ಕರಾವಳಿ

ಪುತ್ತೂರು: ಮನೆ ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ

ಸಮಗ್ರ ನ್ಯೂಸ್: ನಾಯಿಗಳ ಸಂಖ್ಯೆ ಹೆಚ್ಚಾಗಿ ರಸ್ತೆಗೆ ಬಂದು ವಾಹನಗಳಿಗೆ ಹಾಗೂ ಪಾದಾಚಾರಿ ಮಕ್ಕಳಿಗೆ ಸಮಸ್ಯೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗೂ ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ವತಿಯಿಂದ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಸೌಲಭ್ಯವನ್ನು ಪೋಳ್ಯದಲ್ಲಿ ಜು.4ರಿಂದ ಜು.9ರವರೆಗೆ ನಡೆಸಲಾಗುವುದು. ಸಂತಾನ ಹರಣ ಮಾಡಿಸುವುದರಿಂದ ಮರಿಗಳನ್ನು ದಾರಿಯಲ್ಲಿ ತ್ಯಜಿಸುವುದು ಕಡಿಮೆಯಾಗುತ್ತದೆ. ರೇಬೀಸ್ ರೋಗ ಹರಡುವಿಕೆಯನ್ನು ಕುಂಠಿತಗೊಳಿಸಬಹುದಾಗಿದೆ. ದಾರಿ ನಾಯಿಗಳ ಸಂಖ್ಯೆ ಕಡಿಮೆಯಾಗಿ

ಪುತ್ತೂರು: ಮನೆ ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ Read More »

ಸುಳ್ಯ: ನಡುರಸ್ತೆಯಲ್ಲೇ ಪಲ್ಟಿ ಹೊಡೆದ ಲಾರಿ| ಚಾಲಕ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು (ಜು.5) ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ‌ಸಮೀಪದ ಓಡಾಬೈ ಬಳಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಸುಳ್ಯ: ನಡುರಸ್ತೆಯಲ್ಲೇ ಪಲ್ಟಿ ಹೊಡೆದ ಲಾರಿ| ಚಾಲಕ ಆಸ್ಪತ್ರೆಗೆ ದಾಖಲು Read More »

ಉಡುಪಿ: ವಿದ್ಯಾರ್ಥಿ ಬಳಿ‌‌ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

ಕಳೆದ ವರ್ಷ ವಿದ್ಯಾರ್ಥಿಗಳ ಕೈಯಲ್ಲಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ವಿಚಾರ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅಂತದ್ದೆ ಘಟನೆ ಉಡುಪಿಯಲ್ಲಿ ನಡೆದಿದ್ದು ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಯಿಂದ ದೈಹಿಕ ಶಿಕ್ಷಕರೊಬ್ಬರು ಶೌಚಾಲಯ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಉಡುಪಿಯ ನಿಟ್ಟೂರು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಾಲಕನಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಅಲ್ಲದೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ

ಉಡುಪಿ: ವಿದ್ಯಾರ್ಥಿ ಬಳಿ‌‌ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ Read More »

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ| ಮರುತನಿಖೆ ಆದೇಶ ಕಾಯ್ದಿರಿಸಿದ ‌ಹೈಕೋರ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಾಂಗಳದ ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಕೋರಿದ ಹಾಗೂ ಸಿಬಿಐ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ. ಸೌಜನ್ಯಾಳ ತಂದೆ ಚಂದಪ್ಪ ಗೌಡ, ಖುಲಾಸೆಗೊಂಡಿರುವ ಆರೋಪಿ ಕಾರ್ಕಳ ತಾಲ್ಲೂಕಿನ ಕುಕುಂದೂರಿನ ಸಂತೋಷ್‌ ರಾವ್‌ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಮತ್ತು ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ| ಮರುತನಿಖೆ ಆದೇಶ ಕಾಯ್ದಿರಿಸಿದ ‌ಹೈಕೋರ್ಟ್ Read More »

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಆಯ್ಕೆ

ಸಮಗ್ರ ನ್ಯೂಸ್: ಉತ್ತರ ಕರ್ನಾಟಕದ ಪ್ರತಿಷ್ಠಿತ ರೋಟರಿ ಕ್ಲಬ್ ಆದ ಹುಬ್ಬಳ್ಳಿ ಮಿಡ್‌ಟೌನ್‌ನ 2024-25ನೇ ಸಾಲಿನ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ದರ್ಖಾಸ್ತು ಸಂಜೀವ ಶೆಟ್ಟಿ ಮತ್ತು ಶಶಿಕಲಾ ಶೆಟ್ಟಿ ಇವರ ಪುತ್ರ ಹುಬ್ಬಳ್ಳಿಯ ಗ್ಲೋಬಲ್ ಮೀಡಿಯಾದ ಪಾಲುದಾರರಾಗಿದ್ದಾರೆ.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಆಯ್ಕೆ Read More »

ಹವಾಮಾನ ವರದಿ| ವಾರಾಂತ್ಯದಲ್ಲಿ ಕರಾವಳಿ,‌ ಮಲೆನಾಡಿನಲ್ಲಿ ಅಬ್ಬರಿಸಲಿದ್ದಾನೆ ವರುಣ| ಜು.5ರಿಂದ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರಾವಳಿ ಮತ್ತು ಮಲೆನಾಡಿನಲ್ಲಿ ನಾಳೆ (ಜುಲೈ5 ) ರಿಂದ ಮತ್ತೆ ನಾಲ್ಕು ದಿನ ಭಾರಿಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೆಳಗಾವಿ, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 5, 6 , 7 ಮತ್ತು 8ರಂದು 4 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ

ಹವಾಮಾನ ವರದಿ| ವಾರಾಂತ್ಯದಲ್ಲಿ ಕರಾವಳಿ,‌ ಮಲೆನಾಡಿನಲ್ಲಿ ಅಬ್ಬರಿಸಲಿದ್ದಾನೆ ವರುಣ| ಜು.5ರಿಂದ ಭಾರೀ ಮಳೆ ಮುನ್ಸೂಚನೆ Read More »

ಜು.5 -6 ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಪ್ರವಾಸ| ಹಲವು‌ ಕಾರ್ಯಕ್ರಮಗಳಲ್ಲಿ ಭಾಗಿ

ಸಮಗ್ರ ನ್ಯೂಸ್: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜುಲೈ 5 ಮತ್ತು 6ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಶುಕ್ರವಾರ ಬೆಳಗ್ಗೆ 8:15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಸರ್ಕ್ಯೂಟ್ ಹೌಸ್‌ಗೆ ತೆರಳುವರು. 10:30ಕ್ಕೆ ಜಿಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ, ಸಂಜೆ 4ಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸುವರು. ಸಂಜೆ 6ಕ್ಕೆ ಸರ್ಕ್ಯೂಟ್ ಹೌಸ್‌ನಿಂದ ಬಿಜೈ ಚರ್ಚ್ ಸರ್ಕಲ್‌ವರೆಗಿನ

ಜು.5 -6 ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಪ್ರವಾಸ| ಹಲವು‌ ಕಾರ್ಯಕ್ರಮಗಳಲ್ಲಿ ಭಾಗಿ Read More »

ಸುಳ್ಯ: ಐವರ್ನಾಡು ಗ್ರಾಮಸಭೆಯಲ್ಲಿ ಕಾವೇರಿದ ಚರ್ಚೆ| ರಸ್ತೆ ದುರವಸ್ಥೆ, ಪಂಚಾಯತ್ ಆಡಳಿತದ ವಿರುದ್ದ ಹರಿಹಾಯ್ದ ಗ್ರಾಮಸ್ಥರು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮಸಭೆಯ ಮೊದಲ ಹಂತದ ಗ್ರಾಮಸಭೆ ಜು.3ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ‌ ಉಸ್ತುವಾರಿಯನ್ನು ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ವಹಿಸಿದ್ದರು. ಸಭೆಯಲ್ಲಿ ರಸ್ತೆ, ವಿದ್ಯುತ್, ಮೂಲಸೌಕರ್ಯ ಕುರಿತು ಕಾವೇರಿದ ಚರ್ಚೆ ನಡೆಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಕ್ಷೇತ್ರ ವೀಕ್ಷಣೆ ವೇಳೆ ನಾಗರಿಕರ ಬಳಿ ಹಣ ಪಡೆದುಕೊಳ್ಳುತ್ತಾರೆ‌ ಎಂದು ಗ್ರಾಮಸ್ಥರು ಆರೋಪಿಸಿದರು. ಆಡಳಿತಾತ್ಮಕ ವೆಚ್ಚದಲ್ಲಿ ಪೋಟೋ ಮುಂತಾದ ಖರ್ಚು

ಸುಳ್ಯ: ಐವರ್ನಾಡು ಗ್ರಾಮಸಭೆಯಲ್ಲಿ ಕಾವೇರಿದ ಚರ್ಚೆ| ರಸ್ತೆ ದುರವಸ್ಥೆ, ಪಂಚಾಯತ್ ಆಡಳಿತದ ವಿರುದ್ದ ಹರಿಹಾಯ್ದ ಗ್ರಾಮಸ್ಥರು Read More »

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬಂಟ್ವಾಳ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ನೀಡಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »