ಕ್ರೈಂ

ವಿಟ್ಲ: ಅಳಕೆಮಜಲು ನಿವಾಸಿ ಧೀರಜ್ ನೇಣುಬಿಗಿದು ಆತ್ಮಹತ್ಯೆ!

ಸಮಗ್ರನ್ಯೂಸ್ : ಬಿ.ಸಿ.ರೋಡ್ ನ ಹೋಂಡಾ ಶೋ ರೂಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಧೀರಜ್ (30 ವ) ಮೇ.30ರಂದು ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಅಳಕೆಮಜಲು ಸಮೀಪ ನಡೆದಿದೆ. ಮೃತರು ಒಂದು ವರುಷದ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಿಟ್ಲ: ಅಳಕೆಮಜಲು ನಿವಾಸಿ ಧೀರಜ್ ನೇಣುಬಿಗಿದು ಆತ್ಮಹತ್ಯೆ! Read More »

ಸುಬ್ರಹ್ಮಣ್ಯ: ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ| ‘ ಸ್ಥಳದಲ್ಲಿರದ ನನ್ನ ತಂದೆ ವಿರುದ್ಧ ಷಡ್ಯಂತ್ರ ಮಾಡಲಾಗಿದೆ’| ಸುಂದರ ಗುಡ್ಡನಮನೆ ಪುತ್ರನಿಂದ ಸ್ಪಷ್ಟನೆ

ಸಮಗ್ರ ನ್ಯೂಸ್: ಮೇ.27 ರಂದು ಕೊಲ್ಲಮೊಗ್ರುವಿನ ಕಟ್ಟದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಾಗ ಸ್ಥಳದಲ್ಲಿ ನನ್ನ ತಂದೆ ಸುಂದರ ಅವರು ಸ್ಥಳದಲ್ಲಿ ಇಲ್ಲದಿದ್ದರೂ ದುರುದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸುಂದರ ಗುಡ್ಡನಮನೆ ಅವರ ಮಗ ಪವನ್ ಸ್ಪಷ್ಟನೆ ನೀಡಿದ್ದಾರೆ. ಘಟನೆ ನಡೆದ ದಿನ ನನ್ನ ತಂದೆ ಗುತ್ತಿಗಾರಿಗೆ ಪೆಟ್ರೋಲ್ ತರಲೆಂದು ಮನೆಯಿಂದ ಹೊರಟಿದ್ದು ಕಲ್ಮಕಾರಿ ಗೆ ಬಂದಾಗ ಸತೀಶ್ ಟಿ.ಎನ್ ರವರು ಸಿಕ್ಕಿದ್ದು ಇವರೊಂದಿಗೆ ತಂದೆಯವರು ಹರಿಹರ ತನಕ ಬರುತ್ತೇನೆಂದು

ಸುಬ್ರಹ್ಮಣ್ಯ: ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ| ‘ ಸ್ಥಳದಲ್ಲಿರದ ನನ್ನ ತಂದೆ ವಿರುದ್ಧ ಷಡ್ಯಂತ್ರ ಮಾಡಲಾಗಿದೆ’| ಸುಂದರ ಗುಡ್ಡನಮನೆ ಪುತ್ರನಿಂದ ಸ್ಪಷ್ಟನೆ Read More »

ಕಡಬದ ಯುವಕ ವಿದೇಶದಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32) ಎಂದು ಗುರುತಿಸಲಾಗಿದೆ. ಇವರು ಕೊಲ್ಲಿ ರಾಷ್ಟ್ರದ ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ

ಕಡಬದ ಯುವಕ ವಿದೇಶದಲ್ಲಿ ಆತ್ಮಹತ್ಯೆ Read More »

ಕುಕ್ಕೆಸುಬ್ರಮಣ್ಯ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿತರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸಂಬಂಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಸತೀಶ್, ಮಾಜಿ ಉಪಾಧ್ಯಕ್ಷ ಮಣಿಕಂಠ ಮತ್ತು ಇವರ ಬೆಂಬಲಿಗರಾದ ದುರ್ಗಾದಾಸ್ ಬಂಬಿಲ, ಸುಂದರ ಗುಡ್ಡನ ಮನೆ ಎಂಬವರು ಕಾಂಗ್ರೆಸ್ ಕಾರ್ಯಕರ್ತರಾದ ಕುಮಾರ್‌ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹತ್ತು ದಿನಗಳ ಹಿಂದೆ ಬಿಜೆಪಿಯ ಬೆಂಬಲಿತ ಮಣಿಕಂಠ ಮತ್ತು ಕಾಂಗ್ರೆಸ್ ಕಾರ್ಯಕರ್ತ ಕುಮಾರ್‌ ಎಂಬವರ ನಡುವೆ ಕೌಟುಂಬಿಕ

ಕುಕ್ಕೆಸುಬ್ರಮಣ್ಯ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ Read More »

ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ| ಕಳೆದ‌ 24 ಗಂಟೆಗಳಲ್ಲಿ 10 ಮಂದಿ ಬಲಿ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರದ ಬೆನ್ನಲ್ಲೇ ಸೇನಾ ತುಕಡಿಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ಗುಂಡು ನಿರೋಧಕ ವಾಹನಗಳಲ್ಲಿ ಸೇನೆ, ಕ್ಷೇತ್ರ ಪ್ರಾಬಲ್ಯ ಕಾರ್ಯಾಚರಣೇ ನಡೆಸಿದೆ. ಮೇ 3 ರಿಂದ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿಯ ಮುನ್ನಾದಿನ ಮೀಟಿ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಇಂಫಾಲ ಪೂರ್ವ

ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ| ಕಳೆದ‌ 24 ಗಂಟೆಗಳಲ್ಲಿ 10 ಮಂದಿ ಬಲಿ Read More »

ಭಾರೀ ಗಾಳಿ ಮಳೆ| ಕಡಬ- ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಸಂಚಾರ ಅಸ್ತವ್ಯಸ್ತ

ಸಮಗ್ರ ನ್ಯೂಸ್: ವಿಪರೀತ ಗಾಳಿ ಮತ್ತು ಮಳೆಯ ಪರಿಣಾಮ ಕಡಬ – ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮರ್ಧಾಳದಲ್ಲಿ ಪ್ರವಾಸಿಗರ ಟಿಟಿ ವಾಹನವೊಂದರ ಮೇಲೆ ಮರ ಬಿದ್ದ ಪರಿಣಾಮ ಪ್ರಯಾಣಿಕರು ಜಖಂಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಟ್ಟಣ, ಬಿಳಿನೆಲೆ, ಕೈಕಂಬ ಪ್ರದೇಶಗಳಲ್ಲಿ ರಸ್ತೆಗೆ ಮರಗಳು ಉರುಳಿದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಭಾರೀ ಗಾಳಿ ಮಳೆ| ಕಡಬ- ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಸಂಚಾರ ಅಸ್ತವ್ಯಸ್ತ Read More »

ಖಾಸಗಿ ಬಸ್ ಮತ್ತು ಇನ್ನೋವಾ ನಡುವೆ ಭೀಕರ ಅಪಘಾತ| ಮಗು ಸೇರಿದಂತೆ 10 ಮಂದಿ ಸಾವು

ಸಮಗ್ರ ನ್ಯೂಸ್: ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ಹಾಗೂ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿಕ ಇನೋವಾ ಕಾರು ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದವರು ಕೂಡ ಆಸ್ಪತ್ರೆ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಭೀಕರ ಅಪಘಾತದಲ್ಲಿ ಮಗು

ಖಾಸಗಿ ಬಸ್ ಮತ್ತು ಇನ್ನೋವಾ ನಡುವೆ ಭೀಕರ ಅಪಘಾತ| ಮಗು ಸೇರಿದಂತೆ 10 ಮಂದಿ ಸಾವು Read More »

ಭೀಕರ ಕಾರು ಅಪಘಾತದಲ್ಲಿ ಏಳು ಇಂಜಿನಿಯರಿಂಗ್ ವಿಧ್ಯಾರ್ಥಿಗಳು ದುರ್ಮರಣ

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ನಡೆದ ಭೀಕರ ಕಾರು ಅಪಘಾತದಲ್ಲಿ ಒಂದೇ ಕಾಲೇಜಿನ ಏಳು ವಿದ್ಯಾರ್ಥಿಗಳು ಮೃತ್ಯುಲೋಕಕ್ಕೆ ತೆರಳಿದ್ದಾರೆ. ಈ ಅವಘಡದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮೃತಪಟ್ಟವರನ್ನು ಕೌಶಿಕ್‌ ಬರುವಾ, ಕೌಶಿಕ್‌ ಮೋಹನ್‌, ರಾಜ್‌ ಕಿರಣ್‌ ಭೂಯಾನ್‌, ಇವೋನ್‌ ಬರುವಾ, ಅರಿಂದಮ್‌ ಭೋವಲ್‌, ಉಪಾಂಶು ಶರ್ಮಾ, ನಿಯಾರ್‌ ದೇಕಾ ಎಂದು ಗುರುತಿಸಲಾಗಿದೆ. ಅಸ್ಸಾಂ ಗುವಾಹಟಿಯ ಜಾಲುಕ್‌ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ ಹತ್ತು ವಿದ್ಯಾರ್ಥಿಗಳು ಮುಂಜಾನೆಯ ನುಸುಕಿನ ವೇಳೆಗೆ ಕಾರಿನಲ್ಲಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದು, ಇದೇ

ಭೀಕರ ಕಾರು ಅಪಘಾತದಲ್ಲಿ ಏಳು ಇಂಜಿನಿಯರಿಂಗ್ ವಿಧ್ಯಾರ್ಥಿಗಳು ದುರ್ಮರಣ Read More »

ಮೂಡಿಗೆರೆ: ಬಂಡಾಜೆ ಫಾಲ್ಸ್ ಕಡೆಗೆ ಟ್ರೆಕ್ಕಿಂಗ್ ಗೆ ತೆರಳಿದಾತ ಕೊನೆಗೂ ಪತ್ತೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್‌ ಕಡೆ ಟ್ರೆಕ್ಕಿಂಗ್‌ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾಗಿದ್ದು ಸತತ ಹುಡುಕಾಟದ ಬಳಿಕ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬೆಂಗಳೂರು ಜೆಪಿ ನಗರದ ಪರೋಸ್‌ ಅಗರ್ವಾಲ್‌ ಎಂದು ಹೇಳಲಾಗಿರುವ ಯುವಕ ರಾಣಿಝರಿ ಸಮೀಪದವರೆಗೆ ಬೈಕ್‌ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್‌ನ ಬದಿಯಿಂದ ಟ್ರೆಕ್ಕಿಂಗ್‌ ನಡೆಸಲು ಮುಂದಾಗಿದ್ದಾನೆ. ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಪೊಲೀಸ್‌ ಕಂಟ್ರೋಲ್‌ ರೂಂಗೆ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಆತನಿರುವ ಸ್ಥಳ ಪತ್ತೆ

ಮೂಡಿಗೆರೆ: ಬಂಡಾಜೆ ಫಾಲ್ಸ್ ಕಡೆಗೆ ಟ್ರೆಕ್ಕಿಂಗ್ ಗೆ ತೆರಳಿದಾತ ಕೊನೆಗೂ ಪತ್ತೆ Read More »

ಲಾರಿಗೆ ಡಿಕ್ಕಿ ಹೊಡೆದ ಕಾರು| 6 ಜನ ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕಲಕೇರಿ ಬಳಿ ಇಂದು(ಮೇ.28) ನಡೆದಿದೆ. ಇಂಡಿಕಾ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಪ್ಪ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಹಾಗೂ ರಶ್ಮಿಕಾ ಅಂತ ಗುರುತಿಸಲಾಗಿದೆ. ವಿಜಯಪುರಿಂದ ಬೆಂಗಳೂರಿಗೆ ಇಂಡಿಕಾ ಕಾರಿನಲ್ಲಿ ಹೋಗುವಾಗ ಕುಷ್ಟಗಿ ಹೆದ್ದಾರಿಯಲ್ಲಿ ಕಾರಿನ ಟೈರ್‌ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಲಾರಿಗೆ ಡಿಕ್ಕಿ ಹೊಡೆದ ಕಾರು| 6 ಜನ ಸ್ಥಳದಲ್ಲೇ ದುರ್ಮರಣ Read More »