ದೇಶ-ವಿದೇಶ

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ

ಕೊಚ್ಚಿನ್: ಕೇರಳ ರಾಜ್ಯದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ನಿಗೂಢ ದ್ವೀಪವೊಂದು ಪತ್ತೆಯಾಗಿದೆ. ಹುರುಳಿ ಆಕಾರದ ನೀರೊಳಗಿನ ದ್ವೀಪ ಗೂಗಲ್ ನಕ್ಷೆಯಲ್ಲಿ ಪತ್ತೆಯಾಗಿದ್ದು, ಭಾರೀ ಅಚ್ಚರಿಯನ್ನು ಮೂಡಿಸಿದೆ. ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಪತ್ತೆಹಚ್ಚಿದೆ. ಸೊಸೈಟಿ ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್‌ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ಇದು ವ್ಯಾಪಕವಾಗಿ ವೈರಲ್ ಆಗಿದೆ.ನಿಗೂಢ ದ್ವೀಪ ಪತ್ತೆಯಾದ ಬಗ್ಗೆ […]

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ Read More »

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್

ಸೌತಾಪ್ಟನ್: ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇಂದು ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಜೂನ್ 22 ರ ವರೆಗೆ ನಡಲಿರುವ ಹಣಾಹಣಿ ಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಸೆಣಸಾಡಲಿವೆ. ಸೀಮಿತ ಓವರ್ಗಳಲ್ಲಿ ವಿಶ್ವ ಕಪ್ ನಡೆಸುತ್ತಿರುವಂತೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಯುದ್ಧ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಅದರಂತೆ 2019 ರಲ್ಲಿ ಜಗತ್ತಿನ 9 ಬಲಿಷ್ಠ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್ Read More »

ಪ್ರವಾಸಿಗರಿಗೆ ಶಾಕ್ ನೀಡಿದ ಗೋವಾ ಸರಕಾರ

ಪಣಜಿ: ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಬಲು ಫೇಮಸ್. ಭಾರತೀಯರಲ್ಲದೆ ವಿದೇಶಿ ಪ್ರವಾಸಿಗರಿಗೂ ಗೋವಾ ಟ್ರಿಪ್ ಡ್ರೀಮ್ ಟ್ರಿಪ್. ಆಧುನಿಕ ಸಮಾಜದ ಯುವಜನರಿಗಂತು ಗೋವಾ ವೇ ಸ್ವರ್ಗ. ಆದರೆ ಇದೀಗ ಕೋವಿಡ್ ಎರಡನೇ ಅಲೆ ಬಳಿಕ ಗೋವಾ ಬೀಚ್ ರಿಓಪನ್ ಖುಷಿಯಲ್ಲಿದ್ದ ಪ್ರವಾಸಿಗರಿಗೆ ಅಲ್ಲಿನ ರಾಜ್ಯ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಕಟ್ಟನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಶಾಕ್ ನೀಡಿದ ಗೋವಾ ಸರಕಾರ Read More »

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ

ನವದೆಹಲಿ: ಪ್ರಸಕ್ತ ವರ್ಷದ ಸಿಬಿಎಸ್ಸಿ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ ತಿಂಗಳ ಮೂವತ್ತೊಂದಕ್ಕೆ ಪ್ರಕಟವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. 12ನೇ ತರಗತಿ ಫಲಿತಾಂಶ ಘೋಷಿಸಲು, ಪ್ರತಿ ವಿದ್ಯಾರ್ಥಿಯ ಹತ್ತನೇ ತರಗತಿಯ ಅಂಕವನ್ನು 30% ಕ್ಕೆ, 11ನೇ ತರಗತಿಯ ಅಂಕವನ್ನು 30% ಕ್ಕೆ ಮತ್ತು 12ನೇ ತರಗತಿಯ ಆಂತರಿಕ ಮೌಲ್ಯಮಾಪನ ಮತ್ತು ಘಟಕ ಅವಧಿ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ಅಂಕಗಳನ್ನು ಒಟ್ಟುಗೂಡಿಸಿ ಅದನ್ನು 40% ಕ್ಕೆ ಪರಿವರ್ತಿಸಿ ಅಂಕಗಳನ್ನು

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ Read More »

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ವಯನಾಡ್: ಸ್ವ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇರೊಂದು ಪಕ್ಷದ ನಾಯಕಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಕೇರಳ ಬಿಜೆಪಿ ರಾಜ್ಯಧ್ಯಕ್ಷ ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಕಳೆದ ಕೇರಳ ವಿಧಾನಸಭಾ ಚುನಾವಣೆಯಿಂದ ಮೊದಲು ಜೆ ಆರ್ ಎಸ್ ಪಕ್ಷದ ನಾಯಕಿ ಸಿಕೆ ಜಾನು ಎಂಬವರಿಗೆ ಸುರೇಂದ್ರನ್ 10 ಲಕ್ಷ ರೂ ಲಂಚ ನೀಡಿದ್ದರು ಎನ್ನಲಾಗಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ನ ರಾಜ್ಯ ಅಧ್ಯಕ್ಷ

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ Read More »

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಅವರನ್ನು ನೇಮಿಸಲಾಗಿದೆ. ಅದೇ ಕಂಪನಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದುವರೆಗೆ ಕಾರ್ಪ್ ಜಾನ್ ಥಾಮ್ಸನ್ ಮೈಕ್ರೋಸಾಫ್ಟ್ ನ ಅಧ್ಯಕ್ಷರಾಗಿದ್ದರು. 2014 ರಲ್ಲಿ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ ಲಿಂಕ್ಡ್ ಇನ್, ನುವಾನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಶತಕೋಟಿ ಡಾಲರ್ ಕಂಪನಿಗಳ ಸ್ವಾಧೀನ ಒಳಗೊಂಡಂತೆ ಮೈಕ್ರೋಸಾಫ್ಟ್ ವ್ಯವಹಾರ ಹೆಚ್ಚಿಸುವಲ್ಲಿ

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ Read More »

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಕಾಂಗ್ರೆಸ್ ನ ನಾಯಕರ ನಡುವೆ ಮಾರಾಮಾರಿ ನಡೆದ ಘಟನೆ ನಿನ್ನೆ ಮದ್ಯಾಹ್ನ ನಡೆದಿದೆ. ಘಟನೆ ಬಳಿಕ ಒಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಭೆ ನಿನ್ನೆ ನಡೆದಿತ್ತು. ಸಭೆ ಮುಗಿದ ಬಳಿಕ ನಾಯಕರ ನಡುವೆಯೇ ಹೊಡೆದಾಟ ನಡೆದಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಜೊತೆ ಆಗಮಿಸಿದ್ದ ತರೀಕೆರೆ ಐಟಿಸೆಲ್ ಅಧ್ಯಕ್ಷ ದರ್ಶನ್ ಎಂಬವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಯಲ್ ಶರೀಫ್

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ Read More »

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ

ಉತ್ತರ ಪ್ರದೇಶ: ಮುಸಲ್ಮಾನ ವೃದ್ಧರೊಬ್ಬರ ಮೇಲೇ ಯುವಕರ ಗುಂಪೊoದು ಹಲ್ಲೆ ನಡೆಸಿದ ಘಟನೆ ರಾಜ್ಯದ ಗಾಝಿಯಾಬಾದ್ ನಿಂದ ವರದಿಯಾಗಿತ್ತು. ವಿಚಾರಣೆ ಬಳಿಕ ಇದು ತಾಯ್ತ ಕಟ್ಟುವ ವಿಚಾರದಲ್ಲಿ ನಡೆದ ಜಗಳ ಎಂದು ಪೊಲೀಸರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವೃದ್ಧನ ಮಗ, ನನ್ನ ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದಿದ್ದಾನೆ. ಅಬ್ದುಲ್ ಸಮದ್ ಸೈಫಿ ಎಂಬ ವೃದ್ಧನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೃದ್ಧನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಲಾಕೆಯಿಂದ ಹಲ್ಲೆ ನಡೆಸಿದ್ದರು.

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ Read More »

ರಾಮನ ಆದರ್ಶ ಪಾಲಕರಿಂದ ಭ್ರಷ್ಟಾಚಾರಿಗಳಿಗೆ ಸಾಥ್: ಆಪ್ ಸಂಸದ ಸಂಜಯ್ ಸಿಂಗ್ ಆರೋಪ

ಲಕ್ನೋ : ಬಿಜೆಪಿಗೆ ಆಸ್ತಿ ಡೀಲರ್‌ ಮತ್ತು ಭ್ರಷ್ಟಾಚಾರಿಗಳ ಮೇಲೆ ನಂಬಿಕೆ ಇದೆಯೆ ಹೊರತು ರಾಮನ ಮೇಲೆ ಅಲ್ಲ ಎಂದು ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ತಾನು ನ್ಯಾಯಾಲಯದ ಕದ ತಟ್ಟುತ್ತಿರುವುದಾಗಿ ಅವರು ಬುಧವಾರ ತಿಳಿಸಿದ್ದಾರೆ. ಆಮ್‍ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‍ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್‍ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ

ರಾಮನ ಆದರ್ಶ ಪಾಲಕರಿಂದ ಭ್ರಷ್ಟಾಚಾರಿಗಳಿಗೆ ಸಾಥ್: ಆಪ್ ಸಂಸದ ಸಂಜಯ್ ಸಿಂಗ್ ಆರೋಪ Read More »

ಆಸ್ಪತ್ರೆಯೊಳಗಿಂದ ರೋಗಿ ನಿಗೂಢ ನಾಪತ್ತೆ | ಪೊಲೀಸರನ್ನೆ ಬೆಚ್ಚಿ ಬೀಳಿಸಿದ ಪ್ರಕರಣ

ಚೆನ್ನೈ: ಆಸ್ಪತ್ರೆಯಿಂದ ಕಣ್ಮರೆಯಾದ ರೋಗಿಯೊಬ್ಬರ ನಾಪತ್ತೆ ಪ್ರಕರವೂ ನಿಗೂಢ ಕೊಲೆ ಪ್ರಕರಣದ ತಿರುವು ಪಡೆದುಕೊಂಡು ಮೂರನೇ ಮಹಡಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಗೆ ದಾಖಲಾಗಿ, ಕಾಣೆಯಾಗಿ ಕೊಲೆಯಾದವರನ್ನು ಸುಮಿತಾ (41) ಎಂದು ಗುರುತಿಸಲಾಗಿದೆ. ಈಕೆ ಮೇ 23ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಆಕೆಯ ಪತಿ ಮೌಲಿ ಮೇ. ೩೧ರಂದು ದೂರು ನೀಡಿರಿದ್ದರು. ತೀವ್ರ ಶೋಧದ ನಡುವೆಯೂ ಆಕೆಯ ಸುಳಿವು ಮಾತ್ರ ಪತ್ತೆಯಾಗಲೇ ಇಲ್ಲ.ಇದರ ನಡುವೆ ಜೂ.೮ರಂದು

ಆಸ್ಪತ್ರೆಯೊಳಗಿಂದ ರೋಗಿ ನಿಗೂಢ ನಾಪತ್ತೆ | ಪೊಲೀಸರನ್ನೆ ಬೆಚ್ಚಿ ಬೀಳಿಸಿದ ಪ್ರಕರಣ Read More »