ಕರಾವಳಿ

ಮಂಗಳೂರು: ಟ್ರಾಫಿಕ್ ಪೊಲೀಸ್ ಜೊತೆ ಕಿರಿಕ್ ಮಾಡಿದ ಸಿಟಿಬಸ್ ಸಿಬ್ಬಂದಿ| ಓರ್ವ ಚಾಲಕ ಪೊಲೀಸ್ ವಶ

ಸಮಗ್ರ ನ್ಯೂಸ್: ಮಂಗಳೂರು ನಗರ ಹೊರವಲಯದ ತಲಪಾಡಿಯಲ್ಲಿ ಸಿಟಿ ಬಸ್‌ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸಂಚಾರ ರದ್ದುಗೊಳಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಚಾಲಕನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯ ಎಎಸ್‌ಐ ಆಲ್ಬಟ್೯ ಲಸ್ರಾದೋ ನೇತೃತ್ವದಲ್ಲಿ ಇಂದು ಬೆಳಗ್ಗೆ ತಲಪಾಡಿ ಚೆಕ್‌ಪೋಸ್ಟ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಓವರ್‌ ಸ್ಪೀಡ್‌ನಲ್ಲಿ ತೆರಳುತ್ತಿದೆ ಎಂದು ಖಾಸಗಿ ಬಸ್‌ನ ಫೋಟೋ ತೆಗೆದು

ಮಂಗಳೂರು: ಟ್ರಾಫಿಕ್ ಪೊಲೀಸ್ ಜೊತೆ ಕಿರಿಕ್ ಮಾಡಿದ ಸಿಟಿಬಸ್ ಸಿಬ್ಬಂದಿ| ಓರ್ವ ಚಾಲಕ ಪೊಲೀಸ್ ವಶ Read More »

ಸುಳ್ಯ: ಅಪಾಯದ ಪರಿಸ್ಥಿತಿಯಲ್ಲಿನ ಮನೆಗಳಿಗೆ ಪರ್ಯಾಯ ವ್ಯವಸ್ಥೆಗೆ ಡಿಸಿ ಚಿಂತನೆ

ಸಮಗ್ರ ನ್ಯೂಸ್: ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾಗಿರುವ ಸುಳ್ಯ ತಾಲೂಕಿನ ಕೆಲವು ಮನೆಗಳಿಗೆ ಪರ್ಯಾಯ ಜಾಗದ ವ್ಯವಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ‘ತಾಲೂಕಿನ ಕಲ್ಮಕಾರಿನಲ್ಲಿ ಭೂಕುಸಿತದಿಂದ ಅಪಾಯ ಎದುರಿಸುತ್ತಿರುವ ಎಂಟು ಕುಟುಂಬಗಳನ್ನು ಮುಂದಿನ ಮುಂಗಾರಿನ ಒಳಗೆ ಸ್ಥಳಾಂತರಿಸಲಾಗುವುದು. ಈ ಕುಟುಂಬಗಳಿಗೆ ಪರ್ಯಾಯ ಜಮೀನು ನೀಡಲಿದ್ದೇವೆ. ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಡಿಸಿ, ‘ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗಣೇಶನಗರದಲ್ಲೂ ಕೆಲವು ಮನೆಗಳು ಭೂಕುಸಿತದ

ಸುಳ್ಯ: ಅಪಾಯದ ಪರಿಸ್ಥಿತಿಯಲ್ಲಿನ ಮನೆಗಳಿಗೆ ಪರ್ಯಾಯ ವ್ಯವಸ್ಥೆಗೆ ಡಿಸಿ ಚಿಂತನೆ Read More »

ಧರ್ಮಸ್ಥಳ: ಜನಜಾಗೃತಿ ವೇದಿಕೆಯಿಂದ ಹಂಚಿದ ಧ್ವಜ ವಿರೂಪ!?

ಸಮಗ್ರ ನ್ಯೂಸ್: ಅಖಿಲ ಭಾರತ‌ ಜನಜಾಗೃತಿ ವೇದಿಕೆಯಿಂದ ಧರ್ಮಸ್ಥಳದಲ್ಲಿ ನಡೆದ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಹಂಚಲ್ಪಟ್ಟ ತ್ರಿವರ್ಣ ಧ್ವಜಗಳು ವಿರೂಪಗೊಂಡಿವೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಇಂದು ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯೋಜನೆ‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಈ ವೇಳೆ ನವಜೀವನ ಸದಸ್ಯರು ಮತ್ತು ಧ.ಗ್ರಾ.ಯೋಜನೆಯ ಸದಸ್ಯರಿಗೆ ನೀಡಲಾದ ಧ್ವಜಗಳಲ್ಲಿ ರಾಷ್ಟ್ರಧ್ವಜವನ್ನು ವಿರೂಪಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಕೆಲವು ಧ್ವಜಗಳಲ್ಲಿ ಅಶೋಕ

ಧರ್ಮಸ್ಥಳ: ಜನಜಾಗೃತಿ ವೇದಿಕೆಯಿಂದ ಹಂಚಿದ ಧ್ವಜ ವಿರೂಪ!? Read More »

ಮಂಗಳೂರು: ಗೆಳೆಯನ ಪ್ರಾಣ ಕಸಿದ ಹೆದ್ದಾರಿ ಗುಂಡಿ| ಮಿತ್ರನ ಸಾವಿಗೆ ನ್ಯಾಯ ಕೊಡಿಸಲು ಏಕಾಂಗಿ ಹೋರಾಟ

ಸಮಗ್ರ ನ್ಯೂಸ್: ನಗರದೊಳಗಿನ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳ ದುರಸ್ತಿ ಮಾಡುವಂತೆ ಹಾಗೂ ಸಮರ್ಪಕ ರಸ್ತೆಗೆ ಆಗ್ರಹಿಸಿ ಯುವಕನೋರ್ವ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಂಗಳೂರಿನ ಲಿಖಿತ್ ಎಂಬ ಯುವಕ ಈ ಏಕಾಂಗಿ ಹೋರಾಟ ನಡೆಸಿದ್ದು, ಇತ್ತೀಚೆಗೆ ನಂತೂರಿನಲ್ಲಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟ ಗೆಳೆಯ ಆತಿಷ್‌ನ ನ್ಯಾಯಕ್ಕಾಗಿ ಆಗ್ರಹಿಸಿ ಈ ವಿನೂತನ ಶೈಲಿಯ ಪ್ರತಿಭಟನೆ ನಡೆಸಿದ್ದಾನೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಲಿಖಿತ್, ಮಿತ್ರ ಆತಿಷ್ ನಂತೂರ್‌ನಲ್ಲಿ ರಸ್ತೆಯಲ್ಲಿದ್ದ

ಮಂಗಳೂರು: ಗೆಳೆಯನ ಪ್ರಾಣ ಕಸಿದ ಹೆದ್ದಾರಿ ಗುಂಡಿ| ಮಿತ್ರನ ಸಾವಿಗೆ ನ್ಯಾಯ ಕೊಡಿಸಲು ಏಕಾಂಗಿ ಹೋರಾಟ Read More »

ದಕ್ಷಿಣ ಕನ್ನಡ: ಹವಾಮಾನ ವರದಿ ಹಾಗೂ ಮುನ್ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಈ ಹಿಂದೆ ಘೋಷಿಸಿದ್ದ ಯೆಲ್ಲೋ ಅಲರ್ಟ್ ಶುಕ್ರವಾರ ಆರೆಂಜ್‌ಗೆ ಬದಲಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿ ಬಲವಾಗಿ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನೀಡಲಾಗಿರುವ ಎಚ್ಚರಿಕೆಯನ್ನು ಮುಂದುವರಿಸಲಾಗಿದೆ. ಗುರುವಾರ ಮಳೆ ಕಡಿಮೆಯಾಗಿದ್ದರೂ ಬಲವಾಗಿ ಬೀಸುವ ಗಾಳಿಯಿಂದಾಗಿ ಸಮುದ್ರದ ಪ್ರಕ್ಷುಬ್ಧತೆ ಮುಂದುವರಿಸಿದೆ.  ದ.ಕ.ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯೊಂದಿಗೆ ಬಿಸಿಲ ವಾತಾವರಣವಿತ್ತು.

ದಕ್ಷಿಣ ಕನ್ನಡ: ಹವಾಮಾನ ವರದಿ ಹಾಗೂ ಮುನ್ಸೂಚನೆ Read More »

ನೆಲ್ಯಾಡಿ: ಬಸ್ ನಲ್ಲಿ ಸಿಕ್ಕಿಬಿದ್ದ ಅನ್ಯಮತೀಯ ನವಜೋಡಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಅನ್ಯ ಜೋಡಿಯೊಂದನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು(ಆ.12) ಮುಂಜಾನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ನರಗುಂದ ಮೂಲದ ರಫೀಕ್ (21) ಸಂಕದಲ್ ಎಂಬಾತ ಗದಗ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಬಂದಿರುತ್ತಾರೆ. ನವ ವಿವಾಹಿತ ಭಿನ್ನಕೋಮಿನ ಜೋಡಿ ಎಂದು ತಿಳಿದ ಕೂಡಲೆ ಲಾಡ್ಜ್ ಸಿಬ್ಬಂದಿ, ರೂಮ್ ನೀಡಲು ನಿರಾಕರಿಸಿದ್ದಾರೆ. ಆಗ ಅವರು ತಕ್ಷಣ ಅಲ್ಲಿಂದ ಮರಳಿ

ನೆಲ್ಯಾಡಿ: ಬಸ್ ನಲ್ಲಿ ಸಿಕ್ಕಿಬಿದ್ದ ಅನ್ಯಮತೀಯ ನವಜೋಡಿ ಪೊಲೀಸ್ ವಶಕ್ಕೆ Read More »

ದೋಣಿಗಲ್ ನಲ್ಲಿ ಮತ್ತೆ ಭೂಕುಸಿತ| ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರಿಂದ ರಾ.ಹೆದ್ದಾರಿ ತಡೆದು ಪ್ರತಿಭಟನೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಎಕರೆ ಕಾಫಿ ತೋಟ ಹಾಗೂ ಗದ್ದೆಗೆ ಹಾನಿಯಾಗಿದ್ದು ಕೂಡಲೆ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂತ್ರಸ್ತರು ಕೆಲಕಾಲ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 75 ದೋಣಿಗಲ್ ಸಮೀಪ ಭೂಕುಸಿತ ಉಂಟಾಗಿ ಸುಮಾರು 15 ಮಂದಿಯ ಕಾಫಿ ತೋಟ ಹಾಗೂ ಗದ್ದೆಗಳಿಗೆ ತೀವ್ರ ಹಾನಿಯಾಗಿದೆ. ಆದರೆ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ

ದೋಣಿಗಲ್ ನಲ್ಲಿ ಮತ್ತೆ ಭೂಕುಸಿತ| ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರಿಂದ ರಾ.ಹೆದ್ದಾರಿ ತಡೆದು ಪ್ರತಿಭಟನೆ Read More »

“ಪೋಲೀಸ್ ಇಲಾಖೆಗೆ ಧನ್ಯವಾದ,ಆರೋಪಿಗಳ ಪರವಾಗಿ ಯಾವ ವಕೀಲನೂ ವಕಾಲತು ನಡೆಸಬಾರದು”- ಪ್ರವೀಣ್ ತಾಯಿ ಮನವಿ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರಮುಖ ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಮತ್ತು ಯಾವ ವಕೀಲನೂ ಆರೋಪಿಗಳಿಗೆ ವಕಾಲತು ನಡೆಸಬಾರದು ಎಂದು ಪ್ರವೀಣ್ ತಾಯಿ ರತ್ನಾವತಿ ವಕೀಲರಿಗೆ ಮನವಿ ಮಾಡಿದ್ದಾರೆ.

“ಪೋಲೀಸ್ ಇಲಾಖೆಗೆ ಧನ್ಯವಾದ,ಆರೋಪಿಗಳ ಪರವಾಗಿ ಯಾವ ವಕೀಲನೂ ವಕಾಲತು ನಡೆಸಬಾರದು”- ಪ್ರವೀಣ್ ತಾಯಿ ಮನವಿ Read More »

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಮಾಸ್ಕ್ ಧಾರಣೆ ಕಡ್ಡಾಯ – ಸಚಿವ ಡಾ. ಸುಧಾಕರ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಈ ಹಿನ್ನಲೆಯಲ್ಲಿಯೇ ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಇಂದು ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ರಾಜ್ಯದಲ್ಲಿ ಮಾಸ್ಕ್ ಎಲ್ಲರೂ ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಕೊರೋನಾ ಹೆಚ್ಚಳ ಕಾರಣದಿಂದಾಗಿ 60 ವರ್ಷ ಮೇಲ್ಪಟ್ಟವರು ತಪ್ಪದೇ ಶೀಘ್ರವೇ 3ನೇ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು. ಇಂದಿನ ಸಭೆಯಲ್ಲಿ

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಮಾಸ್ಕ್ ಧಾರಣೆ ಕಡ್ಡಾಯ – ಸಚಿವ ಡಾ. ಸುಧಾಕರ್ Read More »

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿಯುವ ಸಾಧ್ಯತೆ ‌ಕಾರಣ ರಾತ್ರಿ‌ ಸಂಚಾರ‌ ನಿರ್ಬಂಧಿಸಲಾಗಿದೆ ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರ ಮಳೆ‌ ಹಾಗೂ‌ ಭಾರೀ ಗಾಳಿಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಇದೀಗ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ Read More »