಸಾವನ್ನಪ್ಪಿದ್ದು, ಕಳೆದೆರಡು ದಿನದಲ್ಲಿ ಜಮ್ಮುವಿನಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೇಘಸ್ಫೋಟದೊಂದಿಗೆ ವೇಗವಾಗಿ ಬೀಸುವ ಗಾಳಿ, ಭೂಕುಸಿತ, ಆಲಿಕಲ್ಲು ಮಳೆಯೂ ಸಂಭವಿಸಿದ್ದು, ಧರಂ ಕುಂಡ್‌ ಗ್ರಾಮದಲ್ಲಿ 10 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. 40ಕ್ಕೂ ಅಧಿಕ ಮನೆಗಳಿಗೆ

ಜಮ್ಮು – ಕಾಶ್ಮೀರದಲ್ಲಿ ಮೇಘ ಸ್ಪೋಟ| 3 ಸಾವು; 100ಕ್ಕೂ ಅಧಿಕ ಮಂದಿಯ ರಕ್ಷಣೆ Read More »