ಕ್ರೈಂ

ಮಂಗಳೂರು: ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್

ಸಮಗ್ರ ನ್ಯೂಸ್: .ಮಂಗಳೂರು ನಗರ ಪೊಲೀಸ್ ಸೇವೆಯಲ್ಲಿದ್ದ ಉತ್ತರ ಕರ್ನಾಟಕದ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವದತ್ತಿಯ ಮಹೇಶ್ (31) ಜೀವಾಂತ್ಯ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ನಗರದ ದಕ್ಷಿಣ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೌಟುಂಬಿಕ ಕಲಹವೇ ಮಹೇಶ್ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಒಂದುವರೆ ತಿಂಗಳ ಹಿಂದೆಯಷ್ಟೇ ಮಹೇಶ್ ವಿವಾಹವಾಗಿದ್ದರು ಎನ್ನಲಾಗಿದ್ದು ಕಪಿತಾನಿಯೋ ಬಳಿಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್ Read More »

ಚೈತ್ರಾ ಕುಂದಾಪುರಗೆ ನಾನು ಆಶ್ರಯ ನೀಡಿರಲಿಲ್ಲ: ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟನೆ

ಸಮಗ್ರ ನ್ಯೂಸ್: ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಚೈತ್ರಾ ಕುಂದಾಪುರ, ಕಾಂಗ್ರೆಸ್​ ಮುಖಂಡೆ ಮನೆಯಲ್ಲಿ ಅವಿತುಕೊಂಡಿದ್ದರು ಎನ್ನಲಾಗಿತ್ತು. ಸದ್ಯ ಈ ಕುರಿತು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಆಶ್ರಯ ನೀಡಿದ್ದರೆ ಪೊಲೀಸರು ವಿಚಾರಣೆಗೆ ಕರೆಯಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು. ಸಿಸಿಬಿ ಪೊಲೀಸರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚೈತ್ರಾ ಕುಂದಾಪುರ ಭೇಟಿಯಾಗಿ ಒಂದು ವರ್ಷ

ಚೈತ್ರಾ ಕುಂದಾಪುರಗೆ ನಾನು ಆಶ್ರಯ ನೀಡಿರಲಿಲ್ಲ: ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟನೆ Read More »

ಬಹುಕೋಟಿ ವಂಚನೆ ಪ್ರಕರಣ| ಚೈತ್ರಾ ಕುಂದಾಪುರ ಗ್ಯಾಂಗ್ ಸಿಸಿಬಿ ಕಸ್ಟಡಿಗೆ

ಸಮಗ್ರ ನ್ಯೂಸ್: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ

ಬಹುಕೋಟಿ ವಂಚನೆ ಪ್ರಕರಣ| ಚೈತ್ರಾ ಕುಂದಾಪುರ ಗ್ಯಾಂಗ್ ಸಿಸಿಬಿ ಕಸ್ಟಡಿಗೆ Read More »

ಮಂಗಳೂರು: ಹೊಟೇಲ್ ನಲ್ಲಿ ತಂಗಿದ್ದ ಬ್ಯಾಂಕ್ ಅಧಿಕಾರಿ ನಿಗೂಢ ಸಾವು

ಸಮಗ್ರ ನ್ಯೂಸ್: ಹೋಟೆಲ್‍ನಲ್ಲಿ ತಂಗಿದ್ದ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಮೋತಿ ಮಹಲ್ ಹೋಟೆಲ್ ನ ಸ್ವಿಮ್ಮಿಂಗದ ಪೂಲ್‍ನಲ್ಲಿ ಕೇರಳದ ತಿರುವನಂತಪುರಂ ನಿವಾಸಿ ಯೂನಿಯನ್ ಬ್ಯಾಂಕ್‍ನ ಅಧಿಕಾರಿ ಗೋಪು ಆರ್ ನಾಯರ್ ಮೃತದೇಹ ಪತ್ತೆಯಾಗಿದೆ. ನಿನ್ನೆ ಮಂಗಳೂರಿಗೆ ಬಂದಿದ್ದ ಅವರು ಮೋತಿ ಮಹಲ್ ಹೊಟೇಲ್‍ನಲ್ಲಿ ಉಳಿದು ಕೊಂಡಿದ್ದರು ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಬಂದು ಸ್ವಿಮ್ಮಿಂಗ್ ಪೂಲ್ ಬಳಿ ವಿಹರಿಸಿದ್ದರು, ಆದರೆ

ಮಂಗಳೂರು: ಹೊಟೇಲ್ ನಲ್ಲಿ ತಂಗಿದ್ದ ಬ್ಯಾಂಕ್ ಅಧಿಕಾರಿ ನಿಗೂಢ ಸಾವು Read More »

ಚಿಕ್ಕಮಗಳೂರು : ಎತ್ತಿನಗಾಡಿ ನೊಗ ಬಡಿದು ಯುವಕ ಸಾವು

ಸಮಗ್ರ ನ್ಯೂಸ್: ಎತ್ತಿನ‌ ಗಾಡಿ ಸ್ಪರ್ಧೆಯಲ್ಲಿ ವೇಗವಾಗಿದ್ದ ಎತ್ತಿನ ಗಾಡಿಯ ನೊಗ ತಲೆಗೆ ಹೊಡೆದು ಯುವಕ ಸಾವಿಗೀಡಾದ ಘಟನೆ ಸೆ. 9ರಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಭರತ್ (25) ಮೃತರಾಗಿದ್ದು. ಇವರು ಫೈನಲ್ ಸುತ್ತಿನ ಅಂತಿಮ ಸ್ಪರ್ಧೆಯಲ್ಲಿ ನೊಗ ಹಿಡಿಯಲು ಹೋಗಿದ್ದರು. ಈ ವೇಳೆ ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಈ ದುರ್ಘಟನೆ ನಡೆದಿದೆ.

ಚಿಕ್ಕಮಗಳೂರು : ಎತ್ತಿನಗಾಡಿ ನೊಗ ಬಡಿದು ಯುವಕ ಸಾವು Read More »

ಸುಳ್ಯ: ಅಡ್ಕಾರು ಬಳಿ ಸ್ಕಾರ್ಪಿಯೋ ಡಿಕ್ಕಿ| ಪಾದಾಚಾರಿ ದುರ್ಮರಣ

ಸಮಗ್ರ ನ್ಯೂಸ್: ಪಾದಾಚಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಅಡ್ಕಾರು ಬಳಿ ಇಂದು(ಸೆ.5) ರಾತ್ರಿ ಸಂಭವಿಸಿದೆ. ಕಳೆದ ವಾರವಷ್ಟೆ ಅಡ್ಕಾರಿನಲ್ಲಿ ಪಾದಾಚಾರಿಗಳಿಗೆ ಕಾರೊಂದು ಡಿಕ್ಕಿ ಹೊಡೆದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಇದೀಗ ಅದೇ ಸ್ಥಳದಲ್ಲೇ ಮತ್ತೆ ದುರ್ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಣ್ಣಪ್ಪ ಎಂದು ಗುರುತಿಸಲಾಗಿದ್ದು, ಈತ ಹುಬ್ಬಳ್ಳಿ ಮೂಲದ ಕಾರ್ಮಿಕ ಎಂದು ‌ಹೇಳಲಾಗಿದೆ. ಬಂದ್ಯಡ್ಕ ಮೂಲದ ಅನಿಲ್ ರೈ ಎಂಬವರು ಸ್ಕಾರ್ಪಿಯೋ ಕಾರಿನಲ್ಲಿ ಉಡುಪಿಯಿಂದ

ಸುಳ್ಯ: ಅಡ್ಕಾರು ಬಳಿ ಸ್ಕಾರ್ಪಿಯೋ ಡಿಕ್ಕಿ| ಪಾದಾಚಾರಿ ದುರ್ಮರಣ Read More »

ಮೈಸೂರು:ಹುಲಿ ದಾಳಿಗೆ 9 ವರ್ಷದ ಬಾಲಕ ಬಲಿ

ಸಮಗ್ರ ನ್ಯೂಸ್: 9 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ‌ ಸೆ. 4ರಂದು ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಕೃಷ್ಣ ನಾಯಕ್ ಮತ್ತು ಮಹಾದೇವಿಬಾಯಿ ದಂಪತಿ ಪುತ್ರ ಚರಣ್‌ ನಾಯಕ್‌(9) ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕ ಹುಲಿಯ ಬಾಯಿಗೆ ಬಲಿಯಾಗಿದ್ದಾನೆ. ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ಇದ್ದ ಕಾರಣ ಚರಣ್ ಜಮೀನಿನಲ್ಲಿದ್ದ ತಂದೆ-ತಾಯಿ ಬಳಿಗೆ ಹೋಗಿದ್ದನು. ಬಿರು ಬಿಸಿಲು ಇದ್ದ ಕಾರಣ ಮಗನನ್ನು ಮರದ

ಮೈಸೂರು:ಹುಲಿ ದಾಳಿಗೆ 9 ವರ್ಷದ ಬಾಲಕ ಬಲಿ Read More »

ಬಂಟ್ವಾಳ: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್| ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವಿಡಿಯೋ ವ್ಯಕ್ತಿಯೋರ್ವ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಪ್ರಕರಣ ಬಂಟ್ವಾಳದಲ್ಲಿ ವರದಿಯಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಜಕ್ರಿಬೆಟ್ಟು ಎಂಬಲ್ಲಿನ‌ ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ವ್ಯಕ್ತಿಯೋರ್ವ ಗೋಡೆಯ ಸಂದಿ ಮಧ್ಯೆ ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡ ಯುವತಿ ಜೋರಾಗಿ ಬೊಬ್ಬೆ ಹಾಕಿದ್ದಾಳೆ, ಈ ಸಂದರ್ಭ

ಬಂಟ್ವಾಳ: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್| ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು Read More »

ಧರ್ಮಸ್ಥಳದ ಅಣ್ಣಪ್ಪ ಸನ್ನಿಧಿ ಎದುರು ನಡೆದದ್ದು ಪ್ರಮಾಣವೇ?| ನಿಜಕ್ಕೂ ಅಲ್ಲಿ ನಡೆದದ್ದೇನು?

ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ‌ ಬಳಿ ನಡೆದ ಸೌಜನ್ಯ ಅತ್ಯಾ‌ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ತಾಯಿ ಕುಸುಮಾವತಿ ಹೆಸರಿಸಿದ್ದ ಧೀರಜ್ ಕೆಲ್ಲ, ಉದಯ್ ಜೈನ್, ಮಲಿಕ್ ಜೈನ್ ಅಣ್ಣಪ್ಪ ಬೆಟ್ಟದಲ್ಲಿ ಪ್ರಾರ್ಥನೆ ಮಾಡಿದ್ದು ಇದರ ಬಗ್ಗೆ ಇದೀಗ ಜಿಜ್ಞಾಸೆ ಮೂಡಿದೆ. ಇಂದು(ಆ.26) ವಿಹಿಂಪ ಹಾಗೂ ಭಜರಂಗದಳದ ನೇತೃತ್ವದಲ್ಲಿ ನೇತ್ರಾವತಿಯಿಂದ ಅಣ್ಣಪ್ಪ‌ ಬೆಟ್ಟಕ್ಕೆ ಪಾದಯಾತ್ರೆ ನಡೆದಿತ್ತು. ಈ ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಕೂಡಾ ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಅಣ್ಣಪ್ಪ ಬೆಟ್ಟಕ್ಕೆ ತೆರಳಿದ ಪ್ರತಿಭಟನಾಕಾರರ ಎದುರು ಧೀರಜ್

ಧರ್ಮಸ್ಥಳದ ಅಣ್ಣಪ್ಪ ಸನ್ನಿಧಿ ಎದುರು ನಡೆದದ್ದು ಪ್ರಮಾಣವೇ?| ನಿಜಕ್ಕೂ ಅಲ್ಲಿ ನಡೆದದ್ದೇನು? Read More »

ಹೆತ್ತ ತಂದೆಯಿಂದಲೇ ಮಗಳ ಕೊಲೆ| ಪರಜಾತಿಯವನ ಪ್ರೀತಿಸಿದ ತಪ್ಪಿಗೆ ಮರ್ಯಾದಾ ಹತ್ಯೆ

ಸಮಗ್ರ ನ್ಯೂಸ್: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಯುವತಿಯನ್ನು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ರಮ್ಯಾ (19) ಎಂಬ ಯುವತಿಯನ್ನು ತಂದೆಯೇ ಹತ್ಯೆ ಮಾಡಿ ಆಗಸ್ಟ್ 25 ರಂದು ಅಂತ್ಯಸಂಸ್ಕಾರ ಮಾಡಿದ್ದರು. ಬಳಿಕ ಗ್ರಾಮದಲ್ಲಿ ಕೊಲೆ ಮಾಡಿರುವ ಬಗ್ಗೆ ಗುಸು ಗುಸು ಶುರುವಾಗಿದೆ. ಹೀಗಾಗಿ ಯುವತಿ ತಂದೆ ವೆಂಕಟೇಶ್ ಗೌಡ ವಿಚಾರಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು

ಹೆತ್ತ ತಂದೆಯಿಂದಲೇ ಮಗಳ ಕೊಲೆ| ಪರಜಾತಿಯವನ ಪ್ರೀತಿಸಿದ ತಪ್ಪಿಗೆ ಮರ್ಯಾದಾ ಹತ್ಯೆ Read More »