ಆರೋಗ್ಯವೇ ಭಾಗ್ಯ

ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ನಾಲ್ಕನೇ ಅಲೆ| ರಾಜ್ಯಗಳಿಗೆ ಅಲರ್ಟ್ ಆಗಿರಲು ಕೇಂದ್ರ ಸೂಚನೆ

ಸಮಗ್ರ ನ್ಯೂಸ್: ನೆರೆಯ ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಸೋಂಕು ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ ನೀಡಲಾಗಿದೆ. ಚೀನಾ, ಜಪಾನ್, ಯುಎಸ್, ಕೊರಿಯಾ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಉಲ್ಬಣವು ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಅಪಾಯವನ್ನು ಉಂಟು ಮಾಡುವ ಕಾರಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ಕೇಂದ್ರವು ಮಂಗಳವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ರಾಜ್ಯಗಳಿಗೆ ನೀಡಿದ ನೋಟಿಸ್‌ನಲ್ಲಿ, ಆರೋಗ್ಯದ ಕೇಂದ್ರ ಕಾರ್ಯದರ್ಶಿ ರಾಜೇಶ್ ಭೂಷಣ್ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ […]

ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ನಾಲ್ಕನೇ ಅಲೆ| ರಾಜ್ಯಗಳಿಗೆ ಅಲರ್ಟ್ ಆಗಿರಲು ಕೇಂದ್ರ ಸೂಚನೆ Read More »

ಜೀವನಶೈಲಿಯಲ್ಲಿನ‌ ಬದಲಾವಣೆಯಿಂದ ಆರೋಗ್ಯ ಸುಧಾರಣೆ – ಡಾ || ಚೂಂತಾರು

ಸಮಗ್ರ ನ್ಯೂಸ್: ಆರೋಗ್ಯ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ. ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ, ನಮ್ಮ ಧನಾತ್ಮಕ ಚಿಂತನಾ ಲಹರಿ ಮತ್ತು ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ಮತ್ತು ಒತ್ತಡ ಮುಕ್ತ ಕೆಲಸದ ವಾತಾವರಣ ನಾವು ಸೃಷ್ಟಿಸಿಕೊಂಡಲ್ಲಿ ನಮಗೆ ಯಾವುದೇ ರೋಗ ಬರುವ ಸಾಧ್ಯತೆ ಇಲ್ಲ. ನಮ್ಮ ಹೆಚ್ಚಿನ ಎಲ್ಲಾ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತ ಮುಂತಾದ ರೋಗಗಳು

ಜೀವನಶೈಲಿಯಲ್ಲಿನ‌ ಬದಲಾವಣೆಯಿಂದ ಆರೋಗ್ಯ ಸುಧಾರಣೆ – ಡಾ || ಚೂಂತಾರು Read More »

ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ

ಸಮಗ್ರ ನ್ಯೂಸ್: ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ ಅವಲಕ್ಕಿ ಪಾಯಸ ತಯಾರು ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ – 200 ಗ್ರಾಂ, ಬೆಲ್ಲ – 1/4 ಕೆಜಿ, ಹಾಲು – 1/2 ಲೀಟರ್ಏಲಕ್ಕಿ – 4, ದ್ರಾಕ್ಷಿ – ಗೋಡಂಬಿ – 4 ರಿಂದ 5, ಕಾಯಿಹಾಲು – 1/2

ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ Read More »

ಕಿಡ್ನಿಸ್ಟೋನ್ (ಮೂತ್ರಕೋಶದ ಕಲ್ಲು) ಕಾರಣ ಮತ್ತು ಪರಿಹಾರೋಪಾಯಗಳು| ಇಲ್ಲಿದೆ‌ ಮಾಹಿತಿ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತಿದೆ. ಕಿಡ್ನಿ ಸ್ಟೋನ್ ಆದಾಗ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಸಮಯ ಕಳೆದಂತೆ ನಿಧಾನವಾಗಿ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದಾಗಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಆಗಲು ಕಾರಣ ಏನು ಎಂದು ಹುಡುಕಿದರೆ, ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಜಂಕ್ ಫುಡ್ ಸೇವನೆ, ಅಧಿಕ

ಕಿಡ್ನಿಸ್ಟೋನ್ (ಮೂತ್ರಕೋಶದ ಕಲ್ಲು) ಕಾರಣ ಮತ್ತು ಪರಿಹಾರೋಪಾಯಗಳು| ಇಲ್ಲಿದೆ‌ ಮಾಹಿತಿ… Read More »

ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ| ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್: ರಾಯಚೂರಿನ ಬಾಲಕಿಯೊಬ್ಬರಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆಯಾಗುತ್ತಿದ್ದಂತೆ ಸೋಂಕಿನ ಬಗ್ಗೆ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ವೈರಸ್‌ಗೆ ಚಿಕಿತ್ಸಾ ಕ್ರಮ, ಟೆಸ್ಟಿಂಗ್ ವಿಧಾನ ಮತ್ತು ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ. ಸೋಂಕಿನ ರೋಗ ಲಕ್ಷಣಗಳೇನು? ಅದನ್ನು ಪತ್ತೆ ಹಚ್ಚಲು ಮಾಡಬೇಕಾದ ಪರೀಕ್ಷಾ ವಿಧಾನಗಳೇನು? ಸೋಂಕಿತರನ್ನು ಗುಣಪಡಿಸಲು ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳೇನು ಎಂಬ ಬಗ್ಗೆ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ತಿಳಿಸಿದೆ. ಝಿಕಾ ವೈರಸ್ ರೋಗ ಲಕ್ಷಣಗಳು:ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ

ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ| ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ Read More »

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ

ಸಮಗ್ರ ನ್ಯೂಸ್: ಭಾರತೀಯ ಪದ್ದತಿಯಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದನ್ನು ನೀವು ನೋಡಿರಬಹುದು ಅಥವಾ ಅನುಭವಿಸಿರಬಹುದು. ಇದು ಕೆಲವರಿಗೆ ಹೊಟ್ಟೆನೋವು ಆಗಿ ಪರಿಣಮಿಸುತ್ತದೆ. ಇದಕ್ಕೆ ನಿಜವಾದ ಕಾರಣ ನಿಮ್ಮ ಆಹಾರವನ್ನು ಸೇವಿಸುವ ತಪ್ಪು ವಿಧಾನವಾಗಿರಬಹುದು. ಈ ಕಾರಣದಿಂದಾಗಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಲನ್ನು ನಿಂತು ಕುಡಿಯಬೇಕು, ಕುಳಿತಲ್ಲೇ ನೀರು ಕುಡಿಯಬೇಕು ಎಂದು

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ Read More »

ಶೀತಬಾಧೆಯಿಂದ ಮೂಗು ಸೋರುತ್ತಿದೆಯಾ? ಇಲ್ಲಿದೆ ಕೆಲವು ಮನೆಮದ್ದು

ಸಮಗ್ರ ನ್ಯೂಸ್: ಅಕಾಲಿಕ‌ ಮಳೆ, ಚಳಿಯಿಂದ ಎಲ್ಲರಿಗೂ ಶೀತ, ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿದೆ. ಒಮ್ಮೆ ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಬಂದುಬಿಡುತ್ತೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ ಸಮಸ್ಯೆಯಿಂದ ದೂರ ಇರಬಹುದು.

ಶೀತಬಾಧೆಯಿಂದ ಮೂಗು ಸೋರುತ್ತಿದೆಯಾ? ಇಲ್ಲಿದೆ ಕೆಲವು ಮನೆಮದ್ದು Read More »

ನೀವು ಡಯಾಬಿಟಿಸ್ ನಿಂದ‌ ದೂರವಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ; ಡಯಾಬಿಟಿಕ್ ಫ್ರೀ ಆಗಿರಿ…

ಸಮಗ್ರ ನ್ಯೂಸ್: ಮಧುಮೇಹ ಅನ್ನೋದು ಇಂದು ಕಾಮನ್‌ ಖಾಯಿಲೆಯಾದರೂ ಅದು ಬಹಳ ಅಪಾಯಕಾರಿ. ರಕ್ತದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕಣ್ಣು ಮತ್ತು ಮೂತ್ರಪಿಂಡಗಳಂತಹ ನಮ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು ನೀವು ಪ್ರಿ-ಡಯಾಬಿಟಿಕ್ ಅಥವಾ ಪೂರ್ವ ಮಧುಮೇಹಿಗಳಾಗಿದ್ದರೆ, ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದರೂ ಅದು ಬಾರ್ಡರ್‌ ಅಂಚಿನಲ್ಲಿರುವ ಕಾರಣ ನೀವು ಮಧುಮೇಹಿ ಅಂತ ಅನ್ನಿಸಿಕೊಂಡಿರುವುದಿಲ್ಲ. ಆದ್ರೆ ಮಧುಮೇಹ ಪೂರ್ವ ಸ್ಥಿತಿಯಲ್ಲಿರುವಾಗ ಯಾವಾಗ ಬೇಕಾದರೂ

ನೀವು ಡಯಾಬಿಟಿಸ್ ನಿಂದ‌ ದೂರವಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ; ಡಯಾಬಿಟಿಕ್ ಫ್ರೀ ಆಗಿರಿ… Read More »

ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ

ಆರೋಗ್ಯ ಸಮಾಚಾರ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ, ಈ ಬಗ್ಗೆ ವೈದ್ಯರು ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಇಲ್ಲಿ ತಿಳಿಸಿದ್ದಾರೆ. ಬದಲಾದ ಆಹಾರ ಕ್ರಮ, ಜೀವನಶೈಲಿಯಿಂದಾಗಿ ಮನುಷ್ಯನಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಮನ್‌ ಎಂಬಂತಾಗಿದೆ. ಪ್ರತಿಯೊಬ್ಬರೂ ಆಗಾಗ ನಂಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಅಂತಾ ಹೇಳಿಕೊಳ್ತಿರ‍್ತಾರೆ. ಸಣ್ಣ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹಲವರು ನಿರ್ಲಕ್ಷಿಸುವುದೂ ಉಂಟು. ಕೆಲವೊಮ್ಮೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ, ಅದು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಕೆಲವರು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ನಿರಂತರ ಎದೆನೋವನ್ನು ಹಾಗೆ ನೆಗ್ಲೆಕ್ಟ್‌ ಮಾಡುವುದು ಸರಿಯಲ್ಲ.

ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ Read More »

ಮಂಗಳೂರು: ಹೆಸರು‌ಬೇಳೆ, ಐಸ್ ಕ್ರೀಂ ತಿಂದು‌ ಫುಡ್ ಪಾಯ್ಸನ್| ನಾಲ್ವರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹೆಸರುಬೇಳೆ ಮತ್ತು ಐಸ್ ಕ್ರೀಂ ಸೇವಿಸಿ ಫುಡ್​ ಪಾಯ್ಸನ್ ಗೊಳಗಾದ ನಾಲ್ವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪ್ಪು ಬಪ್ಪಾಲ್‌ನ ನಿವಾಸಿಗಳಾದ ಅರವಿಂದ ರಾವ್ (52), ಪತ್ನಿ ಪ್ರಭಾವತಿ (45) ಮತ್ತು ಮಕ್ಕಳಾದ ಸೌರಭ್ (20) ಪ್ರತೀಕ್ (18) ಅನಾರೋಗ್ಯ ಹೊಂದಿದ್ದಾರೆ. ಫುಡ್​ ಪಾಯಿಸನ್​ ಆಗಿ ಅಸ್ವಸ್ಥಗೊಂಡವರುಇವರು ನಿನ್ನೆ ರಾತ್ರಿ ಮಲಗುವ ಮೊದಲು ಹೆಸರುಬೇಳೆ ಮತ್ತು ಐಸ್ ಕ್ರೀಂ ತಿಂದಿದ್ದರು. ಆ ಬಳಿಕ ವಾಂತಿ ಶುರುವಾಗಿದೆ. ಇಂದು ಬೆಳಿಗ್ಗೆ ಮನೆ ಬಾಗಿಲನ್ನು ತೆರೆಯದಿರುವುದನ್ನು ಗಮನಿಸಿದ ಸಂಬಂಧಿಕರು

ಮಂಗಳೂರು: ಹೆಸರು‌ಬೇಳೆ, ಐಸ್ ಕ್ರೀಂ ತಿಂದು‌ ಫುಡ್ ಪಾಯ್ಸನ್| ನಾಲ್ವರು ಆಸ್ಪತ್ರೆಗೆ ದಾಖಲು Read More »