ಕರಾವಳಿ

ದ.ಕ ದಲ್ಲಿ ಮತ್ತೆರಡು ದಿನ ನಿರ್ಬಂಧ ವಿಸ್ತರಣೆ;

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಎರಡು ದಿನಗಳ ಕಾಲ ವಿಸ್ತರಿಸಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಜುಲೈ 29 ರಂದು ಫಾಝಿಲ್ ಹತ್ಯೆಯ ಹಿನ್ನೆಲೆಯಲ್ಲಿ, ಆಗಸ್ಟ್ 1 ರವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ನಗರ ಪೊಲೀಸ್ ಅಧಿಕಾರಿಗಳ ಮನವಿಗೆ ಅನುಗುಣವಾಗಿ ಈಗ ಆಗಸ್ಟ್ 3 ರವರೆಗೆ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು

ದ.ಕ ದಲ್ಲಿ ಮತ್ತೆರಡು ದಿನ ನಿರ್ಬಂಧ ವಿಸ್ತರಣೆ; Read More »

SDPI ಮತ್ತು PFI ಬಿಜೆಪಿಯ ಬಿ ಟೀಮ್, ಕಾಂಗ್ರೆಸ್ ಬ್ಯಾನ್ ಮಾಡಿ ಅಂದ್ರೂ ಯಾಕೆ ಮಾಡಲ್ಲ? – ಬಿಜೆಪಿ ವಿರುದ್ಧ ತಿರುಗಿ ಬಿದ್ದ ಮುತಾಲಿಕ್

ಸಮಗ್ರ ನ್ಯೂಸ್: ‘ಎಸ್ ಡಿಪಿಐ, ಪಿಎಫ್ ಐ ಬಿಜೆಪಿಯ ‘ಬಿ’ ಟೀಮ್, ಕಾಂಗ್ರೆಸ್ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದಾಗ ಎಸ್ ಡಿಪಿಐ, ಪಿಎಫ್‌ಐ ಉಗ್ರ ಸಂಘಟನೆ ಜೊತೆ ಕೈಜೋಡಿಸಿದೆ. ಅದನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ, ಈಗ ಕಾಂಗ್ರೆಸ್ ನವರು ಬ್ಯಾನ್ ಮಾಡುವಂತೆ

SDPI ಮತ್ತು PFI ಬಿಜೆಪಿಯ ಬಿ ಟೀಮ್, ಕಾಂಗ್ರೆಸ್ ಬ್ಯಾನ್ ಮಾಡಿ ಅಂದ್ರೂ ಯಾಕೆ ಮಾಡಲ್ಲ? – ಬಿಜೆಪಿ ವಿರುದ್ಧ ತಿರುಗಿ ಬಿದ್ದ ಮುತಾಲಿಕ್ Read More »

ಮಂಗಳೂರು: ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ರೆ ಬೀಳುತ್ತೆ ಕೇಸ್ – ಕಮಿಷನರ್ ಶಶಿಕುಮಾರ್ ಎಚ್ಚರಿಕೆ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ನಿಗಾ ವಹಿಸಲಾಗಿದ್ದು, ಈಗಾಗಲೇ 5 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಪ್ರಚೋದನಕಾರಿ ಹೇಳಿಕೆ ನೀಡುವುದು, ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವವ ಮೇಲೆ ನಿಗಾ ವಹಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಗುಂಪಿನಲ್ಲಿ ಗೋವಿಂದ

ಮಂಗಳೂರು: ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ರೆ ಬೀಳುತ್ತೆ ಕೇಸ್ – ಕಮಿಷನರ್ ಶಶಿಕುಮಾರ್ ಎಚ್ಚರಿಕೆ Read More »

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ

ಸುಳ್ಯ : ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕ್ರೀಡಾ ಮತ್ತು ಕಲಾಪೋಷಕರಾದ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರವೀಣ್ ಹಂತಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಎನ್ ಕೌಂಟರ್ ಮಾಡಬೇಕು, ಅದಾಗಲೇ ‌ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ Read More »

“ಬೆಳ್ಳಾರೆ ಪೊಲೀಸ್ ಪೇದೆ ಬಾಲಕೃಷ್ಣ ಅಮಾನತುಗೊಳಿಸಿ ತನಿಖೆ ನಡೆಸಿ” – ಪುನೀತ್ ಕೆರೆಹಳ್ಳಿ ಮನವಿ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಿಂದ ವರ್ಗಾವಣೆಗೊಂಡಿರುವ ಹೆಡ್ ಕಾನ್ಸ್‌ಟೇಬಲ್ ಬಾಲಕೃಷ್ಣರನ್ನು ಅಮಾನತುಗೊಳಿಸಿ ತನಿಖೆ ನಡೆಸಲು‌ ಪುನಿತ್ ಕೆರೆಹಳ್ಳಿ ಮನವಿ ಮಾಡಿದ್ದಾರೆ. ಇಂದು ಬೆಳ್ಳಾರೆಯಲ್ಲಿ ಠಾಣೆಗೆ ಧಾವಿಸಿದ ಅವರು ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಜೊತೆಗೆ ಠಾಣಾಧಿಕಾರಿ ಸುಹಾಸ್ ಆರ್ ರವರಿಗೆ ಮನವಿ ಸಲ್ಲಿಸಿದರು. ಬಾಲಕೃಷ್ಣರವರು ಪ್ರವೀಣ್ ಹತ್ಯೆ ನಡೆದ ಎರಡೇ ‌ನಿಮಿಷದಲ್ಲಿ‌ ಘಟನಾ ಸ್ಥಳಕ್ಕೆ ಧಾವಿಸಿದ್ದು, ಸರ್ಕಾರಿ ಅಂಬ್ಯುಲೆನ್ಸ್ ಗೆ ಫೋನ್ ಮಾಡುವ ಬದಲು ಕೋಮುಗಲಭೆಯಲ್ಲಿ ಪಾಲ್ಗೊಂಡಿದ್ದ

“ಬೆಳ್ಳಾರೆ ಪೊಲೀಸ್ ಪೇದೆ ಬಾಲಕೃಷ್ಣ ಅಮಾನತುಗೊಳಿಸಿ ತನಿಖೆ ನಡೆಸಿ” – ಪುನೀತ್ ಕೆರೆಹಳ್ಳಿ ಮನವಿ Read More »

ಸುಳ್ಯ: ಗಣಿಗಾರಿಕೆ ನಿಲ್ಲಿಸದಿದ್ದಲ್ಲಿ ಮರ್ಕಂಜ ಗ್ರಾ. ಪಂ ಮುಂಭಾಗ ಉಗ್ರ ಹೋರಾಟ

ಸಮಗ್ರ ನ್ಯೂಸ್: “ಡೆಲ್ಮಾ ಎಂಟರ್‌ಪ್ರೈಸಸ್’’ ಹೆಸರಿನಲ್ಲಿ ಸುಳ್ಯ ತಾಲೂಕಿನ ‌ಮರ್ಕಂಜ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸ್ಥಳೀಯ ದೇವಸ್ಥಾನ, ಶಾಲೆ, ಮತ್ತು ಮನೆಗೆಳ ಕಟ್ಟಡಗಳಿಗೆ ತೊಂದರೆ ಉಂಟಾಗುತ್ತಿರು ಬಗ್ಗೆ 2ನೇ ಭಾರೀ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ” ಡೆಲ್ಮಾ ಎಂಟರ್‌ಪ್ರೈಸಸ್ ” ಹೆಸರಿನ ಅಕ್ರಮ ಕಲ್ಲುಕೋರೆ ಕೆಲಸ ನಡೆಯುತ್ತಿರುವುದು ಈಗಾಗಲೇ ಸುದ್ದಿಯಲ್ಲಿದೆ. ಈ ಕಲ್ಲು ಕೋರೆ ನಡೆಸಲು ಅಸುಪಾಸಿನ ಜನರ ಮತ್ತು ಗ್ರಾಮಸ್ಥರ ಅಕ್ರಮ ಸಹಿಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದಿರುವ

ಸುಳ್ಯ: ಗಣಿಗಾರಿಕೆ ನಿಲ್ಲಿಸದಿದ್ದಲ್ಲಿ ಮರ್ಕಂಜ ಗ್ರಾ. ಪಂ ಮುಂಭಾಗ ಉಗ್ರ ಹೋರಾಟ Read More »

ಸುಳ್ಯ: ಪ್ರವೀಣ್ ನೆಟ್ಟಾರು ಮನೆಗೆ ಡಿ.ವಿ ಸದಾನಂದ ಗೌಡ ಭೇಟಿ|1 ಲಕ್ಷ ರೂ. ಚೆಕ್ ಹಸ್ತಾಂತರ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಜು.30ರಂದು ಭೇಟಿ ನೀಡಿದ್ದಾರೆ. ಈ ವೇಳೆ ಮನೆಯವರಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಆರ್ಥಿಕ ಸಹಾಯಧನದ ಚೆಕ್ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಹಾಗೂ ತಂದೆ-ತಾಯಿಯ ಜೊತೆಗೆ ಮಾತನಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ರೈ ಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್.ರೈ ಕೋಡಿಂಬಾಡಿ, ಸುಳ್ಯ ಮಂಡಲದ ಅಧ್ಯಕ್ಷ

ಸುಳ್ಯ: ಪ್ರವೀಣ್ ನೆಟ್ಟಾರು ಮನೆಗೆ ಡಿ.ವಿ ಸದಾನಂದ ಗೌಡ ಭೇಟಿ|1 ಲಕ್ಷ ರೂ. ಚೆಕ್ ಹಸ್ತಾಂತರ Read More »

ಬಲಿಪುನ ಓಡೆಗ್ ಉಂತ್ ಲೆ – ನಳಿನ್ ಕುಮಾರ್‌ಗೆ ತರಾಟೆಗೈದ‌ ಕಾರ್ಯಕರ್ತರು, ವಿಡಿಯೋ ವೈರಲ್

ಸಮಗ್ರ ನ್ಯೂಸ್: ಪ್ರವೀಣ್ ಹತ್ಯೆಯಾದ ಬಳಿಕ ಮನೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ರಾಜ್ಯಾಧ್ಯಕ್ಷ ನಳಿನ್, ಸಚಿವರು, ಶಾಸಕರು ಭಾಗಿಯಾಗಿದ್ದರು. ಈ ವೇಳೆ ಸಿಎಂ ಸಮ್ಮುಖದಲ್ಲೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಇದ್ದಿದ್ದರಿಂದ ನೀವು ಮೇಲೆ ಬಂದಿದ್ದೀರಿ, ಈಗ ನೀವು ಏನ್ ಮಾಡಿದ್ದೀರಿ? ಓಡುವುದೆಲ್ಲಿಗೆ ನಳಿನ್…? ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಬಲಿಪುನ ಓಡೆಗ್ ಉಂತ್ ಲೆ – ನಳಿನ್ ಕುಮಾರ್‌ಗೆ ತರಾಟೆಗೈದ‌ ಕಾರ್ಯಕರ್ತರು, ವಿಡಿಯೋ ವೈರಲ್ Read More »

ಭಾರಿ ಮಳೆ; ಮತ್ತೆ‌ ಮುಳುಗಿದ ಮಂಗಳೂರು

ಸಮಗ್ರ ನ್ಯೂಸ್: ಶುಕ್ರವಾರ ತಡರಾತ್ರಿಯಿಂದ ಕರಾವಳಿ ಭಾಗದ ಹಲವೆಡೆಗಳಲ್ಲಿ ಮತ್ತೆ ಕುಂಭದ್ರೋಣ ಮಳೆಯಾಗುತ್ತಿದೆ. ಭಾರಿ ಮಳೆಗೆ ಮಂಗಳೂರು ನಗರದ ಹಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಜನರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಗುಡುಗು ಸಹಿತ ಭಾರಿ ಮಳೆಯಿಂದ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮುಂಭಾಗ ಮಳೆ ನೀರು ನಿಂತಿದೆ. ಕದ್ರಿಕಂಬಳ, ಕೊಟ್ಟಾರ ಚೌಕಿ ಸಹಿತ ಹಲವೆಡೆ ಕೃತಕ ನೆರೆ ಸಮಸ್ಯೆ ಉಂಟುಮಾಡಿದೆ. ಪಾಂಡೇಶ್ವರ ಶಿವನಗರದಲ್ಲಿ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ಜನರು

ಭಾರಿ ಮಳೆ; ಮತ್ತೆ‌ ಮುಳುಗಿದ ಮಂಗಳೂರು Read More »

ಸರಣಿ ಹತ್ಯೆ ಹಿನ್ನಲೆ; ಇಂದು ಜಿಲ್ಲಾಧಿಕಾರಿ ‌ನೇತೃತ್ವದಲ್ಲಿ ಶಾಂತಿ ಸಭೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳಿಂದ ಆತಂಕದ ವಾತಾವರಣ ಸೃಷ್ಟಿಯಾಗಿರುವುದರಿಂದ ಇಂದು ಶಾಂತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಡಿಸಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಧರ್ಮದ ಹಾಗೂ ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ ಈ ಶಾಂತಿ ಸಭೆ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಶಾಂತಿ – ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರಿಂದಲೂ ಸಲಹೆ ಸೂಚನೆಗಳನ್ನು ಪಡೆಯಲಾಗುವುದು. ಜಿಲ್ಲಾಡಳಿತದ ಮುಂದಿನ ನಿಯಮ, ಕಾನೂನು

ಸರಣಿ ಹತ್ಯೆ ಹಿನ್ನಲೆ; ಇಂದು ಜಿಲ್ಲಾಧಿಕಾರಿ ‌ನೇತೃತ್ವದಲ್ಲಿ ಶಾಂತಿ ಸಭೆ Read More »