ಕ್ರೈಂ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ| 6 ಕ್ಕೂ‌ ಹೆಚ್ಚು ಮಂದಿ ಬಂಧನ

ಸಮಗ್ರ ನ್ಯೂಸ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ಲಾಡ್ಜ್ ಮೇಲೆ ದಾಳಿ ನಡೆದಿದ್ದು, ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ವಿಜಯನಗರದ ಹೊಸಪೇಟೆಯ ರಾಣಿಪೇಟ್‍ನಲ್ಲಿ ಒಡನಾಡಿ ಸಂಸ್ಥೆ ಮತ್ತು ಹೊಸಪೇಟೆ ಪಟ್ಟಣ ಪೊಲೀಸರಿಂದ ಜಂಟಿ ದಾಳಿ ನಡೆದಿದೆ. ಲಾಡ್ಜ್ ನ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಪೊಲೀಸರ ತಂಡ ಲಾಡ್ಜ್ ಮೇಲೆ ದಾಳಿ ಮಾಡಿದೆ. ಈ ವೇಳೆ ಲಾಡ್ಜ್ ನಲ್ಲಿದ್ದ 6ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ದಂಧೆಯಲ್ಲಿ ತೊಡಗಿದ ಸಂತ್ರಸ್ತ ಮಹಿಳೆಯರ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ| 6 ಕ್ಕೂ‌ ಹೆಚ್ಚು ಮಂದಿ ಬಂಧನ Read More »

ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಸಮಗ್ರ ನ್ಯೂಸ್: ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟ ಘಟನೆ ಮಂಗಳವಾರ ಕಾಸರಗೋಡಿನ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ, ಎರಡೂವರೆ ತಿಂಗಳ ಹಸುಳೆ ಮೃತಪಟ್ಟಿದೆ. ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು Read More »

ಲವ್, ಸೆಕ್ಸ್, ದೋಖಾ… ಯುವಕನ ಮನೆ ಮುಂದೆ ಧರಣಿ ಕುಳಿತ ಶಿಕ್ಷಕಿ

ಸಮಗ್ರ ನ್ಯೂಸ್: ಪ್ರೀತಿ ಅನ್ನೋದೆ ಹಾಗೇ ಏನಾದ್ರು ಒಂದು ಪಜೀತಿಗೆ ಎಡೆಮಾಡಿಕೊಡುತ್ತೆ. ಪ್ರೀತಿ ಮಾಡುವಾಗ ಇಲ್ಲದ ಜಾತಿ ಮದುವೆ ವಿಷಯ ಪ್ರಸ್ತಾಪಕ್ಕೆ ಮಾತ್ರ ಎದ್ದು ನಿಲ್ಲುತ್ತದೆ. ಇಲ್ಲೂ ಅದೇ ಘಟನೆ ನೋಡಿ ಆಕೆ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು ಆ ಸಂದರ್ಭದಲ್ಲಿ ಅದೇ ಊರಿನ ಒಬ್ಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಎಲ್ಲರಂತೆ ಇವರದ್ದೂ ಕೇವಲ ಸ್ನೇಹವಾಗಿಯೇ ಇತ್ತು. ದಿನಗಳು ಕಳೆದಂತೆ ಅವರಿಬ್ಬರ ನಡುವೆ ಹೆಚ್ಚು ಹೆಚ್ಚು ಆತ್ಮೀಯತೆ ಬೆಳೆಯಲಾರಂಭಿಸಿತ್ತು. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಬಳಸಿಕೊಂಡಾತ ಜಾತಿ ಕಾರಣ

ಲವ್, ಸೆಕ್ಸ್, ದೋಖಾ… ಯುವಕನ ಮನೆ ಮುಂದೆ ಧರಣಿ ಕುಳಿತ ಶಿಕ್ಷಕಿ Read More »

ನಾಲ್ಕು ವರ್ಷದ ಮಗುವನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿ ಪರಾರಿಯಾಗಲೆತ್ನಿಸಿದ ತಾಯಿ| ಕಂಪೆನಿ ಸಿಇಒ ಆಗಿದ್ದು ಹೀಗ್ಯಾಕೆ‌ ಮಾಡಿದ್ಲು ಅಂತ ತಿಳಿದ್ರೆ ಬೆಚ್ಚಿ ಬೀಳ್ತೀರಾ!!

ಸಮಗ್ರ ನ್ಯೂಸ್: ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸಿದ ಮಹಿಳೆ ಹಾಗೂ ಆಕೆಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಸೂಚನಾ ಸೇಠ್ ಈ ಕುಕೃತ್ಯ ಎಸಗಿದ ಮಹಿಳೆ. ಆಕೆ ಹೀಗೆ ಮಾಡಲು ಆಕೆಯ ಮಾಜಿ ಗಂಡ ಕಾರಣ ಅನ್ನೋದು ಈಗ ಗೊತ್ತಾಗಿದೆ. ಆರೋಪಿ ಸೂಚನಾ ಸೇಠ್‌ ಇತ್ತೀಚೆಗಷ್ಟೇ ತನ್ನ ಗಂಡನಿಂದ ಡಿವೋರ್ಸ್‌ ಪಡೆದಿದ್ದಳು. ಈ ಹಿನ್ನೆಲೆಯಲ್ಲಿ ಮಗುವನ್ನು ಪತಿ ಭಾನುವಾರ ಗಂಡ ಬಳಿ

ನಾಲ್ಕು ವರ್ಷದ ಮಗುವನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿ ಪರಾರಿಯಾಗಲೆತ್ನಿಸಿದ ತಾಯಿ| ಕಂಪೆನಿ ಸಿಇಒ ಆಗಿದ್ದು ಹೀಗ್ಯಾಕೆ‌ ಮಾಡಿದ್ಲು ಅಂತ ತಿಳಿದ್ರೆ ಬೆಚ್ಚಿ ಬೀಳ್ತೀರಾ!! Read More »

ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ತಾಯಿ…

ಸಮಗ್ರ ನ್ಯೂಸ್: ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಆಗಿರುವ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗುವನ್ನೇ ಕೊಲೆ ಮಾಡಿದ್ದ ಪ್ರಕರಣ ನಡೆದಿದೆ. ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಸುಚನಾ ಅವರು ಗೋವಾದ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಇನ್ನೇನು ಹೋಟೆಲ್​ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ

ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ತಾಯಿ… Read More »

ಕಡಬ: ಅಸ್ತಿ ಪಂಜರ ಪತ್ತೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಸ್ಥಳೀಯ ಮನೆಯ ಕೆಲಸದ ಆಳುಗಳು ಸೊಪ್ಪು ತರಲು ಹೋದಾಗ ಮನುಷ್ಯನ ಅಸ್ತಿ ಪಂಜರ ಕಂಡು ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಬೆಳ್ಳಾರೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಅನಾಥ ಅಸ್ತಿ ಪಂಜರ ತನಿಖೆ ನಡೆಸುತ್ತಿದ್ದಾರೆ. ಮರದಲ್ಲಿ ಕತ್ತಿ ಕಂಡುಬಂದಿದ್ದು, ಸುಮಾರು 6 ತಿಂಗಳ ಹಿಂದೆ ಮರಕೆಸು ಕೊಯ್ಯಲು ಹೋದ ವ್ಯಕ್ತಿ ಮೃತಪಟ್ಟಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಡಬ: ಅಸ್ತಿ ಪಂಜರ ಪತ್ತೆ Read More »

ನಟ ಯಶ್ ಬರ್ತ್‌ಡೇ ಬ್ಯಾನರ್ ಕಟ್ಟುತ್ತಿದ್ದ ವೇಳೆ ಅವಘಡ| ಮೂವರು ಯುವಕರು ವಿದ್ಯುತ್ ಶಾಕ್ ಗೆ ಬಲಿ

ಸಮಗ್ರ ನ್ಯೂಸ್: ನಟ ಯಶ್​ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುತ್ತಿದ್ದಾಗ ಮೂವರು ಯುವಕರಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ. ಯಶ್​ ಬರ್ತ್​ ಡೇಗಾಗಿ ಅಭಿಮಾನಿಗಳು ಗ್ರಾಮದಲ್ಲಿ ಬ್ಯಾನರ್ ಕಟ್ಟಲು ಮುಂದಾಗಿದ್ದದ್ದಾರೆ. ಬ್ಯಾನರ್ ಮೇಲೆ ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ಯುವಕರಿಗೆ ವಿದ್ಯುತ್ ಶಾಕ್ ತಗುಲಿದೆ. ಈ ವೇಳೆ ಅಲ್ಲೇ ನಿಂತುಕೊಂಡಿದ್ದ

ನಟ ಯಶ್ ಬರ್ತ್‌ಡೇ ಬ್ಯಾನರ್ ಕಟ್ಟುತ್ತಿದ್ದ ವೇಳೆ ಅವಘಡ| ಮೂವರು ಯುವಕರು ವಿದ್ಯುತ್ ಶಾಕ್ ಗೆ ಬಲಿ Read More »

ಅಂತ್ಯಕ್ರಿಯೆ ನಡೆದ ಐದೇ ದಿನದಲ್ಲಿ ಜೀವಂತವಾಗಿ ಮನೆಗೆ ಮರಳಿದ ಸತ್ತ ವ್ಯಕ್ತಿ|ಹಾಗಿದ್ರೆ, ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು…?!

ಸಮಗ್ರ ನ್ಯೂಸ್: ಮೃತಪಟ್ಟಿದ್ದಾನೆಂದು ಭಾವಿಸಿ ಕುಟುಂಬದ ಸದಸ್ಯರೆಲ್ಲರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿಯೊಬ್ಬ ನಿನ್ನೆ ಸಂಜೆ (ಜ.6) ಮರಳಿ ಮನೆಗೆ ಬಂದಿರುವ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಪ್ರಸಂಗ ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಮರಳಿ ಬಂದಿರುವ ವ್ಯಕ್ತಿಯನ್ನು ರಮಣ್​​ ಬಾಬು(70) ಎಂದು ಗುರುತಿಸಲಾಗಿದೆ. ಈ ಘಟನೆ ಕೇರಳದ ಮಂಜತೋಡು ಆದಿವಾಸಿ ಕಾಲನಿಯ ರಮಣ್​ ಕುಟುಂಬಕ್ಕೆ ಅತೀವ ಸಂತೋಷ ತಂದಿದೆ. ಆದರೆ, ಇಡೀ ಕುಟುಂಬ ಸೇರಿ ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ

ಅಂತ್ಯಕ್ರಿಯೆ ನಡೆದ ಐದೇ ದಿನದಲ್ಲಿ ಜೀವಂತವಾಗಿ ಮನೆಗೆ ಮರಳಿದ ಸತ್ತ ವ್ಯಕ್ತಿ|ಹಾಗಿದ್ರೆ, ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು…?! Read More »

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ಜ. 7ರಂದು ನಡೆದಿದೆ. ಪಡುವನ್ನೂರು ಗ್ರಾಮದ ಕನ್ನಡ ಕಜೆಮೂಲೆ ನಿವಾಸಿ ಚಂದ್ರಶೇಖರ್ ಗೌಡರ ಮಗಳು ದೀಕ್ಷಾ (16) ಇಂದು(ಜ.7) ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿದ್ದ ತಂದೆ-ತಾಯಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಳು. ಮನೆಯ ರೂಮಲ್ಲಿ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ತೂರು ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಸುಬ್ರಹ್ಮಣ್ಯ: ವಿದ್ಯುತ್ ಆಘಾತಕ್ಕೆ ಪವರ್ ಮ್ಯಾನ್ ಬಲಿ

ಸಮಗ್ರ ನ್ಯೂಸ್: ಲೈನ್ ದುರಸ್ಥಿ ಮಾಡುತ್ತಿದ್ದ ವೇಳೆ ಪವರ್ ಮ್ಯಾನ್ ಒಬ್ಬರು ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ನಡೆದಿದೆ. ಪಂಜ ಸೆಕ್ಷನ್ ನ ಹಾಸನ ಮೂಲದ ಪವರ್‌ಮ್ಯಾನ್ ಅನ್ನು ರಘು(32) ಎಂಬವರು ಮೃತಪಟ್ಟಿರುವುದಾಗಿ ಗುರುತಿಸಲಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮೃತರು ತಂದೆ, ತಾಯಿ,ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಳೆದ ಸುಮಾರು 1.5 ವರುಷಗಳಿಂದ ಪಂಜ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಸುಬ್ರಹ್ಮಣ್ಯ: ವಿದ್ಯುತ್ ಆಘಾತಕ್ಕೆ ಪವರ್ ಮ್ಯಾನ್ ಬಲಿ Read More »