ಕ್ರೈಂ

ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್| ಯುವತಿಯ ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ. ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಮಂಡ್ಯ ಮೂಲದ ಯುವತಿಯನ್ನು ಪ್ರಿಯಕರನೇ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ಜಾಲಕ್ಕೆ ನೂಕಿದ್ದಾನೆ. ಕೆಲಸ ಕೊಡಿಸುವುದಾಗಿ ನಂಬಿಸಿ, ಮಂಜುಳಾ ಎಂಬ ಮಹಿಳೆಯ ಸಂಪರ್ಕಕ್ಕೆ ಪ್ರಿಯಕರ ಬಿಟ್ಟಿದ್ದ. ಈ ವೇಳೆ ಮಂಜುಳಾ, ಯುವತಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದಾಳೆ. ಮಾತ್ರವಲ್ಲದೇ ಆಕೆಯ ಮೇಲೆ ಹಲವರು ಏಕಕಾಲಕ್ಕೆ […]

ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್| ಯುವತಿಯ ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ Read More »

ಬಾಡಿಗೆದಾರ ಮಾಲಿಕನನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವದ ಜೊತೆ ಸೆಲ್ಫಿ

ದಿಲ್ಲಿ; ಬಾಡಿಗೆದಾರನೊಬ್ಬ ತನ್ನ ಮಾಲೀಕನನ್ನು ಸುತ್ತಿಗೆಯಿಂದ ಹೊಡೆದು, ಶವದ ಜೊತೆ ಸೆಲ್ಫಿ ತೆಗೆದುಕೊಂಡ ಘಟನೆಯೊಂದು ದಿಲ್ಲಿಯಲ್ಲಿ ನಡೆದಿದೆ. ಪಂಕಜ್‌ ಕುಮಾರ್‌ ಎನ್ನುವ ಆರೋಪಿ ಸುರೇಶ್‌ ಎಂಬವರ ವ್ಯಕ್ತಿ ಮನೆಗೆ ಬಾಡಿಗೆಗೆ ಬಂದಿದ್ದ. ಆತನಿಗೆ ಮನೆಯಲ್ಲಿ ಮದ್ಯ ಸೇವನೆ ಮಾಡುವ ಹಾಗಿಲ್ಲ ಅಂತ ಹೇಳಲಾಗಿತ್ತು. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿ, ಪಂಕಜ್‌ ಮಾಲೀಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಒಂದು ದಿನದ ಬಳಿಕ ಮಾಲೀಕನ ಮನೆಗೆ ಕಾಲ್‌ ಮಾಡಿ ತಾನು ಮನೆ ಖಾಲಿ ಮಾಡಿದ್ದಾಗಿ ಹೇಳಿದ್ದಾನೆ. ನಂತರ ಮೃತ

ಬಾಡಿಗೆದಾರ ಮಾಲಿಕನನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವದ ಜೊತೆ ಸೆಲ್ಫಿ Read More »

ಮಂಗಳೂರು: ಗಾಂಜಾ ಗ್ಯಾಂಗ್ ನಿಂದ ಯುವಕನ ಮೇಲೆ ಮಾರಕ ದಾಳಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ನಲ್ಲಿ ಗಾಂಜಾ ಗ್ಯಾಂಗೊಂದು ಯುವಕನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿವರ:ನಿನ್ನೆ(ಆ.19) ರಾತ್ರಿ ಮನೆಗೆ ಸಾಮಾನು ತರಲು ಅಂಗಡಿಗೆ ತೆರಳಿದ್ದ ಮಿಫ್ತಾಹ್(16) ಎಂಬ ಬಾಲಕನನ್ನು ತಡೆದಿದ್ದ ಗಾಂಜಾ ಗ್ಯಾಂಗ್ ಮಾರಕಾಸ್ರ್ತಗಳಿಂದ ಹಲ್ಲೆನಡೆಸಲು ಯತ್ನಿಸುತ್ತಿದ್ದ ಸಂದರ್ಭ ತಡೆಯಲು ಬಂದ ಯುವಕನ ಮಾವ ಆಸೀಫ್(30) ಎಂಬವರ ಮೇಲೆ ತಂಡ ಏಕಾಏಕಿ ತಲವಾರು ಹಾಗೂ ಇನ್ನಿತರ ಮಾರಕಾಸ್ರ್ತಗಳಿಂದ ದಾಳಿ

ಮಂಗಳೂರು: ಗಾಂಜಾ ಗ್ಯಾಂಗ್ ನಿಂದ ಯುವಕನ ಮೇಲೆ ಮಾರಕ ದಾಳಿ Read More »

ಪುತ್ತೂರು: ಪತಿಯ ಸಾವಿನ ಉತ್ತರಕ್ರೀಯಾ ದಿನದಂದೇ ಆತ್ಮಹತ್ಯೆ ‌ಮಾಡಿಕೊಂಡ ಪತ್ನಿ

ಸಮಗ್ರ ನ್ಯೂಸ್: ಪತಿಯ ಉತ್ತರಕ್ರಿಯಾ ದಿನದಂದೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕೊಂದಲಕಾಣದಲ್ಲಿ ಆ.20 ರಂದು ನಡೆದಿದೆ. ಇತ್ತೀಚೆಗೆ ನಿಧನರಾದ ಕೊಂದಲಕಾಣ ನಿವಾಸಿ ಕೃಷ್ಣ ನಾಯ್ಕ ಅವರ ಉತ್ತರಕ್ರಿಯಾದಿ ಕಾರ್ಯದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಪಿಂಡ ಬಿಡುವ ಸಂದರ್ಭ ಮನೆಯಲ್ಲಿದ್ದ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ (42ವ) ರವರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ಪುತ್ತೂರು: ಪತಿಯ ಸಾವಿನ ಉತ್ತರಕ್ರೀಯಾ ದಿನದಂದೇ ಆತ್ಮಹತ್ಯೆ ‌ಮಾಡಿಕೊಂಡ ಪತ್ನಿ Read More »

ರಾಜಾಸ್ಥಾನದಲ್ಲಿ ಭೀಕರ ಅಪಘಾತ| 7 ಮಂದಿ‌ ಸಾವು; 25ಕ್ಕೂ ಹೆಚ್ಚು ಮಂದಿ ಗಂಭೀರ

ಸಮಗ್ರ ನ್ಯೂಸ್: ರಾಜಸ್ಥಾನದ ಪಾಲಿ ಜಿಲ್ಲೆಯ ಸುಮೇರ್‌ಪುರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ಎರಡು ಭಾರೀ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, ಎರಡು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಪುರ ಮತ್ತು ಸುಮೇರ್‌ಪುರದ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಗೊಂಡವರು ಪಶ್ಚಿಮ ರಾಜಸ್ಥಾನದ ಸ್ಥಳೀಯ ರಾಮದೇವರ ದೇವಸ್ಥಾನಕ್ಕೆಂದು ಪ್ರಯಾಣಿಸುತ್ತಿದ್ದರು. ಗಾಯಗೊಂಡಿರುವವರ ಚೇತರಿಕೆಗಾಗಿ ಪ್ರಧಾನಿ ಕಾರ್ಯಾಲಯ ಟ್ವೀಟ್ ನಲ್ಲಿ ಪ್ರಾರ್ಥಿಸಿ ಮತ್ತು ಮೃತರ ಕುಟುಂಬಗಳಿಗೆ ಸಂತಾಪ

ರಾಜಾಸ್ಥಾನದಲ್ಲಿ ಭೀಕರ ಅಪಘಾತ| 7 ಮಂದಿ‌ ಸಾವು; 25ಕ್ಕೂ ಹೆಚ್ಚು ಮಂದಿ ಗಂಭೀರ Read More »

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ (64) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಧರ್ಮಸ್ಥಳದವರಾದ ಅವರು ಬೆಂಗಳೂರಿನ ಮಾರತಹಳ್ಳಿಯಲ್ಲಿ ನೆಲೆಸಿದ್ದರು. ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿದ್ದ ಅವರು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ತುಳುವನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಉದಯ್ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ Read More »

ಎಂಟು ತಿಂಗಳ ಮಗುವಿನ ಶ್ವಾಸಕೋಶದಲ್ಲಿತ್ತು ತಾಯಿಯ ಕಾಲುಂಗುರ!

ಬಾರಾಮತಿ: ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿದ ಪರಿಣಾಮ ಅದು ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ. ಸದ್ಯ ಶಸ್ತ್ರಚಿಕಿತ್ಸೆ ಮೂಲಕ ಕಾಲುಂಗುರವನ್ನು ಹೊರ ತೆಗೆಯಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕಾರ್ತಿಂಗ್ ಸಿಂಗ್ ಎಂಬ ಎಂಟು ತಿಂಗಳ ಬಾಲಕ. ಇದ್ದಕ್ಕಿದ್ದಂತೆ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದ, ಅಲ್ಲದೆ ಇತರ ಆಹಾರ ಸೇವನೆಯನ್ನೂ ಮಾಡದೆ ಹಸಿವಿನಿಂದ ಒಂದೇ ಸಮನೆ ಅಳುತ್ತಿದ್ದ. ಜೊತೆಗೆ ನೋವಿನಿಂದ ಬಳಲುತ್ತಿದ್ದ. ಮಗುವಿಗೆ ಏನಾಯಿತೆಂಬ ಆತಂಕದಿಂದ ಪಾಲಕರು ಆಸ್ಪತ್ರೆಗೆ ಕರೆದೊಯ್ದರೆ ವೈದ್ಯರು ಮಾತ್ರೆ ನೀಡಿದ್ದಾರೆ.

ಎಂಟು ತಿಂಗಳ ಮಗುವಿನ ಶ್ವಾಸಕೋಶದಲ್ಲಿತ್ತು ತಾಯಿಯ ಕಾಲುಂಗುರ! Read More »

ಕೆಎಂಎಫ್ ನಲ್ಲಿ ಕೆಲಸ ಕೊಡಿಸುವುದಾಗಿ 138ಕ್ಕೂ ಅಧಿಕ ಮಂದಿಗೆ ವಂಚನೆ| ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಸಮಗ್ರ ನ್ಯೂಸ್: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 138ಕ್ಕೂ ಅಧಿಕ ಮಂದಿಯನ್ನು ನಂಬಿಸಿ ಕೋಟ್ಯಾಂತರ ರೂ. ಪಂಗನಾಮ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಮ್‌ ಪ್ರಸಾದ್‌ (37) ಬಂಧಿತ ಆರೋಪಿ. ರಾಮ್‌ ಪ್ರಸಾದ್‌ ತಾನು ಕೆಎಂಎಫ್‌ ಉದ್ಯೋಗಿ ಎಂದು ತಿರುಗಾಡುತ್ತಿದ್ದ. ನಿರುದ್ಯೋಗಿಗಳಿಗೆ ಮಂಗಳೂರಿನ ಕೆಎಂಎಫ್‌ನ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಹಣ ವಸೂಲಿ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ

ಕೆಎಂಎಫ್ ನಲ್ಲಿ ಕೆಲಸ ಕೊಡಿಸುವುದಾಗಿ 138ಕ್ಕೂ ಅಧಿಕ ಮಂದಿಗೆ ವಂಚನೆ| ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು Read More »

ಗೋವಾದಿಂದ ಕಾಸರಗೋಡಿಗೆ ತೆರಳುತ್ತಿದ್ದ ವ್ಯಕ್ತಿ| ಸುರತ್ಕಲ್ ನಲ್ಲಿ ಇಳಿದು ಸಿಕ್ಕಸಿಕ್ಕವರಿಗೆ ಕತ್ತಿ ಬೀಸಿ ದಾಳಿ; ಇಬ್ಬರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ವ್ಯಕ್ತಿಯೋರ್ವ ಕತ್ತಿಯಿಂದ ಹಲ್ಲೆ ನಡೆಸಿ, ಬಸ್ಸಿಗೂ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಸುರತ್ಕಲ್ ನ ವೆಂಕಪ್ಪ ಎಂದು ತಿಳಿದು ಬಂದಿದ್ದು, ಜಾರ್ಖಂಡ್ ಮೂಲದ ಅತುಲ್ (30) ಕಲ್ಲು ಎಸೆದು ಹಲ್ಲೆ ನಡೆಸಿದಾತ ಎಂದು ತಿಳಿದು ಬಂದಿದೆ. ಕುಡುಗೋಲಿನಿಂದ ಹಲ್ಲೆಗೊಳಗಾದ ವೆಂಕಪ್ಪ ಮತ್ತು ಸಾರ್ವಜನಿಕರಿಂದ ಹಲ್ಲೆಗೊಳಗಾದ ಅತುಲ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಾದಿಂದ ಕಾಸರಗೋಡಿಗೆ ತೆರಳುತ್ತಿದ್ದ ಆರೋಪಿ

ಗೋವಾದಿಂದ ಕಾಸರಗೋಡಿಗೆ ತೆರಳುತ್ತಿದ್ದ ವ್ಯಕ್ತಿ| ಸುರತ್ಕಲ್ ನಲ್ಲಿ ಇಳಿದು ಸಿಕ್ಕಸಿಕ್ಕವರಿಗೆ ಕತ್ತಿ ಬೀಸಿ ದಾಳಿ; ಇಬ್ಬರು ಆಸ್ಪತ್ರೆಗೆ ದಾಖಲು Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಐವರು ಆರೋಪಿಗಳ ವಶಕ್ಕೆ ಪಡೆದ‌‌ ಎನ್ಐಎ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದ.ಕ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಗಾಗಿ 6 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಆರೋಪಿಗಳಾದ ನೌಫಾಲ್‌, ಝೈನುಲ್‌ ಅಬಿದ್, ಮೊಹಮ್ಮದ್‌ ಸೈಯದ್‌, ಅಬ್ದುಲ್‌ ಬಶೀರ್‌ ಮತ್ತು ರಿಯಾಜ್‌ ಅವರನ್ನು ಆಗಸ್ಟ್ 23 ರ ವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಪ್ರವೀಣ್‌ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಭೀಕರವಾಗಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಐವರು ಆರೋಪಿಗಳ ವಶಕ್ಕೆ ಪಡೆದ‌‌ ಎನ್ಐಎ Read More »