ಕ್ರೈಂ

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದವ ಸಾವು

ಸಮಗ್ರ ನ್ಯೂಸ್: ಮನುಷ್ಯನ ಹೃದಯದ ಜಾಗಕ್ಕೆ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಮೇರಿಲ್ಯಾಂಡ್‌ನ‌ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜ.7ರಂದು ಆಪರೇಷನ್‌ ಮಾಡಿಸಿಕೊಂಡಿದ್ದ 57 ವರ್ಷದ ಡೇವಿಡ್‌ ಬೆನಟ್‌ 2 ತಿಂಗಳ ಕಾಲ ಹಂದಿಯ ಹೃದಯದ ಸಹಾಯದಿಂದಲೇ ಉಸಿರಾಟ ನಡೆಸಿದ್ದಾರೆ. ಆಪರೇಷನ್‌ ಮಾಡಿರುವ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರವು ಡೇವಿಡ್‌ ಅವರ ಸಾವಿಗೆ ನಿಖರ ಕಾರಣವನ್ನು ಕೊಟ್ಟಿಲ್ಲ. ಹಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಿದೆ. ಮನುಷ್ಯನ ಹೊರೆತು ಬೇರೆ ಪ್ರಾಣಿಯ ಹೃದಯದ ಸಹಾಯದಿಂದ ಹೆಚ್ಚು ದಿನಗಳ ಕಾಲ […]

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದವ ಸಾವು Read More »

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು

ಸಮಗ್ರ ನ್ಯೂಸ್: 1991ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ಸುಮಾರು 32 ವರ್ಷಗಳಿಂದ ಪೆರಾರಿವಾಲನ್ ಜೈಲಿನಲ್ಲಿರುವುದನ್ನು ಗಮನಿಸಿ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಬಿಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ ಅವರಿಗೆ ಜಾಮೀನು ನೀಡಿದೆ. ಅರ್ಜಿದಾರರು 30 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು, ಕೇಂದ್ರದ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು Read More »

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ

ಸಮಗ್ರ ನ್ಯೂಸ್; ಕರ್ತವ್ಯಕ್ಕೆ ಹೊರಟು ನಿಂತ ಪೋಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಾರ್ಚ್ 9 ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಗಣೇಶ್ ಹೃದಯಾಘಾತದಿಂದ ಸಾವಿಗೀಡಾದ ಪೇದೆಯಾಗಿದ್ದು, ಕೇರಳ-ಕರ್ನಾಟಕ‌ ಗಡಿಯ ಸ್ವರ್ಗ‌ ಎಂಬಲ್ಲಿ ಗಣೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಕೂಡಾ ಎಂದಿನಂತೆ ಕರ್ತವ್ಯಕ್ಕೆ ಹೊರಟು ನಿಂತಿದ್ದ ಸಂದರ್ಭ‌ ಈ ಘಟನೆ ನಡೆದಿದ್ದು, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೋಲೀಸ್‌ ಅಧಿಕಾರಿಗಳು ಗಣೇಶ್ ಸಾವಿಗೆ

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ Read More »

ಒಂದೇ ಮರದಲ್ಲಿ ನೇಣು ಬಿಗಿದು ಅಪ್ರಾಪ್ತೆಯ ಜೊತೆ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ತನ್ನ ಅಪ್ರಾಪ್ತ ಪ್ರೇಯಸಿ ಜೊತೆಗೆ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಗಂಗಾಧರ್ ಹಾಗೂ ನಿಕಿತಾ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಇವರಿಬ್ಬರು ಶ್ರೀನಿವಾಸಪುರ ಪಟ್ಟಣದ ಜಗಜೀವನ ಪಾಳ್ಯದವರೆಂದು ತಿಳಿದುಬಂದಿದೆ. ನಿಕಿತಾ 10ನೇ ತರಗತಿ ವಿದ್ಯಾರ್ಥಿ ಶಾಲಾ ಸಮವಸ್ತ್ರದಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಂದೇ ಮರದಲ್ಲಿ ನೇಣು ಬಿಗಿದು ಅಪ್ರಾಪ್ತೆಯ ಜೊತೆ ಯುವಕ ಆತ್ಮಹತ್ಯೆ Read More »

ಮಾಣಿ: ದ್ವಿಚಕ್ರ ವಾಹನಕ್ಕೆ‌ ಢಿಕ್ಕಿ‌ ಹೊಡೆದ ಲಾರಿ| ತಂದೆ ಗಂಭೀರ, ಬಾಲಕ ಸಾವು|

ಸಮಗ್ರ ನ್ಯೂಸ್: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಇಂದು ಸಂಜೆ ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಗಡಿಯಾರ ನಿವಾಸಿ ದಿನೇಶ್‌ ಶೆಟ್ಟಿ ಅವರ ಪುತ್ರ ಅದ್ವೀತ್ (12) ಮೃತಪಟ್ಟ ಬಾಲಕ . ಈತನ ತಂದೆ ದಿನೇಶ್‌ ಶೆಟ್ಟಿಯವರು ಕೂಡ ಗಾಯಗೊಂಡಿದ್ದು ,ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತ ಬಾಲಕ ಅದ್ವೀತ್ ಬುಡೋಳಿ ಖಾಸಗೀ ಶಾಲೆಯಲ್ಲಿ

ಮಾಣಿ: ದ್ವಿಚಕ್ರ ವಾಹನಕ್ಕೆ‌ ಢಿಕ್ಕಿ‌ ಹೊಡೆದ ಲಾರಿ| ತಂದೆ ಗಂಭೀರ, ಬಾಲಕ ಸಾವು| Read More »

ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ

ಸಮಗ್ರ ನ್ಯೂಸ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳದಲ್ಲಿ ಸಂಭವಿಸಿದೆ. ಬಜಕಳದ ಶೇಖರ್ (50) ಕೊಲೆಯಾದವರು. ಆತನ ಕಿರಿಯ ಸಹೋದರ ರಾಜು (35) ಕೊಲೆ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಕೊಲೆ ನಡೆದಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದರು. ಶೇಖರ್ ತನ್ನ ತಾಯಿಗೆ ಮಂಜೂರಾದ ಜಮೀನಿನಲ್ಲಿ ವಾಸವಾಗಿದ್ದರು. ಈ ಹಿಂದೆ ಶೇಖರ್ ಜತೆ ವಾಸವಾಗಿದ್ದ ರಾಜು ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ

ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ Read More »

ಶಿಕ್ಷಕರು ಹೊಡೆಯುತ್ತಾರೆಂದು ಪೊಲೀಸ್ ಗೆ ದೂರು ಕೊಟ್ಟ ಎರಡನೇ ಕ್ಲಾಸ್ ವಿದ್ಯಾರ್ಥಿ

ಸಮಗ್ರ ನ್ಯೂಸ್: ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆ ಎಂದು ಎರಡನೇ ಕ್ಲಾಸ್ ಬಾಲಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್, ಮೆಹಬೂಬ್ ನಗರದ ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ದೂರು ನೀಡಿದ್ದು, ಈ ವೇಳೆ ಮಹಿಳಾ ಇನ್ಸ್ ಪೆಕ್ಟರ್ ರಮಾದೇವಿ ವಿದ್ಯಾರ್ಥಿಯನ್ನು ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನನಗೆ ಶಿಕ್ಷಕರು ಶಾಲೆಯಲ್ಲಿ ಹೊಡೆಯುತ್ತಿದ್ದಾರೆ. ಅವರನ್ನು ಬಂಧಿಸುವಂತೆ ಹೇಳಿದ್ದಾನೆ. ಬಳಿಕ ಇನ್ಸ್ ಪೆಕ್ಟರ್ ರಮಾದೇವಿ, ವಿದ್ಯಾರ್ಥಿಯ ಜತೆ ಶಾಲೆಗೆ

ಶಿಕ್ಷಕರು ಹೊಡೆಯುತ್ತಾರೆಂದು ಪೊಲೀಸ್ ಗೆ ದೂರು ಕೊಟ್ಟ ಎರಡನೇ ಕ್ಲಾಸ್ ವಿದ್ಯಾರ್ಥಿ Read More »

ಪ್ಯಾಲೇಸ್ತೀನ್ ನ ಭಾರತೀಯ ಪ್ರತಿನಿಧಿ ಮುಕುಲ್ ರಾಯ್ ಕಚೇರಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ರಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರು ಪ್ಯಾಲೆಸ್ತೀನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮುಕುಲ್ ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಶ್ರೀ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರು ಪ್ರತಿಭಾವಂತ ಅಧಿಕಾರಿಯಾಗಿದ್ದರು. ಓಂ ಶಾಂತಿ’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತೀಯ ರಾಯಭಾರಿಯು ರಮಲ್ಲಾದಲ್ಲಿನ ಅವರ

ಪ್ಯಾಲೇಸ್ತೀನ್ ನ ಭಾರತೀಯ ಪ್ರತಿನಿಧಿ ಮುಕುಲ್ ರಾಯ್ ಕಚೇರಿಯಲ್ಲಿ ಶವವಾಗಿ ಪತ್ತೆ Read More »

ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲೇ ಶವ ಸುಟ್ಟ ಅಕೌಂಟೆಂಟ್

ಸಮಗ್ರ ನ್ಯೂಸ್: ನರ್ಸಿಂಗ್ ಕಾಲೇಜೊಂದರ ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲಿ ಆಕೆಯ ಶವವನ್ನು ಸುಟ್ಟುಹಾಕಿದ ಆರೋಪದ ಮೇಲೆ ನೌಕರನನ್ನು ಬಂಧಿಸಲಾಗಿರುವ ಘಟನೆ ದಮನ್ ನ ದಾದ್ರಾ ನಗರದಲ್ಲಿ ನಡೆದಿದೆ 45ರ ಹರೆಯದ ಕನಿಮೊಳಿ ಆರ್ಮುಗಂ ಎಂಬಾಕೆ ನಾಪತ್ತೆಯಾಗಿರುವ ಕುರಿತು ಮಾರ್ಚ್ 1ರಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ದಮನ್‌ನ ಕಾಲೇಜಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸವನ್ ಪಟೇಲ್‌ನ ಮೇಲೆ ತಾಂತ್ರಿಕ ಕಣ್ಗಾವಲು ಮತ್ತು ಇತರ ರೀತಿಯ ಇನ್‌ಪುಟ್‌ಗಳನ್ನು ಬಳಸುವ ತಂಡಗಳು ಆರೋಪಿ ಎಂದು ಖಚಿತಪಡಿಸಿಕೊಂಡು ಬಂಧಿಸಿದ್ದಾರೆ.

ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರಿನಲ್ಲೇ ಶವ ಸುಟ್ಟ ಅಕೌಂಟೆಂಟ್ Read More »

“ಮಂಗಳೂರಿನಲ್ಲಿ ಬೀಳಲಿದೆಯಂತೆ‌ ಮತ್ತೊಂದು ಹೆಣ”| ಹಿಜಾಬ್ ಗಲಾಟೆ ಬೆನ್ನಲ್ಲೇ ವಿರೋಧಿಸಿದ ವಿದ್ಯಾರ್ಥಿಗೆ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ, ದಯಾನಂದ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ, ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಪ್ರಶ್ನಿಸಿ ಗೊಂದಲಗೊಂಡ ಬೆನ್ನಲ್ಲೇ ವಿರೋದಿಸಿದ ವಿದ್ಯಾರ್ಥಿ ಹೆಸರಲ್ಲಿ ಕಿಡಿಗೇಡಿಗಳು ಶ್ರಧ್ದಾಂಜಲಿ ಪೋಸ್ಟ್ ಮಾಡಿದ್ದಾರೆ. ವಿದ್ಯಾರ್ಥಿ ಸಾಯಿ ಸಂದೇಶ ಎಂಬಾತ ಹಿಜಾಬ್ ಧಾರಣೆ ಪ್ರಶ್ನಿಸಿ ವಿರೋಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ವಿರುದ್ಧ ಇನ್ಸ್ಟಾಗ್ರಾಂ ನಲ್ಲಿ ಫೊಟೋ ಹಾಕಿ ಶ್ರದ್ಧಾಂಜಲಿ ಸಾಯಿ ಸಂದೇಶ

“ಮಂಗಳೂರಿನಲ್ಲಿ ಬೀಳಲಿದೆಯಂತೆ‌ ಮತ್ತೊಂದು ಹೆಣ”| ಹಿಜಾಬ್ ಗಲಾಟೆ ಬೆನ್ನಲ್ಲೇ ವಿರೋಧಿಸಿದ ವಿದ್ಯಾರ್ಥಿಗೆ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿಗಳು Read More »