ರಾಷ್ಟ್ರೀಯ

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಸಮಗ್ರ ನ್ಯೂಸ್: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತ ಸಂಭವಿಸಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಅವರು ಇಂದು(ಎ.12) ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಇದರಿಂದ ಭಾರತೀಯ ಸಂಗೀತ ಕ್ಷೇತ್ರದ ಅಪ್ರತಿಮ ಕೊಂಡಿಯೊಂದು ಕಳಚಿದಂತಾಗಿದೆ. ಪ್ಟೆಂಬರ್ 8, 1933 ರಂದು ಜನಿಸಿದ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು ಮತ್ತು ವಿಶ್ವದ ಅತ್ಯಂತ ಹೆಚ್ಚು ರೆಕಾರ್ಡ್ ಮಾಡಲಾದ ಕಲಾವಿದರಲ್ಲಿ ಆಶಾ ಒಬ್ಬರೆನಿಸಿದ್ದಾರೆ. ಹಿಂದಿ, […]

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ Read More »

ಪ್ರಧಾನಿ ಹತ್ಯೆಗೆ ಸಂಚು; ಮೂವರು ಅರೆಸ್ಟ್

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಿಹಾರದ ಬಕ್ಸರ್‌ನಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತನೆಗೆ ನೆರವಾಗುತ್ತಿದ್ದ ಇನ್ನಿಬ್ಬರನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳ ಖಚಿತ ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ​ಬಂಧಿತ ಆರೋಪಿಯನ್ನು ಬಕ್ಸರ್ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದ್ದು, ಇವನು ದೀರ್ಘಕಾಲದಿಂದ ಹ್ಯಾಕಿಂಗ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಈತ ಪ್ರಧಾನಿಯವರ ಭದ್ರತಾ ವ್ಯವಸ್ಥೆ, ಅವರ ಸಂಚಾರ

ಪ್ರಧಾನಿ ಹತ್ಯೆಗೆ ಸಂಚು; ಮೂವರು ಅರೆಸ್ಟ್ Read More »

ಕದನ ವಿರಾಮ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ತೆರವು| ತೈಲ ಸಾಗಣೆ ಸುಗಮ, ಕಚ್ಚಾ ತೈಲ‌ ಬೆಲೆಯಲ್ಲಿ ಕುಸಿತ

ಸಮಗ್ರ ನ್ಯೂಸ್: ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಇರಾನ್​ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ.  ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದು, ಜಾಗತಿಕ ಮಾರುಕಟ್ಟೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು

ಕದನ ವಿರಾಮ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ತೆರವು| ತೈಲ ಸಾಗಣೆ ಸುಗಮ, ಕಚ್ಚಾ ತೈಲ‌ ಬೆಲೆಯಲ್ಲಿ ಕುಸಿತ Read More »

ಮಧ್ಯಪ್ರಾಚ್ಯ ಯುದ್ದಕ್ಕೆ ವಿರಾಮ| ಅಮೇರಿಕಾ, ಇರಾನ್ ಹೇಳಿದ್ದಿಷ್ಟು…

ಸಮಗ್ರ ನ್ಯೂಸ್: ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ ರಣಭೀಕರ ದಾಳಿಯ ಡೆಡ್​​ಲೈನ್ ಮುಗಿದಿದೆ. ಅಷ್ಟರಲ್ಲಿ ಅಮೆರಿಕ, ಇರಾನ್ 2 ವಾರಗಳ ಕದನ ವಿರಾಮ ಘೋಷಣೆ ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕದ ಫೈಟರ್ ಜೆಟ್‌ಗಳು ದಾಳಿ ಮಾಡಬೇಕಿತ್ತು, ಅಷ್ಟರಲ್ಲಿ ತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್

ಮಧ್ಯಪ್ರಾಚ್ಯ ಯುದ್ದಕ್ಕೆ ವಿರಾಮ| ಅಮೇರಿಕಾ, ಇರಾನ್ ಹೇಳಿದ್ದಿಷ್ಟು… Read More »

ಡ್ರಿಂಕ್ ಆ್ಯಂಡ್ ಡ್ರೈವ್| ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅರೆಸ್ಟ್

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಕ್ರಿಕೆಟ್ ದಿಗ್ಗಜ ಡೇವಿಡ್ ವಾರ್ನರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 5, 2026ರ ಭಾನುವಾರ ಸಂಜೆ ಸುಮಾರು 5:30ಕ್ಕೆ ಸಿಡ್ನಿಯ ಮರೂಬ್ರಾ (Maroubra) ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾರ್ನರ್ ಚಲಾಯಿಸುತ್ತಿದ್ದ ವ್ಯಾನ್, ತಪಾಸಣಾ ಕೇಂದ್ರಕ್ಕಿಂತ ಸ್ವಲ್ಪ ದೂರದಲ್ಲೇ ನಿಂತಿದೆ. ಇದನ್ನು ಗಮನಿಸಿದ ಸಂಚಾರ

ಡ್ರಿಂಕ್ ಆ್ಯಂಡ್ ಡ್ರೈವ್| ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅರೆಸ್ಟ್ Read More »

ಗಡುವು ಬೆನ್ನಲ್ಲೇ ಭೀಕರ ಎಚ್ಚರಿಕೆ ನೀಡಿದ ಟ್ರಂಪ್| ಇಂದು ರಾತ್ರಿಯೇ ಇರಾನ್ ನಾಗರೀಕತೆ ನಾಶಪಡಿಸುವುದಾಗಿ ಬೆದರಿಕೆ

ಸಮಗ್ರ ನ್ಯೂಸ್: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೊರ್ಮೊಜ್ ಜಲಸಂಧಿ ತೆರೆಯುವಂತೆ ಅಮೆರಿಕ, ಇರಾನ್‌ಗೆ ತಾಕೀತು ಮಾಡಿದೆ. ಇಂದು ರಾತ್ರಿ 8 ಗಂಟೆ ಒಳಗೆ ಇರಾನ್ ಅಧಿಪತ್ಯ ಸಾಧಿಸಿರುವ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇಡೀ ನಾಗರೀಕತೆಯನ್ನೇ ಮುಗಿಸುತ್ತೇವೆ. ಮತ್ತೆ ಯಾವತ್ತೂ ಈ ನಾಗರೀಕತೆ ಮರಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಒಂದು ನಾಗರೀಕತೆಯನ್ನು ಮುಗಿಸುವುದು ನನಗೂ ಇಷ್ಟವಿಲ್ಲ. ಆದರೆ ಪರಿಸ್ಥಿತಿ ನೋಡಿದರೆ ಇದು ಆಗಲಿದೆ. ಇರಾನ್‌ನಲ್ಲಿ ಸಂಪೂರ್ಣ ಹಾಗೂ ಪೂರ್ಣಪ್ರಮಾಣದ ಆಡಳಿತ

ಗಡುವು ಬೆನ್ನಲ್ಲೇ ಭೀಕರ ಎಚ್ಚರಿಕೆ ನೀಡಿದ ಟ್ರಂಪ್| ಇಂದು ರಾತ್ರಿಯೇ ಇರಾನ್ ನಾಗರೀಕತೆ ನಾಶಪಡಿಸುವುದಾಗಿ ಬೆದರಿಕೆ Read More »

ನಳಂದಾ ಶೀತ್ಲಾ ದೇವಾಲಯದಲ್ಲಿ ಕಾಲ್ತುಳಿತ| ಕನಿಷ್ಟ ಎಂಟು ಮಂದಿ ಸಾವು

ಸಮಗ್ರ ನ್ಯೂಸ್: ಬಿಹಾರದ ನಳಂದ ಜಿಲ್ಲೆಯ ಪ್ರಸಿದ್ಧ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಉಂಟಾದ ಕಾಲ್ತುಳಿತದಿಂದ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು, ತೀವ್ರ ಜನದಟ್ಟಣೆ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡರು ಎಂದು ತಿಳಿದು ಬಂದಿದೆ. ದುರಂತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಸ್ಥಳೀಯ ಗ್ರಾಮಸ್ಥರೊಂದಿಗೆ ಪೊಲೀಸ್ ಅಧಿಕಾರಿಗಳು

ನಳಂದಾ ಶೀತ್ಲಾ ದೇವಾಲಯದಲ್ಲಿ ಕಾಲ್ತುಳಿತ| ಕನಿಷ್ಟ ಎಂಟು ಮಂದಿ ಸಾವು Read More »

ಪೆಟ್ರೋಲ್, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ| ಬೆಲೆ ಏರಿಕೆಯ ಅನಿಶ್ಚಿತತೆ ನಡುವೆಯೂ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ಏರಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂಪಾಯಿ ಇಳಿಸಿದೆ. ಗುರುವಾರ ತಡರಾತ್ರಿ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ನಿಂದ 0 ರೂ.ಗೆ ಇಳಿಸಲಾಗಿದೆ.

ಪೆಟ್ರೋಲ್, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ| ಬೆಲೆ ಏರಿಕೆಯ ಅನಿಶ್ಚಿತತೆ ನಡುವೆಯೂ ಮಹತ್ವದ ನಿರ್ಧಾರ Read More »

ತೈಲಬಿಕ್ಕಟ್ಟಿನಿಂದ ಭಾರತದಲ್ಲಿ ಲಾಕ್ ಡೌನ್ ಆಗುತ್ತಾ? ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ದೇಶಾದ್ಯಂತ ಮತ್ತೆ ಲಾಕ್‌ಡೌನ್’ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಸೇರಿದಂತೆ ದೇಶದ ಪ್ರಮುಖ ಭದ್ರತಾ ವಿಷಯಗಳ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, ಸದ್ಯಕ್ಕೆ ಲಾಕ್‌ಡೌನ್ ಹೇರುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇತ್ತೀಚಿನ ಜಾಗತಿಕ ವಿದ್ಯಮಾನಗಳು ಮತ್ತು ಆರ್ಥಿಕ ಏರಿಳಿತಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೆ ಕಠಿಣ ನಿಯಮಗಳು ಬರಲಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿತ್ತು.

ತೈಲಬಿಕ್ಕಟ್ಟಿನಿಂದ ಭಾರತದಲ್ಲಿ ಲಾಕ್ ಡೌನ್ ಆಗುತ್ತಾ? ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು? Read More »

ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು‌ ಗೊತ್ತಾ?

ಸಮಗ್ರ ನ್ಯೂಸ್: ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ‘ಸಂಕಷ್ಟದ ಸಮಯದಲ್ಲಿ ನೆರವಾಗುವವನೇ ನಿಜವಾದ ಗೆಳೆಯ’ ಎಂಬ ಮಾತನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ. ಇರಾನ್ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತವು ತನ್ನ ಸ್ನೇಹದ ಹಸ್ತವನ್ನು ಚಾಚುವ ಮೂಲಕ ದೊಡ್ಡ ಮಟ್ಟದ ಮಾನವೀಯ ನೆರವನ್ನು ರವಾನಿಸಿದೆ. ಭಾರತದ ಈ ಸಕಾಲಿಕ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿರುವ ಇರಾನ್ ಸರ್ಕಾರ, ನಿಮ್ಮ ಈ ದೊಡ್ಡ ಗುಣಕ್ಕೆ ಧನ್ಯವಾದಗಳು ಎಂದು ಹೃದಯಸ್ಪರ್ಶಿಯಾಗಿ ಹೇಳುವ ಮೂಲಕ ಉಭಯ ದೇಶಗಳ ನಡುವಿನ ಗಟ್ಟಿ ಸ್ನೇಹವನ್ನು ಜಗತ್ತಿಗೆ ಸಾರಿದೆ.

ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು‌ ಗೊತ್ತಾ? Read More »