ರಾಜ್ಯ

ಕೆಸರುಮಯವಾದ ರಸ್ತೆ  ಗ್ರಾಮಸ್ಥರಿಂದ ರಸ್ತೆ ಮಧ್ಯೆ  ಬಾಳೆಗಿಡನೆಟ್ಟು ಆಕ್ರೋಶ

ಕಡಬ: ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದ್ದು ರೋಸಿ ಹೋದ ಸ್ಥಳೀಯರು ರಸ್ತೆಯ ಮಧ್ಯೆ ಗುಂಡಿ ತೆಗೆದು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಡಬ ತಾಲೂಕಿನ ಏನೇಕಲ್ಲು  ಸಮೀಪದ ದೇವರಹಳ್ಳಿ ಕಲ್ಲಾಜೆ ಎಂಬಲ್ಲಿ ಜು.27 ರಂದು ನಡೆದಿದೆ. ಕಳೆದ 1 ತಿಂಗಳಿನಿಂದ  ಈ ಸಮಸ್ಯೆ ಮತ್ತೆ ಹೆಚ್ಚಾಗಿದ್ದು ಸಂಬಂಧಪಟ್ಟವರಲ್ಲಿ ಹೇಳಿಯೂ ಪರಿಹಾರವಾಗದೇ ಇದ್ದುದಕ್ಕೆ  ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸುಮಾರು 12 ಮಂದಿ ಬಾಳೆಗಿಟ್ಟು ನೆಟ್ಟು ಅಧಿಕಾರಿಗಳ ನಡೆಯನ್ನು ಟೀಕಿಸಿದ್ದಾರೆ. ಇನ್ನು ಇಲ್ಲಿನ  ಮರಕತ  ದೇವಸ್ಥಾನ ಹತ್ತಿರ ಡ್ಯಾಮ್

ಕೆಸರುಮಯವಾದ ರಸ್ತೆ  ಗ್ರಾಮಸ್ಥರಿಂದ ರಸ್ತೆ ಮಧ್ಯೆ  ಬಾಳೆಗಿಡನೆಟ್ಟು ಆಕ್ರೋಶ Read More »

ಧರ್ಮಸ್ಥಳದಲ್ಲಿ ಮೃತದೇಹ ಹೂತ ಪ್ರಕರಣ| ಎಸ್ಐಟಿ ತಂಡದ ಎದುರು‌ ಹಾಜರಾದ‌ ದೂರುದಾರ

ಸಮಗ್ರ ನ್ಯೂಸ್: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಮಂಗಳೂರು ಐಬಿಗೆ ಎಸ್.ಐ.ಟಿ ತನಿಖೆಗಾಗಿ ಅಧಿಕಾರಿಗಳ ಮುಂದೆ ಮುಖಕ್ಕೆ ಕಪ್ಪು ಬಣ್ಣದ ಕವರ್ ಹಾಕಿಕೊಂಡು ದೂರುದಾರ ವ್ಯಕ್ತಿ ಇಬ್ಬರು ವಕೀಲರ ಜೊತೆ ಕಾರಿನಲ್ಲಿ ಜುಲೈ 26 ರಂದು ಬಂದು ಹಾಜರಾಗಿದ್ದಾನೆ. ಪ್ರಕರಣದ ತನಖೆಯನ್ನು ಎಸ್.ಐ.ಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಮಲ್ಲಿಕಟ್ಟೆಯಲ್ಲಿರುವ ಎಸ್ ಪಿ‌ ಕಚೇರಿಗೆ ಆಗಮಿಸಿರುವ ದೂರುದಾರ ತನಿಖಾಧಿಕಾರಿ ಅನುಚೇತ್ ಅವರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಮೃತದೇಹ ಹೂತ ಪ್ರಕರಣ| ಎಸ್ಐಟಿ ತಂಡದ ಎದುರು‌ ಹಾಜರಾದ‌ ದೂರುದಾರ Read More »

ದಕ್ಷಿಣ‌ ಕನ್ನಡ ಜಿಲ್ಲೆಗೆ ‘ತುಳುನಾಡು’ ಎಂದು ಮರು ನಾಮಕರಣವಾಗಲಿ – ಬಿಳಿಮಲೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಬದಲಿಸುವುದಾದರೇ ತುಳುನಾಡು ಅಂತಾ ಬದಲಿಸಲಿ ಎಂದು ಹೇಳಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಜಿಲ್ಲೆಯನ್ನು ಮಾಡುವುದಾದರೆ ಯಾವ ಹೆಸರು ಬೇಕಾದರೂ ಇಟ್ಟುಕೊಳ್ಳಲಿ. ಆದರೆ ಐತಿಹಾಸಿಕ ಸ್ಥಳಗಳ ಹೆಸರನ್ನು ಯಾರು ಕೂಡ ಬದಲಿಸಬಾರದು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡು ಕರ್ನಾಟಕದಿಂದ ಬೇರೆ ಆಯಿತು. ತುಳುನಾಡು ಎಂದು ಇಟ್ಟಿದ್ದರೆ

ದಕ್ಷಿಣ‌ ಕನ್ನಡ ಜಿಲ್ಲೆಗೆ ‘ತುಳುನಾಡು’ ಎಂದು ಮರು ನಾಮಕರಣವಾಗಲಿ – ಬಿಳಿಮಲೆ Read More »

ಬಂಟ್ವಾಳ: ಅನಾರೋಗ್ಯದಿಂದ ಯುವ ವಕೀಲೆ ಸಾವು

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಯುವ ಬರಹಗಾರ್ತಿ, ವಕೀಲೆ ರಾಜಶ್ರೀ ಜಯರಾಜ್ ಪೂಜಾರಿ ನಿಧನರಾಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ಕಲೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಯುವ ಪ್ರತಿಭೆ ನಿಧನರಾಗಿದ್ದು, ಆಘಾತ ಉಂಟುಮಾಡಿದೆ. ಬಂಟ್ವಾಳದ ಜಯರಾಜ್ ಮತ್ತು ಸರೋಜಿನಿ ದಂಪತಿಗಳಿಗೆ ಜನವರಿ 16, 2000 ರಂದು ಜನಿಸಿದ ರಾಜಶ್ರೀ, ಬಂಟ್ವಾಳದಲ್ಲಿ ತನ್ನ ಆರಂಭಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ ಬಡಗ ಎಕ್ಕಾರು ಮತ್ತು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಕಟೀಲಿನ ಶಿಕ್ಷಣವನ್ನು ಮುಂದುವರೆಸಿದರು. ತನ್ನ ವಿಧ್ಯಾಬ್ಯಾಸದ ಸಂದರ್ಭ

ಬಂಟ್ವಾಳ: ಅನಾರೋಗ್ಯದಿಂದ ಯುವ ವಕೀಲೆ ಸಾವು Read More »

ಧರ್ಮಸ್ಥಳ ಪ್ರಕರಣ| ಎಸ್ಐಟಿ ಯಿಂದ ತನಿಖೆ ಶುರು

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ರಚಿಸಿರುವ ಎಸ್ಐಟಿ ತಂಡ ಮಂಗಳೂರಿಗೆ ಆಗಮಿಸಿದೆ. ಇದರೊಂದಿಗೆ ಅಧಿಕೃತವಾಗಿ ಪ್ರಕರಣದ ತನಿಖೆ ಪ್ರಾರಂಭವಾಗಲಿದೆ. ತನಿಖೆಯ ಭಾಗವಾಗಿರುವ ಡಿಐಜಿ ಎಂ.ಎನ್. ಅನುಚೇತ್ ಮಂಗಳೂರಿಗೆ ಆಗಮಿಸಿ ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ. ಪೊಲೀಸ್‌ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್‌ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ಅನುಚೇತ್‌ ಮತ್ತು ದಯಾಮ ಮಾತ್ರ

ಧರ್ಮಸ್ಥಳ ಪ್ರಕರಣ| ಎಸ್ಐಟಿ ಯಿಂದ ತನಿಖೆ ಶುರು Read More »

ಕುಡಿಯದಿದ್ರೂ ಚಾಲಕರ ಮೇಲೆ ಕೇಸು ಹಾಕಿದ ಅಧಿಕಾರಿಗಳು| ಕೇರಳ ಸಾರಿಗೆ ನಿಗಮದ ಚಾಲಕರ ಪಾಲಿಗೆ ವಿಲನ್ ಆದ ಹಲಸು

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ಟಿಸಿ) ಮೂವರು ಬಸ್ ಚಾಲಕರು ಮದ್ಯಪಾನ ಮಾಡದೆ ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲವಾದ ನಂತರ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಹಲಸಿನ ಹಣ್ಣು ತಿಂದು ಕೇಸು ದಾಖಲಾದ ಈ ವಿಲಕ್ಷಣ ಘಟನೆ ಪಥನಂತಿಟ್ಟ ಜಿಲ್ಲೆಯ ಪಂದಳಂ ಡಿಪೋದಲ್ಲಿ ಕಳೆದ ವಾರ ನಡೆದಿದೆ ಎಂದು ವರದಿ ಆಗಿದೆ. ಕರ್ತವ್ಯಕ್ಕೆ ಹಾಜರಾಗುವ ಮೊದಲು ಬ್ರೀಥಲೈಸರ್ ಪರೀಕ್ಷೆ ನಿಗಮದಲ್ಲಿ ಖಡ್ಡಾಯ. ಚಾಲಕರು ಪರೀಕ್ಷೆಯನ್ನು ತೆಗೆದುಕೊಂಡಾಗ, ಸಾಧನವು ಕಾನೂನುಬದ್ಧವಾಗಿ ಅನುಮತಿಸಲಾದ ಮಿತಿಗಿಂತ 10 ರಕ್ತದ

ಕುಡಿಯದಿದ್ರೂ ಚಾಲಕರ ಮೇಲೆ ಕೇಸು ಹಾಕಿದ ಅಧಿಕಾರಿಗಳು| ಕೇರಳ ಸಾರಿಗೆ ನಿಗಮದ ಚಾಲಕರ ಪಾಲಿಗೆ ವಿಲನ್ ಆದ ಹಲಸು Read More »

ಧರ್ಮಸ್ಥಳ ಪ್ರಕರಣ| ಇಬ್ಬರು ತನಿಖಾಧಿಕಾರಿಗಳು ಹೊರಕ್ಕೆ

ಸಮಗ್ರ ನ್ಯೂಸ್: ಧರ್ಮಸ್ಥಳಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (SIT) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ. ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ, ಆಂತರಿಕ ಭದ್ರತಾ

ಧರ್ಮಸ್ಥಳ ಪ್ರಕರಣ| ಇಬ್ಬರು ತನಿಖಾಧಿಕಾರಿಗಳು ಹೊರಕ್ಕೆ Read More »

ಕೊಡಗು‌ ಜಿಲ್ಲೆಯಲ್ಲಿ ನಿಲ್ಲದ‌ ವರುಣಾರ್ಭಟ| ನಾಳೆ(ಜು.25) ಶಾಲೆ,‌ ಪಿಯು ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ನಾಳೆ ( ಜು 25) ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಗುಡ್ಡಕುಸಿತ, ನೆರೆ ಅನಾಹುತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ.

ಕೊಡಗು‌ ಜಿಲ್ಲೆಯಲ್ಲಿ ನಿಲ್ಲದ‌ ವರುಣಾರ್ಭಟ| ನಾಳೆ(ಜು.25) ಶಾಲೆ,‌ ಪಿಯು ಕಾಲೇಜುಗಳಿಗೆ ರಜೆ Read More »

ಧರ್ಮಸ್ಥಳ ವರದಿಗಳಿಗೆ ಮಾಧ್ಯಮ ನಿರ್ಬಂಧ| ಸುಪ್ರೀಂನಲ್ಲಿ ಅರ್ಜಿ ವಿಚಾರಣೆಗೆ ನಕಾರ

ಸಮಗ್ರ ನ್ಯೂಸ್: ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿರುವ ದೂರಿಗೆ ಸಂಬಂಧಿಸಿದಂತೆ, ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಅದನ್ನು ನಡೆಸುತ್ತಿರುವ ಕುಟುಂಬದ ವಿರುದ್ಧ ಯಾವುದೇ ‘ಮಾನಹಾನಿಕರ ವಿಷಯ’ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ (ಜುಲೈ 23) ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಮುಂದೆ ಅರ್ಜಿದಾರರಾದ ‘ಥರ್ಡ್ ಐ ಯೂಟ್ಯೂಬ್ ಚಾನೆಲ್’ ಪರ ವಕೀಲರು ವಿಷಯ ಪ್ರಸ್ತಾಪಿಸಿದ್ದರು.

ಧರ್ಮಸ್ಥಳ ವರದಿಗಳಿಗೆ ಮಾಧ್ಯಮ ನಿರ್ಬಂಧ| ಸುಪ್ರೀಂನಲ್ಲಿ ಅರ್ಜಿ ವಿಚಾರಣೆಗೆ ನಕಾರ Read More »

ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸುವುದು ನಿಷೇಧಿಸಿ‌ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿರುವ ಎಲ್ಲ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ

ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸುವುದು ನಿಷೇಧಿಸಿ‌ ರಾಜ್ಯ ಸರ್ಕಾರ ಆದೇಶ Read More »