ರಾಷ್ಟ್ರೀಯ

ಆನ್ ಲೈನ್ ಮೂಲಕ ವಂಚನೆ| 1.71 ಲಕ್ಷ ಪಂಗನಾಮ ಹಾಕಿದ ಖದೀಮ

ಸಮಗ್ರ ನ್ಯೂಸ್: ಪಿಎಂ ಜನಧನ ಯೋಜನೆ ಹೆಸರಿನಲ್ಲಿ ವ್ಯಕ್ತಿಗೆ ಆನ್ ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದ ತಳೇವಾಡ ಗ್ರಾಮದಲ್ಲಿ ನಡೆದಿದೆ. ತಳೇವಾಡ ನಿವಾಸಿ ಹಣಮಂತ ಜೆಟ್ಟೆಪ್ಪಗೊಳ ಮೋಸ ಹೋದವರು. ಇನ್ನು ವಾಟ್ಸ್‌ಆಫ್ ಮೂಲಕ ಜನಧನ ಯೋಜನೆಯಡಿಯಲ್ಲಿ ಲೋನ್ ನೀಡುವ ಭರವಸೆ ನೀಡಿ ಎಂಟು ಬಾರಿ ಹಣ ಪಡೆದುಕೊಂಡು ಸುಮಾರು 1.71 ಲಕ್ಷ ಪಂಗನಾಮ ಹಾಕಿದ್ದಾರೆ. ತಾನು ಮೋಸ ಹೋಗಿರುವ ಬಗ್ಗೆ‌ ಕೊಲ್ಹಾರ ಠಾಣೆಯಲ್ಲಿ ಹಣಮಂತರವರು ದೂರು ನೀಡಿದ್ದಾರೆ. […]

ಆನ್ ಲೈನ್ ಮೂಲಕ ವಂಚನೆ| 1.71 ಲಕ್ಷ ಪಂಗನಾಮ ಹಾಕಿದ ಖದೀಮ Read More »

ಪುರಾವೆಯಿಲ್ಲದೆ ಪತಿಯನ್ನು ಕುಡುಕ, ಹೆಣ್ಣುಬಾಕ ಎನ್ನುವುದು ಮಹಾಕ್ರೌರ್ಯ – ಹೈಕೋರ್ಟ್

ಸಮಗ್ರ ನ್ಯೂಸ್: ದಾಂಪತ್ಯದಲ್ಲಿನ ಸಣ್ಣ ಸಣ್ಣ ಜಗಳಗಳು, ಸಂಶಯಗಳು, ಮುಂದೆ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗೆ ಅನುಮಾನದ ಮೇಲೆ ಅಥವಾ ಆಕ್ರೋಶದ ವೇಳೆ ಪತಿಯನ್ನು ಕುಡುಕ ಅಥವಾ ಅಕ್ರಮ ಸಂಬಂಧ ಹೊಂದಿದವ ಎಂದು ಕರೆಯುವುದು ಕ್ರೌರ್ಯಕ್ಕೆ ಸಮ. ಇದು ಶಿಕ್ಷೆಗೆ ಅರ್ಹ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಒಂದುವೇಳೆ ಸಂಶಯದ ಮೇಲೆ ಏನೋ ಕರೆದು ಎಡವಟ್ಟು ಮಾಡಿಕೊಂಡರೆ, ಪತ್ನಿ ತಾನು ಮಾಡಿರುವ ಆರೋವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದರೆ ಶಿಕ್ಷೆಗೆ ಗುರಿಯಾಗುತ್ತಾಳೆ. ಇದೀಗ ಗಂಡನ ವಿರುದ್ಧ ಸಿಟ್ಟಿನ

ಪುರಾವೆಯಿಲ್ಲದೆ ಪತಿಯನ್ನು ಕುಡುಕ, ಹೆಣ್ಣುಬಾಕ ಎನ್ನುವುದು ಮಹಾಕ್ರೌರ್ಯ – ಹೈಕೋರ್ಟ್ Read More »

ಮಹಿಳೆಯರನ್ನು ‘ಐಟಂ’ ಎಂದು ಕರೆಯುವಂತಿಲ್ಲ| ಪರೋಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ

ಮುಂಬೈ: ಅಪ್ರಾಪ್ತ ಬಾಲಕಿಯನ್ನು `ಐಟಂ’ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ 7 ವರ್ಷಗಳ ಬಳಿಕ 1.5 ವರ್ಷ ಜೈಲು ಶಿಕ್ಷೆಯನ್ನು ಮುಂಬೈ ಕೋರ್ಟ್ ವಿಧಿಸಿದೆ. ಈ ವೇಳೆ ಮುಂಬೈ ಕೋರ್ಟ್ ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು

ಮಹಿಳೆಯರನ್ನು ‘ಐಟಂ’ ಎಂದು ಕರೆಯುವಂತಿಲ್ಲ| ಪರೋಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ Read More »

ಶಾಂಪೂ, ಕ್ರೀಮ್ ಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆ| ಹಲವು ಉತ್ಪನ್ನಗಳನ್ನು ಹಿಂಪಡೆದ ಯೂನಿಲಿವರ್

ಸಮಗ್ರ ನ್ಯೂಸ್: ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಈ ಶಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್​ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎಂದು ಹೇಳಲಾಗಿದೆ. ಮೂಗಿನ ಮೂಲಕ, ಬಾಯಿಯ ಮೂಲಕ

ಶಾಂಪೂ, ಕ್ರೀಮ್ ಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆ| ಹಲವು ಉತ್ಪನ್ನಗಳನ್ನು ಹಿಂಪಡೆದ ಯೂನಿಲಿವರ್ Read More »

ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು

ಸಮಗ್ರ ನ್ಯೂಸ್: ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೈಕೊಟ್ಟಿದ್ದು, ಗ್ರಾಹಕರು ಮೆಸೇಜ್ ಕಳುಹಿಸಲಾಗದೆ ಪರದಾಡಿದರು. ಗ್ರಹಣದ ದಿನ್ನ ಇನ್ನೊಮ್ಮೆ ಕೈಕೊಟ್ಟಿದ್ದು, ಬಳಕೆದಾರರರು ಪರದಾಡುವಂತೆ ಮಾಡಿದೆ. ವಾಟ್ಸ್‌ಆ್ಯಪ್ ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವೇ ಹೊತ್ತಿನಲ್ಲಿ ಟ್ವಿಟರ್​ನಲ್ಲಿ ವಾಟ್ಸ್​ಆ್ಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್​ಆ್ಯಪ್​ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.

ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು Read More »

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ದೀಪಾವಳಿ ಹೊತ್ತಲ್ಲೇ, ಇಂದು (ಅ.25) ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಸೂರ್ಯ ಗ್ರಹಣ ಸಮಯಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18ಗ್ರಹಣ ಮೋಕ್ಷಕಾಲ –

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಮಹಿಳೆಗೆ ಕಪಾಳಮೋಕ್ಷ ಪ್ರಕರಣ| ಸಚಿವ ವಿ.ಸೋಮಣ್ಣ ತಲೆದಂಡ!?

ಸಮಗ್ರ ನ್ಯೂಸ್: ತನ್ನ ಕಷ್ಟವನ್ನು ಹೇಳಿಕೊಳ್ಳಲು ಆಗಮಿಸಿದಂತ ಮಹಿಳೆಯೊಬ್ಬರಿಗೆ, ವಸತಿ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಈ ಬಳಿಕ ಮಹಿಳೆಯ ಕ್ಷಮೆ ಕೇಳಿದ್ದು, ಈ ಪ್ರಕರಣದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ. ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಚಾಮರಾಜನಗರದಲ್ಲಿ ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಪರಿಶಿಷ್ಟ ಮಹಿಳೆಯೊಬ್ಬರು ತಮಗೆ ನಿವೇಶನ ಹಂಚಿಕೆ ಆಗಿಲ್ಲ. ದಯವಿಟ್ಟು ಕೊಡಿಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದರು. ಅಲ್ಲದೇ

ಮಹಿಳೆಗೆ ಕಪಾಳಮೋಕ್ಷ ಪ್ರಕರಣ| ಸಚಿವ ವಿ.ಸೋಮಣ್ಣ ತಲೆದಂಡ!? Read More »

ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ?

ಸಮಗ್ರ ನ್ಯೂಸ್: ಈ ವರತಷದ ಕೊನೆಯ ಸೂರ್ಯಗ್ರಹಣ ನಾಳೆ(ಅಕ್ಟೋಬರ್ 25) ರಂದು ಗೋಚರವಾಗಲಿದೆ. ದೀಪಾವಳಿ ಅಮಾವಾಸ್ಯೆಯ ದಿನ ಗ್ರಹಣ ಸಂಭವಿಸಲಿರುವುದು ಈ ಬಾರಿಯ ವಿಶೇಷ. ನಾಳೆ ಕಂಡುಬರಲಿರುವ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಚಂದ್ರನ ನೆರಳಿನ ಕೇಂದ್ರವು ಭೂಮಿಯನ್ನು ತಪ್ಪಿಸಿಕೊಂಡಾಗ ಭೂಮಿಯ ಧ್ರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಭಾಗಶಃ ಸೂರ್ಯಗ್ರಹಣದ ವಿವರ:ಚಂದ್ರನು ಸೂರ್ಯನ ಸಂಪೂರ್ಣ ಮೇಲ್ಮೈ ಪ್ರದೇಶವನ್ನು ಆವರಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ತಟ್ಟೆಯ ಅರ್ಧಭಾಗ ಅಥವಾ ಒಂದು ಭಾಗ ಮಾತ್ರ ಚಂದ್ರನಿಂದ ಆವರಿಸಲ್ಪಡುತ್ತದೆ. ಇದು ಭಾಗಶಃ ಸೂರ್ಯಗ್ರಹಣಕ್ಕೆ

ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ? Read More »

ಮೋದಿ ದೀಪಾವಳಿ| ಅಯೋಧ್ಯೆಯಿಂದ ನೇರಪ್ರಸಾರ

ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬದ ಪ್ರಯುಕ್ತ 18 ಲಕ್ಷ ದೀಪೋತ್ಸವವನ್ನು ಉದ್ಘಾಟಿಸಿದರು. ನೇರಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್ ಒತ್ತಿರಿ… ಅಯೋಧ್ಯೆಯಲ್ಲಿ ಈಗ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, 6ನೇ ವರ್ಷದ ದೀಪೋತ್ಸವದ ಅಂಗವಾಗಿ ಲೇಸರ್ ಶೋ ಪ್ರದರ್ಶನ ಸಹ ನಡೆಯುತ್ತಿದೆ. ಕಾರ್ಯಕ್ರಮದ ನೇರಪ್ರಸಾರ ಇಲ್ಲಿದೆ…

ಮೋದಿ ದೀಪಾವಳಿ| ಅಯೋಧ್ಯೆಯಿಂದ ನೇರಪ್ರಸಾರ Read More »

ಅರುಣಾಚಲ ಹೆಲಿಕಾಪ್ಟರ್ ಪತನ| ಕಾಸರಗೋಡಿನ ಯೋಧ ಅಶ್ವಿನ್ ಹುತಾತ್ಮ

ಸಮಗ್ರ ನ್ಯೂಸ್: ಅರುಣಾಚಲದಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿ ಕಾಸರಗೋಡಿನ ಕೆ.ವಿ. ಅಶ್ವಿನ್‌ (24) ಎಂಬ ಯೋಧ ಮೃತರಾಗಿರುವ ಕುರಿತು ವರದಿಯಾಗಿದೆ. ಎಚ್‌ಎಎಲ್‌ ನಿರ್ಮಿತ ರುದ್ರ ಎಂಬ ಸುಧಾರಿತ ಕಾಪ್ಟರ್‌ ನಿನ್ನೆ ಪತನಗೊಂಡು ನಾಲ್ವರು ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಒಟ್ಟು ಐದು ಜನರಿದ್ದರು. ಕಾಸರಗೋಡಿನ ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್‌ ಮತ್ತು ಕೆ.ವಿ. ಕೌಶಲ್ಯ ದಂಪತಿ ಪುತ್ರ ಕೆ.ವಿ. ಅಶ್ವಿನ್‌ (24) ಈ ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಸೇನಾ ಅಧಿಕಾರಿಗಳು ಅಶ್ವಿನ್‌ ಅವರ ಮನೆಗೆ ಕರೆ ಮಾಡಿ ಮಾಹಿತಿ

ಅರುಣಾಚಲ ಹೆಲಿಕಾಪ್ಟರ್ ಪತನ| ಕಾಸರಗೋಡಿನ ಯೋಧ ಅಶ್ವಿನ್ ಹುತಾತ್ಮ Read More »