ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ಮೇಘಸ್ಪೋಟ;‌ ಗುಡ್ಡ ಕುಸಿದು ಎರಡು ಮಕ್ಕಳು ಮೃತ್ಯು

ಸಮಗ್ರ ನ್ಯೂಸ್: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಕುಮಾರದಾರ ಪರ್ವತಮುಖಿ ಬಳಿಯ ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದು, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಮೃತದೇಹಗಳನ್ನು ಹೊರತೆಗೆಯಲಾಯಿತು. ಮೇಘಸ್ಪೋಟ ಮತ್ತು‌ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು, ಎರಡು ದಿನ ಭಕ್ತಾದಿಗಳಿಗೆ ಪ್ರವೇಶ

ಕುಕ್ಕೆ ಸುಬ್ರಹ್ಮಣ್ಯ: ಮೇಘಸ್ಪೋಟ;‌ ಗುಡ್ಡ ಕುಸಿದು ಎರಡು ಮಕ್ಕಳು ಮೃತ್ಯು Read More »

ಭಾರೀ ಮಳೆ ಹಿನ್ನಲೆ; ಕಡಬ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ‌ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಕಡಬ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ Read More »

ಭಾರೀ ಮಳೆ ಹಿನ್ನಲೆ; ಸುಳ್ಯ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ‌ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಸುಳ್ಯ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ Read More »

ಮಹಾಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಎರಡು ದಿನ ಯಾತ್ರಾಕ್ಷೇತ್ರಕ್ಕೆ ನಿರ್ಬಂಧ; ದೇವಳಕ್ಕೆ ಜಲ ದಿಗ್ಭಂಧನ

ಸಮಗ್ರ ನ್ಯೂಸ್: ಕುಮಾರಧಾರ ತಪ್ಪಲು ಹಾಗೂ ಪುಷ್ಪಗಿರಿ ಅರಣ್ಯ ಭಾಗದಲ್ಲಿ ಭಾರೀ ಮೇಘ ಸ್ಪೋಟಗೊಂಡ ಪರಿಣಾಮ ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಜಲಾವೃತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಜಲಕಂಟಕ ಎದುರಾಗಿದ್ದು, ದೇವಳದ ಸುತ್ತಲೂ ದರ್ಪಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ಎರಡು ದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಾಧಿಗಳಿಗೆ ನಿಷೇಧ ಹೇರಲಾಗಿದೆ‌. ಆದಿಸುಬ್ರಹ್ಮಣ್ಯ ದೇವಸ್ಥಾನದ ಪ್ರಾಂಗಣದೊಳಗೂ ನೀರು ನುಗ್ಗಿದ್ದು, ಸಂಪರ್ಕ ಕಡಿತಗೊಂಡಿದೆ. ಇನ್ನು ಕುಮಾರಧಾರ ಸ್ನಾನಘಟ್ಟದ ಸಮೀಪ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಎರಡು

ಮಹಾಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಎರಡು ದಿನ ಯಾತ್ರಾಕ್ಷೇತ್ರಕ್ಕೆ ನಿರ್ಬಂಧ; ದೇವಳಕ್ಕೆ ಜಲ ದಿಗ್ಭಂಧನ Read More »

ಭಾರೀ ಮಳೆ: ಕುಕ್ಕೆ ಸುಬ್ರಹ್ಮಣ್ಯ ಬಳಿ ಗುಡ್ಡ ಕುಸಿದು ಮಕ್ಕಳು ಸಾವು!? ಮುಂದುವರಿದ ರಕ್ಷಣಾ ಕಾರ್ಯ…

ಸಮಗ್ರ ನ್ಯೂಸ್: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕುಮಾರದಾರ ಬಳಿಯ ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜೇಸಿಬಿ ತರಿಸಲಾಗಿದ್ದು ರಕ್ಷಣಾ ಕಾರ್ಯ ಸಾಗುತ್ತಿದೆ. ಆದರೆ ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ

ಭಾರೀ ಮಳೆ: ಕುಕ್ಕೆ ಸುಬ್ರಹ್ಮಣ್ಯ ಬಳಿ ಗುಡ್ಡ ಕುಸಿದು ಮಕ್ಕಳು ಸಾವು!? ಮುಂದುವರಿದ ರಕ್ಷಣಾ ಕಾರ್ಯ… Read More »

ಸುಳ್ಯ ತಾಲೂಕಿನ ಹಲವೆಡೆ ಮೇಘ ಸ್ಪೋಟ| ಮೂರು ಗಂಟೆಗಳಲ್ಲಿ 150 ಮಿ.ಮೀ ಗಿಂತಲೂ ಅಧಿಕ‌ ಮಳೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಮಾಯದಂತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಐನೆಕಿದು, ನಾಲ್ಕೂರು, ಗುತ್ತಿಗಾರು ‌ಸೇರಿದಂತೆ ವಿವಿಧೆಡೆ ಭಾರೀ ಮಳೆ‌ ಸುರಿದಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸುರಿದ ಮಳೆ ನಿರಂತರವಾಗಿ ತನ್ನ ಅಬ್ಬರ ಮುಂದುವರೆಸಿದೆ. ಮೂರು ಗಂಟೆಗಳಲ್ಲಿ ಸುಮಾರು 150 ಮಿ.ಮೀ ಗಿಂತಲೂ ಅಧಿಕ ಮಳೆ ಸುರಿದಿದ್ದು, ಹಲವು ಸೇತುವೆಗಳು ಜಲಾವೃತಗೊಂಡಿವೆ. ಸಂಚಾರಕ್ಕೆ ಸಂಚಕಾರ ಬಂದಿದ್ದು, ಕಲ್ಮಕಾರು- ಕೊಲ್ಲಮೊಗ್ರು ಸಂಪರ್ಕ ಕಡಿತಗಗೊಂಡಿದೆ.

ಸುಳ್ಯ ತಾಲೂಕಿನ ಹಲವೆಡೆ ಮೇಘ ಸ್ಪೋಟ| ಮೂರು ಗಂಟೆಗಳಲ್ಲಿ 150 ಮಿ.ಮೀ ಗಿಂತಲೂ ಅಧಿಕ‌ ಮಳೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಇದುವರೆಗೆ 40 ಮಂದಿ ಪೊಲೀಸ್ ವಶಕ್ಕೆ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಸೇರಿದಂತೆ ಒಟ್ಟು 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಪೊಲೀಸರಿಗೆ ಗಸ್ತು ವಾಹನಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿರುವ ಅವರು, ನಾಗರಿಕರು ಸಹ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದ್ದಾರೆ. ಸರಣಿ ಕೊಲೆಗಳ ತನಿಖೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮಸೂದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಪ್ರಮುಖರು ಸಿಕ್ಕಿದ್ದಾರೆ. ಉಳಿದವರನನ್ನು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಇದುವರೆಗೆ 40 ಮಂದಿ ಪೊಲೀಸ್ ವಶಕ್ಕೆ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ Read More »

ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ| ಸಾಂತ್ವನದೊಂದಿಗೆ 5 ಲಕ್ಷ ಚೆಕ್ ವಿತರಣೆ| ಎನ್ಐಎ ಗೆ ಕೇಸ್ ಹಸ್ತಾಂತರವೇ ಮೂರ್ಖತನ

ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಅವರ ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಿದರು. ಈ ವೇಳೆ ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಿಎಂ ಕುಮಾರಸ್ವಾಮಿ 5 ಲಕ್ಷ ರೂಪಾಯಿಗಳ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಮತ್ತು ಅವರ ತಾಯಿ ಹೆಸರಲ್ಲಿ 5 ಲಕ್ಷ ಚೆಕ್ ನೀಡಿದ್ದಾರೆ. ಮೃತ ಮಸೂದ್ ಕುಟುಂಬಕ್ಕೂ ಶಾಂತಿ ಸಿಗಬೇಕು. ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು. ಆಗ ನಮಗೆ

ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ| ಸಾಂತ್ವನದೊಂದಿಗೆ 5 ಲಕ್ಷ ಚೆಕ್ ವಿತರಣೆ| ಎನ್ಐಎ ಗೆ ಕೇಸ್ ಹಸ್ತಾಂತರವೇ ಮೂರ್ಖತನ Read More »

ಇಂದಿನಿಂದ ‌ಮೀನುಗಾರಿಕೆ‌ ಪರ್ವ ಶುರು| ಬಲೆ‌ ಬೀಸಲಿದ್ದಾರೆ ಕಡಲ‌ ಮಕ್ಕಳು|

ಸಮಗ್ರ ನ್ಯೂಸ್: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡಿದ್ದು, ಆ. 1ರಿಂದ ದೋಣಿಗಳು ಸಮುದ್ರಕ್ಕಿಳಿಯಲಿವೆ. ಈ ನಿಟ್ಟಿನಲ್ಲಿ ಮೀನುಗಾರಿಕೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ. ಐಸ್‌ಪ್ಲಾಂಟ್‌ಗಳು ರವಿವಾರವೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್‌ ನೀಡುವ ಕಾರ್ಯ ಸೋಮವಾರದಿಂದ ಪ್ರಾರಂಭವಾಗಲಿದೆ. ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ

ಇಂದಿನಿಂದ ‌ಮೀನುಗಾರಿಕೆ‌ ಪರ್ವ ಶುರು| ಬಲೆ‌ ಬೀಸಲಿದ್ದಾರೆ ಕಡಲ‌ ಮಕ್ಕಳು| Read More »

ಮಂಗಳೂರು: ನಾಳೆ(ಆ.1) ಹತ್ಯೆಗೊಳಗಾದ ಸಂತ್ರಸ್ತರ ಮನೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಮೂವರು ಸಂತ್ರಸ್ತರ ಮನೆಗೆ ಭೇಟಿ ನೀಡಲು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಾಳೆ ಮಂಗಳೂರಿಗೆ ಬರಲಿದ್ದಾರೆ. ಬೆಳ್ಳಾರೆಯಲ್ಲಿ ಹತ್ಯೆಯಾದ ಮಸೂದ್‌, ಪ್ರವೀಣ್‌ ಹಾಗೂ ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್‌ ಕುಟುಂಬವನ್ನು ಅವರು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿವೆ. ನಂತರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವರು.

ಮಂಗಳೂರು: ನಾಳೆ(ಆ.1) ಹತ್ಯೆಗೊಳಗಾದ ಸಂತ್ರಸ್ತರ ಮನೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ Read More »