ದೇಶ-ವಿದೇಶ

ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

ಸಮಗ್ರ ನ್ಯೂಸ್: ರಾಕೆಟ್‌ ಎಲ್‌ವಿಎಂ3- ಎಂ4(Rocket LVM3-M4) ಮೂಲಕ ಚಂದ್ರಯಾನ-3 (Chandrayana -3)ರ ಉಡಾವಣೆ ಯಶಸ್ವಿಯಾಯಿತು. ಆ ಮೂಲಕ ಇಸ್ರೋಗೆ ಮತ್ತೊಂದು ಗರಿ ಸಿಕ್ಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್‌), ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿತು. ಚಂದ್ರಯಾನ-3 ಯಶಸ್ವಿ ಉಡಾವಣೆ ಆಗಿದ್ದು, ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಹೋದ್ಯೋಗಿಗಳ ಜೊತೆ ಇಸ್ರೋ ಅಧ್ಯಕ್ಷ […]

ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ Read More »

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3

ಸಮಗ್ರ ನ್ಯೂಸ್: ಚಂದ್ರನ ಕುರಿತ ಹಲವು ಮೊದಲುಗಳನ್ನು ಮೊದಲ ಚಂದ್ರಯಾನದಲ್ಲಿ ಜಗತ್ತಿಗೆ ಬಿತ್ತರಿಸಿದ್ದ ಭಾರತ, ಇದೀಗ ಮತ್ತಷ್ಟು ಪ್ರಥಮಗಳನ್ನು ಸಾಧಿಸಲು ಮೂರನೇ ಬಾರಿಗೆ ಚಂದ್ರನ ಸವಾರಿ ಹೊರಟಿದೆ. ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಗುರುವಾರ ಮಧ್ಯಾಹ್ನದಿಂದ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಉಡಾವಣೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3 Read More »

ವಿಪಕ್ಷ ನಾಯಕನಿಲ್ಲದೆ ಎರಡು ತಿಂಗಳು| ಈ ಬಿಜೆಪಿಗೆ ಏನಾಗಿದೆ!?

ಸಮಗ್ರ ನ್ಯೂಸ್: ಮೇ. 13ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸೋತು ಸುಣ್ಣ ಆಗಿದ್ರೆ, ಕಾಂಗ್ರೆಸ್​​ ಗೆದ್ದು ಬೀಗಿತ್ತು. ಹೀಗಾಗಿ ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ, ಆಡಳಿತ ಪಕ್ಷಕ್ಕೆ ಬಂದಿದ್ದರು. ಕಾಂಗ್ರೆಸ್​​ ಅಧಿಕಾರ ಹಂಚಿಕೆ ವಿಚಾರದಲ್ಲಿ ನಾಲ್ಕೈದು ದಿನಗಳು ತಡವಾಯ್ತು. ಮೇ 20ರಂದು ಸಿಎಂ, ಡಿಸಿಎಂ, ಸಚಿವರು ಪ್ರಮಾಣ ಸ್ವೀಕಾರ ಮಾಡಿದ್ದರು. ಆದರೆ ಮೇ 13ರಿಂದಲೇ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಇರಲಿಲ್ಲ. ರಾಜ್ಯ ಸರ್ಕಾರ ಅಧಿಕೃತ ವಿರೋಧ ಪಕ್ಷದ

ವಿಪಕ್ಷ ನಾಯಕನಿಲ್ಲದೆ ಎರಡು ತಿಂಗಳು| ಈ ಬಿಜೆಪಿಗೆ ಏನಾಗಿದೆ!? Read More »

ಮದ್ಯದ ಅಮಲಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ ಕಟುಕರು…!!

ಸಮಗ್ರ ನ್ಯೂಸ್: ಕಂಠಪೂರ್ತಿ ಕುಡಿದ ವ್ಯಕ್ತಿಗೆ ಕೆಲವೊಮ್ಮೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿರುವುದಿಲ್ಲ. ಆತ ತಾನು ಏನು ಮಾಡುತ್ತಿರುವೆನೆಂಬ ಅರಿವಿಲ್ಲದೆ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅರ್ಧ ಸುಟ್ಟ ಯುವತಿಯ ಮೃತದೇಹವನ್ನು ತಿಂದ ಪ್ರಸಂಗವೊಂದು ಭುವನೇಶ್ವರದಲ್ಲಿ ನಡೆದಿದೆ. ಇಲ್ಲಿನ ಮಯರ‍್ಬಂಜ್ ಜಿಲ್ಲೆಯ ಬದಶಾಹಿನ ಬ್ಲಾಕ್ ನ ಗ್ರಾಮವೊಂದರಲ್ಲಿ ಕೃತ್ಯ‌ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ 25 ವರ್ಷದ ಯುವತಿಯೊಬ್ಬಳ ಮೃತದೇಹವನ್ನು ಸ್ಥಳೀಯ ಶವಾಗಾರಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಆದರೆ ಆಕೆಯ ದೇಹ ಪೂರ್ತಿಯಾಗಿ ಸುಟ್ಟಿರಲಿಲ್ಲ.

ಮದ್ಯದ ಅಮಲಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ ಕಟುಕರು…!! Read More »

ನೇಪಾಳದಲ್ಲಿ ನಾಪತ್ತೆಯಾದ ಹೆಲಿಕಾಪ್ಟರ್ ಪತನ| ಗುಡ್ಡಗಾಡುಗಳಲ್ಲಿ ಅವಶೇಷ ಪತ್ತೆ

ಸಮಗ್ರ ನ್ಯೂಸ್: ನೇಪಾಳದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನಾಪತ್ತೆಯಾಗಿದ್ದು, ಇದೀಗ ಇದರ ಅವಶೇಷಗಳು ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಐದು ಮಂದಿ ವಿದೇಶಿಯರೂ ಸೇರಿದಂತೆ ಒಟ್ಟು ಆರು ಮಂದಿ ಇದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಾರಾಟ ಆರಂಭಿಸಿದ್ದ ಈ ಹೆಲಿಕಾಪ್ಟರ್ ಬೆಳಗ್ಗೆ 10 ಗಂಟೆ ಸುಮಾರಿಗೆ ಕಂಟ್ರೋಲ್ ಟವರ್ ರೆಡಾರ್ ನಿಂದ ಸಂಪರ್ಕ ಕಳೆದುಕೊಂಡಿದ್ದು, ಬಳಿಕ ಪತನಗೊಂಡಿರುವುದು ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್ ನ ಅವಶೇಷ ಹಾಗೂ

ನೇಪಾಳದಲ್ಲಿ ನಾಪತ್ತೆಯಾದ ಹೆಲಿಕಾಪ್ಟರ್ ಪತನ| ಗುಡ್ಡಗಾಡುಗಳಲ್ಲಿ ಅವಶೇಷ ಪತ್ತೆ Read More »

ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

ಸಮಗ್ರ ನ್ಯೂಸ್: ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬಗ್ಗೆ ಸುದ್ದಿಸಂಸ್ಥೆ ANI ವರದಿ ಮಾಡಿದೆ. “ಸೋಲುಖುಂಬುವಿನಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಬೆಳಿಗ್ಗೆ ಸುಮಾರು 10 ಗಂಟೆಗೆ ಕಂಟ್ರೋಲ್ ಟವರ್‌ ನೊಂದಿಗೆ ಸಂಪರ್ಕ ಕಡಿತಗೊಂಡಿದೆ” ಎಂದು ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ಹೇಳಿದ್ದಾರೆ.9NMV ಕರೆ ಚಿಹ್ನೆಯೊಂದಿಗೆ ಹೆಲಿಕಾಪ್ಟರ್ ಬೆಳಗ್ಗೆ 10:12ಕ್ಕೆ (ಸ್ಥಳೀಯ ಸಮಯ) ರಾಡಾರ್‌ನಿಂದ ಹೊರಬಂದಿತು. ನಾಪತ್ತೆಯಾದ ಹೆಲಿಕಾಪ್ಟರ್‌ನಲ್ಲಿ 5 ವಿದೇಶಿ ಪ್ರಜೆಗಳಿದ್ದರು ಎಂದು ವರದಿಯಾಗಿದೆ.

ನೇಪಾಳದಲ್ಲಿ 6 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ Read More »

ಭಾರೀ ಮಳೆಗೆ ತತ್ತರಿಸುತ್ತಿರುವ ಉತ್ತರ ಭಾರತ| ಕೇರಳ ಸೇರಿ 5 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಭಾರತಕ್ಕೆ ಮಳೆಗಾಲ ಆರಂಭ ಕೊಂಚ ತಡವಾದರೂ ಯಾರೂ ಊಹಿಸದ ರೀತಿಯಲ್ಲಿ ಅಬ್ಬರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತಕ್ಕೆ ಅನಾಹುತವೇ ಸೃಷ್ಟಿಯಾಗಿದೆ. ಮುಖ್ಯವಾಗಿ ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಬಹುತೇಕ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದಿಂದ ಪಟ್ಟಣ, ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಮಳೆಗೆ ಇದೀಗ ಐದು ರಾಜ್ಯಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ

ಭಾರೀ ಮಳೆಗೆ ತತ್ತರಿಸುತ್ತಿರುವ ಉತ್ತರ ಭಾರತ| ಕೇರಳ ಸೇರಿ 5 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ Read More »

ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಗೆ ಲಘು ಹೃದಯಾಘಾತ| ಶ್ರೀಲಂಕಾದಿಂದ ಬೆಂಗಳೂರಿಗೆ ಏರ್ ಲಿಪ್ಟ್

ಸಮಗ್ರ ವಾರ್ತೆ: ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆ ತರಲಾಗುತ್ತಿದೆ. ಅವರು ಶ್ರೀಲಂಕಾದ ಕೊಲಂಬೊಗೆ ತೆರಳಿದ್ದ ವೇಳೆ ಈ ಲಘು ಹೃದಯಾಘಾತವಾಗಿದ್ದು, ವಿಮಾನದ ಮೂಲಕ ಅವರನ್ನು ಬೆಂಗಳೂರಿಗೆ ಕರೆತಂದು ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಂಜೆ 5.30ರ ಸುಮಾರಿಗೆ ಅವರನ್ನು ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಿದ್ದು, ಅಲ್ಲಿಂದ ಜೀರೋ ಟ್ರಾಫಿಕ್ ಮೂಲಕ ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯಲಾಗುವುದು. ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ

ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಗೆ ಲಘು ಹೃದಯಾಘಾತ| ಶ್ರೀಲಂಕಾದಿಂದ ಬೆಂಗಳೂರಿಗೆ ಏರ್ ಲಿಪ್ಟ್ Read More »

ಡಾಕ್ಟರ್‌ಗೆ 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ| ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌

ಸಮಗ್ರ ನ್ಯೂಸ್: ರೋಗಿಯೊಬ್ಬ ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ. ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ

ಡಾಕ್ಟರ್‌ಗೆ 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ| ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌ Read More »

ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ ವಿದ್ಯಾರ್ಥಿನಿ

ಸಮಗ್ರ ನ್ಯೂಸ್‌: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಿದ್ಯಾರ್ಥಿನಿ ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾಳೆ. ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಲಕ್ಷ್ಮಿ (11) ಕಳೆದ ತಿಂಗಳು ಜೂ. 29 ರಂದು ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಪತ್ರದ ಸಾರಾಂಶನಾನು (ಲಕ್ಷ್ಮೀ) ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇವೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರು ತಕರಾರು ಮಾಡುತ್ತಿದ್ದಾರೆ. ಇದೇ ಗುಡಿಸಿಲನಲ್ಲಿ

ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ ವಿದ್ಯಾರ್ಥಿನಿ Read More »