ಮೊಮ್ಮಗಳ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ?
ಚೆನ್ನೈ: ಸುಮಾರು 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ 71 ವರ್ಷದ ಅಜ್ಜನಿಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳೇ ಸಹಾಯ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೀತಾ ರಾಣಿ ಮತ್ತು ಕೋಕಿಲಾ ಎಂಬ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇತ್ತೀಚೆಗೆ, ಅತ್ಯಾಚಾರ ಮಾಡಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆಗೆ ಒಳಪಡಿಸಿದಾಗ ಮೊಮ್ಮಗಳ ಗರ್ಭಪಾತ ಮಾಡಿಸಲು ಆತ ಹಿಂಸೆ ಕೊಡುತ್ತಿದ್ದ ವಿಚಾರಣೆ ತಿಳಿದುಬಂದಿತ್ತು.
ಮೊಮ್ಮಗಳ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ? Read More »










