ಕರಾವಳಿ

ಧರ್ಮಸ್ಥಳ: ತಾಯಿ ಮಗು ನಾಪತ್ತೆ

ಸಮಗ್ರ ನ್ಯೂಸ್: ತಾಯಿ ಒಂಭತ್ತು ತಿಂಗಳ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದಿದೆ. ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡ ಅವರ ಪತ್ನಿ ಜಯಶ್ರೀ (29ವ) ಹಾಗೂ ಅವರ ಪುತ್ರಿ ರುಷಿಕಾ (9ತಿಂಗಳು) ನಾಪತ್ತೆಯಾದವರು. ಮಾ.22ರಂದು ರಾತ್ರಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು. ಮರುದಿನ ಬೆಳಿಗೆ ವೆಂಕಪ್ಪ ಗೌಡರು ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಜಯಶ್ರೀ ಹಾಗೂ 9 ತಿಂಗಳ

ಧರ್ಮಸ್ಥಳ: ತಾಯಿ ಮಗು ನಾಪತ್ತೆ Read More »

ಉಡುಪಿ: ಬೀದಿ ನಾಯಿಗೆ ಊಟ ಹಾಕಿದ್ದಕ್ಕೆ ದಲಿತ ಮಹಿಳೆಗೆ ಹಲ್ಲೆ|ಆರೋಪಿ ಬಂಧನ

ಸಮಗ್ರ ನ್ಯೂಸ್‌ : ಬೀದಿನಾಯಿಗೆ ಊಟ ಹಾಕಿದರು ಎಂಬ ಕಾರಣಕ್ಕಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಂಜಿಬೆಟ್ಟು ಬುಡ್ನಾರ್ ನಿವಾಸಿ ಬೇಬಿ(50) ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ತಮ್ಮ ಪರಿಚಯದ ಚಂದ್ರಕಾಂತ ಎಂಬವರ ಮನೆ ಸಮೀಪ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಈ ವೇಳೆ ಚಂದ್ರಕಾಂತ ನಾಯಿಗಳಿಗೆ ಊಟ ಹಾಕುವುದಕ್ಕೆ ಆಕ್ಷೇಪಿಸಿ ಅವಾಚ್ಯ

ಉಡುಪಿ: ಬೀದಿ ನಾಯಿಗೆ ಊಟ ಹಾಕಿದ್ದಕ್ಕೆ ದಲಿತ ಮಹಿಳೆಗೆ ಹಲ್ಲೆ|ಆರೋಪಿ ಬಂಧನ Read More »

ಪುತ್ತೂರು: ನಟೋರಿಯಸ್ ಅಂತರಾಜ್ಯ ಕಳ್ಳಿ ಅರೆಸ್ಟ್

ಸಮಗ್ರ ನ್ಯೂಸ್: ಫೆಬ್ರವರಿ ತಿಂಗಳಲ್ಲಿ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಈಶ್ವರಿ (45) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಆಕೆ ಕಳವು ನಡೆಸಿದ ಸುಮಾರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ

ಪುತ್ತೂರು: ನಟೋರಿಯಸ್ ಅಂತರಾಜ್ಯ ಕಳ್ಳಿ ಅರೆಸ್ಟ್ Read More »

ಕಡಬ:ಶಾಂತಿಮೊಗೇರು ಕಿಂಡಿ ಆಣೆಕಟ್ಟು ಬರಿದು ಆರೋಪ| ಊರವರ ಆಕ್ರೋಶಕ್ಕೆ ಜಾಗ ಖಾಲಿ ಮಾಡಿದ ಮರಳು ದಂಧೆಕೋರರು

ಸಮಗ್ರ ನ್ಯೂಸ್‌: ಕುಮಾರಧಾರ ನದಿಗೆ ಕಡಬ ತಾಲೂಕಿನ ಶಾಂತಿಮೊಗೇರು ಎಂಬಲ್ಲಿ ನಿರ್ಮಿಸಿರುವ ಬೃಹತ್ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗಿ ಅಣೆಕಟ್ಟು ಬರಿದಾಗಿದೆ. ಇದಕ್ಕೆ ಮರಳು ದಂಧೆಯವರೇ ಪ್ರಮುಖ ಕಾರಣ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ ಬೆನ್ನಿಗೆ ಮರಳು ತೆಗೆಯುತ್ತಿದ್ದವರು ತಮ್ಮ ಎಲ್ಲಾ ವಸ್ತುಗಳೊಂದಿಗೆ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ. ಅಣೆಕಟ್ಟಿಗೆ ಅಳವಡಿಸಿದ್ದ ಹಲಗೆಯನ್ನು ರಾತೋರಾತ್ರಿ ತೆಗೆದಿರುವುದಲ್ಲದೆ, ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಡಲಾಗಿದೆ. ಅಲ್ಲದೆ ಕೆಲವು ಹಲಗೆಯ ಅಡಿಯಲ್ಲಿದ್ದ ರಬ್ಬರ್ ವಾಷರನ್ನು ತೆಗೆಯಲಾಗಿದೆ.

ಕಡಬ:ಶಾಂತಿಮೊಗೇರು ಕಿಂಡಿ ಆಣೆಕಟ್ಟು ಬರಿದು ಆರೋಪ| ಊರವರ ಆಕ್ರೋಶಕ್ಕೆ ಜಾಗ ಖಾಲಿ ಮಾಡಿದ ಮರಳು ದಂಧೆಕೋರರು Read More »

ಬಿಸಿಲ‌ ಬೇಗೆಗೆ ತಂಪೆರೆದ‌ ವರುಣ| ಸುಳ್ಯ, ಕಡಬ ತಾಲೂಕಿನ ಹಲವೆಡೆ ಉತ್ತಮ ಮಳೆ

ಸಮಗ್ರ ನ್ಯೂಸ್: ಹಲವು ದಿನಗಳಿಂದ‌ ಸೆಕೆಯಿಂದ ತತ್ತರಿಸಿದ್ದ‌ ಕರಾವಳಿಗೆ ಕಳೆದೆರಡು ದಿನಗಳಿಂದ‌ ಮಳೆಯ‌ ಸಿಂಚನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಮತ್ತು‌ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ಕಡೆಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಎರಡು ದಿನಗಳಿಂದ ಮೋಡದ ವಾತಾವರಣ ಕಂಡುಬಂದಿತ್ತು ಶುಕ್ರವಾರ ಸಂಜೆ ಸಾಮಾನ್ಯ ಮಳೆಯಾಗಿತ್ತು. ಸುಳ್ಯ, ಕಡಬ ತಾಲೂಕಿನ ಕೊಲ್ಲಮೊಗ್ರ, ಕಲ್ಲಾಜೆ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ, ಮರ್ಕಂಜ, ಎಲಿಮಲೆ, ಸಂಪಾಜೆ, ಅರಂತೋಡು, ಹರಿಹರ ಪಲ್ಲತ್ತಡ್ಕ, ಪಂಬೆತ್ತಾಡಿ ಸೇರಿದಂತೆ ವಿವಿಧ

ಬಿಸಿಲ‌ ಬೇಗೆಗೆ ತಂಪೆರೆದ‌ ವರುಣ| ಸುಳ್ಯ, ಕಡಬ ತಾಲೂಕಿನ ಹಲವೆಡೆ ಉತ್ತಮ ಮಳೆ Read More »

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ 12 ಮಂದಿ ಆರೋಪಿಗಳಿಗೆ ಗಡಿಪಾರು ಆದೇಶ

ಸಮಗ್ರ ನ್ಯೂಸ್:‌ ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 12 ಮಂದಿ ಆರೋಪಿಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ. ಅಡ್ಯಾರ್‌ಪದವಿನ ಮುಹಮ್ಮದ್ ಅಶ್ರಫ್ (42) ಮತ್ತು ರಿಯಾಝ್ ಅಹ್ಮದ್ (35), ಸುರತ್ಕಲ್ ಕಾಟಿಪಳ್ಳ ಮದ್ಯದ ವಿಜ್ವಲ್ ಪೂಜಾರಿ (29),ಸುರತ್ಕಲ್ ಕಾನಕಟ್ಲದ ಗಿರಿಧರ್ (24) , ಕಾಟಿಪಳ್ಳ ಚೊಕ್ಕಬೆಟ್ಟುವಿನ ಹರ್ಷದ್ ಯಾನೆ ಹಫೀಝ್ (28), ಉರ್ವಸ್ಟೋರ್‌ನ ವೃಕ್ಷಿತ್ ಯಾನೆ ರಕ್ಷಿತ್ (23) ಮತ್ತು ದುರ್ಗೇಶ್ (25),

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ 12 ಮಂದಿ ಆರೋಪಿಗಳಿಗೆ ಗಡಿಪಾರು ಆದೇಶ Read More »

ಪುತ್ತೂರು: ಫೇಸ್‌ಬುಕ್‌ ಖಾತೆಯಲ್ಲಿ ದ್ವೇಷ ಬಿತ್ತುವ ಪೋಸ್ಟರ್lದೂರು ದಾಖಲು

ಸಮಗ್ರ ನ್ಯೂಸ್:‌ ಜಾತಿ, ಜನಾಂಗ, ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟನ್ನು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ. ಮಾ 21 ರಂದು ರಾತ್ರಿ ಬಲ್ಯಗ್ರಾಮ, ಕಡಬ ನಿವಾಸಿ, ದ.ಕ ಜಿಲ್ಲೆಯ ಅಂಬೇಡ್ಕರ್‌ ಅಪತ್ಬಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠರವರ ಮೊಬೈಲ್ ಗೆ ಬಂದ ಫೇಸ್ಟುಬುಕ್‌ನ ಲಿಂಕ್‌ನ್ನು ಪರಿಶೀಲಿಸಿದಾಗ, ಪ್ರವೀಣ್ ಮದ್ದಡ್ಕ ಎಂಬಾತನು ತನ್ನ ಫೇಸ್‌ಬುಕ್ ಖಾತೆಯಲ್ಲಿ

ಪುತ್ತೂರು: ಫೇಸ್‌ಬುಕ್‌ ಖಾತೆಯಲ್ಲಿ ದ್ವೇಷ ಬಿತ್ತುವ ಪೋಸ್ಟರ್lದೂರು ದಾಖಲು Read More »

ವಿಟ್ಲ: ಅಂಗಡಿಗಳಿಗೆ ನುಗ್ಗಿ ನಗದು, ದಿನಸಿ ಕಳ್ಳತನ

ಸಮಗ್ರ ನ್ಯೂಸ್: ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ವಿಟ್ಲ ಪೇಟೆಯಲ್ಲಿ ಸಂಭವಿಸಿದೆ. ಮಹಮ್ಮದ್ ಹಾಜಿ ಮಾಲೀಕತ್ವದ ದಿನಸಿ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಹಾಗೂ ಮುಖ ಚಹರೆ ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಇಬ್ಬರು ಕಳ್ಳರು ಕೃತ್ಯ ಎಸಗಿರುವುದು ಕಾಣಿಸುತ್ತಿದೆ. ದಿನಸಿ ಅಂಗಡಿಯ ಹಿಂಭಾಗದಲ್ಲಿ ಛಾವಣಿಯ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕ್ಯಾಶ್ ಕೌಂಟರ್ ನಲ್ಲಿದ್ದ ರೂ 8000 ಮತ್ತು ಕಟ್ಟಿಟ್ಟಿದ್ದ ದಿನಸಿ ಸಾಮಾಗ್ರಿಯನ್ನು ಹೊತ್ತೊಯ್ದಿದ್ದಾರೆ. ಬಳಿಕ ಪಕ್ಕದ ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್.

ವಿಟ್ಲ: ಅಂಗಡಿಗಳಿಗೆ ನುಗ್ಗಿ ನಗದು, ದಿನಸಿ ಕಳ್ಳತನ Read More »

ಮಂಗಳೂರು: ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ ಎಂಬ ಆಗ್ರಹ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನದಲ್ಲಿ ಮತ್ತೆ ವ್ಯಾಪಾರ ಧರ್ಮ ದಂಗಲ್ ಕಂಡು ಬಂದಿದೆ. ಅನ್ಯಮತೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘವು ದೇವಸ್ಥಾನದ ಆಡಳಿತ ಮಂಡಳಿಗೆ ಆಗ್ರಹಿಸಿದೆ. ಮುಲ್ಕಿಯಲ್ಲಿ ನಡೆಯಲಿರುವ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಕೂಗು ಕೇಳಿ ಬಂದಿದೆ. ಬಪ್ಪನಾಡುವಿನ ವ್ಯಾಪಾರ ಧರ್ಮ ದಂಗಲ್ ಕಳೆದ ವರ್ಷ ಬ್ಯಾನರ್ ಮೂಲಕ ಸದ್ದು ಮಾಡಿತ್ತು. ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ

ಮಂಗಳೂರು: ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ ಎಂಬ ಆಗ್ರಹ Read More »

ಬಂಟ್ವಾಳ: 4.65 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

ಸಮಗ್ರ ನ್ಯೂಸ್‌ : ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಆ್ಯಪ್‌ ಬಳಸಿ ವಿವಿಧ ಖಾತೆಗಳಿಗೆ ಹಣ ಹೂಡಿಕೆ ಮಾಡಿ ಆಟೋ ಚಾಲಕನೋರ್ವ 4.65 ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ಸರಪಾಡಿ ಗ್ರಾಮದಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕ ಹರೀಶ್‌ಕುಮಾರ್‌ ಹಣ ಕಳೆದುಕೊಂಡ ವ್ಯಕ್ತಿ. ಅವರ ಮೊಬೈಲ್‌ಗೆ ಕಳೆದ ಡಿ. 20ರಂದು ಸೂಚನೆಯೊಂದು ಬಂದಿದ್ದು, ಅದರಂತೆ ಅವರು ನಮ್‌ಜೀನಿಯಸ್‌ ಎ1 ಆ್ಯಪ್‌ ಡೌನ್‌ಲೋಡ್‌ ಮಾಡಿದ್ದರು. ಬಳಿಕ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಪರಿಚಿತರು

ಬಂಟ್ವಾಳ: 4.65 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ Read More »