ಕರಾವಳಿ

ಪುತ್ತೂರು: ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ವಿದ್ಯಾರ್ಥಿ ಪರ ನಾಯಕ ಎಡ್ವರ್ಡ್ ಆಯ್ಕೆ

ಸಮಗ್ರ ನ್ಯೂಸ್: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ವಿದ್ಯಾರ್ಥಿ ಪರ ನಾಯಕ ಎಡ್ವರ್ಡ್ ಪುತ್ತೂರು ರವರನ್ನು ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಡಾ. ರಾಜಾರಾಮ್ ಕೆ.ಬಿ ರವರ ಶಿಫಾರಸಿನ ಮೇರೆಗೆ ಆಯ್ಕೆ ಮಾಡಿ ಜಿಲ್ಲಾ ಉಸ್ತುವಾರಿ ಝಕೀರ್ ಹುಸೈನ್ ಮತ್ತು ಭರತ್ ರಾಮ್ ರವರು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ

ಪುತ್ತೂರು: ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ವಿದ್ಯಾರ್ಥಿ ಪರ ನಾಯಕ ಎಡ್ವರ್ಡ್ ಆಯ್ಕೆ Read More »

ಯುವಶಕ್ತಿ ಸೇವಾಪಥದ ದ್ವೀತಿಯ ವಾರ್ಷಿಕೋತ್ಸವ

ಸಮಗ್ರ ನ್ಯೂಸ್: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೇವಾಕಾರ್ಯದಲ್ಲಿ ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು ತನ್ನ ದ್ವೀತಿಯ ವಾರ್ಷಿಕೋತ್ಸವವನ್ನು “ಸೇವಾ ಸಂಭ್ರಮ” ಎಂಬ ವಿನೂತನ ಪರಿಕಲ್ಪನೆಯ ಮೂಲಕ ಕಟ್ಟದ ಪಡ್ಪು ಅರುಣೋದಯ ಸಭಾಭವನದಲ್ಲಿ ಆಚರಿಸಿಲಾಯಿತು. ಸಮಾಜ ಬಂಧುಗಳಿಂದ ಸಂಗ್ರಹಿಸಿ , ಜಿಲ್ಲೆಯ ವಿವಿಧ ಭಾಗದ ಒಟ್ಟು 11 ಜನ ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ನಾಲ್ಕು ಲಕ್ಷ ರೂಗಳ ಆರ್ಥಿಕ ಸಹಕಾರ ನೀಡುವುದರ ಮೂಲಕ ಯುವಶಕ್ತಿ ಸೇವಾಪಥವು ಶಕ್ತ ಸಮಾಜ ಮತ್ತು ಅಶಕ್ತ ಸಮಾಜದ ನಡುವಿನ ಕೊಂಡಿಯೆನಿಸಿತು. ಈ

ಯುವಶಕ್ತಿ ಸೇವಾಪಥದ ದ್ವೀತಿಯ ವಾರ್ಷಿಕೋತ್ಸವ Read More »

ಕೂಜಿಮಲೆಯಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಪ್ರಕರಣ| ನಕ್ಸಲ್ ಅಲ್ಲವೆಂದು ಪೊಲೀಸರ ಸ್ಪಷ್ಟನೆ

ಸಮಗ್ರ ನ್ಯೂಸ್: ಕೊಡಗು ಗಡಿಭಾಗದ ಕೂಜಿಮಲೆಯಲ್ಲಿ ನಿನ್ನೆ ಕಂಡು ಬಂದು ನಕ್ಸಲ್ ಮಹಿಳೆ ಎಂಬ ವದಂತಿಗೆ ಕಾರಣವಾಗಿದ್ದ ಅಪರಿಚಿತ ಮಹಿಳೆ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ವೇಳೆ ವಶ ವಾಗಿದ್ದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಈಕೆ ರಾಜಸ್ಥಾನ ಮೂಲದವಳೆಂಬ ಮಾಹಿತಿ ದೊರೆತಿದ್ದು, ನಕ್ಸಲ್ ತಂಡದವಳಲ್ಲ ಎಂದು ಪೋಲೀಸರು ಸ್ಪಷ್ಟನೆ ನೀಡಿದ್ದಾರೆ. ಅಪರಿಚಿತ ಮಹಿಳೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದುದನ್ನು ಕೆಲವರು ನೋಡಿದ್ದರು. ಕೂಜಿಮಲೆಯಲ್ಲಿ ಹಾಗೂ ಐನೆಕಿದು ಬಳಿ ಕೆಲವು ದಿನಗಳ ಹಿಂದೆ ನಕ್ಸಲರು ಬಂದಿದ್ದ ಹಿನ್ನೆಲೆಯಲ್ಲಿ

ಕೂಜಿಮಲೆಯಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಪ್ರಕರಣ| ನಕ್ಸಲ್ ಅಲ್ಲವೆಂದು ಪೊಲೀಸರ ಸ್ಪಷ್ಟನೆ Read More »

ಕೂಜಿಮಲೆ‌ ಪ್ರದೇಶದಲ್ಲಿ ಮತ್ತೆ ನಕ್ಸಲ್ ಸಂಚಾರ!?| ರಬ್ಬರ್ ತೋಟದಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಯಾರು? ಚುರುಕುಗೊಂಡ ಶೋಧ ಕಾರ್ಯಾಚರಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು, ಆಕೆ ನಕ್ಸಲ್‌ ಎಂಬ ಶಂಕೆಯ ಹಿನ್ನೆಲೆಯಲ್ಲಿ ಶೋಧ ನಡೆಸಲಾಗಿದೆ. ಬುಧವಾರ (ಮಾ27) ಮಧ್ಯಾಹ್ನ 12ರ ಬಳಿಕ ಅಪರಿಚಿತ ಮಹಿಳೆ ಎಸ್ಟೇಟ್‌ನ ರಬ್ಬರ್‌ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬಂದಿ ನೋಡಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಆಗಮಿಸಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ. ಶಂಕಿತ ಮಹಿಳೆ ರಬ್ಬರ್‌ ತೋಟದಿಂದ

ಕೂಜಿಮಲೆ‌ ಪ್ರದೇಶದಲ್ಲಿ ಮತ್ತೆ ನಕ್ಸಲ್ ಸಂಚಾರ!?| ರಬ್ಬರ್ ತೋಟದಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಯಾರು? ಚುರುಕುಗೊಂಡ ಶೋಧ ಕಾರ್ಯಾಚರಣೆ Read More »

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ದುರಂತ| ಮೂರು ಕೋಟಿಗೂ ಮಿಕ್ಕಿ ನಷ್ಟ

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೋಳಿ, ಮೀನಿನ ಆಹಾರ ತಯಾರಿಕಾ ಘಟಕವೊಂದರಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಶಿಹಾರ್ ಎಂಟರ್ ಪ್ರೈಸಸ್ ಎಂಬ ಈ ಫ್ಯಾಕ್ಟರಿಯಲ್ಲಿ ಇಂದು ಮುಂಜಾನೆ 4:45ರ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಫ್ಯಾಕ್ಟರಿಯನ್ನು ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಎಂಆರ್ ಪಿಎಲ್, ಎನ್ ಎಂಪಿಟಿನಿಂದ ಸುಮಾರು 8 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ನಿರಂತರ ಮೂರೂವರೆ

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ದುರಂತ| ಮೂರು ಕೋಟಿಗೂ ಮಿಕ್ಕಿ ನಷ್ಟ Read More »

ಪುತ್ತೂರು: ಕಾರಿನಲ್ಲಿ ಅಕ್ರಮ ಗೋಸಾಗಾಟ| ಕಾರ್ಯಕರ್ತರ ಕಂಡು ಕಾರು ಬಿಟ್ಟು ಪರಾರಿ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟದ ಜಾಲವನ್ನು ಬಜರಂಗದಳ ಬಯಲಿಗೆಳೆದಿದ್ದು, ಸಂಘಟನೆಯ ಕಾರ್ಯಕರ್ತರನ್ನು ನೋಡಿ ಆರೋಪಿಗಳು ಕಾರು , ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.ಪುತ್ತೂರಿನ ಕಬಕ ಅಡ್ಯಲಾಯ ದೈವಸ್ಥಾನದ ಸಮೀಪವೇ ಈ ಕೃತ್ಯ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ.ಕಾರಿನಲ್ಲಿ ಎರಡು ದನ

ಪುತ್ತೂರು: ಕಾರಿನಲ್ಲಿ ಅಕ್ರಮ ಗೋಸಾಗಾಟ| ಕಾರ್ಯಕರ್ತರ ಕಂಡು ಕಾರು ಬಿಟ್ಟು ಪರಾರಿ Read More »

ಪುತ್ತೂರು: ಬಸ್ ನಿಲ್ದಾಣದಲ್ಲೇ ಚೂರಿ ಇರಿತ

ಸಮಗ್ರ ನ್ಯೂಸ್: ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು ಚೂರಿ ಇರಿದ ಘಟನೆ ನಡೆದಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಮಲ್ಲಪುರ ಗೋಕಾಕ್‌ ನಿವಾಸಿ ಕೂಲಿ ಕಾರ್ಮಿಕ ಆನಂದ ಬಾಂದಾವಿ ಚೂರಿ ಇರಿತಕ್ಕೊಳಗಾದವರು. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಪರಿಚಯಸ್ಥರಾದ ಅವಿನಾಶ್‌, ನಾರಾಯಣ, ದುಗೇìಶ್‌ ಮತ್ತು ಹರೀಶ್‌ರೊಂದಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾಗ ಆರೋಪಿ ಅವಿನಾಶ್‌ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ

ಪುತ್ತೂರು: ಬಸ್ ನಿಲ್ದಾಣದಲ್ಲೇ ಚೂರಿ ಇರಿತ Read More »

ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈತಪ್ಪಿದ್ದ ಬೆನ್ನಲ್ಲೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್

ಸಮಗ್ರ ನ್ಯೂಸ್: ನಳಿನ್ ಕುಮಾರ್ ಕಟೀಲ್ ಅವರಿಗೆ ಹೈಕಮಾಂಡ್ ಒಂದು ಮಹತ್ವದ ಜವಾಬ್ದಾರಿ ನೀಡಿದೆ. ಹೌದು, ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಟಿಕೆಟ್​​ ಕೈತಪ್ಪಿದ್ದರಿಂದ ಬೇಸರದಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್​ಗೆ ಹೈಕಮಾಂಡ್ ಕೇರಳ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ. ತೆಲಂಗಾಣ ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್

ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈತಪ್ಪಿದ್ದ ಬೆನ್ನಲ್ಲೆ ಮಹತ್ವದ ಜವಾಬ್ದಾರಿ ಕೊಟ್ಟ ಹೈಕಮಾಂಡ್ Read More »

ಬ್ರಹ್ಮಾವರ: ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಬಿದ್ದು ಸಾವು

ಸಮಗ್ರ ನ್ಯೂಸ್‌ : ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಆಕಸ್ಮಿಕವಾಗಿ ಆಯತಪ್ಪಿ ಜಾರಿ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕುಮ್ರಗೋಡಿನಲ್ಲಿ ನಡೆದಿದೆ. ಮೃತ ವ್ಯಕ್ತಿ ರಾಜು (77) ಎಂದು ತಿಳಿದು ಬಂದಿದೆ. ಘಟನೆಯಿಂದ ಗಂಭೀರವಾಗಿ ರಾಜು ಅವರ ತಲೆ, ಬೆನ್ನು, ಎದೆ, ಕಾಲಿಗೆ ಗಾಯಗಳಾಗಿತ್ತು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಬಿದ್ದು ಸಾವು Read More »

ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ ಪಲ್ಟಿ

ಸಮಗ್ರ ನ್ಯೂಸ್: ಟಿಪ್ಪರ್‌ ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ಉರುಳಿದ ಬಿದ್ದ ಘಟನೆ ಕಿನ್ನಿಗೋಳಿ ಸಮೀಪದ ಶಿಬರೂರು ಸೇತುವೆ ಬಳಿ ನಡೆದಿದೆ. ಚಾಲಕನು ಮದ್ಯದ ಅಮಲಿನಲ್ಲಿ ಅತೀ ವೇಗದಿಂದ ವಾಹನ ಚಲಾಯಿಸಿದ್ದು, ಮೂಲ್ಕಿ ಕಡೆಯಿಂದ ಶಿಬರೂರು ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಬಟ್ಟಕೋಡಿ ಸಮೀಪದ ಶರಣ ಬಳಿ, ಹಾಗೂ ನಡುಗೋಡು ಸಮೀಪವೂ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿತ್ತು. ಆದರೆ ಮುಂದೆ ಅತೀ ವೇಗದಿಂದ ಚಲಿಸಿದ ಟಿಪ್ಪರ್ ಶಿಬರೂರು ಸೇತುವೆಯ ಬಳಿ ತಗ್ಗು ಪ್ರದೇಶದ ಗದ್ದೆಗುರುಳಿ

ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ ಪಲ್ಟಿ Read More »