ಕ್ರೈಂ

ಸುಳ್ಯ: ಪಾಣತ್ತೂರಿನಲ್ಲಿ ಟಿಂಬರ್ ಲಾರಿ ಪಲ್ಟಿ, 4 ಮಂದಿ ದುರ್ಮರಣ

ಸುಳ್ಯ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಪರಿಯಾರಂ ಎಂಬಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮರಗಳನ್ನು ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಟ್ಲಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ದುರ್ಘಟನೆಯಲ್ಲಿ ಲಾರಿಯಲ್ಲಿದ್ದ 4 ಮಂದಿ ಮೃತಪಟ್ಟಿದ್ದು ಮೃತಪಟ್ಟವರನ್ನು ಪಾಣತ್ತೂರು ಸಮೀಪದ ಕುಂಡುಪಳ್ಳಿಯವರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದವರ ಪೈಕಿ 5 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ತುಂಬಿದ ಲಾರಿ ಕಲ್ಲಪಳ್ಳಿಯಿಂದ ಪಾಣತ್ತೂರು ಕಡೆಗೆ ತೆರಳುತ್ತಿತ್ತು. […]

ಸುಳ್ಯ: ಪಾಣತ್ತೂರಿನಲ್ಲಿ ಟಿಂಬರ್ ಲಾರಿ ಪಲ್ಟಿ, 4 ಮಂದಿ ದುರ್ಮರಣ Read More »

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು

ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಉದ್ಯಮಿ ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯಾಗಿದ್ದ ರಾಜೇಶ್ವರಿ ಶೆಟ್ಟಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ʼನಲ್ಲಿ ಮೂವರು ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ ಹಾಗೂ ಅರ್ಚಕ ನಿರಂಜನ್ ಭಟ್ʼಗೆ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು ಆದರೆ, ಅವರು ಜಾಮೀನು ಕೋರಿ

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು Read More »

ಮಂಗಳೂರು: ಮೊಬೈಲ್ ಕದ್ದ ನೆಪದಲ್ಲಿ ಮೀನುಗಾರನಿಗೆ ಚಿತ್ರಹಿಂಸೆ| 6 ಮಂದಿಯನ್ನು ಬಂಧಿಸಿದ ‌ಪೊಲೀಸರು|

ಮಂಗಳೂರು: ನಗರದ ಬಂದರ್ ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ನಲ್ಲಿ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಗುರುವಾರ ತಿಳಿಸಿದ್ದಾರೆ. ಬಂಧಿತ ಆರೋಪಿಗಳು, ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವುಟುಕೋರಿ ಜಾಲಯ್ಯ (30), ಕರ್ಪಿಂಗಾರಿ ರವಿ (27) ಮತ್ತು ಪ್ರಳಯ ಕಾವೇರಿ ಗೋವಿಂದಯ್ಯ (47) ಎನ್ನುವವರಾಗಿದ್ದು, ಎಲ್ಲರೂ ಆಂಧ್ರಪ್ರದೇಶ ಮೂಲದ ಮೀನುಗಾರರಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ಮೀನುಗಾರ

ಮಂಗಳೂರು: ಮೊಬೈಲ್ ಕದ್ದ ನೆಪದಲ್ಲಿ ಮೀನುಗಾರನಿಗೆ ಚಿತ್ರಹಿಂಸೆ| 6 ಮಂದಿಯನ್ನು ಬಂಧಿಸಿದ ‌ಪೊಲೀಸರು| Read More »

ಮಂಗಳೂರು: ಮೀನುಗಾರನನ್ನು ಉಲ್ಟಾ ನೇತು ಹಾಕಿ ಹಲ್ಲೆ

ಮಂಗಳೂರು: ಮಂಗಳೂರಿನಲ್ಲಿ ಮೀನುಗಾರನೋರ್ವನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ ಮಂಗಳೂರಿನ ಧಕ್ಕೆಯಲ್ಲಿ ಈ ಘಟನೆ ನಡೆದಿದ್ದು ಮೊಬೈಲ್ ಕದ್ದಿದ್ದಾನೆ ಎಂಬ ಆರೋಪ ಮಾಡಿ ಆಂದ್ರಪ್ರದೇಶದ ಮೂಲದ ವೈಲ ಶೀನು (34) ಎಂಬಾತನಿಗೆ ಹಲ್ಲೆ ಮಾಡಲಾಗಿದೆ. ವೈಲ ಶೀನು ಎಂಬಾತನ ಕಾಲಿಗೆ ಹಗ್ಗದಿಂದ ಕಟ್ಟಿ ಆತನನ್ನು ತಲೆಕೆಳಗು ಮಾಡಿ ನೇತು ಹಾಕಿ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದ್ದು ಇವರೆಲ್ಲರೂ ಆಂಧ್ರಪ್ರದೇಶದ ಮೀನುಗಾರರು ಎಂದು ತಿಳಿದುಬಂದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ

ಮಂಗಳೂರು: ಮೀನುಗಾರನನ್ನು ಉಲ್ಟಾ ನೇತು ಹಾಕಿ ಹಲ್ಲೆ Read More »

1.5 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ| ಆರು ಮಂದಿ ಬಂಧನ

ಹೊಸಪೇಟೆ: ವಿಜಯನಗರ ಜಿಲ್ಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ) ವಶಕ್ಕೆ ಪಡೆಯಲಾಗಿದೆ. ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರು ಜನರನ್ನು ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳದ ವೆಂಕಟೇಶ್, ಅಬ್ದುಲ್ ವಹಾಬ್, ಮಹೇಶ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ವಿಜಯಪುರದ ಶ್ರೀಧರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದೂವರೆ ಕೆಜಿಯಷ್ಟು ತಿಮಿಂಗಿಲದ ವಾಂತಿ ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1.5 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ| ಆರು ಮಂದಿ ಬಂಧನ Read More »

ಖಾಸಗಿ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತನನ್ನು ಕೊಲೆಗೈದ ಬಾಲಕಿಯರು| ಆರೋಪಿತರು ಅಂದರ್

ಚೆನ್ನೈ: ಬಾಲಕಿಯರ ಖಾಸಗಿ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ.ಸದ್ಯ ಬಂಧಿತರಾಗಿರುವ ಇಬ್ಬರು ಬಾಲಕಿಯರೊಂದಿಗೆ ಸತ್ತ ವ್ಯಕ್ತಿ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರ ಖಾಸಗಿ ಫೋಟೋಗಳನ್ನು ತೆಗೆದು, ಮೊಬೈಲ್ ನಲ್ಲಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ. ಅಲ್ಲದೇ, ಇಬ್ಬರಿಗೂ 50 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದಾನೆ. ಹಣ ಕೊಡಲು ವಿಫಲವಾದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡುವುದಾಗಿ

ಖಾಸಗಿ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತನನ್ನು ಕೊಲೆಗೈದ ಬಾಲಕಿಯರು| ಆರೋಪಿತರು ಅಂದರ್ Read More »

ಬೆಳಗಾವಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಅರೆಸ್ಟ್

ಬೆಳಗಾವಿ: ತಾಲೂಕಿನ ಹಲಸಿ ಗ್ರಾಮದಲ್ಲಿ ಸೋಮವಾರ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಜು ಗುರವ, ಸಚಿನ್ ಗುರವ ಹಾಗೂ ಗಣೇಶ ಪೆಡ್ನೇಕರ ಬಂಧಿತ ಆರೋಪಿಗಳು. ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸೋಮವಾರ ಕಿಡಿಗೇಡಿಗಳು ಕನ್ನಡ ಬಾವುಟ ಸುಟ್ಟಿದ್ದರಲ್ಲದೆ, ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸೆಗಣಿ ಎರಚಿದ್ದರು.

ಬೆಳಗಾವಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಅರೆಸ್ಟ್ Read More »

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ವಾಮೀಜಿ!.| ಸಾವಿನ ಸುತ್ತ ಅನುಮಾನದ ಹುತ್ತ|

ರಾಮನಗರ: ಜಿಲ್ಲೆಯ ಸೋಲೂರು ಮಠದ ಸ್ವಾಮೀಜಿ ಬಸವಲಿಂಗ ಶ್ರೀಗಳು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಚಿಲುಮೆ ಮಠದ ಬಸವಲಿಂಗ ಶ್ರೀಗಳು, ಮಠದ ಆವರಣದಲ್ಲಿರುವಂತ ಮರ ಒಂದರಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀ ಸೇರಿದಂತೆ ವಿವಿಧ ಮಠದ ಶ್ರೀಗಳು ಆಗಮಿಸುತ್ತಿದ್ದಾರೆ. ಸೋಲು ಮಠದ ಬಸವಲಿಂಗ ಶ್ರೀಗಳ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಈ

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ವಾಮೀಜಿ!.| ಸಾವಿನ ಸುತ್ತ ಅನುಮಾನದ ಹುತ್ತ| Read More »

ಚಿತ್ರದುರ್ಗ: ಅರೆಬೆತ್ತಲೆಯಲ್ಲೇ ಆರೋಪಿಯ ಎಳೆತಂದ ಪೊಲೀಸರು| ಅಷ್ಟಕ್ಕೂ ಆತ ಏನ್ ತಪ್ಪು ಮಾಡಿದ್ದ ಗೊತ್ತಾ?

ಚಿತ್ರದುರ್ಗ: ಆರೋಪಿಯೊಬ್ವನನ್ನು ಅರೆಬೆತ್ತಲೆಯಾಗಿ ಠಾಣೆಗೆ ಎಳೆತಂದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಪಕ್ಕದ ಮನೆಯವರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಅರೆಬೆತ್ತಲೆಯಾಗಿಯೇ ಎಳೆದು ತಂದಿದ್ದಾರೆ. ರೌಡಿಶೀಟರರ್ ಓರ್ವನ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು. ಈತನನ್ನು ಕರೆತರಲು ಹೆಡ್ ಕಾನ್ಸ್‌ಟೇಬಲ್ ಹೋಗಿದ್ದರು. ಪೊಲೀಸರು ಹೋದಾಗ ಈ ರೌಡಿಶೀಟರ್ ಸ್ನಾನ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಆತನನ್ನ ಅದೇ ಸ್ಥಿತಿಯಲ್ಲೇ ಎಳೆದು ತಂದಿದ್ದಾರೆ. ಈ ಘಟನೆ ಸಂಬಂಧ ಆರೋಪಿ ಆಕ್ರೋಶ ಹೊರ ಹಾಕಿದ್ದಾನೆ. ಪೊಲೀಸರು ಬಂದಾಗ

ಚಿತ್ರದುರ್ಗ: ಅರೆಬೆತ್ತಲೆಯಲ್ಲೇ ಆರೋಪಿಯ ಎಳೆತಂದ ಪೊಲೀಸರು| ಅಷ್ಟಕ್ಕೂ ಆತ ಏನ್ ತಪ್ಪು ಮಾಡಿದ್ದ ಗೊತ್ತಾ? Read More »

ಗಣಿತ ಶಿಕ್ಷಕನಿಂದ ”ಸೆಕ್ಸ್” ಕಾಗುಣಿತ| ವಾಟ್ಸಪ್ ಗ್ರೂಪ್ ನಲ್ಲಿ ಬಂದ ಸಂದೇಶದಿಂದ ವಿದ್ಯಾರ್ಥಿಗಳು ಕಂಗಾಲು|

ಚೆನ್ನೈ: ಕುಡಿದ ಮತ್ತಿನಲ್ಲಿ ಗಣಿತ ಶಿಕ್ಷಕನೊಬ್ಬ ರಾತ್ರಿ ವೇಳೆ ಪೋರ್ನ್‌ ವಿಡಿಯೋ ಒಂದನ್ನು ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಕಳುಹಿಸಿದ್ದು, ಈ ವಿಡಿಯೋ ಆನ್‌ಲೈನ್‌ ಕ್ಲಾಸ್‌ಗಾಗಿ ವಿದ್ಯಾರ್ಥಿಗಳು ಇರುವ ಗ್ರೂಪ್‌ಗಳಿಗೂ ಹೋಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ದಂಗಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಅಂಬತ್ತೂರಿನ ಮತ್ತಿವನನ್ ಎಂಬಾತ ಅಶ್ಲೀಲ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಗ್ರೂಪ್‌ನಲ್ಲಿ ಕೆಲವು ಇವರ ಕ್ಲಾಸ್‌ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಬೆಳಗ್ಗೆ ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ನೋಡಿದಾಗ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದಾರೆ. ಕೂಡಲೇ ಅವರು ಕಾಲೇಜಿನ

ಗಣಿತ ಶಿಕ್ಷಕನಿಂದ ”ಸೆಕ್ಸ್” ಕಾಗುಣಿತ| ವಾಟ್ಸಪ್ ಗ್ರೂಪ್ ನಲ್ಲಿ ಬಂದ ಸಂದೇಶದಿಂದ ವಿದ್ಯಾರ್ಥಿಗಳು ಕಂಗಾಲು| Read More »