ದೇಶ-ವಿದೇಶ

ರಾಜ್ಯ ಕರಾವಳಿಗೆ ಲಂಕಾ ವಲಸಿಗರ ಭೀತಿ| ಕಡಲ ಕಿನಾರೆಯಲ್ಲಿ ಕಟ್ಟೆಚ್ಚರ

ಸಮಗ್ರ ನ್ಯೂಸ್: ಆರ್ಥಿಕ ಮತ್ತು ರಾಜಕೀಯ ತಲ್ಲಣಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ವಲಸಿಗರ ಆತಂಕ ಎದುರಾಗಿದ್ದು, ರಾಜ್ಯ ಕರಾವಳಿಯಲ್ಲೂ ನಿಗಾ ಹೆಚ್ಚಿಸಲಾಗಿದೆ. ಲಂಕಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆ ಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ಬರಲು ಯತ್ನಿಸುತ್ತಿರುವುದನ್ನು ಭಾರತೀಯ ಬೇಹು ವಿಭಾಗ ಪತ್ತೆ ಹಚ್ಚಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ದ. ಭಾರತದ ಕರಾವಳಿ ರಾಜ್ಯ ಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಲಭ್ಯ ಮಾಹಿತಿಯ ಪ್ರಕಾರ ತಮಿಳುನಾಡಿಗೆ […]

ರಾಜ್ಯ ಕರಾವಳಿಗೆ ಲಂಕಾ ವಲಸಿಗರ ಭೀತಿ| ಕಡಲ ಕಿನಾರೆಯಲ್ಲಿ ಕಟ್ಟೆಚ್ಚರ Read More »

ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗ ನೇಮಕಾತಿ

ಸಮಗ್ರ ನ್ಯೂಸ್: ಪದವಿ ಪಾಸಾದವರಿಗೆ ಗುಡ್​ನ್ಯೂಸ್​ ಸಿಕ್ಕಿದ್ದು, ಕರ್ನಾಟಕ ಬ್ಯಾಂಕ್​ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ. ದೇಶಾದ್ಯಂತ ತನ್ನ ಶಾಖೆಗಳು / ಕಚೇರಿಗಳಿಗಾಗಿ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತರು ಅಧಿಕೃತ ವೆಬ್​ಸೈಟ್​ karnatakabank.com ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕನಿಷ್ಠ ಶೇ.60 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಶುಲ್ಕ: SC ಮತ್ತು ST ವರ್ಗದ ಅಭ್ಯರ್ಥಿಗಳು 600 ಶುಲ್ಕವನ್ನು ಪಾವತಿಸಬೇಕು. ಇತರೆ

ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗ ನೇಮಕಾತಿ Read More »

ಲಂಕನ್ನರ ಪ್ರತಿಭಟನೆಗೆ ಬೆದರಿದ ರಾಜಪಕ್ಸ| ಕುಟುಂಬ ಸಮೇತ ನೌಕಾನೆಲೆಗೆ ಪಲಾಯನ| ಹಿಂಸಾಚಾರಕ್ಕೆ ನಲುಗಿದ ದ್ವೀಪರಾಷ್ಟ್ರ

ಸಮಗ್ರ ನ್ಯೂಸ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕರ್ಫ್ಯೂ ನಡುವೆಯೇ ಪ್ರತಿಭಟನೆ, ಹಿಂಸಾಚಾರ ತೀವ್ರಗೊಂಡಿದೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ಲಂಕಾದ ಮಾಜಿ ಪ್ರಧಾನಿ ಮಹೀಂದ ರಾಜಪಕ್ಸ ಮತ್ತು ಅವರ ಕುಟುಂಬ ಸದಸ್ಯರು ನೌಕಾನೆಲೆಗೆ ಪಲಾಯನಗೈದಿರುವುದಾಗಿ ಮಾತುಗಳು ಕೇಳಿಬರುತ್ತಿವೆ. ಕೆಲವು ಮೂಲಗಳ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಮಾಜಿ ಪ್ರಧಾನಿ ರಾಜಪಕ್ಷ ಮತ್ತು ಕುಟುಂಬ ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರ, ಗಲಭೆಯಲ್ಲಿ ಈವರೆಗೆ ಸಾವನ್ನಪ್ಪಿರುವವರ ಸಂಖ್ಯೆ 08ಕ್ಕೆ ಏರಿಕೆಯಾಗಿದೆ.

ಲಂಕನ್ನರ ಪ್ರತಿಭಟನೆಗೆ ಬೆದರಿದ ರಾಜಪಕ್ಸ| ಕುಟುಂಬ ಸಮೇತ ನೌಕಾನೆಲೆಗೆ ಪಲಾಯನ| ಹಿಂಸಾಚಾರಕ್ಕೆ ನಲುಗಿದ ದ್ವೀಪರಾಷ್ಟ್ರ Read More »

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ

ಮಧ್ಯ ಪ್ರದೇಶ: ಮದುವೆ ದಿನ ವಧು ವರರೇ ಅದಲು ಬದಲಾದರೆ ಅವರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಹಿಂದೆಂದೂ ಕೇಳಿರದ ಘಟನೆಯೊಂದು ಬೆಳಕಿಗೆ ಬಂದಿದೆ. ಉಜ್ಜಯಿನಿಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ:ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ Read More »

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ”

ಸಮಗ್ರ ನ್ಯೂಸ್: ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ. ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋ ಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ.

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ” Read More »

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್

ಸಮಗ್ರ ನ್ಯೂಸ್: ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಕೆಲ ಗಂಟೆಗಳ ಮೊದಲು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸೆಗೆ ಸೇರಿದ ಮನೆಯೊಂದನ್ನೂ ದುಷ್ಕರ್ಮಿಗಳು ಸುಟ್ಟುಹಾಕಿರುವ ಘಟನೆ ನಡೆದಿದೆ. ರಾಜಪಕ್ಸೆ ಮಾತ್ರವಲ್ಲ ಇನ್ನೂ ಹಲವು ರಾಜಕಾರಣಿಗಳ ಮನೆಗಳನ್ನ ಪ್ರತಿಭಟನಾಕಾರರು ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ನಡೆದಿರುವುದು

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್ Read More »

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ|

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಆಡಳಿತ ಪಕ್ಷದ ಸಂಸದರೊಬ್ಬರು ಬಲಿಯಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಪೊಲೀಸ್‌ ಹಾಗೂ ಭದ್ರತಾ ಪಡೆಗಳು ಹರಸಾಹಸ ಪಡುತ್ತಿವೆ. ಈ ನಡುವೆಯೇ ಉದ್ರಿಕ್ತರ ಗುಂಪೊಂದು ರೂಲಿಂಗ್‌ ಪಾರ್ಟಿ ಸಂಸದ ಅಮರ ಕೀರ್ತಿ ಅತುಕೋರಲ ಕಾರನ್ನ ಅಡ್ಡಗಟ್ಟಿದ್ದು ಗುಂಡು ಹಾರಿಸಿ ಹತ್ಯೆ ಮಾಡಿದೆ. ನಿತ್ತಂಬುವ ಅನ್ನೋ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಘರ್ಷಣೆ ವೇಳೆ ಇನ್ನಿಬ್ಬರೂ

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ| Read More »

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾ ದೇಶದಲ್ಲಿ ತಲೆದೋರಿರುವ ಆರ್ಥಿಕ ಸಂಕಷ್ಟ ನೀಗಿಸುವಲ್ಲಿ ವಿಫಲವಾದ ಕಾರಣ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮಹಿಂದಾ ರಾಜಪಕ್ಸೆ ಅವರ ಬಳಿ ಮನವಿ ಮಾಡಿದ್ದರು. ಇದಕ್ಕೆ ಮಹಿಂದಾ ರಾಜಪಕ್ಸೆ ಸಮ್ಮತಿ ಸೂಚಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ Read More »

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!!

ಸಮಗ್ರ ನ್ಯೂಸ್: ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ತಮ್ಮ ಮೃತ ಹೆಂಡತಿಯ ಶವಕ್ಕೆ 21 ವರ್ಷಗಳ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಥಾಯ್ಲೆಂಡ್ ನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ ಚಾನ್ ವಚರಕರ್ಣ್ ಅವರು 2001ರಲ್ಲಿ ಮೃತಪಟ್ಟಿದ್ದ ತಮ್ಮ ಹೆಂಡತಿಯ ಶವವನ್ನು ಆಗಿನಿಂದಲೂ ಶವಪೆಟ್ಟಿಗೆಯೊಳಗಿಟ್ಟು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಇಷ್ಟು ವರ್ಷದವರೆಗೂ ಯಾಕೆ ಹೆಂಡತಿಯ ಶವಸಂಸ್ಕಾರ ಮಾಡಲಿಲ್ಲ ಎಂಬ ಕಾರಣ ಮಾತ್ರ ಗೊತ್ತಾಗಿಲ್ಲ. ”ಇತ್ತೀಚಿಗೆ ಇವರಿಗೆ ತಮ್ಮ ಹೆಂಡತಿಯ ಶವ ಸಂಸ್ಕಾರ ಮಾಡದೆಯೇ ತಾನು ಸತ್ತು ಹೋಗಿ

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!! Read More »

ಅಸಾನಿ ಚಂಡಮಾರುತ| ಕರಾವಳಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ| ಕರ್ನಾಟಕದಲ್ಲೂ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಆಗ್ನೇಯ ಬಂಗಾಳಕೊಲ್ಲಿಯಲ್ಲಿನ ಅಸಾನಿ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ‘ತೀವ್ರ ಚಂಡಮಾರುತ’ವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಸಾನಿ ಚಂಡಮಾರುತದ ತೀವ್ರತೆಯಿಂದ ಸೋಮವಾರ ಮತ್ತು ಮಂಗಳವಾರ ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ. ಬುಧವಾರದ ನಂತರದಲ್ಲಿ ಪ್ರಭಾವ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಹಿನ್ನಲೆ ಕರ್ನಾಟಕದ 27 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದ್ದು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ,

ಅಸಾನಿ ಚಂಡಮಾರುತ| ಕರಾವಳಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ| ಕರ್ನಾಟಕದಲ್ಲೂ ಅಲರ್ಟ್ ಘೋಷಣೆ Read More »