ಉತ್ತರಕನ್ನಡ: ನಿಧನರಾಗಿ 8 ತಿಂಗಳಾದರೂ ಯಕ್ಷಗಾನ ಅಕಾಡಮಿ ಅಧ್ಯಕ್ಷರು ಇವರೇ !ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ|
ಶಿರಸಿ: ಮೃತರಾಗಿ ಎಂಟು ತಿಂಗಳಾದರೂ ಆಧುನಿಕ ನಡೆಯಲ್ಲಿ ವಿಫುಲ ಹೆಜ್ಜೆ ಇಡುತ್ತಿರುವ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವೆಬ್ ಸೈಟ್ ನಲ್ಲಿ ಮೃತರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಕಳೆದ ಏಪ್ರಿಲ್ 18ರಂದು ಅಕಾಲಿಕವಾಗಿ ಅಗಲಿದ ಯಕ್ಷಗಾನ ಅಕಾಡಮಿ ಅಧ್ಯಕ್ಷ ಪ್ರೋ ಎಂ.ಎ.ಹೆಗಡೆ ಅವರ ಜಾಗಕ್ಕೆ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದರ ಬಗ್ಗೆ ಆಕ್ಷೇಪ, ಅಸಮಧಾನಗಳು ಬಂದ ಬೆನ್ನಲ್ಲೇ, ವೆಬ್ ಸೈಟಿನಲ್ಲಿ ಎಂ.ಎ.ಹೆಗಡೆ ಅವರ ಹೆಸರನ್ನು ಬದಲಾಯಿಸದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡ ನಾಡು ನುಡಿ, ಕಲೆಯ ಸೇವೆಗಾಗಿ ಇರುವ […]










