ಬೆಳ್ತಂಗಡಿ: ಮರದಿಂದ ಬಿದ್ದು ವ್ಯಕ್ತಿ ಸಾವು
ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಅ.04 ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ನಡೆದಿದೆ. ಮೃತರನ್ನು ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್ (35) ಎಂದು ಗುರುತಿಸಲಾಗಿದೆ. ಮಿಯಾರ್ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ ಪ್ರವೀಣ್ ಇವರು ಬೆಳಗ್ಗೆ 10 ಗಂಟೆಗೆ ಮರದ ರೆಂಬೆ ತೆಗೆಯುತಿದ್ದ ವೇಳೆ ಮರದಲ್ಲೇ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತರಲಾಯಿತು, ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಮೃತರು ವಿವಾಹಿತರಾಗಿದ್ದು ಪತ್ನಿ, ಇಬ್ಬರು ಮಕ್ಕಳು
ಬೆಳ್ತಂಗಡಿ: ಮರದಿಂದ ಬಿದ್ದು ವ್ಯಕ್ತಿ ಸಾವು Read More »










