ಕರಾವಳಿ

ಬಂಟ್ವಾಳ; ತಡರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ

ಸಮಗ್ರ ನ್ಯೂಸ್: ಮಧ್ಯರಾತ್ರಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ. ಕಲ್ಮಲೆ ನಿವಾಸಿ ನಾರಾಯಣ ರೈ ಎಂಬವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮೊತ್ತೊಂದು ನಾಯಿ ರಕ್ಷಣೆಗೆ ನುಗ್ಗಿದ್ದ, ಈ ಚಿರತೆ ನಾಯಿಯನ್ನು ಗಾಯಗೊಳಿಸಿದೆ. ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ. ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿದೆ. ಗ್ರಾಮದ ಸುತ್ತ

ಬಂಟ್ವಾಳ; ತಡರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ Read More »

ಮಂಗಳೂರು: ಪಾಲಿಕೆಯ ಹಲವು ಸೇವೆ ಆ್ಯಪ್‌ನಲ್ಲಿ ಲಭ್ಯ!/“ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿರುವ ಮಾಹಿತಿ ತಿಳಿದುಕೊಳ್ಳಿ

ಸಮಗ್ರ ನ್ಯೂಸ್: ಮಂಗಳೂರು ಪಾಲಿಕೆ ಈಗಾಗಲೇ ಡಿಜಿಟಲ್‌ನತ್ತ ಮುಖ ಮಾಡಿದ್ದು, ಕೆಲವು ಸೇವೆಗಳನ್ನು ಈಗಾಗಲೇ ಆನ್‌ಲೈನ್‌ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಇದೀಗ ಆ್ಯಪ್‌ ಮುಖೇನವೂ ವಿವಿಧ ಸೇವೆಗಳನ್ನು ಪರಿಚಯಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಸ್ಮಾರ್ಟ್‌ಸಿಟಿಯಿಂದ ಈಗಾಗಲೇ “ಒನ್‌ ಟಚ್‌ ಮಂಗಳೂರು’ ಎಂಬ ಪ್ರತ್ಯೇಕ ಆ್ಯಪ್‌ ರೂಪುಗೊಂಡಿದ್ದು, ಅದರಲ್ಲಿ ಮುಂದಿನ ಕೆಲವು ದಿನಗಳಲ್ಲಿ ಜನನ-ಮರಣ ಪ್ರಮಾಣಪತ್ರ, ಪಾಲಿಕೆ ವ್ಯಾಪ್ತಿ ಜಾಹೀರಾತು ಪರವಾನಿಗೆ, ಆಸ್ತಿ ತೆರಿಗೆ ಹಣ ಪಾವತಿ, ಉದ್ದಿಮೆ ಪರವಾನಿಗೆ ನವೀಕರಣ ಸಹಿತ ವಿವಿಧ ಸೇವೆಗಳನ್ನು ಆ್ಯಪ್‌ನಲ್ಲಿ ತರಲು ಯೋಜನೆ

ಮಂಗಳೂರು: ಪಾಲಿಕೆಯ ಹಲವು ಸೇವೆ ಆ್ಯಪ್‌ನಲ್ಲಿ ಲಭ್ಯ!/“ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿರುವ ಮಾಹಿತಿ ತಿಳಿದುಕೊಳ್ಳಿ Read More »

ಸುಳ್ಯ: ಡಿ.ವಿ.ಎಸ್ ಸಿಎಂ ಆಗಿದ್ದಾಗ‌ ಪ್ರಸ್ತಾಪ ಮಾಡಿದ್ದ ಟೈರ್ ಉತ್ಪಾದನಾ ಕಾರ್ಖಾನೆ‌ಗೆ ದಶಕದ ಸಂಭ್ರಮ| ಹತ್ತು ವರ್ಷಗಳಲ್ಲಿ ಈ ಕಡತ ಯಾರಿಗೂ ಕಂಡಿಲ್ಲವೇ?

ಸಮಗ್ರ ನ್ಯೂಸ್: ಸುಮಾರು‌ 500 ಕೋಟಿ ರೂ.ಗಳಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿ‌ದ್ದ ರಬ್ಬರ್ ಟಯರ್ ತಯಾರಿಕಾ‌ ಕಾರ್ಖಾನೆಯ ಪ್ರಸ್ತಾವನೆಗೆ ಬರೋಬ್ಬರಿ ಒಂದು ದಶಕದ ಸಂಭ್ರಮ! ಸುಳ್ಯದ‌ ಮಣ್ಣಿನ ಮಗ ಡಿ.ವಿ ಸದಾನಂದ ಗೌಡರು 2012ರಲ್ಲಿ ಮುಖ್ಯಮಂತ್ರಿಯಾಗಿ ತನ್ನ ತವರೂರಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಹೇಳಿಕೆ ಕೇವಲ ಹೇಳಿಕೆಯಾಗಿಯೇ ಉಳಿದಿದೆ. ಅಂದು ಸದಾನಂದ ಗೌಡರು ನೀಡಿದ್ದ ಹೇಳಿಕೆ ಸುಳ್ಯ ತಾಲೂಕಿನ ಯುವಜನತೆಗೆ ಬಾರೀ ನಿರೀಕ್ಷೆ ಹುಟ್ಟು ಹಾಕಿತ್ತು. ಹಲವು ಮಂದಿಗೆ ಉದ್ಯೋಗ

ಸುಳ್ಯ: ಡಿ.ವಿ.ಎಸ್ ಸಿಎಂ ಆಗಿದ್ದಾಗ‌ ಪ್ರಸ್ತಾಪ ಮಾಡಿದ್ದ ಟೈರ್ ಉತ್ಪಾದನಾ ಕಾರ್ಖಾನೆ‌ಗೆ ದಶಕದ ಸಂಭ್ರಮ| ಹತ್ತು ವರ್ಷಗಳಲ್ಲಿ ಈ ಕಡತ ಯಾರಿಗೂ ಕಂಡಿಲ್ಲವೇ? Read More »

ಪುತ್ತೂರು; ಬೈಕ್ ಅಪಘಾತ, ಓರ್ವ ಸಾವು ,ಇನ್ನೋರ್ವನಿಗೆ ಗಾಯ

ಪುತ್ತೂರು: ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಬಸ್‌ಗೆ ಗುದ್ದಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಪರ್ಲಡ್ಕ ರಸ್ತೆಯಲ್ಲಿ ನಡೆದಿದೆ. ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ (22) ಮೃತ ಯುವಕ. ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಧನುಷ್(24) ಗಾಯಗೊಂಡವರು. ಭರತ್ ರಾಜ್ ಗೌಡ ಹಾಗೂ ಸ್ನೇಹಿತ ಧನುಷ್‌ ಶನಿವಾರ ದಂದು ಬೈಕ್‌ ನಲ್ಲಿ ಗಣೇಶೋತ್ಸವ ಶೋಭಾಯಾತ್ರೆಗೆಂದು ಪುತ್ತೂರಿಗೆ ಹೋಗಿ ಬರುವ ವೇಳೆ ಪರ್ಲಡ್ಕ ರಸ್ತೆಯಲ್ಲಿ ಸವಾರನ ನಿಯಂತ್ರಣ

ಪುತ್ತೂರು; ಬೈಕ್ ಅಪಘಾತ, ಓರ್ವ ಸಾವು ,ಇನ್ನೋರ್ವನಿಗೆ ಗಾಯ Read More »

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಶನಿವಾರ ಸಾವಿಗೀಡಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು.

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ Read More »

ಸುಳ್ಯ: ಪ್ರವೀಣ್ ನೆಟ್ಟಾರುರವರ ಚಿಕನ್ ಅಂಗಡಿ ಪುನರಾರಂಭ| ಇವರೇ ಅಂಗಡಿಯ ಹೊಸ ಮಾಲೀಕ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಪ್ರವೀಣ್ ಮಾಲೀಕತ್ವದ ಕೋಳಿ ಅಂಗಡಿ ಮತ್ತೆ ಪುನಾರಂಭಗೊಂಡಿದೆ. ಪ್ರವೀಣ್ ನೆಟ್ಟಾರು ‌ಕುಟುಂಬಸ್ಥರು ಅಂಗಡಿ ಮುನ್ನಡೆಸಲು ಉತ್ಸಾಹ ತೋರದ ಕಾರಣ ಬೆಳ್ಳಾರೆ ಭಾಗದ ಮತ್ತೊಬ್ಬ ಬಿಜೆಪಿ ಮತ್ತು‌ ಹಿಂದೂ ಕಾರ್ಯಕರ್ತರೊಬ್ಬರು ಈ ಅಂಗಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜು.26ರಂದು ಹಂತಕರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್ ಸೆಂಟರ್ ಮತ್ತೆ ಪುನರಾರಂಭಗೊಂಡಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಸಕ್ರೀಯ ಸದಸ್ಯ

ಸುಳ್ಯ: ಪ್ರವೀಣ್ ನೆಟ್ಟಾರುರವರ ಚಿಕನ್ ಅಂಗಡಿ ಪುನರಾರಂಭ| ಇವರೇ ಅಂಗಡಿಯ ಹೊಸ ಮಾಲೀಕ Read More »

ಖ್ಯಾತ ಭಾಷಾ ವಿಜ್ಞಾನಿ ಹಾಗೂ ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡ ವಿಧಿವಶ

ಸಮಗ್ರ ನ್ಯೂಸ್ : ಖ್ಯಾತ ಭಾಷಾ ವಿಜ್ಞಾನಿ ಹಾಗೂ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪ ಗೌಡ(92ವ) ಅವರು ಸೆ.29ರಂದು ರಾತ್ರಿ ಪುತ್ತೂರಿನ ಮಗಳು ಮಾಲಿನಿ ಅವರ ಮನೆಯಲ್ಲಿ ನಿಧನರಾಗಿದ್ದಾರೆ. ಪುತ್ತೂರಿನಲ್ಲಿ ಮಗಳ ಮನೆಯಲ್ಲಿದ್ದ ಅವರನ್ನು ತೀವ್ರ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ 10.30 ರ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅವರ ಪಾರ್ಥಿವ ಶರೀರವನ್ನು ಸುಳ್ಯದ ಜಟ್ಟಿಪಳ್ಳದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗಿದೆ.

ಖ್ಯಾತ ಭಾಷಾ ವಿಜ್ಞಾನಿ ಹಾಗೂ ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡ ವಿಧಿವಶ Read More »

ಬಂಟ್ವಾಳ; ಕಾರು ಡಿಕ್ಕಿ, ಎಲ್.ಕೆ.ಜಿ ವಿದ್ಯಾರ್ಥಿ ಬಲಿ

ಸಮಗ್ರ ನ್ಯೂಸ್: ಕಾರು ಡಿಕ್ಕಿ ಯಾಗಿ ಬಾಲಕ ಮೃತಪಟ್ಟ ಘಟನೆಯೊಂದು ತಾಲೂಕಿನ ಸುರಿಬೈಲು ಕಾಡಂಗಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ಮಹಮ್ಮದಲಿ ಸಖಾಫಿ ಎಂಬವರ ಮಗ ಆದಿಲ್ (4) ಮೃತಪಟ್ಟ ಬಾಲಕ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ. ಮನೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರುತಿ ಕಾರೊಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತದೇಹ ತುಂಬೆ ಖಾಸಗಿ ಆಸ್ಪತ್ರೆಯಲ್ಲಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ

ಬಂಟ್ವಾಳ; ಕಾರು ಡಿಕ್ಕಿ, ಎಲ್.ಕೆ.ಜಿ ವಿದ್ಯಾರ್ಥಿ ಬಲಿ Read More »

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಕೂಳೂರಿನಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಬಂದು ಜನಜಂಗುಳಿಯ ನಡುವೆ ಹೆತ್ತವರ ಕೈ ತಪ್ಪಿ ನಾಪತ್ತೆಯಾಗಿದ್ದ ಬಾಲಕಿಯನ್ನು ಪೊಲೀಸರು ಮರಳಿ ಹೆತ್ತವರ ವಶಕ್ಕೆ ಒಪ್ಪಿಸಿದ ಘಟನೆ ವರದಿಯಾಗಿದೆ. ಕಾವೂರು ಜ್ಯೋತಿನಗರದ ನಿವಾಸಿ ಯಮನಪ್ಪ- ದೇವಕಿ ದಂಪತಿಯ ಪುತ್ರಿ , ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಜಾ ಮೇಠಿ (10) ಹೆತ್ತವರೊಂದಿಗೆ ಶುಕ್ರವಾರ ಪ್ರಧಾನಿಯ‌ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದಳು. ಆದರೆ ಜನಜಂಗುಳಿಯ ಮಧ್ಯೆ ಹೆತ್ತವರ ಕೈ ತಪ್ಪಿ ಬೇರ್ಪಟ್ಟಿದ್ದಳು. ಪೊಲೀಸರ ಗಮನಕ್ಕೆ

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆ Read More »

ಗಣೇಶನ ವಿಸರ್ಜನೆ ಹಿನ್ನೆಲೆ| 2 ದಿನ ಮದ್ಯ ಮಾರಾಟ ನಿಷೇಧ

ಸಮಗ್ರ ನ್ಯೂಸ್: ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸೆ.3 ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸೆಪ್ಟಂಬರ್ 3ರ ಸಂಜೆ 6 ಗಂಟೆಯಿಂದ ಸೆಪ್ಟಂಬರ್ 5ರ ಬೆಳಿಗ್ಗೆ 6 ಗಂಟೆರೆಗೂ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ನಾಳೆ ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ನ್ಯೂಟೌನ್, ಕೊಡಿಗೆಹಳ್ಳಿ, ಕೆಜಿ ಹಳ್ಳಿ, ಗೋವಿಂದಪುರ, ಡಿಜೆ ಹಳ್ಳಿ, ಬಾಣಸವಾಡಿ, ಕಮರ್ಷಿಯಲ್

ಗಣೇಶನ ವಿಸರ್ಜನೆ ಹಿನ್ನೆಲೆ| 2 ದಿನ ಮದ್ಯ ಮಾರಾಟ ನಿಷೇಧ Read More »