ಕರಾವಳಿ

ಮಂಗಳೂರು: ಒಂಟಿ ಮಹಿಳೆಯ‌ ಬೆದರಿಸಿ‌ ಮನೆ ದರೋಡೆಗೈದ ಪ್ರಕರಣ| ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

ಸಮಗ್ರ ನ್ಯೂಸ್: ಮನೆಯೊಂದರಲ್ಲಿ ಒಂಟಿ ಮಹಿಳೆ ಯನ್ನು ಬೆದರಿಸಿ ಸುಲಿಗೆಗೈದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಡಗಮಿಜಾರು ಗ್ರಾಮದ ದಿನೇಶ್ ಪೂಜಾರಿ (36), ಬೆಳ್ತಂಗಡಿ ತಾಲೂಕಿನ ಉಳಗುಡ್ಡ ಹೊಸಮನೆಯ ಸುಕೇಶ್ ಪೂಜಾರಿ (32), ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ಗ್ರಾಮದ ಹರೀಶ್ ಪೂಜಾರಿ (34) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 1 ತಲವಾರು, 2 ಸ್ಕೂಟರ್, 3 ಮೊಬೈಲ್ ಫೋನ್, 2 ಮಂಕಿಕ್ಯಾಪ್ ಹಾಗೂ ಸುಲಿಗೆಗೈದ 62 ಗ್ರಾಂ ಚಿನ್ನಾಭರಣವನ್ನೂ ವಶಪಡಿಸಲಾಗಿದೆ. ಪೊಲೀಸರು ವಶಪಡಿಸಿಕೊಂಡ

ಮಂಗಳೂರು: ಒಂಟಿ ಮಹಿಳೆಯ‌ ಬೆದರಿಸಿ‌ ಮನೆ ದರೋಡೆಗೈದ ಪ್ರಕರಣ| ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು Read More »

ದ.ಕ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ| ಮುಚ್ಚುವ ಭೀತಿಯಲ್ಲಿ ಶಿಕ್ಷಣ ಸಂಸ್ಥೆಗಳು

ಸಮಗ್ರ ನ್ಯೂಸ್: ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ಇದರಿಂದ ಆ ಶಾಲೆಗಳನ್ನು ಮುಚ್ಚುವ ಭೀತಿ ಎದುರಾಗಿದೆ. 2021-22 ಮತ್ತು 2022-23 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ 8 ಶಾಲೆಗಳು, ಬೆಳ್ತಂಗಡಿ ವಿಭಾಗದ 2, ಮಂಗಳೂರು ಉತ್ತರ ವಿಭಾಗದ 12, ಮಂಗಳೂರು ದಕ್ಷಿಣ ವಿಭಾಗದ 9, ಮೂಡಬಿದ್ರೆ

ದ.ಕ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ| ಮುಚ್ಚುವ ಭೀತಿಯಲ್ಲಿ ಶಿಕ್ಷಣ ಸಂಸ್ಥೆಗಳು Read More »

ಗೂಡ್ಸ್‌ ಲಾರಿ ಢಿಕ್ಕಿ| ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ 6 ಗಂಟೆಗೆ ಸುಮಾರಿಗೆ ಅಪರಿಚಿತ ಗೂಡ್ಸ್‌ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸಮರ್ಥ್ (14) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಸಮರ್ಥ್ ತಂದೆ ಪ್ರಭಾಕರ್ ನಿನ್ನೆ ಅಪಘಾತದ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರಾದ ಪ್ರಭಾಕರ್ ಹಾಗೂ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಸರಕಾರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿದ್ದ ಮಗನನ್ನು

ಗೂಡ್ಸ್‌ ಲಾರಿ ಢಿಕ್ಕಿ| ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು Read More »

ಪುತ್ತೂರು: ಮಹಿಳೆ ಮೇಲೆ ಅನ್ಯಕೋಮಿನ ಯುವಕನಿಂದ ಲೈಂಗಿಕ ದೌರ್ಜನ್ಯ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ ಪ್ರಕರಣವನ್ನು ಖಂಡಿಸಿ ಹಿಂದೂಪರ‌ ಸಂಘಟನೆಯಿಂದ ತಿಂಗಳಾಡಿಯಲ್ಲಿ ಸೆ. 15 ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ದಿನಸಿ ತರಲೆಂದು‌ ಅಂಗಡಿಗೆ ಬಂದ ಮಹಿಳೆಯ ಮೇಲೆ ಹಾಡುಹಗಲೇ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಯಾವುದೇ ಭಯವಿಲ್ಲದೆ‌ ಈ ರೀತಿಯ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಪುತ್ತೂರು: ಮಹಿಳೆ ಮೇಲೆ ಅನ್ಯಕೋಮಿನ ಯುವಕನಿಂದ ಲೈಂಗಿಕ ದೌರ್ಜನ್ಯ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ Read More »

ಮಂಗಳೂರು: ಟ್ರೋಲ್ ಆಗುತ್ತಿದ್ದಂತೆ ರಾತ್ರೋರಾತ್ರಿ ಗುಂಡಿ ಮುಚ್ಚಿದ ಹೆದ್ದಾರಿ ಪ್ರಾಧಿಕಾರ| ಈ ಡಾಂಬರಿಗಿಂತ ರೊಟ್ಟಿಗೆ ಕಲಸಿದ ರಾಗಿ ಹಿಟ್ಟೇ ಸ್ಟ್ರಾಂಗು ಎಂದ ಕಾಂಗ್ರೆಸ್

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ನಗರ ಮದುವಣಗಿತ್ತಿಯಂತೇ ಸಿಂಗಾರಗೊಂಡಿತ್ತು. ನಗರದ ರಾಜಮಾರ್ಗಗಳು ಮರು ಡಾಂಬರೀಕರಣಗೊಂಡು ಅಂದವಾಗಿತ್ತು. ಆದರೆ ಪ್ರಧಾನಿ ಬಂದು ಹೋದ ಹತ್ತೇ ದಿನದಲ್ಲಿ ರಸ್ತೆಯಲ್ಲಿ ಹೊಂಡ‌ ಬಿದ್ದಿದೆ. ಆದರೆ ರಸ್ತೆ ಹೊಂಡ ಬಿದ್ದಿರುವ ಚಿತ್ರಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾತ್ರೋ ರಾತ್ರಿ ಹೊಂಡವನ್ನು ಮುಚ್ಚಿ ತೇಪೆ ಕಾರ್ಯ ಮಾಡಿದೆ. ಮಂಗಳೂರು ನಗರ ಹೊರವಲಯದ

ಮಂಗಳೂರು: ಟ್ರೋಲ್ ಆಗುತ್ತಿದ್ದಂತೆ ರಾತ್ರೋರಾತ್ರಿ ಗುಂಡಿ ಮುಚ್ಚಿದ ಹೆದ್ದಾರಿ ಪ್ರಾಧಿಕಾರ| ಈ ಡಾಂಬರಿಗಿಂತ ರೊಟ್ಟಿಗೆ ಕಲಸಿದ ರಾಗಿ ಹಿಟ್ಟೇ ಸ್ಟ್ರಾಂಗು ಎಂದ ಕಾಂಗ್ರೆಸ್ Read More »

ಶಾಲೆಯಲ್ಲಿ ಬೆಳೆದ ಅಡಿಕೆ ಆದಾಯದಿಂದ ಶಾಲಾ ಮಕ್ಕಳಿಗಾಗಿ ಬಸ್ ಖರೀದಿಸಿದ ಸರ್ಕಾರಿ ಶಾಲೆ

ಬಂಟ್ವಾಳ : ಸುಮಾರು 628 ಅಡಿಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದೆ. ತನ್ನ ಕೈತೋಟದ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಗಡಿಗ್ರಾಮಗಳಲ್ಲೊಂದಾದ ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅದರಿಂದ ಲಭ್ಯವಾದ ಆದಾಯದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಸ್ ಖರೀದಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಈ ಶಾಲೆಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್​ಗೆ ಚಾಲನೆ ನೀಡಿ, ಶಾಲೆಗೆ

ಶಾಲೆಯಲ್ಲಿ ಬೆಳೆದ ಅಡಿಕೆ ಆದಾಯದಿಂದ ಶಾಲಾ ಮಕ್ಕಳಿಗಾಗಿ ಬಸ್ ಖರೀದಿಸಿದ ಸರ್ಕಾರಿ ಶಾಲೆ Read More »

ಪ್ರಧಾನಿ ಭೇಟಿ ನೀಡಿ ಹತ್ತೇದಿನದಲ್ಲಿ ಕಿತ್ತು ಹೋಯ್ತು‌ ಡಾಂಬರು| ಅಬ್ಬಬ್ಬಾ ನಮ್ಮ ಕಾಮಗಾರಿಗಳ ಗುಣಮಟ್ಟವೇ!!

ಸಮಗ್ರ ನ್ಯೂಸ್: ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಹಾಕಿದ್ದ ಡಾಂಬರು ಮೋದಿ ಭೇಟಿ ನೀಡಿ ಹೋದ ಹತ್ತೇ ದಿನಗಳಲ್ಲಿ ಕಿತ್ತುಹೋಗಿದೆ. ನವಮಂಗಳೂರು ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಸೆ.2ರಂದು ನಗರಕ್ಕೆ ಭೇಟಿ ನೀಡಿದ್ದರು. ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮೋದಿ ಅವರು ನವಮಂಗಳೂರು ಬಂದರಿನಿಂದ ರಸ್ತೆ ಮಾರ್ಗವಾಗಿ ಸಂಚರಿಸಿದ್ದರು. ಅವರು

ಪ್ರಧಾನಿ ಭೇಟಿ ನೀಡಿ ಹತ್ತೇದಿನದಲ್ಲಿ ಕಿತ್ತು ಹೋಯ್ತು‌ ಡಾಂಬರು| ಅಬ್ಬಬ್ಬಾ ನಮ್ಮ ಕಾಮಗಾರಿಗಳ ಗುಣಮಟ್ಟವೇ!! Read More »

ಸಿಸಿ ಕ್ಯಾಮರಾ ಮತ್ತು ತಂತಿ ತಡೆಬೇಲಿ ಧ್ವಂಸ ನಾಲ್ವರ ಬಂಧನ

ಮಂಗಳೂರು: ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದ್ದ ಹಿನ್ನೆಲೆ ಹಾಕಿದ್ದ ಸಿಸಿ ಕ್ಯಾಮರ ಮತ್ತು ತಂತಿ ತಡೆಬೇಲಿ ಧ್ವಂಸಗೈದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಡ್ಯಾರ್ ಸಾಯಿ ನಗರ ನಿವಾಸಿ ಸೂರಜ್ , ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್ ,ತಲಪಾಡಿ ನಿವಾಸಿ ಅಖಿಲ್ ,ಸೋಮೇಶ್ವರ ನಿವಾಸಿ ಪ್ರಜ್ವಲ್ ಬಂಧಿತರು ಅವರು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೋಮೇಶ್ವರ ದೇವಸ್ಥಾನ ಬಳಿಯಿಂದ ಮತ್ತು ಗಡಿಭಾಗ ಮೂಡ

ಸಿಸಿ ಕ್ಯಾಮರಾ ಮತ್ತು ತಂತಿ ತಡೆಬೇಲಿ ಧ್ವಂಸ ನಾಲ್ವರ ಬಂಧನ Read More »

ಅಡಿಕೆ ಆದಾಯದಿಂದ ಬಸ್ ಖರೀದಿಸಿ ಮಾದರಿಯಾದ ಸರ್ಕಾರಿ ಶಾಲೆ

ಸಮಗ್ರ ನ್ಯೂಸ್: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ತನ್ನ ಅಡಿಕೆ ತೋಟದ ಆದಾಯದಿಂದ ಬಸ್‌ ಸೌಲಭ್ಯ ಗಳಿಸಿಕೊಂಡ ಅಪೂರ್ವ ಸಂಗತಿಯೊಂದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಿಂದ ವರದಿಯಾಗಿದೆ. 112 ವರ್ಷಗಳ ಇತಿಹಾಸ ಇರುವ ವಿಟ್ಲದ ಮಿತ್ತೂರು ಸ. ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸುಮಾರು 4 ಎಕರೆ ಜಮೀನು ಹೊಂದಿದೆ. ಎಸ್‌ಡಿಎಂಸಿಯವರು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 2017ರಲ್ಲಿ ಇಲ್ಲಿ 628 ಅಡಿಕೆ ಸಸಿಗಳನ್ನು ನೆಟ್ಟು, ಬೆಳೆಸಿದ್ದಾರೆ. ಈಗ ಅಡಿಕೆ ಇಳುವರಿ ಬರುತ್ತಿದೆ. ಈ ತೋಟದ

ಅಡಿಕೆ ಆದಾಯದಿಂದ ಬಸ್ ಖರೀದಿಸಿ ಮಾದರಿಯಾದ ಸರ್ಕಾರಿ ಶಾಲೆ Read More »

ಸುಬ್ರಹ್ಮಣ್ಯ – ಜಾಲ್ಸೂರು ಹೆದ್ದಾರಿಯಲ್ಲಿ ಬಲಿಗಾಗಿ ಕಾಯುತ್ತಿವೆ ಎರಡು ಮರಗಳು

ಸಮಗ್ರ ನ್ಯೂಸ್: ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಯ ಮರಕತ ಬಳಿ ಎರಡು ಜೋಡಿ ಮರಗಳು ಜೀವ ಬಲಿಗಾಗಿ ಕಾಯುತ್ತಿವೆ. ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪ ‌ಮತ್ತು ಜಲಸ್ಪೋಟದಿಂದ ಈ ಹೆದ್ದಾರಿಯ ನಡುಗಲ್ಲಿನಿಂದ ಕಲ್ಲಾಜೆವರೆಗೆ ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಗುಡ್ಡ ಕುಸಿದ ಪರಿಣಾಮ ಹಲವಾರು ಮರಗಳು ಧರಶಾಹಿಯಾಗಿದ್ದವು. ಇದರಲ್ಲಿ ಹಲವು ಮರಗಳು ಉರುಳಿದ್ದರೆ ಕೆಲವೊಂದು ಮರಗಳು ಅಲ್ಲೇ ಕುಸಿದು ಕುಳಿತಿವೆ. ಹೀಗೆ ಉಂಟಾದ ವಿಕೋಪದಿಂದ ಎರಡು ಬೃಹತ್ ಮರಗಳು ಮರಕತ ಬಳಿ‌ ರಸ್ತೆಗೆ

ಸುಬ್ರಹ್ಮಣ್ಯ – ಜಾಲ್ಸೂರು ಹೆದ್ದಾರಿಯಲ್ಲಿ ಬಲಿಗಾಗಿ ಕಾಯುತ್ತಿವೆ ಎರಡು ಮರಗಳು Read More »