ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF
ಸಮಗ್ರ ನ್ಯೂಸ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯ 21 ಸದಸ್ಯರ ತಂಡವು ಆಮ್ಲಜನಕ ಸಿಲಿಂಡರ್ ಮತ್ತು ಸ್ಟ್ರೆಚರ್ ಗಳೊಂದಿಗೆ ಕುಸಿದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವನ್ನು ಪ್ರವೇಶಿದೆ ಎಂದು ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ವರದಿ ಮಾಡಿದೆ. ಇಂದು ಮುಂಜಾನೆ ಪೈಪ್ ಲೈನ್ ಕೊರೆಯಲು ಕೆಲವು ಲೋಹದ ಸರಳುಗಳು ಅಡ್ಡಿಯಾದ ಕಾರಣ ವಿಶೇಷ ಬ್ಲೇಡ್ನೊಂದಿಗೆ ಕೋನ ಕಟ್ಟರ್ ಅನ್ನು ರಕ್ಷಣಾ ತಂಡದ ಸದಸ್ಯರು ಒಳಗೆ ಕಳುಹಿಸಿದ್ದಾರೆ. ಕಬ್ಬಿಣದ ರಚನೆಯ ಅಡಚಣೆಯನ್ನು ರಕ್ಷಣಾ ಸಂಸ್ಥೆಗಳು ಯಶಸ್ವಿಯಾಗಿ ತೆರವುಗೊಳಿಸಿದೆ.
ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF Read More »










