ಕರಾವಳಿ

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು

ಬಂಟ್ವಾಳ : ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಬುಧವಾರ ಮಧ್ಯಾಹ್ನ ಸುರಿದ ಭಾರಿ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿಯಲ್ಲಿ ಬೃಹತ್‌ ಗಾತ್ರದ ಗೋಳಿ ಮರವೊಂದು ಧರೆಗುರುಳಿದೆ. ಸಂಜೆ 4 ಗಂಟೆಯ ವೇಳೆಗೆ ಬೀಸಿದ ಗಾಳಿಗೆ ಬೃಹತ್‌ ಮರ ರಸ್ತೆಗೆ ಉರುಳಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಉರುಳಿ ಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ. ಇಲ್ಲಿನ ನಾಗೇಶ್‌ ಸಂಪೋಳಿ ಅವರ ಜಮೀನಿನಲ್ಲಿ ಇದ್ದ ಈ ಮರದ ಪಕ್ಕದಲ್ಲೇ […]

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು Read More »

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

ಕಾರ್ಕಳ: ಮೀನು ಹಿಡಿಯುಲು ಹೋದ ಬಾಲಕನೊರ್ವ ಆಕಸ್ಮಿಕವಾಗಿ ಮದಗಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಅಜೆಕಾರು ಠಾಣಾ ವ್ಯಾಪ್ತಿಯ ಎಳ್ಳಾರೆ ಎಂಬಲ್ಲಿ ಸಂಭವಿಸಿದೆ. ಎಳ್ಳಾರೆಯ ಸೋಮನಾಥ ಶೇರಿಗಾರ ಎಂಬವರ ಮಗ ಆದಿತ್ಯ (14) ಮೃತಪಟ್ಟ ಬಾಲಕ. ಈತ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲೆಂದು ಮನೆಯಿಂದ ಮನೆ ಸಮೀಪದ ಮದಗಕ್ಕೆ ಹೋಗಿದ್ದ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೀನು ಹಿಡಿಯುತ್ತಿದ್ದಾಗ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ.ಘಟನೆಯ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು Read More »

ಪುತ್ತೂರು: ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿ ಮೃತ್ಯು

ಪುತ್ತೂರು: ಊಟ ಮಾಡುತ್ತಿದ್ದಾಗ ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಟ್ಟಂಪಾಡಿ ಸಮೀಪದ ನಿಡ್ಪಳ್ಳಿ ಗ್ರಾಮದ ಕ್ಕುಕ್ಕುಪುಣಿ ಎಂಬಲ್ಲಿ ನಡೆದಿದೆ. ಕುಕ್ಕುಪುಣಿ ನಿವಾಸಿ ಕೊರಗಪ್ಪ ನಲಿಕೆ ಎಂಬವರು ನಿನ್ನೆ ಮದ್ಯಾಹ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಆಹಾರದ ತುಡೊಂದು ಗಂಟಲಿನಲ್ಲಿ ಸಿಲುಕಿಕೊಂಡಿದೆ. ತಕ್ಷಣ ಮನೆಯವರು ಪ್ರಥಮ ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಅವರಿಗೆ ಸ್ವಲ್ಪ ಸಮಯದಲ್ಲೇ ಉಸಿರಾಟದ ಸಮಸ್ಯೆ ಎದುರಾಗಿದೆ. ಬಳಿಕ ಮನೆಯವರು ಮುಡಿಪಿನಡ್ಕದ ಕ್ಲಿನಿಕ್ ಒಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ. ಪುತ್ತೂರು

ಪುತ್ತೂರು: ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿ ಮೃತ್ಯು Read More »

ದ.ಕ: ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಜೂ. 30 ಕಡೇ ದಿನ |ತಪ್ಪಿದಲ್ಲಿ ಕಠಿಣ ಕ್ರಮ: ಡಿ.ಸಿ

ಮಂಗಳೂರು: ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ(ಎಎವೈ) ಅನ್ನ ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಅನರ್ಹ ಕುಟುಂಬಗಳು ಪಡಿತರ ಚೀಟಿಗಳನ್ನು ದಂಡ ರಹಿತವಾಗಿ ಜೂ. 30ರೊಳಗೆ ಹಿಂದುರಿಗಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಸರಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ(ಎಎವೈ) ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಪಡೆದುಕೊಂಡವರು ಆಯಾ ತಾಲೂಕಿನ ತಹಶೀಲ್ದಾರರು/ ಸಹಾಯಕ ನಿರ್ದೇಶಕರು ಇವರಿಗೆ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು. ಅನರ್ಹರು ಹೊಂದಿರುವ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ಇಲಾಖೆಗೆ ಹಿಂದಿರುಗಿಸಬೇಕು. ಅಂತಹವರ ವಿರುದ್ಧ ಯಾವುದೇ

ದ.ಕ: ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಜೂ. 30 ಕಡೇ ದಿನ |ತಪ್ಪಿದಲ್ಲಿ ಕಠಿಣ ಕ್ರಮ: ಡಿ.ಸಿ Read More »

ಬಂಟ್ವಾಳ: ಸ್ಮಶಾನದಲ್ಲಿ ಟೆಂಟ್ ಹಾಕಿ ವಿಧವೆ ವಾಸ್ತವ್ಯ | ಗ್ರಾ.ಪಂ. ನಿಂದ ಪೊಲೀಸ್ ದೂರು

ಬಂಟ್ವಾಳ: ಗ್ರಾಮ ಪಂಚಾಯತ್ ವತಿಯಿಂದ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಿಲ್ಲವೆಂದು ವಿಧವೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಮಶಾನದಲ್ಲಿ ಮನೆ ಕಟ್ಟಿ ಕುಳಿತ ಘಟನೆ ಅನಂತಾಡಿ ಗ್ರಾಮದ ಬಂಟ್ರಿಂಜೆಯಲ್ಲಿ ನಡೆದಿದೆ. ಇದೀಗ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗ್ರಾಮ ಪಂಚಾಯತ್ ದೂರು ದಾಖಲಿಸಿದೆ. ಹಲವಾರು ಭಾರಿ ಅರ್ಜಿ ಸಲ್ಲಿಸಿದರು ಗ್ರಾಮ ಪಂಚಾಯತ್ ನಮಗೆ ಮನೆ ನಿವೇಶನ ಮಂಜೂರು ಮಾಡಿಲ್ಲವೆಂದು ಮಹಿಳೆ ಆರೋಪಿಸಿದ್ದಾರೆ. ದಿ. ರಾಮಚಂದ್ರ ದಾಸ್ ಎಂಬವರ ಪತ್ನಿ, ಜಯಂತಿ ಇದುವರೆಗೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ

ಬಂಟ್ವಾಳ: ಸ್ಮಶಾನದಲ್ಲಿ ಟೆಂಟ್ ಹಾಕಿ ವಿಧವೆ ವಾಸ್ತವ್ಯ | ಗ್ರಾ.ಪಂ. ನಿಂದ ಪೊಲೀಸ್ ದೂರು Read More »

ಸೀಲ್ ಡೌನ್ ಇದ್ದರೂ ಸುಬ್ರಹ್ಮಣ್ಯಕ್ಕೆ ಭಕ್ತರ ದಂಡು | ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿರುವ ಪೊಲೀಸರು

ಸುಬ್ರಹ್ಮಣ್ಯ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಾದ ಕಾರಣ ಭಕ್ತರು ತೀರ್ಥಯಾತ್ರೆ ಆರಂಭಿಸಿದ್ದು, ಕುಕ್ಕೆಗೆ ಭಕ್ತರ ದಂಡು ಹರಿದುಬರುತ್ತಿದೆ. ಸುಬ್ರಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಹೆರಲಾಗಿದ್ದು, ಆಗಮಿಸಿದ ಭಕ್ತರಿಗೆ ದಂಡ ವಿಧಿಸಲಾಗುತ್ತಿದೆ. ಜೂ.14 ರಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ದ.ಕ. ಸೇರಿದಂತೆ ಉಳಿದ 11 ಜಿಲ್ಲೆಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಜೂ. 21 ರವರೆಗೆ ಮುಂದುವರೆಸಲಾಗಿದೆ. ಇನ್ನು ಜಿಲ್ಲೆಯಲ್ಲಿ ದಿನಕ್ಕೆ 50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಗ್ರಾಮಪಂಚಾಯಿತ್ ಗಳನ್ನು

ಸೀಲ್ ಡೌನ್ ಇದ್ದರೂ ಸುಬ್ರಹ್ಮಣ್ಯಕ್ಕೆ ಭಕ್ತರ ದಂಡು | ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿರುವ ಪೊಲೀಸರು Read More »

ಮಂಗಳೂರು: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಮರವೂರು ಸೇತುವೆ ಮಂಗಳವಾರ ಮುಂಜಾನೆ ಕುಸಿತಗೊಂಡಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಬಜಪೆಯಿಂದ ಮಂಗಳೂರು ಕಡೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಬಿರುಕು ತುಂಬಾ ಆಳ ಮತ್ತು ಅಗಲವಾಗಿದ್ದು, ಯಾವುದೇ ಸಮಯದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯಿದೆ. ಗುರುಪುರ ನದಿಯಲ್ಲಿರುವ ಸೇತುವೆಯ ಕೆಳಗೆ ನಡೆಯುತ್ತಿರುವ ಮರಳು ಗಣಿಗಾರಿಕೆಯು ಬಿರುಕಿಗೆ

ಮಂಗಳೂರು: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತ Read More »

ಕರಾವಳಿ : ಜೊತೆಯಾಗಿ‌ ಸಾವಿನ ಕದ ತಟ್ಟಿದ ಸಹೋದರರು

ಕಾರ್ಕಳ:  ಸಹೋದರರಿಬ್ಬರು ಒಂದೇ ದಿನದಲ್ಲಿ ಮೃತ ಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ. ಸಾಣೂರು ಚಿಕ್ಕಬೆಟ್ಟು ನಿವಾಸಿ ಗಣೇಶ್ ರಾವ್ (60) ಸಂಜೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮ್ರತಪಟ್ಟರೇ, ಸಹೋದರ ಸಾಣೂರು ನಿವಾಸಿ ಮಿಯಾರು ಗುಂಡಾಜೆ ಬಳಿಯ ರಾಜಾರಾಮ. ರಾವ್ (55) ಜೂ.14 ರಂದು ಬೆಳಗ್ಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಮೃತ ಪಟ್ಟಿದ್ದಾರೆ. ರಾಜರಾಮ್ ರಾವ್ ಅವರು ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಮಣಿಪಾಲ ಇನ್ನಿತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಂತಿಮವಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ

ಕರಾವಳಿ : ಜೊತೆಯಾಗಿ‌ ಸಾವಿನ ಕದ ತಟ್ಟಿದ ಸಹೋದರರು Read More »

ಮಂಗಳೂರಿನಲ್ಲಿ ಒಮಾನ್ ರಾಷ್ಟದ ಪ್ರಜೆ ಪೊಲೀಸ್ ವಶಕ್ಕೆ | ಲಾಡ್ಜ್ ಗಳಿಗೆ ಇನ್ನುಮಂದೆ ಅನಿಯಮಿತ ದಾಳಿ : ಕಮಿಷನರ್

ಮಂಗಳೂರು: ಲಾಡ್ಜ್ ಒಂದರಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಒಮಾನ್ ರಾಷ್ಟ್ರದ ಪ್ರಜೆ ಮತ್ತು ಹಿಮಾಚಲ ಪ್ರದೇಶದ ವ್ಯಕ್ತಿಯನ್ನು ಮಂಗಳೂರು ನಗರದ ಪೊಲೀಸರು ಇಂದು ಬಂಧಿಸಿದ್ದಾರ ನಗರದ ಲಾಡ್ಜ್ ಒಂದರಲ್ಲಿ ಒಮಾನ್ ರಾಷ್ಟ್ರದ ಪ್ರಜೆ ಅಹ್ಮದ್ ಮತ್ತು ಹಿಮಾಚಲ ಪ್ರದೇಶದ ನಿವಾಸಿ ರಾಮ್ ಎಂಬಾತ ಸೆರೆಸಿಕ್ಕಿರುವ ಆರೋಪಿಗಳು. ಒಮಾನ್ ಪ್ರಜೆ ಅಹ್ಮದ್ ಆರು ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ. ಆದರೆ, ಅನಾರೋಗ್ಯಕ್ಕೀಡಾಗಿದ್ದ ಅಹ್ಮದ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಆನಂತರ ಚಿಕಿತ್ಸೆ ಪಡೆದು ಹೊರಬಂದಿದ್ದ. ಈ ನಡುವೆ

ಮಂಗಳೂರಿನಲ್ಲಿ ಒಮಾನ್ ರಾಷ್ಟದ ಪ್ರಜೆ ಪೊಲೀಸ್ ವಶಕ್ಕೆ | ಲಾಡ್ಜ್ ಗಳಿಗೆ ಇನ್ನುಮಂದೆ ಅನಿಯಮಿತ ದಾಳಿ : ಕಮಿಷನರ್ Read More »

ಸುಳ್ಯ : ಕಾರು-ರಿಕ್ಷಾ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ

ಸುಳ್ಯ: ಕಾರು ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಅಡ್ಕಾರು ಸಮೀಪದ ವಿನೋಬನಗರ ಎಂಬಲ್ಲಿ ನಡೆದಿದೆ. ಇಂದು ಸಂಜೆ ಸುಳ್ಯದಿಂದ ಪುತ್ತೂರು ಕಡೆ ತೆರಳುತ್ತಿದ್ದ ರಿಕ್ಷಾ ಮತ್ತು ಪುತ್ತೂರು ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ಟೂರಿಸ್ಟ್ ಕಾರು ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು ಚಾಲಕ ಗಂಭೀರ ಗಾಯಕೊಂಡಿದ್ದಾನೆ. ತಕ್ಷಣ ಗಾಯಾಳು ಆಟೋ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಳ್ಯ : ಕಾರು-ರಿಕ್ಷಾ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ Read More »