ಕ್ರೈಂ

ಕಡಬ: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಶಾಕ್; ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಮರದ ಕೊಂಬೆ ಕಡಿಯುವಾಗ ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘೋರ ಘಟನೆ ಕಡಬದಲ್ಲಿ ನಡೆದಿದೆ. ಮೃತಪಟ್ಟವನನ್ನು ಕುಂತೂರು ಕಾಲಾಯಿಲ್ ನಿವಾಸಿ ಮನೋಜ್(43) ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆಯೊಂದು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ದುರ್ಮರಣ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ.ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಡಬ: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಶಾಕ್; ವ್ಯಕ್ತಿ ಸಾವು Read More »

ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ| ರಾಜ್ಯದ 33 ಸ್ಥಳಗಳಲ್ಲಿ NIA ಶೋಧ ಕಾರ್ಯಾಚರಣೆ; ಸ್ಪೋಟಕ ಮಾಹಿತಿ ಬಯಲು

ಸಮಗ್ರ ನ್ಯೂಸ್: ಜು 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ನೇತಾರ ಪ್ರವೀಣ್‌ ನೆಟ್ಟಾರ್‌ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವು (NIA) ಚುರುಕುಗೊಳಿಸಿದೆ. ಸೆ 6 ರಂದು ರಾಜ್ಯದ ಮೂರು ಜಿಲ್ಲೆಗಳ 33 ಸ್ಥಳಗಳಲ್ಲಿ ಅದು ಶೋಧ ಕಾರ್ಯಚರಣೆ ನಡೆಸಿ ಹಲವು ಮಹತ್ವದ ದಾಖಲೆ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದೆ. ಹತ್ಯೆಯ ಕಾರಣ ಬಯಲು :ಈ ಬಗೆಗಿನ ಮಾಹಿತಿಯನ್ನು ಎನ್‌ ಐಎಯು ಸೆ 6 ರಂದು ರಾತ್ರಿ ಹಂಚಿಕೊಂಡಿದೆ. ಈ ವೇಳೆ

ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ| ರಾಜ್ಯದ 33 ಸ್ಥಳಗಳಲ್ಲಿ NIA ಶೋಧ ಕಾರ್ಯಾಚರಣೆ; ಸ್ಪೋಟಕ ಮಾಹಿತಿ ಬಯಲು Read More »

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ| ನಿವೃತ್ತ ಅಧಿಕಾರಿಗೆ ಬಿತ್ತು 1.30 ಕೋಟಿ ದಂಡ

ಸಮಗ್ರ ನ್ಯೂಸ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರಿಕೆ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ ವಿ. ಮಡ್ಡಿಕೇರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 5 ವರ್ಷಗಳ ಕಾಲ ಸಾದಾ ಸಜೆ ಮತ್ತು 1.30 ಕೋ.ರೂ.ದಂಡ ವಿಧಿಸಿ ಶಿಕ್ಷೆ ವಿಧಿಸಿದೆ. ಗಂಗಾಧರ ವಿ. ಮಡ್ಡಿಕೇರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ 2013ರ ಆ. 5ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ| ನಿವೃತ್ತ ಅಧಿಕಾರಿಗೆ ಬಿತ್ತು 1.30 ಕೋಟಿ ದಂಡ Read More »

ಮಂಗಳೂರು; ಶಾಲಾ ಬಸ್ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಕೇಸ್ ದಾಖಲು

ಮಂಗಳೂರು: 5ನೇ ತರಗತಿ ವಿದ್ಯಾರ್ಥಿನಿಗೆ , ಶಾಲಾ ಬಸ್‌ ಚಾಲಕ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ , 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಸೆರೆಮನೆ ಹಾಗೂ ಮತ್ತೊಂದು ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಮಂಗಳೂರಿನ ದ.ಕ. ಜಿಲ್ಲಾ ಫಾಸ್ಟ್‌ ಟ್ರಾಕ್‌ ನ್ಯಾಯಾಲಯ ಪ್ರಕಟಿಸಿ ಮಂಗಳವಾರ ಆದೇಶ ನೀಡಿದೆ. ಆರೋಪಿಯಾಗಿದ್ದ

ಮಂಗಳೂರು; ಶಾಲಾ ಬಸ್ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಕೇಸ್ ದಾಖಲು Read More »

ಮೂರುವರೆ ವರ್ಷದ ಮಗುವಿಗೆ ಬೆಂಕಿ ಹಚ್ಚಿ ಅಮಾನವೀಯ ಕೃತ್ಯ ಎಸಗಿದ ತಾಯಿ

ಸಮಗ್ರ ನ್ಯೂಸ್: ಮೂರೂವರೆ ವರ್ಷದ ಮಗುವಿಗೆ ಬೆಂಕಿ ಹಚ್ಚಿದ ಘಟನೆಯೊಂದು ಪಂಜಾಬ್ ನಲ್ಲಿ ನಡೆದಿದೆ. ಪತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಮಹಿಳೆ ತವರಿನಲ್ಲಿ ಕಳೆದ ಎರಡು ವರ್ಷಗಳಿಂದ ವಾಸ್ತವ್ಯವಿದ್ದಳು. ಕೌಟುಂಬಿಕ ಕಲಹದಿಂದಾಗಿ ಆಕೆ ಖಿನ್ನತೆಗೊಳಗಾಗಿದ್ದಳು. ಇದೀಗ ಮಗು ಒಂದೇ ಸಮ ಅಳುತ್ತಿದ್ದುದನ್ನು ನೋಡಿ ಹತಾಶೆಯಿಂದ ಬೆಂಕಿ ಹಚ್ಚಿದ್ದಾಳೆ. ಇದೀಗ ಮಗು ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೂರುವರೆ ವರ್ಷದ ಮಗುವಿಗೆ ಬೆಂಕಿ ಹಚ್ಚಿ ಅಮಾನವೀಯ ಕೃತ್ಯ ಎಸಗಿದ ತಾಯಿ Read More »

ಸುಳ್ಯ: ಆಕಸ್ಮಿಕ ಬೆಂಕಿ ಅವಘಡದಲ್ಲಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಸುಧಾಕರ್(45) ಎಂದು ಗುರುತಿಸಲಾಗಿದೆ. ದೇವರಿಗೆ ಹಚ್ಚಿದ್ದ ದೀಪ ಸುಧಾಕರವರು ಮಲಗಿದ್ದ ಹಾಸಿಗೆಗೆ ತಗುಲಿ ಬೆಂಕಿ ಹಚ್ಚಿ ಕೊಂಡಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದೆ ಮತ್ತು ಸುಧಾಕರವರು ಅನಾರೋಗ್ಯದಿಂದ ಕಾರಣ ಎದ್ದು ಓಡಾಡಲು ಸಾದ್ಯವಾಗದೆ ಬೆಂಕಿ ಅವರ ದೆಹಕ್ಕೂ ತಗುಲಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಆಕಸ್ಮಿಕ ಬೆಂಕಿ ಅವಘಡದಲ್ಲಿ ವ್ಯಕ್ತಿ ಸಾವು Read More »

ಶಾಲಾ‌ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ| ಪೆನ್ನು ಬಳಸಿ ಹೊಕ್ಕುಳ ಬಳ್ಳಿ ಕತ್ತರಿಸಿಕೊಂಡಳು

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶೌಚಾಲಯದ ಬಳಿ ಶಿಶುವಿನ ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ, ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. 16 ವರ್ಷದ ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಪ್ರಾಪ್ತ ಬಾಲಕಿಯನ್ನು ಗರ್ಭವತಿ ಮಾಡಿದ ವ್ಯಕ್ತಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಗ್ರಾಮಸ್ಥರಲ್ಲಿ ಆಘಾತ

ಶಾಲಾ‌ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ| ಪೆನ್ನು ಬಳಸಿ ಹೊಕ್ಕುಳ ಬಳ್ಳಿ ಕತ್ತರಿಸಿಕೊಂಡಳು Read More »

ಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವ ವೇಳೆ ವಿದ್ಯುತ್ ಶಾಕ್; ಮೂವರು ಸಾವು

ಸಮಗ್ರ ನ್ಯೂಸ್: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ಪೆಂಡಾಲ್ ಗೆ ವಿದ್ಯುತ್ ತಂತಿ ತಗುಲಿ ರಾಜು (47) ರಚನಾ (35) ಪಾರ್ವತಿ (26) ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನಿಸಲಾಗಿದೆ. ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ.ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವ ವೇಳೆ ವಿದ್ಯುತ್ ಶಾಕ್; ಮೂವರು ಸಾವು Read More »

ಮುರುಘಾ ಶರಣರ‌ ಕುರಿತ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ

ಸಮಗ್ರ ನ್ಯೂಸ್: ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಕುರಿತ ಸುದ್ದಿಗಳನ್ನು ಪ್ರಕಟಿಸದಂತೆ ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ಪಡೆದಿದ್ದಾರೆ. ಮುರುಘಾ ಶರಣರು, ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ವಿಚಾರ ಪ್ರಸಾರ, ಪ್ರಕಟ ಮಾಡದಂತೆ ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಗಳು ಸೇರಿ 48 ಸಂಸ್ಥೆಗಳ ವಿರುದ್ಧ ನ್ಯಾಯಾಲಯವು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿದೆ. ಆಡಿಯೊ ರೂಪದಲ್ಲಿ ಪ್ರಸಾರ, ಸ್ಥಳೀಯ

ಮುರುಘಾ ಶರಣರ‌ ಕುರಿತ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ Read More »

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ| ಎನ್ಐಎ ದಾಳಿಯಲ್ಲಿ ಮಹತ್ವದ ದಾಖಲೆಗಳು ವಶಕ್ಕೆ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ತಂಡವು ಮಂಗಳವಾರ(ಸೆ.6) ಬೆಳ್ಳಂಬೆಳಗ್ಗೆ ಸುಳ್ಯ ಹಾಗೂ ಪುತ್ತೂರು ತಾಲೂಕಿನ 32 ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಪ್ರವೀಣ್‌ ಹತ್ಯೆಯ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ತನಿಖಾ ದಳದ ತಂಡಕ್ಕೆ ದೊರೆತ ಸುಳಿವಿನ ಆಧಾರದಲ್ಲಿ ಹತ್ಯೆ ಪ್ರಕರಣಕ್ಕೆ ಸಹಕಾರ, ಆರೋಪಿಗಳ ರಕ್ಷಣೆ ನೆರವಾಗುತ್ತಿರುವವರ ಮಾಹಿತಿ ಕಲೆ ಹಾಕಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಪ್ರವೀಣ್‌ ಹತ್ಯೆ

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ| ಎನ್ಐಎ ದಾಳಿಯಲ್ಲಿ ಮಹತ್ವದ ದಾಖಲೆಗಳು ವಶಕ್ಕೆ Read More »