ದೇಶ-ವಿದೇಶ

ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್

ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಅವರು ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಸಂಬಂಧ ಇಂದು ನಡೆದ ಬಿಎಲ್ ಪಿ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ನೂತನ ಸಿಎಂ ಆಯ್ಕೆಯನ್ನು ಘೋಷಿಸಿದರು. ಬಿಎಲ್ ಪಿ ಸಭೆಯಲ್ಲಿ ವಿಜಯ್ ರೂಪಾನಿ ಅವರು ಸಿಎಂ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ […]

ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ Read More »

ರಾಜಸ್ಥಾನ – ಮಹಿಳಾ ಕಾನ್ಸ್​ಟೇಬಲ್ ಜೊತೆ ಡಿಎಸ್ ಪಿ ರಾಸಲೀಲೆ ವಿಡಿಯೋ ವೈರಲ್ – ಪೋಕ್ಸೋ ಕಾಯ್ದೆಯಡಿ ಅಧಿಕಾರಿ ಆರೆಸ್ಟ್

ರಾಜಸ್ಥಾನ : ಮಹಿಳಾ ಕಾಸ್ಸ್ಟೇಬಲ್ ಜೊತೆ ಡಿಎಸ್ ಪಿ ಅಧಿಕಾರಿಯೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆಸಿದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರು ವರ್ಷದ ಮಗುವಿನ ಮುಂದೆಯೆ ನಡೆಸಿದ ರಾಸಲೀಲೆ ಹಿನ್ನಲೆ ಪೊಲೀಸ್ ಅಧಿಕಾರಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಅಜ್ಮೇರ್ ಜಿಲ್ಲೆಯ ಬೇವಾರ್ ನಲ್ಲಿ ಆರೋಪಿ ಅಧಿಕಾರಿ ಹೀರಾ ಲಾಲ್ ಸೈನಿ, ಸರ್ಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಹ ಕೆಲಸ ಮಾಡುತ್ತಿದ್ದರು. ಹೀರಾಲಾಲ್ ಸೈನಿ ಅವರನ್ನು

ರಾಜಸ್ಥಾನ – ಮಹಿಳಾ ಕಾನ್ಸ್​ಟೇಬಲ್ ಜೊತೆ ಡಿಎಸ್ ಪಿ ರಾಸಲೀಲೆ ವಿಡಿಯೋ ವೈರಲ್ – ಪೋಕ್ಸೋ ಕಾಯ್ದೆಯಡಿ ಅಧಿಕಾರಿ ಆರೆಸ್ಟ್ Read More »

ವೃದ್ದ‌ ಜನ್ಮದಾತರ ಹೆಗಲ ಮೇಲೆ ಹೊತ್ತೊಯ್ದ ಆಧುನಿಕ ಶ್ರವಣಕುಮಾರ| ಆತ ಅವರನ್ನು ಹೆಗಲ ಮೇಲೆ ಹೊತ್ತಿದ್ದೇಕೆ?

ಮ್ಯಾನ್ಮಾರ್: ಕಣ್ಣು ಕಾಣದ ತನ್ನ ತಂದೆ ತಾಯಿಯಂದಿರನ್ನು ಹೆಗಲ ಮೇಲೆ ಬುಟ್ಟಿಯಲ್ಲಿ ಕುಳ್ಳರಿಸಿಕೊಂಡು ತೀರ್ಥಯಾತ್ರೆ ಮಾಡಿರುವ ಶ್ರವಣ ಕುಮಾರದ ಕಥೆ ನೀವೆಲ್ಲಾ ಕೇಳಿರುತ್ತೀರಿ. ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಮ್ಯಾನ್ಮಾರ್‌ನಲ್ಲಿ ನಡೆದಿದೆ. ಮ್ಯಾನ್ಮಾರ್‌ನಿಂದ ಒಕ್ಕಲೆಬ್ಬಿಸಿದ ಮೇಲೆ ಬಾಂಗ್ಲಾದೇಶಕ್ಕೆ ತೆರಳಲೇಬೇಕಾದ ಅನಿವಾರ್ಯತೆ ಕೆಲವು ನಿರಾಶ್ರಿತರಿಗೆ ಉಂಟಾಗಿದೆ. ಆದರೆ ತಮ್ಮೂರಿಗೆ ಸಾಗಲು ಕೈಯಲ್ಲಿ ಕಾಸಿಲ್ಲದೇ ಕಷ್ಟಪಡುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದೇ ಒಬ್ಬ ನಿರಾಶ್ರಿತ ತನ್ನ ವಯಸ್ಸಾದ ತಂದೆ ತಾಯಿಯಂದಿರನ್ನು ಭುಜದ ಮೇಲೆ ಕುಳ್ಳರಿಸಿಕೊಂಡು ನಡೆದಿದ್ದಾನೆ ಎನ್ನಲಾಗಿದ್ದು, ಅದರ ಫೋಟೋ ವೈರಲ್‌

ವೃದ್ದ‌ ಜನ್ಮದಾತರ ಹೆಗಲ ಮೇಲೆ ಹೊತ್ತೊಯ್ದ ಆಧುನಿಕ ಶ್ರವಣಕುಮಾರ| ಆತ ಅವರನ್ನು ಹೆಗಲ ಮೇಲೆ ಹೊತ್ತಿದ್ದೇಕೆ? Read More »

ಅಮೇರಿಕಾದ ಆರದ‌ ಗಾಯಕ್ಕೆ ಬರೋಬ್ಬರಿ 20 ವರ್ಷ| ಉಗ್ರದಾಳಿಯಿಂದ ತತ್ತರಿಸಿದ್ದ ಆ ದಿನದ ಕರಾಳ ನೆನಪು|

ವಾಷಿಂಗ್ಟನ್(ಸೆ.12): ಅಮೆರಿಕದ ಪಾಲಿಗೆ ಗುಣವಾಗದ ಗಾಯದಂತಿರುವ 2001 ಸೆಪ್ಟೆಂಬರ್​ 09ರ, ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದ ಮೇಲೆ ಅಲ್​ಖೈದಾ ಉಗ್ರರು ನಡೆಸಿರೋ ದಾಳಿಗೆ 20 ವರ್ಷಗಳು ಸಂದಿವೆ. ಅಂದಿನ ಭಯಾನಕ, ಭಿಭತ್ಸ ಭಯೋತ್ಪಾದಕ ಘಟನೆಯನ್ನು ಅಮೆರಿಕ ಏನೂ ಇಡೀ ಜಗತ್ತೇ ಇಂದಿಗೂ ಮರೆತಿಲ್ಲ. ಸೆಪ್ಟೆಂಬರ್ 11, 2001, ಜಾಗತಿಕ ಇತಿಹಾಸದಲ್ಲಿ ಉಗ್ರ ಅಟ್ಟಹಾಸದ ವಿಶ್ವರೂಪ ಪ್ರದರ್ಶನವಾದ ದಿನ..! ವಿಶ್ವದ ದೊಡ್ಡಣ್ಣ ಎಂದೇ ಬೀಗುತ್ತಿದ್ದ ಅಮೆರಿಕ ದೇಶಕ್ಕೆ ಉಗ್ರರು ಮರ್ಮಾಘಾತ ನೀಡಿದ ದಿನ..! ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ

ಅಮೇರಿಕಾದ ಆರದ‌ ಗಾಯಕ್ಕೆ ಬರೋಬ್ಬರಿ 20 ವರ್ಷ| ಉಗ್ರದಾಳಿಯಿಂದ ತತ್ತರಿಸಿದ್ದ ಆ ದಿನದ ಕರಾಳ ನೆನಪು| Read More »

ಗುಜರಾತ್ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ

ಗುಜರಾತ್: ಕ್ಷಿಪ್ರ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನ ಭೇಟಿಯಾಗಿ ವಿಜಯ್ ರೂಪಾನಿ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರಕ್ಕೆ ಬಂದಿದ್ದು ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಇನ್ನು ರಾಜೀನಾಮೆ ನಂತರ ಹೇಳಿಕೆ ನೀಡಿರುವ ವಿಜಯ್ ರೂಪಾನಿ, ನಮ್ಮ ಪಕ್ಷದಲ್ಲಿ ಕಾಲಕ್ಕೆ

ಗುಜರಾತ್ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ Read More »

ಗಣಪತಿ ಮೂರ್ತಿ ಧ್ವಂಸ ಮಾಡಿದ ಕಿಡಿಗೇಡಿಗಳು ಗ್ರಾಮಸ್ಥರಿಂದ ಹೆಚ್ಚಿದ ಆಕ್ರೋಶ

ಚಿತ್ರದುರ್ಗ: ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕರು ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ತಡರಾತ್ರಿ ಗಣಪತಿ ಮೂರ್ತಿಯನ್ನ ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಕೃತ್ಯದಿಂದಾಗಿ ಹಿರೇಹಳ್ಳಿ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸತತ 14 ವರ್ಷಗಳಿಂದ ಗ್ರಾಮದ ಯುವಕರು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಆದರೆ ಈ ರೀತಿ ಮಾಡಿರುವುದು

ಗಣಪತಿ ಮೂರ್ತಿ ಧ್ವಂಸ ಮಾಡಿದ ಕಿಡಿಗೇಡಿಗಳು ಗ್ರಾಮಸ್ಥರಿಂದ ಹೆಚ್ಚಿದ ಆಕ್ರೋಶ Read More »

ನಟ ಸಾಯಿ ಧರ್ಮ ತೇಜ್ ಬೈಕ್ ಅಪಘಾತ: ಸ್ಥಿತಿ ಗಂಭೀರ

ಹೈದರಾಬಾದ್‌: ಇಲ್ಲಿನ ಕೇಬಲ್‌ ಸೇತುವೆಯ ಮೇಲೆ ನಡೆದ ಅಪಘಾತದಲ್ಲಿ ತೆಲುಗು ಚಿತ್ರನಟ ಸಾಯಿ ಧರ್ಮ ತೇಜ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹೈದರಾಬಾದ್‌ನ ಕೇಬಲ್‌ ಸೇತುವೆಯ ಮೇಲೆ ಸಾಯಿ ಧರ್ಮ ತೇಜ್‌ ವೇಗವಾಗಿ ಚಲಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್‌ ಅವರು ಹೆಲ್ಮೆಟ್‌ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಜುಬಿಲಿ ಹಿಲ್ಸ್‌ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಧರ್ಮ

ನಟ ಸಾಯಿ ಧರ್ಮ ತೇಜ್ ಬೈಕ್ ಅಪಘಾತ: ಸ್ಥಿತಿ ಗಂಭೀರ Read More »

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, (ಸೆ.08): ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕುಕ್, ಹೌಸ್ ಕೀಪಿಂಗ್, ಸ್ಟೋರ್ ಕೀಪರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ವಿದ್ಯಾರ್ಹತೆ: ಕಾರ್ಪೆಂಟರ್: 10ನೇ ತರಗತಿ ಪಾಸ್ ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್ ಕ್ಲರ್ಕ್: 12ನೇ ತರಗತಿ ಪಾಸ್ ಸ್ಟೋರ್ ಕೀಪರ್: 12ನೇ ತರಗತಿ ಪಾಸ್ ಪೈಂಟರ್: 10ನೇ ತರಗತಿ, ವಯೋಮಿತಿ: ಕನಿಷ್ಠ

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ|

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು ಸ್ವೀಕರಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಅಸ್ಸಾಂ ನಲ್ಲಿ ನಡೆದಿದೆ. ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯ ದೂರದ ಧಿಂಗ್ ಲಹ್ಕರ್ ಗ್ರಾಮದಲ್ಲಿ ಮೂರು ಮಕ್ಕಳ ತಾಯಿಯಾಗಿರುವ 40 ವರ್ಷದ ಮಹಿಳೆ, “ಕಳೆದ 10 ವರ್ಷಗಳಲ್ಲಿ 25 ಬಾರಿ ಬೇರೆ-ಬೇರೆ ಪುರುಷರೊಂದಿಗೆ ಪರಾರಿಯಾಗಿದ್ದಳು. ಈ ಬಗ್ಗೆ ಮಾತನಾಡಿರುವ ಆಕೆಯ ಪತಿ, 2011ರಲ್ಲಿ

10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ| Read More »

ಭಾರತದ ಕೈಬಿಡಲಿದೆ ಫೋರ್ಡ್ ಕಂಪೆನಿ| ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು| ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ ಕಾರುಗಳ ಸಾಮ್ರಾಟ|

ನವದೆಹಲಿ: ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್​ ಮೋಟಾರ್ಸ್ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅದರಂತೆ ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಫೋರ್ಡ್ ಇಂಡಿಯಾ ಘಟಕಗಳು ಬಂದ್ ಆಗಲಿವೆ. ಈ ಹಿಂದೆ ಕಂಪನಿಯು ಚೆನ್ನೈ ಮತ್ತು ಗುಜರಾತ್ ನ ಸನಂದ್ ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಕಂಪನಿಯು 2 ಬಿಲಿಯನ್ ಡಾಲರ್​ನಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೋರ್ಡ್ ಇಂಡಿಯಾ ತಿಳಿಸಿದೆ.

ಭಾರತದ ಕೈಬಿಡಲಿದೆ ಫೋರ್ಡ್ ಕಂಪೆನಿ| ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು| ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ ಕಾರುಗಳ ಸಾಮ್ರಾಟ| Read More »