ದೇಶ-ವಿದೇಶ

ಸೋನಿಯಾ ಗಾಂಧಿಗೆ ಮಾತೃ‌ವಿಯೋಗ

ಸಮಗ್ರ ನ್ಯೂಸ್: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನರಾಗಿದ್ದಾರೆ. ಆಗಸ್ಟ್​ 27 ಶನಿವಾರದಂದು ಇಟಲಿಯ ಮನೆಯಲ್ಲಿ ಪಾವೊಲಾ ಮೈನೋ ನಿಧನರಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆದಿದೆ. ಇದು ವೈದ್ಯಕೀಯ ತಪಾಸಣೆಗಾಗಿ ತೆರಳಿದ್ದ ಅವರ ವಿದೇಶ ಪ್ರವಾಸದ ಭಾಗವಾಗಿತ್ತು, ಅಲ್ಲಿ ಅವರ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27 ರಂದು ನಿಧನರಾದರು ಮತ್ತು

ಸೋನಿಯಾ ಗಾಂಧಿಗೆ ಮಾತೃ‌ವಿಯೋಗ Read More »

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಮಂಗಳೂರಿನ ಪ್ರತಿಷ್ಠಿತ ಕ್ಲಾಕ್ ಟವರ್ ಗೆ ಕೆಪಿಟಿ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಮರುಜೀವ ನೀಡಿದ್ದಾರೆ. ಮಂಗಳೂರು ನಗರಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗಲು ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ನ ಗಂಟೆ ಕೆಟ್ಟು ಹೋಗಿತ್ತು. ಕಾಲೇಜು ಆವರಣದಲ್ಲಿದ್ದ ಈ ಟವರ್ ದುರಸ್ತಿಗೆ ಕಾಲೇಜು ಆಡಳಿತ ಸೇರಿದಂತೆ ಯಾರೊಬ್ಬರೂ ಈ ಟವರ್ ಸರಿಪಡಿಸಲು ಮುಂದೆ ಬಂದಿರಲಿಲ್ಲ. ಈ ಸಮಸ್ಯೆಯನ್ನು ಅರಿತ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಮೆಕಾನಿಕಲ್ ವಿದ್ಯಾರ್ಥಿಗಳು ದುರಸ್ತಿಗೊಳಿಸಿದ್ದು, ಮತ್ತೆ ಸರಿಯಾದ

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು Read More »

ಮದ್ಯಸೇವನೆ ಮಾಡಿ ತಾಯಿಗೆ ಹಲ್ಲೆ ನಡೆಸಿದ ತಂದೆಯ ವಿರುದ್ಧ ಕೇಸ್ ಕೊಟ್ಟ ಏಳು ವರ್ಷದ ಮಗ

ಸಮಗ್ರ ನ್ಯೂಸ್: ದಿನ ನಿತ್ಯ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ ಪಟ್ಟಣದಲ್ಲಿ ತಂದೆ ಬಾಲಕಿಶನ್ ವಿರುದ್ಧ ಭರತ್ ಎಂಬಾತ ದೂರು ನೀಡಿದ್ದಾನೆ. ಮುಸ್ತಾಬಾದ್ ಮೂಲದ ಬಾಲಕಿಶನ್‍ಗೆ ಭರತ್ ಹಾಗೂ ಶಿವಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಲ್ಲಿ ಭರತ್ ಮುಸ್ತಾಬಾದ್‍ನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ. ಮದ್ಯವ್ಯಸನಿಯಾಗಿದ್ದ ಬಾಲಕಿಶನ್ ಪ್ರತಿನಿತ್ಯ ತನ್ನ

ಮದ್ಯಸೇವನೆ ಮಾಡಿ ತಾಯಿಗೆ ಹಲ್ಲೆ ನಡೆಸಿದ ತಂದೆಯ ವಿರುದ್ಧ ಕೇಸ್ ಕೊಟ್ಟ ಏಳು ವರ್ಷದ ಮಗ Read More »

ಚೀನಾ ಕಂಪನಿ ಸ್ಮಾರ್ಟ್ ಫೋನ್ ಗಳನ್ನು ದೇಶದಲ್ಲಿ ನಿಷೇಧ ಇಲ್ಲ- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ನವದೆಹಲಿ: ‘ಚೀನಾ ಕಂಪನಿಗಳ ₹ 12 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ನಿಷೇಧಿಸುವ ಯಾವುದೇ ಆಲೋಚನೆಯೂ ಇಲ್ಲ’ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಭಾರತದಿಂದ ರಫ್ತು ಹೆಚ್ಚಿಸುವಂತೆ ಸರ್ಕಾರವು ಚೀನಾದ ಮೊಬೈಲ್‌ ತಯಾರಕ ಕಂಪನಿಗಳನ್ನು ಕೇಳಿದೆ ಎಂದು ಅವರು ಹೇಳಿದ್ದಾರೆ. ದೇಶದ ಎಲೆಕ್ಟ್ರಾನಿಕ್‌ ವ್ಯವಸ್ಥೆಯಲ್ಲಿ ದೇಶಿ ಕಂಪನಿಗಳ ಪಾತ್ರವೂ ಇದೆ. ಆದರೆ, ವಿದೇಶಿ ಬ್ರ್ಯಾಂಡ್‌ಗಳನ್ನು ಹೊರಗಿಡುವುದು ಎನ್ನುವುದು ಅದರ ಅರ್ಥ ಅಲ್ಲ ಎಂದು ತಿಳಿಸಿದ್ದಾರೆ.

ಚೀನಾ ಕಂಪನಿ ಸ್ಮಾರ್ಟ್ ಫೋನ್ ಗಳನ್ನು ದೇಶದಲ್ಲಿ ನಿಷೇಧ ಇಲ್ಲ- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ Read More »

ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ

ದೆಹಲಿ: ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ಗ್ರಾಮೀಣ ಆರ್ಥಿಕತೆಯ ಬಗ್ಗೆ ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾಗಿದ್ದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಭಿಜಿತ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ʻನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರುʼ ಎಂದು ಅವರ ಸಹೋದರ ಡಾ. ಪ್ರಣಬ್ ಸೇನ್ ಹೇಳಿದ್ದಾರೆ.

ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ Read More »

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಹಿಜಾಬ್ ವಿವಾದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧರ್ಮದ ಪ್ರತಿನಿಧಿಸುವಂತಿಲ್ಲ. ಸಮವಸ್ತ್ರ ಧರಿಸಬೇಕು ಎಂದು ಆದೇಶಿಸಿತ್ತು. ಹಿಜಾಬ್‌ ವಿವಾದ ಕುರಿತು ಸುಪ್ರೀಂಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು,

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ Read More »

ಗುಜರಾತ್ ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಶವ ಕಾರಿನಲ್ಲಿ ಪತ್ತೆ

ಸಮಗ್ರ ನ್ಯೂಸ್: ಗುಜರಾತ್​ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಕಾರು ನಿಂತಿದ್ದು ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಯಕಿ ಶವ ಸಿಕ್ಕಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನದಿ ದಡದಲ್ಲಿ ಕಾರು ಹಲವು ಗಂಟೆಗಳಿಂದ ನಿಂತಿದ್ದನ್ನು ಕಂಡ ಸ್ಥಳೀಯರು ಅದರ ಮಾಲೀಕರನ್ನು ಹುಡುಕಾಡಿದ್ದಾರೆ. ಬಳಿಕ ಯಾರೂ ಪತ್ತೆಯಾಗದ ಕಾರಣ ಅನುಮಾನ ಬಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ

ಗುಜರಾತ್ ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಶವ ಕಾರಿನಲ್ಲಿ ಪತ್ತೆ Read More »

ದೇಶದ ಎರಡು ಅವಳಿ‌ ಕಟ್ಟಡಗಳು ಕೇವಲ 9 ಸೆಕೆಂಡ್ ನಲ್ಲಿ ನೆಲಸಮ| ಇಲ್ಲಿನ ಆ ದೃಶ್ಯಾವಳಿ!

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನೋಯ್ಡಾದಲ್ಲಿ ದೇಶದ ಅತಿ ಎತ್ತರದ ಅವಳಿ ಕಟ್ಟಡಗಳನ್ನು ನೆಲೆಸಮಗೊಳಿಸಲಾಗಿದೆ. ಅಪೇಕ್ಸ್, ಸಿಯಾನಿ ಹೆಸರಿನ ದೇಶದ ಅತಿ ದೊಡ್ಡ ಅವಳಿ ಕಟ್ಟಡ ನೆಲಸಮಗೊಳಿಸಲಾಗಿದೆ. ನೋಯ್ಡಾ ಪ್ರಾಧಿಕಾರ ಕಟ್ಟಡವನ್ನು ನೆಲಸಮ ಮಾಡಿದೆ. ಕಟ್ಟಡ ನೆಲಸಮಕ್ಕಾಗಿ 3700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಅಕ್ಕಪಕ್ಕದ ನಿವಾಸಗಳು, ಕಟ್ಟಡಗಳಲ್ಲಿದ್ದ 5000ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಕಟ್ಟಡದಲ್ಲಿ 930 ಫ್ಲಾಟ್ ಗಳನ್ನು ನಿರ್ಮಿಸಲಾಗಿತ್ತು. ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗಿದೆ. ಕೇವಲ 9 ಸೆಕೆಂಡ್ ಅವಧಿಯಲ್ಲಿ

ದೇಶದ ಎರಡು ಅವಳಿ‌ ಕಟ್ಟಡಗಳು ಕೇವಲ 9 ಸೆಕೆಂಡ್ ನಲ್ಲಿ ನೆಲಸಮ| ಇಲ್ಲಿನ ಆ ದೃಶ್ಯಾವಳಿ! Read More »

ಇಂಜಿನಿಯರ್ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಸಮಗ್ರ ನ್ಯೂಸ್ : ಇಂಜಿನಿಯರ್ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಭುವನೇಶ್ವರದಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್ ನೋಟು ಸಿಕ್ಕಿದ್ದು, ಪ್ರೇಮ ವೈಫಲ್ಯದ ಬಗ್ಗೆ ಬರೆಯಲಾಗಿದೆ‌. ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಸ್ವತಃ ಉಸಿರು ಕಟ್ಟಿಸಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಘಟನೆ ಬಗ್ಗೆ ಈಕೆಯ ಪ್ರಿಯಕರ‌ ಸೌಮ್ಯಜಿತ್ ಮೇಲೆ‌ ಕುಟುಂಬಸ್ಥರು ದೂರು‌ ದಾಖಲಿಸಿದ್ದಾರೆ. ಶ್ವೇತಾ ಭುವನೇಶ್ವರದ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದರು. ಸೌಮ್ಯಜಿತ್ ನನ್ನು ಪ್ರೀತಿಸುತ್ತಿದ್ದು, ಆತ ಇದನ್ನೇ‌ ಬಂಡವಾಳವಾಗಿ ಬಳಸಿ ಆಕೆಯ ಖಾಸಗಿ ಚಿತ್ರ ತೆಗೆದು ಹಣಕ್ಕಾಗಿ

ಇಂಜಿನಿಯರ್ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ Read More »

50 ಅಡಿ ಕೆಳಗೆ ಕುಸಿದ ಮನೆ; ಮನೆ ಸದಸ್ಯರು ಪಾರು

ಸಮಗ್ರ ನ್ಯೂಸ್ : ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆಯೊಂದು ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ. ಕುಟುಂಬ ಸದಸ್ಯರು ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿತು. ಏನೋ ಅನಾಹುತ ಸಂಭವಿಸಲಿದೆ ಎಂದು ತಿಳಿದ ಮನೆಯ ಸದಸ್ಯರು ಹೊರ ಬಂದಿದ್ದು, ಕ್ಷಣಾರ್ಧದಲ್ಲಿ ಮನೆ ನೆಲಕ್ಕುರುಳಿದೆ. ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗುತ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು

50 ಅಡಿ ಕೆಳಗೆ ಕುಸಿದ ಮನೆ; ಮನೆ ಸದಸ್ಯರು ಪಾರು Read More »