OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ?
ಕೊಚ್ಚಿ: ಎರಡೂವರೆ ವರ್ಷದ ಹಿಂದಿನ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು ಒ ಎಲ್ ಎಕ್ಸ್ ಸಹಾಯದಿಂದ ಹಿಡಿದಿರುವ ಅಚ್ಚರಿಯ ಘಟನೆ ನಡೆದಿದೆ. ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಬಲೆ ಬೀಸಿದ್ದರೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರಿಗೆ ಸಹಾಯ ಮಾಡಿದ್ದು ಒ ಎಲ್ ಎಕ್ಸ್ ಜಾಲತಾಣ. 30ರ ಹರೆಯದ ಆರೋಪಿ ಪ್ರವೀಣ್ ದಕ್ಷಿಣ ಕನ್ನಡದ ಪುತ್ತೂರಿನ ನಿವಾಸಿ. 2019ರಲ್ಲಿ ಆತ […]








