ದೇಶ-ವಿದೇಶ

ಮುಂದಿನ ವರ್ಷದಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ ಶಿಕ್ಷಕರ ಜವಾಬ್ದಾರಿ ಅಲ್ಲ – ಸಚಿವ ಮಧು ಬಂಗಾರಪ್ಪ

ಸಮಗ್ರ ನ್ಯೂಸ್: ಮೊಟ್ಟೆ, ಬಾಳೆಹಣ್ಣು ವಿತರಿಸುವ ಕಾರ್ಯದಿಂದ ಶಿಕ್ಷಕರು ಪಾಠದಿಂದ ವಿಮುಖರಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ಹೆಚ್ಚಿನ ಜವಾಬ್ದಾರಿ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ವಿಧಾನ ಪರಿಷತ್ ನಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ವಿತರಿಸುವ ಶಿಕ್ಷಕರ ಜವಾಬ್ದಾರಿಯನ್ನು ಕಡಿಮೆ ಮಾಡಲಾಗುವುದು. ರಾಜ್ಯದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವ ಸಮಯಕ್ಕಿಂತ ಮಧ್ಯಾಹ್ನದ ಬಿಸಿಯೂಟದ ಸಿದ್ಧತೆಗೆ ಹೆಚ್ಚಿನ ಸಮಯ […]

ಮುಂದಿನ ವರ್ಷದಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ ಶಿಕ್ಷಕರ ಜವಾಬ್ದಾರಿ ಅಲ್ಲ – ಸಚಿವ ಮಧು ಬಂಗಾರಪ್ಪ Read More »

ದೆಹಲಿ: ದಟ್ಟ ಮಂಜಿನಿಂದ ಭೀಕರ ಅಪಘಾತ| 3 ಕಾರು, 7 ಬಸ್ ಗಳು ಬೆಂಕಿಗಾಹುತಿ; ನಾಲ್ವರು ಸಜೀವ ದಹನ

ಸಮಗ್ರ ನ್ಯೂಸ್: ಎಕ್ಸ್‌ಪ್ರೆಸ್‌ ವೇಯ ಆಗ್ರಾ-ನೋಯ್ಡಾ ಲೇನ್‌ನಲ್ಲಿರುವ ಮೈಲ್‌ಸ್ಟೋನ್ 127 ರಲ್ಲಿ ಅಪಘಾತ ಸಂಭವಿಸಿದೆ. ಮೂರು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ. ಮೂರು ಕಾರುಗಳು ಡಿಕ್ಕಿ ಹೊಡೆದವು, ನಂತರ ಏಳು ಬಸ್‌ಗಳು ಅವುಗಳಿಗೆ ಡಿಕ್ಕಿ ಹೊಡೆದವು, ಅದರಲ್ಲಿ 1 ರಸ್ತೆಮಾರ್ಗದ ಬಸ್, ಮತ್ತು ಇತರ ಆರು ಸ್ಲೀಪರ್ ಬಸ್‌ಗಳು, 11 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ. ಎಲ್ಲಾ ಬಸ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ. ಇಲ್ಲಿಯವರೆಗೆ 4

ದೆಹಲಿ: ದಟ್ಟ ಮಂಜಿನಿಂದ ಭೀಕರ ಅಪಘಾತ| 3 ಕಾರು, 7 ಬಸ್ ಗಳು ಬೆಂಕಿಗಾಹುತಿ; ನಾಲ್ವರು ಸಜೀವ ದಹನ Read More »

ಗೋವಾದಲ್ಲಿ ಭೀಕರ ಅಗ್ನಿ ಅವಘಡ| 23 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು 23 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್ ಕ್ಲಬ್ ನಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನೈಟ್ ಕ್ಲಬ್ ನಲ್ಲಿ ಬೆಂಕಿ ಹೊತ್ತಿಕೊಂಡು 23 ಜನ ಸಚಿವ ದಹನವಾಗಿದ್ದಾರೆ. ಕ್ಲಬ್ ನ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹರಡಿದ್ದು, ಕ್ಲಬ್ ಸಿಬ್ಬಂದಿ, ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೋರಾದ ನೈಟ್‌ಕ್ಲಬ್ ಬಿರ್ಚ್ ಬೈ ರೋಮಿಯೋ

ಗೋವಾದಲ್ಲಿ ಭೀಕರ ಅಗ್ನಿ ಅವಘಡ| 23 ಮಂದಿ ಸಜೀವ ದಹನ Read More »

ಕೇಂದ್ರ ಸಚಿವೆ ಷೇರುಗಳಲ್ಲಿ ಹಣ ಹೂಡುವಂತೆ ಮಾತನಾಡುವ ಡೀಪ್ ಪೇಕ್ ವಿಡಿಯೋ ವೈರಲ್| ಬೆಂಗಳೂರಿನಲ್ಲಿ ಎಪ್ಐಆರ್ ದಾಖಲು

ಸಮಗ್ರ ನ್ಯೂಸ್: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್ ಫೇಕ್ ವೀಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಪರಿಶೀಲಿಸಿದಾಗ ಅದು ಎಐ ಬಳಸಿ ಡೀಪ್ ಫೇಲ್ ವಿಡಿಯೋ ರಚಿಸಲಾಗಿದೆ ಎಂಬುದು ತಿಳಿದು ಬಂದಿದೆ. ಅಪರಿಚಿತರ ವಿರುದ್ಧ ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ

ಕೇಂದ್ರ ಸಚಿವೆ ಷೇರುಗಳಲ್ಲಿ ಹಣ ಹೂಡುವಂತೆ ಮಾತನಾಡುವ ಡೀಪ್ ಪೇಕ್ ವಿಡಿಯೋ ವೈರಲ್| ಬೆಂಗಳೂರಿನಲ್ಲಿ ಎಪ್ಐಆರ್ ದಾಖಲು Read More »

ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ| ಇತಿಹಾಸದಲ್ಲೇ ಮೊದಲ ಬಾರಿಗೆ 90ಕ್ಕೆ ಇಳಿದ ಮೌಲ್ಯ

ಸಮಗ್ರ ನ್ಯೂಸ್: ರೂಪಾಯಿ ಮೌಲ್ಯ ದಾಖಲೆಯ ಅತ್ಯಂತ ದುರ್ಬಲ ಮಟ್ಟಕ್ಕೆ ಕುಸಿದಿದ್ದು, ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ಗೆ 90 ಕ್ಕಿಂತ ಕುಸಿದಿದೆ. ಜಾಗತಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಹಣವನ್ನು ಹಿಂತೆಗೆದುಕೊಂಡಿದ್ದರಿಂದ ಮತ್ತು ಹೆಚ್ಚಿನ ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಬಲಗೊಳ್ಳುತ್ತಿದ್ದಂತೆ ವಾರಗಳಿಂದಲೂ ಈ ಕ್ರಮ ಮುಂದುವರೆದಿತ್ತು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಅಮೆರಿಕನ್ ಡಾಲರ್ಗೆ ರೂಪಾಯಿ ಮೌಲ್ಯ 90.11 ಕ್ಕೆ ವಹಿವಾಟು ನಡೆಸುತ್ತಿದ್ದು, ಸ್ಥಿರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ಕುಸಿತ ಅಚ್ಚರಿಯೇನಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ,

ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ| ಇತಿಹಾಸದಲ್ಲೇ ಮೊದಲ ಬಾರಿಗೆ 90ಕ್ಕೆ ಇಳಿದ ಮೌಲ್ಯ Read More »

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು

ಸಮಗ್ರ ನ್ಯೂಸ್: ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನವೇ ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವರ್ತನೆಯನ್ನು ನಾಟಕ ಎಂದು ಬಣ್ಣಿಸಿದ್ದಕ್ಕೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವುದು ನಾಟಕವಲ್ಲ, ಆದರೆ ಆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದೆ ಪಲಾಯನ ಮಾಡುವುದೇ ನಿಜವಾದ ನಾಟಕ ಎಂದು ಪ್ರಧಾನಿ

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು Read More »

ಗೋವಾದಲ್ಲಿ ವಿಶ್ವದ ಅತೀದೊಡ್ಡ ಶ್ರೀರಾಮನ ಮೂರ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪ್ರತಿಷ್ಠಾಪನೆಗೊಂಡಿರುವ ಜಗತ್ತಿನ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. “ದಕ್ಷಿಣದ ಅಯೋಧ್ಯೆ’ಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಮಠದ ಬಿಲ್ಲಿನಾಕಾರದ “ಆದರ್ಶ ಧಾಮ್‌’ ಪ್ರದೇಶದಲ್ಲಿ ಆಕಾರ ಪಡೆದಿರುವ ಮೂರ್ತಿ ಶ್ರೀಮದ್‌ ವಿದ್ಯಾಧೀಶತೀರ್ಥ ಶ್ರೀಪಾದರ ಜತೆ ಅನಾವರಣಗೊಳಿಸಿದರು. ಶ್ರೀಮಠಕ್ಕೆ 550 ಸಂವತ್ಸರಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ “ಸಾರ್ಧ ಪಂಚ ಶತಮಾನೋತ್ಸವ’ ಕಾರ್ಯಕ್ರಮದ ನಿಮಿತ್ತ ಪ್ರಧಾನಿಯವರು ವಿಶೇಷ ಅಂಚೆ ಚೀಟಿ

ಗೋವಾದಲ್ಲಿ ವಿಶ್ವದ ಅತೀದೊಡ್ಡ ಶ್ರೀರಾಮನ ಮೂರ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ Read More »

17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ…

ಸಮಗ್ರ ನ್ಯೂಸ್: ಭಾರತವನ್ನು ನಡುಗಿಸಿದ 26/11 ಮುಂಬೈ ಭಯೋತ್ಪಾದಕ ದಾಳಿಗೆ ಇಂದು 17 ವರ್ಷಗಳು. 2008ರ ನವೆಂಬರ್ 26ರಂದು ನಡೆದ ಈ ಕ್ರೂರ ಘಟನೆದಲ್ಲಿ ದೇಶ ಅನೇಕ ಅಮಾಯಕ ಪ್ರಾಣಗಳನ್ನು ಕಳೆದುಕೊಂಡಿತ್ತು. ಹುತಾತ್ಮ ಯೋಧರ ತ್ಯಾಗ, ನಾಗರಿಕರ ನೋವು, ಮತ್ತು ಉಗ್ರರು ಬೀರಿದ ಭೀತಿಯ ನೆನಪುಗಳು ಇಂದಿಗೂ ಭಾರತೀಯರ ಮನದಲ್ಲಿ ಆಳವಾಗಿ ಉಳಿದಿವೆ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಗ್ಗಿದ ಲಷ್ಕರ್-ಇ-ತೊಯ್ಬಾ ಸಂಘಟನೆಯ 10 ಮಂದಿ ಉಗ್ರರು ಮುಂಬೈನ ತಾಜ್ ಹೋಟೆಲ್, ಛತ್ರಪತಿ ಶಿವಾಜಿ

17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ… Read More »

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ| ಕನಿಷ್ಠ 6 ಮಂದಿ ಸಾವು

ಸಮಗ್ರ ನ್ಯೂಸ್: ಶುಕ್ರವಾರ (ನವೆಂಬರ್ 21) ಬೆಳಿಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 26 ಸೆಕೆಂಡುಗಳ ಕಾಲ ಕಂಪನ ಸಂಭವಿಸಿದ್ದು, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲೂ ಪರಿಣಾಮ ಕಂಡು ಬಂದಿದೆ. ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಬಂಧಿದ್ದಾರೆ. ಭಾರತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಬಾಂಗ್ಲಾದೇಶ ಹವಾಮಾನ ಇಲಾಖೆ ಮತ್ತು ಭಾರತದ

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ| ಕನಿಷ್ಠ 6 ಮಂದಿ ಸಾವು Read More »

ದುಬೈ ಏರ್ ಶೋ ನಲ್ಲಿ ತೇಜಸ್ ಯುದ್ಧ ವಿಮಾನ ಪತನ

ಸಮಗ್ರ ನ್ಯೂಸ್: ದುಬೈನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್’ ಲಘು ಯುದ್ಧವಿಮಾನ ಪತನವಾಗಿದೆ. ಏರ್‌ಶೋನಲ್ಲಿ ‘ತೇಜಸ್’ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ. ಪತನದ ತಕ್ಷಣ ವಿಮಾನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ದೂರದಿಂದಲೇ ಹೊತ್ತಿ ಉರಿಯುತ್ತಿದ್ದ ಜ್ವಾಲೆಗಳು ಮತ್ತು ದಟ್ಟವಾಗಿ ಆವರಿಸಿರುವ ಹೊಗೆ ಗೋಚರಿಸಿವೆ. ಪೈಲಟ್ ಅಪಾಯದಿಂದ ಪಾರಾಗಿದ್ದಾರೋ ಇಲ್ಲವೋ ಎಂಬುದು ಇನ್ನೂ ದೃಢಪಡಿಸಬೇಕಾಗಿದೆ. ಈ

ದುಬೈ ಏರ್ ಶೋ ನಲ್ಲಿ ತೇಜಸ್ ಯುದ್ಧ ವಿಮಾನ ಪತನ Read More »