ಕರಾವಳಿ

ಮಂಗಳೂರು: ಅಡಿಕೆ ಜಿಎಸ್ಟಿ ದರ ಇಳಿಕೆಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ

ಸಮಗ್ರ ನ್ಯೂಸ್: ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿ ದರವನ್ನು ಶೇ 5ರಿಂದ ಶೇ 2ಕ್ಕೆ ಇಳಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ಕುಮಾರ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಅವರು, ‘ಸಹಕಾರ ಸಂಸ್ಥೆಗಳು ಶೇ 100ರಷ್ಟು ತೆರಿಗೆಯನ್ನು ಪಾವತಿಸುತ್ತವೆ. ಇಡೀ ಅಡಿಕೆ ಮಾರುಕಟ್ಟೆಯಲ್ಲಿ ನಮ್ಮ ಪಾಲು ಶೇ15ರಷ್ಟು ಇರುವುದರಿಂದ ಸಹಕಾರಿ ಸಂಘಗಳು ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಎಸ್‌ಟಿ ಇಳಿಕೆ ಮಾಡಬೇಕು’ ಎಂದು ವಿನಂತಿಸಿದರು. ಬಾಕಿ

ಮಂಗಳೂರು: ಅಡಿಕೆ ಜಿಎಸ್ಟಿ ದರ ಇಳಿಕೆಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ Read More »

ಉಡುಪಿ: ಇನ್ನೂ ತೆರವಾಗದ ಸಂತೋಷ್ ಪಾಟೀಲ್ ಶವ| ಈಶ್ವರಪ್ಪ ಬಂಧನವಾಗದೆ ಹೆಣ ಎತ್ತಲ್ಲ ಎಂದು ಕುಟುಂಬದವರ ಪಟ್ಟು

ಸಮಗ್ರ ನ್ಯೂಸ್: ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಮೃತದೇಹ ​​ ಉಡುಪಿ ಶಾಂಭವಿ ಲಾಡ್ಜ್​​ ರೂಂನಲ್ಲೇ ಇದ್ದು, ಬೆಳಗ್ಗೆ 9 ಗಂಟೆ ನಂತರ ತೆರವು ಸಾಧ್ಯತೆ ಆಗಲಿದೆ. ಈಶ್ವರಪ್ಪ ಅರೆಸ್ಟ್ ಆಗದೇ ಅಂತ್ಯ ಸಂಸ್ಕಾರ ಮಾಡಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಕುಟುಂಬ ಸದಸ್ಯರ ಮುಂದೆ ಪಂಚನಾಮೆ, ಪಂಚನಾಮೆ ಮುಗಿದ ಮೇಲೆ ಮೃತ ದೇಹ ಹೊರಕ್ಕೆ ಕೊಡಲಾಗುತ್ತದೆ. ಸದ್ಯ ಕೊಠಡಿ ಸಂಖ್ಯೆ 207ರಲ್ಲೇ ಮೃತದೇಹ ಇದೆ. ಕುಟುಂಬ ಸದಸ್ಯರ ಸಮ್ಮುಖದಲ್ಲೇ ಮೃತದೇಹ ಹೊರಕ್ಕೆ ತರಲಾಗುತ್ತದೆ. ಮೃತದೇಹ

ಉಡುಪಿ: ಇನ್ನೂ ತೆರವಾಗದ ಸಂತೋಷ್ ಪಾಟೀಲ್ ಶವ| ಈಶ್ವರಪ್ಪ ಬಂಧನವಾಗದೆ ಹೆಣ ಎತ್ತಲ್ಲ ಎಂದು ಕುಟುಂಬದವರ ಪಟ್ಟು Read More »

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷಗಾನ ರಂಗದ ತೆಂಕುತಿಟ್ಟಿನ ಅಗ್ರಗಣ್ಯ ಬಲಿಪ ಪರಂಪರೆಯ ಕೊಂಡಿಯೊಂದು ಕಳಚಿ ಹೋಗಿದ್ದು, ಭಾಗವತಿಕೆಯಲ್ಲಿ ಹೆಸರಾಗಿದ್ದ ಬಲಿಪ ಪ್ರಸಾದ ಭಾಗವತರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತನ್ನ ಪರಂಪರೆಯ ವಿಶಿಷ್ಟ ಕಂಚಿನ ಕಂಠದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಪ್ರಸಾದ್ ಅವರು ತಂದೆ ಖ್ಯಾತ

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ Read More »

ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ನಾಲ್ಕು ಮಂದಿ ಜಖಂ

ಸಮಗ್ರ ನ್ಯೂಸ್: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸುಳ್ಯದ ಹಳೆಗೇಟು ಬೆಟ್ಟಂಪಾಡಿ ಮೂಲದ ನಾಲ್ವರು ಗಾಯಗೊಂಡ ಘಟನೆ ಇಂದು ವರದಿಯಾಗಿದೆ. ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಎಂಬುವವರು ತಮ್ಮ ಸಂಬಂಧಿಕರನ್ನು ವಿದೇಶಕ್ಕೆ ಬೀಳ್ಕೊಡಲು ಕಣ್ಣೂರು ಏರ್ಪೋರ್ಟಿಗೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿ ಚಾಲಕ ಶರೀಫ್ ಹಾಗೂ ಬಶೀರ್, ಅವರ ಪತ್ನಿ, ಮತ್ತೋರ್ವ ಕುಟುಂಬದ ಮಹಿಳೆ, ಹಾಗೂ ಏಳು ವರ್ಷದ ಮಗುವೊಂದು ಇದ್ದರು.ಕಾರು ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ

ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ನಾಲ್ಕು ಮಂದಿ ಜಖಂ Read More »

ಮಂಗಳೂರು:‌ ಚಿಕನ್ ಸೆಂಟರ್ ಸಿಬ್ಬಂದಿ ಮೇಲೆ ಹತ್ಯೆ ಯತ್ನ| ಇಬ್ಬರು ರೌಡಿಶೀಟರ್ ಗಳು ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರು ನಗರದ ವೆಲೆನ್ಶಿಯಾ ಜಂಕ್ಷನ್ ನಲ್ಲಿ ಕೋಳಿ ಮಾಂಸ ಮಾರಾಟದ ಅಂಗಡಿಯ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ರೌಡಿಶೀಟರ್ ಗಳನ್ನು ಮಂಗಳೂರು ದಕ್ಷಿಣ ಪೊಲೀಸರು ರವಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೌಡಿ ಶೀಟರ್ ಗಳಾದ ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ಪ್ರೀತಮ್ ಪೂಜಾರಿ (27 ವ) ಮತ್ತು ಎಕ್ಕೂರು ನಿವಾಸಿ ಧೀರು ಯಾನೆ ಧೀರಜ್ ಕುಮಾರ್ ( 25 ವ) ರನ್ನು ಬಂಧಿಸಲಾಗಿದೆ. ಹಲ್ಲೆಕೋರರು ಏ.10ರಂದು ಸಂಜೆ 6.30ರ ಸಮಯಕ್ಕೆ

ಮಂಗಳೂರು:‌ ಚಿಕನ್ ಸೆಂಟರ್ ಸಿಬ್ಬಂದಿ ಮೇಲೆ ಹತ್ಯೆ ಯತ್ನ| ಇಬ್ಬರು ರೌಡಿಶೀಟರ್ ಗಳು ಅರೆಸ್ಟ್ Read More »

ಮಂಗಳೂರು: ಇಬ್ಬರು ಯುವತಿಯರು ಸಮುದ್ರ ಪಾಲು

ಸಮಗ್ರ ನ್ಯೂಸ್: ಮಂಗಳೂರಿನ ಸುರತ್ಕಲ್ ನ NITK ಬೀಚಿನ ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು ಕಂಡಿದ್ದಾರೆ. ಮಂಗಳೂರು ಮೂಲದ ತ್ರಿಷಾ(17), ವೈಷ್ಣವಿ(18) ಮೃತಪಟ್ಟವರು ಎಂದು ಹೇಳಲಾಗಿದೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕುಟುಂಬ ಸದಸ್ಯರೊಂದಿಗೆ ಪಿಂಡ ಪ್ರದಾನ ಮಾಡಲು ಬೀಚ್ ಗೆ ಬಂದಿದ್ದ ಸಹೋದರಿಯರು ಸಮುದ್ರದಲೆಗಳ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದಾರೆ. ಮೂವರು ಕೊಚ್ಚಿ ಹೋಗಿದ್ದು, ಸ್ಥಳೀಯ ಈಜುಗಾರರು ಹಾಗೂ ಹೋಂಗಾರ್ಡ್ ಗಳಿಂದ ರಕ್ಷಣೆ ಮಾಡಲಾಗಿದೆ. ಅವರನ್ನು ಸಮುದ್ರದಿಂದ ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ

ಮಂಗಳೂರು: ಇಬ್ಬರು ಯುವತಿಯರು ಸಮುದ್ರ ಪಾಲು Read More »

ದ.ಕ ದಲ್ಲಿ ರಾಕಿಭಾಯ್ ಟೆಂಪಲ್ ರನ್| ಕೆಜಿಎಫ್2 ಯಶಸ್ಸಿಗೆ ಪ್ರಾರ್ಥನೆ|

ಸಮಗ್ರ ನ್ಯೂಸ್: ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು ಬಳಿಕ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ಏ.14ರಂದು ಬಿಡುಗಡೆಯಾಗಲಿರುವ ಕೆ.ಜಿ.ಎಫ್.2 ಚಿತ್ರದ ಹಿನ್ನೆಲೆ‌ ಮಂಜುನಾಥ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ಯಶ್ ಜತೆ ಕೆ.ಜಿ.ಎಫ್.2 ನಿರ್ಮಾಪಕ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ಇದ್ದರು.ಇತ್ತೀಚೆಗಷ್ಟೇ

ದ.ಕ ದಲ್ಲಿ ರಾಕಿಭಾಯ್ ಟೆಂಪಲ್ ರನ್| ಕೆಜಿಎಫ್2 ಯಶಸ್ಸಿಗೆ ಪ್ರಾರ್ಥನೆ| Read More »

ಕರಾವಳಿ ಸೇರಿದಂತೆ ರಾಜ್ಯದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಮೈಸೂರು, ಹಾಸನದಲ್ಲಿ ಮಳೆಯ ಆರ್ಭಟ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರಡು ದಿನ ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕರಾವಳಿ ಸೇರಿದಂತೆ ರಾಜ್ಯದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ Read More »

ಕೇರ್ಪಳ ರುದ್ರಭೂಮಿಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಫಲಕ ಬಿಡುಗಡೆ

ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ ದಿವ್ಯ ಸಂದೇಶಗಳ ಫಲಕ ಬಿಡುಗಡೆ ಕಾರ್ಯಕ್ರಮವು ಕೇರ್ಪಳದ ರುದ್ರಭೂಮಿಯಲ್ಲಿ ಜರುಗಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಉಮಾದೇವಿ ಅವರು ವಹಿಸಿದ್ದರು . ಫಲಕ ಉದ್ಘಾಟನೆಯನ್ನು ನಗರ ಪಂಚಾಯತ್ ಸದಸ್ಯರಾದ ಸುಧಾಕರ್ ಕೇರ್ಪಳ ರವರು ಮಾಡಿದರು . ಮಂಜುನಾಥ ಮೇಸ್ತ್ರಿ ಮತ್ತು ಹಿರಿಯ ನಾಗರಿಕರಾದ ಗೋಪಾಲ್ ಕೇರ್ಪಳ ರವರು ಮುಖ್ಯ ಅತಿಥಿಗಳಾಗಿದ್ದರು . ರಂಜಿತ್ ಮತ್ತು ರಾಜಶೇಖರ್ ರವರು ಉಪಸ್ಥಿತರಿದ್ದರು . ಸುಳ್ಯದ ಜ್ಯೋತಿಷಿ ಮತ್ತು

ಕೇರ್ಪಳ ರುದ್ರಭೂಮಿಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಫಲಕ ಬಿಡುಗಡೆ Read More »

ಸುಳ್ಯ: ಏಳು ವರ್ಷಗಳ ಹಿಂದಿನ ಸಂಪಾಜೆ ಅಪಘಾತ ಪ್ರಕರಣ ತೀರ್ಪು ಪ್ರಕಟ| ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

ಸಮಗ್ರ ನ್ಯೂಸ್: ಏಳು ವರ್ಷಗಳ ಹಿಂದೆ ಸಂಪಾಜೆಯ ಕಡೆಪಾಲ ಎಂಬಲ್ಲಿ ಆಲ್ಟೋ ಕಾರು -ಟಿಪ್ಪರ್ ನಡುವಿನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಪ್ರಕರಣದ ಆರೋಪಿ, ಟಿಪ್ಪರ್ ಚಾಲಕ ಬೆಳ್ತಂಗಡಿ ಮೂಲದ ಇಸ್ಮಾಯಿಲ್ ಹಾಗೂ ಟಿಪ್ಪರ್ ಮಾಲಕ ಮಹಮ್ಮದ್ ರಫೀಕ್ ಎಂಬವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ದಂಡ ವಿಧಿಸಲಾಗಿದೆ. ಎ. 8ರಂದು ಸುಳ್ಯದ

ಸುಳ್ಯ: ಏಳು ವರ್ಷಗಳ ಹಿಂದಿನ ಸಂಪಾಜೆ ಅಪಘಾತ ಪ್ರಕರಣ ತೀರ್ಪು ಪ್ರಕಟ| ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್ Read More »