ಕರಾವಳಿ

ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಡಿ.ವಿ ಗೌಡ್ರು| ಇಂದು ಪ್ರವೀಣ್ ಮನೆಗೆ ಭೇಟಿ

ಸಮಗ್ರ ನ್ಯೂಸ್: ಕಾರ್ಯಕರ್ತರ ಆಕ್ರೋಶ ಮತ್ತು ತವರಿನಲ್ಲಿ ಟೀಕೆಗಳು ‌ವ್ಯಕ್ತವಾದ ಬೆನ್ನಲ್ಲೇ‌ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಮನೆಗೆ (ಜು.೩೦)ರಂದು ದೌಡಾಯಿಸುತ್ತಿದ್ದಾರೆ. ಮಧ್ಯಾಹ್ನ ಪ್ರವೀಣ್ ಮನೆಗೆ ತಲುಪುವ ಕುರಿತಂತೆ ತಮ್ಮ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವೀಣ್ ಹತ್ಯೆಗೀಡಾಗಿದ್ದ ವಿಷಯ ಗೊತ್ತಾಗಿದ್ದರೂ ಪ್ರವೀಣ್ ಮನೆಗೆ ಭೇಟಿ ಕೊಡದ ಸದಾನಂದ ಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಡಿ.ವಿ ಗೌಡ್ರು| ಇಂದು ಪ್ರವೀಣ್ ಮನೆಗೆ ಭೇಟಿ Read More »

ಗುಡುಗು ಸಹಿತ ಭಾರೀ ಮಳೆ| ದ.ಕ ಜಿಲ್ಲೆಯ ಈ ಶಾಲೆಗಳಿಗೆ ಇಂದು ರಜೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು, ಉಳ್ಳಾಲ, ಬಂಟ್ಬಾಳ, ಮೂಲ್ಕಿ-,ಮೂಡಬಿದಿರೆ ಹಾಗೂ ಪುತ್ತೂರಿನ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು (ಜು.30) ರಜೆ ಸಾರಲಾಗಿದೆ. ಉಳಿದಂತೆ, ಸುಳ್ಯ, ಕಡಬ, ಬೆಳ್ತಂಗಡಿ ವ್ಯಾಪ್ತಿಯ ತಹಶೀಲ್ದಾರರು, ಬಿಇಒ ಅಲ್ಲಿಯ ಪರಿಸ್ಥಿತಿ ನೋಡಿ ರಜೆ ನಿರ್ಧರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ‌. ರಾಜೇಂದ್ರ ತಿಳಿಸಿದ್ದಾರೆ‌.

ಗುಡುಗು ಸಹಿತ ಭಾರೀ ಮಳೆ| ದ.ಕ ಜಿಲ್ಲೆಯ ಈ ಶಾಲೆಗಳಿಗೆ ಇಂದು ರಜೆ Read More »

ಶಾಂತಿಗಾಗಿ ಲಾಕ್ ಆಯ್ತು ಕರಾವಳಿ| ವಾಣಿಜ್ಯ ವಹಿವಾಟುಗಳು ಬಂದ್

ಸಮಗ್ರ ನ್ಯೂಸ್: ಕೋಮುದಳ್ಳುರಿಯಿಂದ ಕಾದು ಕೆಂಡವಾಗಿರುವ ಕರಾವಳಿಯನ್ನು ತಂಪುಗೊಳಿಸಲು ದ.ಕ ಜಿಲ್ಲಾ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಕರಾವಳಿ ಸಂಪೂರ್ಣ ಲಾಕ್ ಆಗಿದೆ. ದ.ಕ ಜಿಲ್ಲೆಯ ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ಇಂದು ಸಂಜೆ ಆರರಿಂದ ಮುಚ್ಚಲು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದು, ಇದೀಗ ಮಂಗಳೂರು ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿದೆ. ಎಲ್ಲೆಲ್ಲೂ ಪೊಲೀಸ್ ಹದ್ದಿನಗಣ್ಣು ನೆಟ್ಟಿದ್ದು, ಅನುಮಾನ್ಪದ ಚಲನ ವಲನಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಶಾಂತಿಗಾಗಿ ಲಾಕ್ ಆಯ್ತು ಕರಾವಳಿ| ವಾಣಿಜ್ಯ ವಹಿವಾಟುಗಳು ಬಂದ್ Read More »

ಮಂಗಳೂರು: ಅಹಿತಕರ ಘಟನೆ ಹಿನ್ನಲೆ; ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟು ಮುಚ್ಚಲು ಡಿ.ಸಿ ಆದೇಶ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಇಂದು ಸಂಜೆ (ಜು.29) ರಿಂದ ಆ.1 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿಯಿದೆ. ಉಳಿದಂತೆ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಚ್ಚಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಂಗಳೂರು: ಅಹಿತಕರ ಘಟನೆ ಹಿನ್ನಲೆ; ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟು ಮುಚ್ಚಲು ಡಿ.ಸಿ ಆದೇಶ Read More »

“ಎಚ್ಚರದಿಂದಿರಿ, ಒಬ್ಬೊಬ್ಬರೇ ಸುತ್ತಾಡಬೇಡಿ” – ಉಡುಪಿ ಎಸ್.ಪಿ ಸೂಚನೆ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ನಿನ್ನೆ ಸಂಜೆ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದಿರಲು ಪೊಲೀಸ್ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ. ಕೊಲೆ ನಡೆದಿರುವುದರಿಂದ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಮತ್ತು ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಯ ಪ್ರಮುಖರು ಎಚ್ಚರದಿಂದಿರುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ನೀಡಲಾಗಿದೆ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ

“ಎಚ್ಚರದಿಂದಿರಿ, ಒಬ್ಬೊಬ್ಬರೇ ಸುತ್ತಾಡಬೇಡಿ” – ಉಡುಪಿ ಎಸ್.ಪಿ ಸೂಚನೆ Read More »

ಪ್ರವೀಣ್ ಹತ್ಯೆ ಪ್ರಕರಣ ಹಿನ್ನಲೆ; ಪೊಲೀಸ್ ಇಲಾಖೆಯ ಅಧಿಕಾರಿಗಳ ಎತ್ತಂಗಡಿ| ಬೆಳ್ಳಾರೆ ಮತ್ತು ಸುಬ್ರಮಣ್ಯಕ್ಕೆ ನೂತನ ಪಿಎಸೈಗಳ ನೇಮಕ

ಸಮಗ್ರ ನ್ಯೂಸ್: ಕರಾವಳಿಯಲ್ಲಿ 10 ದಿನದಲ್ಲೆ ನಡೆದ ಮೂರು ಕೊಲೆಗಳ ಪರಿಣಾಮ ಇದೀಗ ಸುಳ್ಯ ಬೆಳ್ಳಾರೆಯ ಗ್ರಾಮಾಂತರ ಠಾಣೆಯ ಪಿಎಸ್ ಐ ರುಕ್ಮಯ್ಯ ನಾಯ್ಕರನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಬೆಳ್ಳಾರೆಯ ನೆಟ್ಟಾರಿನ ಪ್ರವೀಣ್ ಹತ್ಯೆಯ ಹಿನ್ನೆಲೆ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗಿದೆ. ಇದೀಗ ಬೆಳ್ಳಾರೆಯ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಳಕ್ಕೆ ನೂತನ ಪಿಎಸ್ ಐ ಆಗಿ ಸುಹಾಸ್ ಅವರನ್ನು ನೇಮಕ ಮಾಡಲಾಗಿದೆ.

ಪ್ರವೀಣ್ ಹತ್ಯೆ ಪ್ರಕರಣ ಹಿನ್ನಲೆ; ಪೊಲೀಸ್ ಇಲಾಖೆಯ ಅಧಿಕಾರಿಗಳ ಎತ್ತಂಗಡಿ| ಬೆಳ್ಳಾರೆ ಮತ್ತು ಸುಬ್ರಮಣ್ಯಕ್ಕೆ ನೂತನ ಪಿಎಸೈಗಳ ನೇಮಕ Read More »

ಫಾಝಿಲ್ ಹತ್ಯೆ‌ ಪ್ರಕರಣ| 14 ಮಂದಿ ಪೊಲೀಸರ ವಶಕ್ಕೆ| ಜನಸ್ತೋಮದ ಮಧ್ಯೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಸುರತ್ಕಲ್’ನಲ್ಲಿ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಮಂಗಲಪೇಟೆಯ ಮಸೀದಿಯಲ್ಲಿ ಫಾಝಿಲ್ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಯುತ್ತಿದೆ. ಫಾಝಿಲ್ ಅಂತಿಮ ದರ್ಶನಕ್ಕೆ ನೂರಾರು ಜನ ಆಗಮಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಲ್ಲಡೆ ಹದ್ದಿನ ಕಣ್ಣು

ಫಾಝಿಲ್ ಹತ್ಯೆ‌ ಪ್ರಕರಣ| 14 ಮಂದಿ ಪೊಲೀಸರ ವಶಕ್ಕೆ| ಜನಸ್ತೋಮದ ಮಧ್ಯೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ Read More »

ರಾಜಕೀಯ ಒತ್ತಡಕ್ಕೆ ಮಣಿದು‌ ಪೊಲೀಸರು ಅಮಾಯಕರನ್ನು ಬೇಟೆಯಾಡುತ್ತಿದ್ದಾರೆ – ಪಿಎಫ್ಐ ಆರೋಪ

ಸಮಗ್ರ ನ್ಯೂಸ್: ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಸುತ್ತಿರುವ ಬಂಧನ ಕಾರ್ಯಾಚರಣೆ ಖಂಡನಾರ್ಹವಾಗಿದೆ. ಬಿಜೆಪಿ ಸರಕಾರದ ಒತ್ತಡದಲ್ಲಿ ಪೊಲೀಸರು ಅಮಾಯಕರ ಬೇಟೆಯಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್‌ ಆರೋಪಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ‌ ಪಿಎಫ್ಐ ಸಂಘಪರಿವಾರದ ಯಾವುದೇ ಕಾರ್ಯಕರ್ತರ ಹತ್ಯೆಗಳು ನಡೆದಾಗಲೂ ಬಿಜೆಪಿ ಸಂಸದರು, ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು, ಪಾಪ್ಯುಲರ್ ಫ್ರಂಟ್ ಮೇಲೆ ಆರೋಪ ಹೊರಿಸುವುದು, ನಂತರ ಜಿಲ್ಲೆಯ ಪೊಲೀಸರುಅಮಾಯಕ ಮುಸ್ಲಿಮ್ ಯುವಕರನ್ನು ರಾತ್ರೋರಾತ್ರಿ ವಿಚಾರಣೆಯ ನೆಪದಲ್ಲಿ ಬಂಧಿಸಿ

ರಾಜಕೀಯ ಒತ್ತಡಕ್ಕೆ ಮಣಿದು‌ ಪೊಲೀಸರು ಅಮಾಯಕರನ್ನು ಬೇಟೆಯಾಡುತ್ತಿದ್ದಾರೆ – ಪಿಎಫ್ಐ ಆರೋಪ Read More »

ಮಂಗಳೂರು:ಕೊಲೆ ಕೃತ್ಯ ಹಿನ್ನಲೆ; ಜಿಲ್ಲೆಯ ಈ ಶಾಲಾ ಕಾಲೇಜುಗಳಿಗೆ ಇಂದು ರಜೆ

ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದ ಎರಡು ದಿನಗಳಲ್ಲೇ ಮತ್ತೊಂದು ನೆತ್ತರು ಹರಿದಿದೆ. ಕಳೆದ ರಾತ್ರಿ ಸುರತ್ಕಲ್ ನಲ್ಲಿ ಮತ್ತೋರ್ವ ಯುವಕ ಫಾಜಿಲ್ ಹತ್ಯೆಯಾಗಿದ್ದು, ಕರಾವಳಿಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರ‌ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಜಪೆ, ಸುರತ್ಕಲ್‌, ಮೂಲ್ಕಿ, ಪಣಂಬೂರು ಪೊಲೀಸ್‌

ಮಂಗಳೂರು:ಕೊಲೆ ಕೃತ್ಯ ಹಿನ್ನಲೆ; ಜಿಲ್ಲೆಯ ಈ ಶಾಲಾ ಕಾಲೇಜುಗಳಿಗೆ ಇಂದು ರಜೆ Read More »

ಉದ್ವಿಗ್ನಗೊಂಡಿರುವ ಕರಾವಳಿ ಪ್ರವೇಶಿಸಲು ಮುತಾಲಿಕ್ ಗೆ ನಿಷೇಧ

ಸಮಗ್ರ ನ್ಯೂಸ್: ಶ್ರೀರಾಮ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕಡಬ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ. ಪ್ರವೀಣ್ ನೆಟ್ಟಾರು‌ ಮನೆಗೆ ಮುತಾಲಿಕ್ ಭೇಟಿ ನೀಡುವ ಹಾಗೂ ಉದ್ರೇಕಕಾರಿಯಾಗಿ ಮಾತನಾಡುವ ಸಾಧ್ಯತೆ ಇರುವುದರಿಂದ ಈ ಕ್ರಮ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ ಗುರುವಾರ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶಿತರಾಗಿದ್ದು , ಜಿಲ್ಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ಉದ್ವಿಗ್ನಗೊಂಡಿರುವ ಕರಾವಳಿ ಪ್ರವೇಶಿಸಲು ಮುತಾಲಿಕ್ ಗೆ ನಿಷೇಧ Read More »