ಕ್ರೈಂ

ಮಂಗಳೂರು: ಅಸ್ತಿಪತ್ರ ಲಪಟಾಯಿಸಿ ತಮ್ಮನಿಂದ ವಂಚನೆ!| ನ್ಯಾಯಕ್ಕಾಗಿ ಸೋದರನ ಒಂಟಿ ಹೋರಾಟ

ಸಮಗ್ರ ನ್ಯೂಸ್: ವಯೋವೃದ್ಧರ ಕುಟುಂಬಕ್ಕೆ ಒಡಹುಟ್ಟಿದ ಸೋದರನೇ ವಿಲನ್ ಆಗಿದ್ದು ಆಸ್ತಿ ಕೊಳ್ಳೆ ಹೊಡೆಯೋ ಪ್ಲಾನ್ ಮಾಡ್ಕೊಂಡ ಆತ ಆಸ್ತಿಪತ್ರವನ್ನು ಲಪಟಾಯಿಸಿ ವಂಚನೆಯ ಹಾದಿ ಹಿಡಿದಿದ್ದಾನೆ. ಇದರ ವಿರುದ್ಧ ಸಿಡಿದೆದ್ದ ಸೋದರ ಒಬ್ಬಂಟಿ ಹೋರಾಟಕ್ಕೆ ಮುಂದಾಗಿದ್ದಾರೆ. ಸದ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದು ಕಾನತ್ತೂರು ಕ್ಷೇತ್ರಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಇದು ಪಚ್ಚನಾಡಿ ನಿವಾಸಿ ಚಂದ್ರಹಾಸ್ ಭಂಡಾರಿ ಎಂಬವರ ಕಥೆ ವ್ಯಥೆ. ಪ್ರಕರಣದ ಹಿನ್ನೆಲೆ:ಚಂದ್ರಹಾಸ್ ಭಂಡಾರಿಯವರಿಗೆ ಪಿತ್ರಾರ್ಜಿತವಾಗಿ ಸಿಕ್ಕ ಕೋಟ್ಯಂತರ ರೂಪಾಯಿ ಬೆಲೆಬಾಳುವ

ಮಂಗಳೂರು: ಅಸ್ತಿಪತ್ರ ಲಪಟಾಯಿಸಿ ತಮ್ಮನಿಂದ ವಂಚನೆ!| ನ್ಯಾಯಕ್ಕಾಗಿ ಸೋದರನ ಒಂಟಿ ಹೋರಾಟ Read More »

ಕಿನ್ನಿಗೋಳಿ: ತೀವ್ರ ಜ್ವರಕ್ಕೆ ಸಾವನಪ್ಪಿದ ಬಾಲಕ….!!

Samagra news: ತೀವ್ರ ಜ್ವರಕ್ಕೆ ಬಾಲಕನೋಬ್ಬ ಮೃತಪಟ್ಟಿರುವ ಘಟನೆ ಕಿನ್ನಿಗೋಳಿಯ ಪಕ್ಷಿಕೆರೆ ಎಂಬಲ್ಲಿ ಸಂಭವಿಸಿದೆ. ಪಕ್ಷಿಕೆರೆ ಜುಮಾ‌ ಮಸೀದಿ ಬಳಿಯ ನಿವಾಸಿ ಇಸ್ಮಾಯೀಲ್ ಅವರ ಪುತ್ರ 10ನೇ ತರಗತಿ ವಿದ್ಯಾರ್ಥಿ ಹಿಲಾಲ್(16 )ಮೃತ ಬಾಲಕ. ಹಿಲಾಲ್ ಗೆ ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಆತನನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು ಚಿಕಿತ್ಸೆ ಫಲಕಾರಿಯಾಗದೆ ಹಿಲಾಲ್ ಇಂದು ಮಂಗಳೂರಿನ

ಕಿನ್ನಿಗೋಳಿ: ತೀವ್ರ ಜ್ವರಕ್ಕೆ ಸಾವನಪ್ಪಿದ ಬಾಲಕ….!! Read More »

ಬೈಕ್ ಲಾರಿ ಡಿಕ್ಕಿ ಅಪಘಾತ|ಓರ್ವ ಸಾವು,ಓರ್ವ ಗಂಭೀರ

Samagra news: ಬೈಕ್ ಲಾರಿ ಡಿಕ್ಕಿ ಅಪಘಾತದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ. ಗುರುವಾಯನಕೆರೆ ನಿವಾಸಿ ಚೈನರ್ ಅಗಿರುವ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗಿವ ವೇಳೆ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ

ಬೈಕ್ ಲಾರಿ ಡಿಕ್ಕಿ ಅಪಘಾತ|ಓರ್ವ ಸಾವು,ಓರ್ವ ಗಂಭೀರ Read More »

ಜೈ ಶ್ರೀರಾಮ್ ಎನ್ನದ್ದಕ್ಕೆ ಕುರಾನ್ ಓದುತ್ತಿದ್ದ ವ್ಯಕ್ತಿಯ ಗಡ್ಡಕ್ಕೆ ಕತ್ತರಿ

Samagra News: ಜೈ ಶ್ರೀರಾಮ್ (Jai Shri Ram) ಎಂದು ಕೂಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಮಸೀದಿಯೊಂದರ ಇಮಾಮ್‌ನನ್ನು ಥಳಿಸಿ, ಅವರ ಗಡ್ಡ ಕತ್ತರಿಸಿರುವ ಅಮಾನುಷ ಕೃತ್ಯ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಅನ್ವಾ ಗ್ರಾಮದ ಮಸೀದಿಯಲ್ಲಿ ಇಮಾಮ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ 7:30ರ ವೇಳೆಗೆ ಮಸೀದಿಯೊಳಗೆ ಕುರಾನ್ ಓದುತ್ತಿದ್ದ ವೇಳೆ ಬಂದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಇಮಾಮ್ ಜಾಕಿರ್ ಸೈಯದ್ ಖಾಜಾ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು,

ಜೈ ಶ್ರೀರಾಮ್ ಎನ್ನದ್ದಕ್ಕೆ ಕುರಾನ್ ಓದುತ್ತಿದ್ದ ವ್ಯಕ್ತಿಯ ಗಡ್ಡಕ್ಕೆ ಕತ್ತರಿ Read More »

ಕ್ರಿಕೆಟಿಗ ಕೇದಾರ್ ಜಾದವ್ ತಂದೆ ನಾಪತ್ತೆ; ದೂರು ದಾಖಲು

ಸಮಗ್ರ ನ್ಯೂಸ್: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕ್ರಿಕೆಟಿಗ ಮಾರ್ಚ್ 27 ರಂದು (ಸೋಮವಾರ) ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೇದಾರ್ ಜಾಧವ್ ವರದಿ ಸಲ್ಲಿಸಿದ ನಂತರ, ಪೊಲೀಸರು ಆತನ 75 ವರ್ಷದ ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ

ಕ್ರಿಕೆಟಿಗ ಕೇದಾರ್ ಜಾದವ್ ತಂದೆ ನಾಪತ್ತೆ; ದೂರು ದಾಖಲು Read More »

ಒಳಮೀಸಲಾತಿ ವಿವಾದ| ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು‌ ತೂರಾಟ; ಹಿಂಸಾಚಾರ

ಸಮಗ್ರ ನ್ಯೂಸ್: ಒಳಮೀಸಲಾತಿ ವರದಿ ಅಂಗೀಕಾರ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ಕಲ್ಲು, ಚಪ್ಪಲಿ ತೂರಿದ್ದಾರೆ. ನಡೆಸುತ್ತಿದ್ದ ಬಂಜಾರ ಸಮುದಾಯದ ನೂರಾರು ಜನರು ಶಿಕಾರಿಪುರ ಪಟ್ಟಣದಲ್ಲಿನ ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಕೇಡ್

ಒಳಮೀಸಲಾತಿ ವಿವಾದ| ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು‌ ತೂರಾಟ; ಹಿಂಸಾಚಾರ Read More »

ಮಂಗಳೂರು: ಹೋಳಿ ಡಿಜೆ ಪಾರ್ಟಿಯಲ್ಲಿ ಮೋಜುಮಸ್ತಿ| ದಾಳಿ‌ ನಡೆಸಿದ ಭಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಮಂಗಳೂರು ನಗರದ ಮರೋಳಿ ಎಂಬಲ್ಲಿ ‘ರಂಗ್ ದೇ ಬರ್ಸಾ’ ಹೆಸರಿನಲ್ಲಿ ಆಯೋಜಿಸಲಾಗಿದ್ದ ಹೋಳಿ ಆಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಇಂದು ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದು, ಕಾರ್ಯಕರ್ತರನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಳಿ ಆಚರಣೆಯ ನಡೆಸಲಾದ ಈ ಕಾರ್ಯಕ್ರಮದ ‘ಡಿಜೆ ಪಾರ್ಟಿ’ ಜೊತೆಗೆ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಂಘ ಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸ್ಥಳದಲ್ಲಿದ್ದ ಹೋಳಿ ಸಂಭ್ರಮದ ಬ್ಯಾನರ್ ಹರಿದು

ಮಂಗಳೂರು: ಹೋಳಿ ಡಿಜೆ ಪಾರ್ಟಿಯಲ್ಲಿ ಮೋಜುಮಸ್ತಿ| ದಾಳಿ‌ ನಡೆಸಿದ ಭಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ Read More »

ಪಡುಬಿದ್ರಿ: ಬೈಕ್ ಗೆ ಟ್ಯಾಂಕರ್ ಡಿಕ್ಕಿ| ಸವಾರರಿಬ್ಬರು ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಬೈಕ್ ಗೆ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಬೈಕ್ ಗೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಾಗ ಓರ್ವ ಸವಾರನನ್ನು ಕೆಲವು ಮೀಟರ್ ದೂರದವರೆಗೆ ಎಳೆದೊಯ್ದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಿಂತಿದೆ. ಮೃತರನ್ನು ಪಲಿಮಾರು ನಿವಾಸಿಗಳಾದ ಸುಬ್ರಮಣ್ಯ ಹಾಗೂ ಗಿರೀಶ ಎಂದು ಗುರುತಿಸಲಾಗಿದೆ. ಇವರಿಬ್ಬರು ಬೈಕಿನಲ್ಲಿ ಉಡುಪಿಯಿಂದ ಪಡುಬಿದ್ರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್

ಪಡುಬಿದ್ರಿ: ಬೈಕ್ ಗೆ ಟ್ಯಾಂಕರ್ ಡಿಕ್ಕಿ| ಸವಾರರಿಬ್ಬರು ಸ್ಪಾಟ್ ಡೆತ್ Read More »

ಸುಳ್ಯ: ಹೃದಯಾಘಾತಕ್ಕೆ ಯುವಕ‌ ಬಲಿ

ಸಮಗ್ರ ನ್ಯೂಸ್: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದಿಂದ ವರದಿಯಾಗಿದೆ. ಪಂಬೆತ್ತಾಡಿ ಗ್ರಾಮದ ಎದುರುಮಜಲು ಮಹಾಲಿಂಗ ನಾಯ್ಕ ರವರ ಪುತ್ರ ಜಗದೀಶ್ (33) ಮೃತ ಪಟ್ಟ ದುರ್ದೈವಿ. ಮೂರು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾ.23ರಂದು ಕೊನೆಯುಸಿರೆಳೆದಿದ್ದಾರೆ.

ಸುಳ್ಯ: ಹೃದಯಾಘಾತಕ್ಕೆ ಯುವಕ‌ ಬಲಿ Read More »

ಬಸ್ ಮತ್ತು ಬೈಕ್ ನಡುವೆ ಅಪಘಾತ; ಸವಾರರು ದುರ್ಮರಣ

ಸಮಗ್ರ ನ್ಯೂಸ್: ಕೆಎಸ್‌ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಎಪಿಎಂಸಿ ಬಳಿ ಅಪಘಾತ ಸಂಭವಿಸಿದೆ. ಮೃತರನ್ನು ದಂಟರಮಕ್ಕಿ ನಿವಾಸಿ 28 ವರ್ಷದ ಶ್ರೀಧರ್ ಮತ್ತು ಹಿರೇಮಗಳೂರು ನಿವಾಸಿ 30 ವರ್ಷದ ದಯಾನಂದ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬಸ್ ಮತ್ತು ಬೈಕ್ ನಡುವೆ ಅಪಘಾತ; ಸವಾರರು ದುರ್ಮರಣ Read More »