ಕರಾವಳಿ

ಮತ್ತೆ ಸುದ್ದಿಯಾಗುತ್ತಿರುವ ಚೆಂಬು ಗ್ರಾಮ| ಈ ಬಾರಿ ಮತ್ತೆ ಭೂಮಿಯೊಳಗೆ ನಿಗೂಢ ಶಬ್ದ

ಸಮಗ್ರ ನ್ಯೂಸ್: ಭೂಕಂಪನದಿಂದ ದಿಗಿಲುಗೊಂಡಿದ್ದ ಗಡಿಗ್ರಾಮ ಚೆಂಬುವಿನಲ್ಲಿ ಮತ್ತೆ ನಿಗೂಢ ಸದ್ದು ಪುನರಾವರ್ತನೆಗೊಂಡಿದೆ. ಇಂದು ಮುಂಜಾನೆ 4.40ರ ಸುಮಾರಿಗೆ ಭೂಮಿಯಾಳದಿಂದ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕೊಡಗು ಭೂಗರ್ಭ ಶಾಸ್ತ್ರಜ್ಞ ಅನನ್ಯಾ ವಾಸುದೇವ್ ಪ್ರತಿಕ್ರಿಯೆ ನೀಡಿದ್ದು, ಭೂಕಂಪವಾದ ಭೂಮಿಯೊಳಗೆ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ. ಇದರಿಂದ ಆಗಾಗ್ಗೆ ಶಬ್ದ, ಕಂಪನಗಳು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಜನರು ಆತಂಕ ಪಡಬೇಕಿಲ್ಲ. ಇದರಿಂದ ಯಾವುದೇ ಅನಾಹುತ ಸಂಭವಿಸಲಾರದು ಎಂದಿದ್ದಾರೆ. ಚೆಂಬು ಗ್ರಾಮದ ಜನತೆಯೂ ಈಗೀಗ ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತಿದ್ದು,

ಮತ್ತೆ ಸುದ್ದಿಯಾಗುತ್ತಿರುವ ಚೆಂಬು ಗ್ರಾಮ| ಈ ಬಾರಿ ಮತ್ತೆ ಭೂಮಿಯೊಳಗೆ ನಿಗೂಢ ಶಬ್ದ Read More »

ಹಳ್ಳದಲ್ಲಿ ನಿಂತು ಸೇತುವೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪದ್ಮಶ್ರೀ ತುಳಸಿ ಗೌಡ| ಖಾಸಗಿ ಜಾಗದ ಮಾಲೀಕರು ಒಪ್ಪಬೇಕು: ಜಿಲ್ಲಾಡಳಿತ

ಸಮಗ್ರ ನ್ಯೂಸ್: ತಮ್ಮ ಮನೆಯ ಮುಂದೆ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ಪ್ರೇಮಿ ತುಳಸಿ ಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ತುಳಸಿ ಗೌಡರವರ ಮನೆಯಿದ್ದು ಅದರ ಮುಂದೆ ಸಣ್ಣದೊಂದು ಹಳ್ಳ ಹರಿಯುತ್ತಿದೆ. ಈ ಹಳ್ಳವನ್ನು ಮಳೆಗಾಲದಲ್ಲಿ ದಾಟಲು ಆಗುವುದಿಲ್ಲ. ಹಾಗಾಗಿ ಹರಿಯುವ ಹಳ್ಳದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ನಿಂತು ಸೇತುವೆ ನಿರ್ಮಿಸಿ ಕೊಡುವಂತೆ ವೀಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಪ್ರತಿ

ಹಳ್ಳದಲ್ಲಿ ನಿಂತು ಸೇತುವೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪದ್ಮಶ್ರೀ ತುಳಸಿ ಗೌಡ| ಖಾಸಗಿ ಜಾಗದ ಮಾಲೀಕರು ಒಪ್ಪಬೇಕು: ಜಿಲ್ಲಾಡಳಿತ Read More »

ಪಿಲಿಕುಳ: ಮೊಟ್ಟೆಯೊಡೆದು ಹೊರಬಂತು 38 ಕಾಳಿಂಗ ಸರ್ಪದ ಮರಿಗಳು

ಸಮಗ್ರ ನ್ಯೂಸ್: ಮಂಗಳೂರಿನ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ. ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದಿದ್ದ ಎಂಟು ವರ್ಷದ ನಾಗಮಣಿ ಮೊಟ್ಟೆ ಇಟ್ಟಿತ್ತು. ಮೊಟ್ಟೆಗಳಿಗೆ ಕೃತಕ ಕಾವು ನೀಡಿದ 76 ದಿನಗಳ ನಂತರ ಮರಿಗಳು ಹೊರ ಬಂದಿವೆ. ಈ ನಾಗಮಣಿ ಮತ್ತು ಪಿಲಿಕುಳದಲ್ಲಿ ಹುಟ್ಟಿದ್ದ 10 ವರ್ಷದ ನಾಗೇಂದ್ರನ ಸಂಯೋಗದಲ್ಲಿ ಈ ಮರಿಗಳು ಜನಿಸಿವೆ ಎಂದು ಜೈವಿಕ ಉದ್ಯಾನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಕೇಂದ್ರ ಮೃಗಾಲಯ

ಪಿಲಿಕುಳ: ಮೊಟ್ಟೆಯೊಡೆದು ಹೊರಬಂತು 38 ಕಾಳಿಂಗ ಸರ್ಪದ ಮರಿಗಳು Read More »

26 ಸಾವಿರ ಸಂಬಳ; 100 ಖಾಲಿ ಹುದ್ದೆ, ಜು.12ಕ್ಕೆ ನೇರ ಸಂದರ್ಶನ| ಮಂಗಳೂರಿನ ಯುವಜನತೆ ಅಪ್ಲೈ‌ಮಾಡಿ…

ಸಮಗ್ರ ನ್ಯೂಸ್: ಅಮೆಜಾನ್ ಕಂಪನಿಯಲ್ಲಿ ತಿಂಗಳಿಗೆ 26 ಸಾವಿರ ವೇತನವುಳ್ಳ 100 ಡೆಲಿವರಿ ಬಾಯ್ ಹುದ್ದೆಗಳಿಗೆ ಜು.12ರ ಮಂಗಳವಾರ ಮಂಗಳೂರಿನ ಉರ್ವಾ ಮಾರುಕಟ್ಟೆಯ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಯಾವುದೇ ವಿದ್ಯಾರ್ಹತೆಯುಳ್ಳ ಆಸಕ್ತ ಉದ್ಯೋಗಾಕಾಂಕ್ಷಿಗಳು ದ್ವಿಚಕ್ರ ವಾಹನ ಪರವಾನಿಗೆ, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಂಡ್ರಾಯಿಡ್ ಸ್ಮಾರ್ಟ್‍ಫೋನ್ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಮಾಹಿತಿಗಾಗಿ ಕಚೇರಿ ದೂ.ಸಂಖ್ಯೆ:0824-2453222 ಅನ್ನು ಸಂಪರ್ಕಿಸುವಂತೆ ಜಿಲ್ಲಾ

26 ಸಾವಿರ ಸಂಬಳ; 100 ಖಾಲಿ ಹುದ್ದೆ, ಜು.12ಕ್ಕೆ ನೇರ ಸಂದರ್ಶನ| ಮಂಗಳೂರಿನ ಯುವಜನತೆ ಅಪ್ಲೈ‌ಮಾಡಿ… Read More »

ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಜು.12ರವರೆಗೂ ಮುಂದುವರಿಯಲಿದೆ ವರ್ಷಧಾರೆ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಸುರಿಯುತ್ತಿದ್ದು, ಜು.10ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜು.7 ರಿಂದ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಆದರೇ ಇದೀಗ ಜು.10 ರವರೆಗೆ ಮುಂದುವರಿಯಲಿದೆ. ಈ ವೇಳೆ ಈ ಮೂರು ಜಿಲ್ಲೆಯಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜು.11,

ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಜು.12ರವರೆಗೂ ಮುಂದುವರಿಯಲಿದೆ ವರ್ಷಧಾರೆ Read More »

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ

ಸಮಗ್ರ ನ್ಯೂಸ್: ಭಾರಿ ಮಳೆಯ ನಡುವೆ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ವಾರದಿಂದ 10 ರೂಪಾಯಿಯಷ್ಟು ಏರಿಕೆ ಕಾಣಲಿದೆ. ಹಳೆ ಅಡಿಕೆ 550ರೂ ಆಸುಪಾಸಿನಲ್ಲಿ ಹಾಗೂ ಹೊಸ ಅಡಿಕೆ 445 ರೂ ಆಸುಪಾಸಿಗೆ ಏರಿಕೆ ಸಾಧ್ಯತೆ ಇದೆ. ಅಡಿಕೆ ಧಾರಣೆಯು ಕಳೆದ ಕೆಲವು ದಿನಗಳಿಂದ ಸ್ಥಿರತೆಯಲ್ಲಿತ್ತು. ಕ್ಯಾಂಪ್ಕೋ ಧಾರಣೆಯು ಹೊಸ ಅಡಿಕೆಗೆ 450 ರೂ ಗರಿಷ್ಠ ಧಾರಣೆ ಇದ್ದು 430 ರೂ. ಗೆ ಖರೀದಿ ನಡೆಯುತ್ತಿತ್ತು. ಹಳೆಯ ಅಡಿಕೆಧಾರಣೆಯು 550 ರೂ. ನಿಗದಿಯಾದರೂ 520

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ Read More »

ಮಂಗಳೂರು: ಧಾರಾಕಾರ ಮಳೆ ಹಿನ್ನೆಲೆ ವಾರಪೂರ್ತಿ ರಜೆ| ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ -ಡಿಸಿ ಸೂಚನೆ

ಸಮಗ್ರ‌ನ್ಯೂಸ್: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿರುವ ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮಂಗಳವಾರದಿಂದ ವಿಪರೀತ ಮಳೆ ಸುರಿಯುತ್ತಿದ್ದು, ನಿರಂತರವಾಗಿ ರೆಡ್ ಅಲರ್ಟ್ ಘೋಷಣೆಯಾಗುತ್ತಿದೆ. ಅಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಜಿಲ್ಲೆಯ ಕೆಲವೆಡೆ ಭೂಕುಸಿತದಂತಹ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ

ಮಂಗಳೂರು: ಧಾರಾಕಾರ ಮಳೆ ಹಿನ್ನೆಲೆ ವಾರಪೂರ್ತಿ ರಜೆ| ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ -ಡಿಸಿ ಸೂಚನೆ Read More »

ಅವೈಜ್ಞಾನಿಕ ಕಾಮಗಾರಿ; ಕಲ್ಲಡ್ಕದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್| ಸಾರ್ವಜನಿಕರಿಂದ ಹಿಡಿಶಾಪ

ಸಮಗ್ರ ನ್ಯೂಸ್: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಇಂದು ಬೆಳಿಗ್ಗೆಯಿಂದ ಸಂಚಾರಕ್ಕೆ ತಡೆ ಉಂಟಾಗಿದೆ. ಬೆಳಿಗ್ಗೆ ಸುಮಾರು ‌8 ಗಂಟೆಯ ವೇಳೆ ಆರಂಭವಾದ ಸಂಚಾರಕ್ಕೆ ಅಡಚಣೆ 10.30 ಗಂಟೆ ವರೆಗೂ ಮುಗಿದಿಲ್ಲ. ಕಲ್ಲಡ್ಕ ಅಮ್ಟೂರು ಕ್ರಾಸ್ ನ ಬಳಿ ಹೆದ್ದಾರಿಯಲ್ಲಿ ಬೃಹತ್ ಹೊಂಡ ವೊಂದು ನಿರ್ಮಾಣವಾದ ಹಿನ್ನೆಲೆಯಲ್ಲಿ ಪ್ರಾರಂಭವಾದ ಬ್ಲಾಕ್ ನಿರಂತರವಾಗಿ ಮುಂದುವರಿದಿದೆ.ಬೆಳಿಗ್ಗೆ ಹೊತ್ತು ಕೆಲಸಕ್ಕೆ ಹೋಗುವವರ ಜೊತೆ ಅಂಬ್ಯುಲೆನ್ಸ್ ವಾಹನಗಳು ಕೂಡ ತಾಸು ಗಟ್ಟಲೆ ಕ್ಯೂ ನಲ್ಲಿ ನಿಂತು ಪರದಾಡಬೇಕಾಯಿತು. ರಾಷ್ಟ್ರೀಯ ಹೆದ್ದಾರಿ

ಅವೈಜ್ಞಾನಿಕ ಕಾಮಗಾರಿ; ಕಲ್ಲಡ್ಕದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್| ಸಾರ್ವಜನಿಕರಿಂದ ಹಿಡಿಶಾಪ Read More »

ದ.ಕ‌ ದಲ್ಲಿ ಮುಂದುವರಿದ ವರುಣಾರ್ಭಟ| ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.8,9 ರಂದು ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 8, 9ರಂದು‌ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೇತ್ರಾವತಿ, ಕುಮಾರಧಾರಾ, ಗುರುಪುರ, ಗುಂಡ್ಯ‌ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ದ.ಕ‌ ದಲ್ಲಿ ಮುಂದುವರಿದ ವರುಣಾರ್ಭಟ| ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.8,9 ರಂದು ರಜೆ ಘೋಷಣೆ Read More »

ಕಾನ್ಸ್ ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಭವಿತ್ ರೈ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ

ಸಮಗ್ರ ನ್ಯೂಸ್ : ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಭವಿತ್ ರೈ ಪಾಲ್ತಾಡಿ ಅವರು ಹೆಡ್ ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿದ್ದಾರೆ. ಕಳ್ಳತನ, ದರೋಡೆ ಹಾಗೂ ಇನ್ನಿತರ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಇವರು, ಕಳೆದ ನಾಲ್ಕೂವರೆ ವರ್ಷಗಳಿಂದ ಕಡಬ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಈ ಮೊದಲು ಐದು ವರ್ಷಗಳ ಕಾಲ ವಿಟ್ಲ ಠಾಣೆಯಲ್ಲಿ ಕೂಡಾ ಕಾರ್ಯ ನಿರ್ವಹಿಸಿದ್ದರು.

ಕಾನ್ಸ್ ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಭವಿತ್ ರೈ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ Read More »