ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ₹30 ಕೋಟಿ ನೀಡಿದ್ರಾ ವಿರಾಟ್ ಕೊಹ್ಲಿ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೆಸೇಜ್ ನ ಅಸಲಿಯತ್ತೇನು?
ಸಮಗ್ರ ನ್ಯೂಸ್: ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 30 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಷ್ಟೇ ಅಲ್ಲದೆ, ಅನೇಕ ಮೊಬೈಲ್ ವಾಟ್ಸ್ಆಯಪ್ ಸ್ಟೇಟಸ್ಗಳಲ್ಲಿ ಮೋದಿ ಅವರನ್ನು ಕೊಂಡಾಡುತ್ತಿದ್ದಾರೆ. ಆದರೆ, ಈ ಸುದ್ದಿ ಸುಳ್ಳು ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ. ಕೊಹ್ಲಿ ಯಾವುದೇ ನೆರವು ಘೋಷಣೆ ಮಾಡಿಲ್ಲ. ಬದಲಾಗಿ ಅವರು ರೈಲು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ










