ಕ್ರೈಂ

ಸಲ್ಮಾನ್‌ ಖಾನ್‌ ನಿವಾಸದೆದುರು ಗುಂಡಿನ ದಾಳಿ:ಇಬ್ಬರು ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ಸಮಗ್ರ ನ್ಯೂಸ್: ಮುಂಬೈನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದೆದುರು ಏಪ್ರಿಲ್‌ 14 ರಂದು ನಡೆದ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಈಗ ಸುಳಿವೊಂದು ಸಿಕ್ಕಿದೆ. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಇಬ್ಬರು ಶೂಟರ್‌ಗಳ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆ ಹೊತ್ತುಕೊಂಡಿದ್ದ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ […]

ಸಲ್ಮಾನ್‌ ಖಾನ್‌ ನಿವಾಸದೆದುರು ಗುಂಡಿನ ದಾಳಿ:ಇಬ್ಬರು ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು Read More »

ಕೋಲಾರ:ಅರೆಸ್ಟ್ ಮಾಡಲು ಬಂದಾಗ ಹಲ್ಲೆಗೆ ಯತ್ನ-ಇಬ್ಬರು ಆರೋಪಿಗಳಿಗೆ ಫೈರಿಂಗ್ ಮಾಡಿದ ಪೊಲೀಸರು

ಸಮಗ್ರ ನ್ಯೂಸ್‌ : ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಕ್ಕೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಮಾಲೂರು ತಾಲೂಕಿನ ಸಿಗೊಂಡಹಳ್ಳಿ ಬಳಿ ನಡೆದಿದೆ. ಆರೋಪಿಗಳಾದ ಪ್ರಮೋದ್ ಮತ್ತು ಅನಿಲ್ ಎನ್ನುವರ ಮೇಲೆ ಫೈರಿಂಗ್ ಮಾಡಲಾಗಿದೆ. ಕೊಲೆ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಇವರನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣ ರಕ್ಷಣೆಗಾಗಿ ಕೋಲಾರದ ಮಾಸ್ತಿ ಇನ್ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರು ಪ್ರಮೋದ್ ಮೇಲೆ

ಕೋಲಾರ:ಅರೆಸ್ಟ್ ಮಾಡಲು ಬಂದಾಗ ಹಲ್ಲೆಗೆ ಯತ್ನ-ಇಬ್ಬರು ಆರೋಪಿಗಳಿಗೆ ಫೈರಿಂಗ್ ಮಾಡಿದ ಪೊಲೀಸರು Read More »

ಇಬ್ಬರು ಮಕ್ಕಳನ್ನು ಸಾಯಿಸಿದ ತಾಯಿ ಜೈಲಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಬೆಂಗಳೂರಿನ ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಈಕೆ ಜೈಲಿಗೆ ಹೋದ ದಿನವೇ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಎಪ್ರಿಲ್ 9 ರಂದು ರಾತ್ರಿ ಇಬ್ಬರು ಮಕ್ಕಳನ್ನು ತಲೆದಿಂಬುವಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಳು, ಬುಧವಾರ ಬೆಳಗ್ಗೆ 112 ಗೆ ಕರೆ ಮಾಡಿ, ತಾನು ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಹೋಗಿ ಗಂಗಾದೇವಿಯನ್ನು ಪೊಲೀಸರು

ಇಬ್ಬರು ಮಕ್ಕಳನ್ನು ಸಾಯಿಸಿದ ತಾಯಿ ಜೈಲಿನಲ್ಲಿ ಆತ್ಮಹತ್ಯೆ Read More »

ನೊಯಿಡಾ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್- ಮೂವರ ಬಂಧನ

.ಸಮಗ್ರ ನ್ಯೂಸ್‌ : ರೀಲ್ಸ್ ಮಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಉತ್ತರ ಪ್ರದೇಶದ ನೊಯಿಡಾ ಪೊಲೀಸರು ಗುರುವಾರ ಬಂಧಿಸಿರುವ ಘಟನೆ ನಡೆದಿದೆ. ವಿಡಿಯೊ ಅಶ್ಲೀಲವಾಗಿವೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ ಬಳಿಕ ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ₹80,500 ದಂಡ ವಿಧಿಸಲಾಗಿದೆ. ಮೂವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ. ಜಮುನಾ ಪ್ರಸಾದ್‌ ಅಲಿಯಾಸ್‌ ಪಿಯೂಷ್‌ ಎಂಬ ವ್ಯಕ್ತಿ ಅಜಾಗರೂಕತೆಯಿಂದ ಸ್ಕೂಟರ್‌

ನೊಯಿಡಾ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್- ಮೂವರ ಬಂಧನ Read More »

ಹುಬ್ಬಳ್ಳಿ: ಗಾಂಜಾ ಘಾಟು| ಅಲರ್ಟ್ ಆದ CEN ಪೊಲೀಸರು

ಸಮಗ್ರ ನ್ಯೂಸ್‌ : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಗಾಂಜಾ ಮಾರಾಟ, ಸಾಗಾಟ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಗಾಂಜಾ ಪ್ರಕರಣಗಳು ಏರುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ. ಅದರಂತೆ ಇಂದು CEN ಪೊಲೀಸರು ಹುಬ್ಬಳ್ಳಿಯ ಹೊಸ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನಜಂಗುಳಿ ಪ್ರದೇಶದಲ್ಲಿ ಇನ್ಸ್‌ಪೆಕ್ಟರ್ ಬಿ.ಕೆ ಪಾಟೀಲ್ ನೇತೃತ್ವದಲ್ಲಿ ಅನುಮಾನಾಸ್ಪದ ಜನರನ್ನು ತಡೆದು ಶ್ವಾನದಳದಿಂದ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಹಾಗೂ ಸಾಗಾಟ ಕಂಡು ಬಂದಲ್ಲಿ,

ಹುಬ್ಬಳ್ಳಿ: ಗಾಂಜಾ ಘಾಟು| ಅಲರ್ಟ್ ಆದ CEN ಪೊಲೀಸರು Read More »

ನಾಗ್ಪುರ:23 ಲಕ್ಷ ರೂ.ಕಳೆದುಕೊಂಡ ಎಂಬಿಎ ವಿದ್ಯಾರ್ಥಿ

ಸಮಗ್ರ ನ್ಯೂಸ್‌ : ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್‌ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ಎಂಬಿಎ ವಿದ್ಯಾರ್ಥಿ ಮೋಸಕ್ಕೆ ಒಳಗಾಗಿದ್ದಾನೆ. 2023ರ ನವೆಂಬರ್ 17ರಂದು ಟೆಲಿಗ್ರಾಮ್ ಮೆಸೇಜಿಂಗ್‌ ಆ್ಯಪ್‌ನಲ್ಲಿ ಹೂಡಿಕೆ ಸಲಹೆಗಾರನಂತೆ ವಂಚಕ ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯು ಆರಂಭದಲ್ಲಿ ₹1,000

ನಾಗ್ಪುರ:23 ಲಕ್ಷ ರೂ.ಕಳೆದುಕೊಂಡ ಎಂಬಿಎ ವಿದ್ಯಾರ್ಥಿ Read More »

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ

ಸಮಗ್ರ ನ್ಯೂಸ್‌ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಖ್ಯ ಶಿಕ್ಷಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೋಳ ವಂಜಾರಕಟ್ಟೆ ನಿವಾಸಿ ಬರಬೈಲು ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಂಜಾರಕಟ್ಟೆ ಇಲ್ನೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ. ಈತ ಪ್ರಾಥಮಿಕ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ದೂರಿಗಳಿದ್ದು, ಊರವರು ಕೂಡಾ ಆತನಿಗೆ ಬುದ್ದಿವಾದ ಹೇಳಿದ್ದರು. ಆದರೂ ಈ ಮುಖ್ಯ

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ Read More »

ಕೇರಳ:ವಲಸೆ ಕಾರ್ಮಿಕನ ಹತ್ಯೆ|10 ಮಂದಿ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : ವಲಸೆ ಕಾರ್ಮಿಕರೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಶಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ಮೂವಾಟ್ಟುಪುಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಅಶೋಕ್‌ ದಾಸ್‌ (24) ಉದ್ಯೋಗ ಅರಸಿ ಕೇರಳಕಕ್ಕೆ ಬಂದಿದ್ದ ಅಶೋಕ್‌, ಮೂವಾಟ್ಟುಪುಳ ಸಮೀಪದ ವಾಳಕಂ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಎಫ್‌ಐಆರ್‌ ಪ್ರಕಾರ ಗುರುವಾರ ರಾತ್ರಿ ಅಶೋಕ್‌ ಅವರು, ಅದೇ ಪ್ರದೇಶದಲ್ಲಿದ್ದ ತಮ್ಮ ಸ್ನೇಹಿತೆಯರನ್ನು ಭೇಟಿಯಾಗಲು ತೆರಳಿದ್ದರು. ಆಗ ಸ್ಥಳೀಯರ ಗುಂಪೊಂದು ಅವರನ್ನು ಕಂಬಕ್ಕೆ

ಕೇರಳ:ವಲಸೆ ಕಾರ್ಮಿಕನ ಹತ್ಯೆ|10 ಮಂದಿ ಪೊಲೀಸರ ವಶಕ್ಕೆ Read More »

ಶಿವಮೊಗ್ಗ : ಲಾಡ್ಜ್‌ ನಲ್ಲಿ ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ

ಸಮಗ್ರ ನ್ಯೂಸ್‌ : ಲಾಡ್ಜ್‌ವೊಂದರಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ನಡೆದಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಚೌಡೇಶ್ವರಿ ದೇವಸ್ಥಾನದ ಪಕ್ಕದ ಲಾಡ್ಜ್‌ನಲ್ಲಿ ನಡೆದಿದೆ. ಕಳೆದ ಸೋಮವಾರ (ಏ.1)ರಂದು ಲಾಡ್ಜ್‌ಗೆ ಬಂದಿದ್ದ ಯುವಕ-ಯುವತಿ ರೂಂ ಬಾಡಿಗೆ ಪಡೆದಿದ್ದರು. ಲಾಡ್ಜ್‌ನಲ್ಲಿ ತಂಗಿದ್ದಾಗ ಜತೆಗೆ ಇದ್ದ ಯುವಕನೇ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಓಡಿ ಹೋಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಲಾಡ್ಜ್‌ ಸಿಬ್ಬಂದಿ ರೂಮಿಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ.

ಶಿವಮೊಗ್ಗ : ಲಾಡ್ಜ್‌ ನಲ್ಲಿ ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ Read More »

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ/ ಶ್ರೀಲಂಕಾಗೆ ವಾಪಸಾದ ಅಪರಾಧಿಗಳು

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳು ಭಾರತ ತೊರೆದಿದ್ದು, ಶ್ರೀಲಂಕಾಗೆ ವಾಪಸಾಗಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ಮುರುಗನ್ ಯಾನೆ ಶ್ರೀಹರನ್, ಜಯಕುಮಾರ್ ಹಾಗೂ ರಾಬರ್ಟ್ ಪಯಸ್ ಸಹಿತ ಈ ಪ್ರಕರಣದ ಒಟ್ಟು ಏಳು ಮಂದಿಯನ್ನು ಸದ್ಯ ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ಬಳಿಕ ಅವರು ಸ್ವದೇಶಕ್ಕೆ ಮರಳಬಹುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‍ಗೆ ಈ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ/ ಶ್ರೀಲಂಕಾಗೆ ವಾಪಸಾದ ಅಪರಾಧಿಗಳು Read More »