ಕರಾವಳಿ

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದರೂ ಗ್ರಾಮೀಣ ಭಾರತ ಇಂದಿಗೂ ಅದೇ ಪರಿಸ್ಥಿತಿಯಲ್ಲಿದೆ ಎಂಬುದು ಅಉಳ್ಯ ತಾಲೂಕಿನಲ್ಲಿ ಮತ್ತೆ‌ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ದ.ಕ ಜಿಲ್ಲೆಯ‌ ಸುಳ್ಯ ತಾಲೂಕಿನ ಅಮರ ಪಡ್ನೂರು‌ ಗ್ರಾಮದ ಶೇಣಿ-ಹೊಸಮಜಲು ರಸ್ತೆ. ಈ‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ನಡೆದುಕೊಂಡು ಹೋಗುವುದಕ್ಕೆ ಕಷ್ಟ ಪಡುವಂತಾಗಿದೆ. ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರುಮಯವಾಗಿರುವ ಈ ರಸ್ತೆ

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು? Read More »

ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ‌ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಈ ಬಾರಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದ್ದು ಭರ್ಜರಿ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಸೆಪ್ಟೆಂಬರ್​ 26ರಿಂದ ಅಕ್ಟೋಬರ್​ 6ರ ರವರೆಗೆ ದಸರಾ ಸಡಗರ ಮನೆ ಮಾಡಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದೆಯ ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ತಾಯಿ ಶಾರದೆಗೆ 8 ಲಕ್ಷದ ಮೌಲ್ಯದ ಸೀರೆಯನ್ನು ಉಡಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಜರಿ ಸೀರೆಯೊಂದಿಗೆ ದೇವಿ‌ ಮೆರೆಯಲಿದ್ದಾಳೆ. ಇನ್ನು ಈ ಸೀರೆಯನ್ನು ವಾರಣಾಸಿಯ ಮುಸ್ಲಿಂ ಕುಟುಂಬದವರು ತಯಾರು ಮಾಡಿರುವುದು ಮತ್ತೊಂದು

ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ‌ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ Read More »

ಸುಳ್ಯ: ಸರ್ಕಾರಿ ಜಾಗ ಅತಿಕ್ರಮಣಕ್ಕೆ ಯತ್ನ..! ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ|

ಸಮಗ್ರ ನ್ಯೂಸ್: ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಘಟನೆ ಸುಳ್ಯ ನಗರದ ಜಯನಗರ ಎಂಬಲ್ಲಿ ನಡೆದಿದೆ. ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ ವಾಸಿಸಲು ಮನೆ ಮತ್ತು ಖಾಲಿ ಜಾಗವಿದ್ದರೂ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಸೆ.16 ರಂದು ಜೆ.ಸಿ.ಬಿ ತರಿಸಿ ಕೆಲಸ ಪ್ರಾರಂಭಿಸಿದ್ದರು. ಈ ವೇಳೆ ಸ್ಥಳೀಯರಾದ ಹಸೈನಾರ್ ಜಯನಗರ ಎಂಬವರು ಇದನ್ನು ತಡೆ ಹಿಡಿದು, ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು,

ಸುಳ್ಯ: ಸರ್ಕಾರಿ ಜಾಗ ಅತಿಕ್ರಮಣಕ್ಕೆ ಯತ್ನ..! ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ| Read More »

ಸುಳ್ಯ: ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಕಂಡುಬಂದ ಬೇರು! ಕೊರಗಜ್ಜನ ಸನ್ನಿಧಿಯಲ್ಲಿ ನಡೆಯಿತೊಂದು ಪವಾಡ!!

ಸಮಗ್ರ ನ್ಯೂಸ್: ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಮಾಡಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆ ಎಂಬಲ್ಲಿ ನಡೆದಿದೆ. ಕೊರಗಜ್ಜ ದೈವ ತುಳುನಾಡಿನಲ್ಲಿ ಅತ್ಯಂತ ಕಾರಣಿಕ ದೈವವಾಗಿ ಹೆಸರುವಾಗಿಯಾಗಿದೆ. ಈ ದೈವಕ್ಕೆ ಹರಕೆ ಹೇಳಿದರೆ , ಪ್ರಾರ್ಥನೆ ಮಾಡಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಗುತ್ತಿಗಾರು ಬಳಿಯ ಮೊಗ್ರದ ಮಾತ್ರಮಜಲು ಎಂಬಲ್ಲಿ ಶೀನಪ್ಪ ಎಂಬವರ ಮನೆಯ ವಠಾರದಲ್ಲಿ ಕೊರಗಜ್ಜ ದೈವದ ಕಟ್ಟೆ ಇದೆ. ಇಲ್ಲಿ

ಸುಳ್ಯ: ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಕಂಡುಬಂದ ಬೇರು! ಕೊರಗಜ್ಜನ ಸನ್ನಿಧಿಯಲ್ಲಿ ನಡೆಯಿತೊಂದು ಪವಾಡ!! Read More »

ವಿಟ್ಲ: ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿಯರು

ಸಮಗ್ರ‌ ನ್ಯೂಸ್:‌ ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿಯರು ಪತ್ತೆಯಾದ ಘಟನೆಕುಡ್ತಮುಗೇರು ಸಮೀಪದ ಪಡಾರು ಬೊಳ್ಪಾದೆ ಗುಡ್ಡದಲ್ಲಿ ನಡೆದಿದೆ. ಗುಡ್ಡ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರೊಂದಿಗೆ ಮುಸ್ಲಿಂ ಯುವಕನಿದ್ದು ಇದರಿಂದ ಸಾರ್ವಜನಿಕರು ಸಂಶಯಗೊಂಡಿದ್ದಾರೆ. ಮುಸ್ಲಿಂ ಯುವಕ ಕೆಲಸ ಕೊಡಿಸುವ ಆಮಿಷವೊಡ್ಡಿ ಇಲ್ಲಿಗೆ ಕರೆತಂದಿದ್ದಾಗಿ ತಿಳಿದುಬಂದಿದೆ. ಕೇರಳ ಮೂಲದವರು ಎಂದು ಕೂಡ ಹೇಳಲಾಗುತ್ತಿದೆ. ಇವರನ್ನು ಹಿಡಿದ ಅಲ್ಲಿನ ಸಾರ್ವಜನಿಕರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ

ವಿಟ್ಲ: ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿಯರು Read More »

ಮಲ್ಪೆ ಬೀಚ್ ನಲ್ಲಿ ಬೂತಾಯಿ ರಾಶಿ| ಮೀನು ಹೆಕ್ಕಲು ಮುಗಿಬಿದ್ದ ಜನರು

ಸಮಗ್ರ ನ್ಯೂಸ್: ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಜನಸಾಗರವೇ ಸೇರಿತ್ತು. ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಅಷ್ಟಕ್ಕೂ ಅಲ್ಲಿ ಮೀನಿನ ಜಾತ್ರೆಯೇ ಶುರುವಾಗಿತ್ತು. ಯಾರಿಗೆ ಯಾರೂ ಕೇಳುವಂತಿಲ್ಲ, ಯಾವ ಮೀನಿಗೂ ದುಡ್ಡು ಕೊಡುವಂತಿಲ್ಲ. ಹೀಗಾಗಿ ಜನ ಪುಕ್ಸಟ್ಟೆ

ಮಲ್ಪೆ ಬೀಚ್ ನಲ್ಲಿ ಬೂತಾಯಿ ರಾಶಿ| ಮೀನು ಹೆಕ್ಕಲು ಮುಗಿಬಿದ್ದ ಜನರು Read More »

ಮಂಗಳೂರು: ಸೆ.23 ರಂದು ವಿವಿಧ ಕಂಪೆನಿಗಳಿಂದ ನೇರ ಸಂದರ್ಶನ

ಸಮಗ್ರ ನ್ಯೂಸ್: ದ.ಕ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಸೆ.23ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಲಾಲ್‌ಬಾಗ್‌ನಲ್ಲಿರುವ ಮನಪಾ ಕಟ್ಟಡದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಯೋಜಿಸಲಾಗಿದೆ. ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ (ಬಿ.ಫಾರ್ಮಾ, ಎಂ ಫಾರ್ಮಾ, ಬಿಎಸ್ಸಿ, ನರ್ಸಿಂಗ್, ಜಿ.ಎನ್.ಎಂ) ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ:0824-2457139ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ

ಮಂಗಳೂರು: ಸೆ.23 ರಂದು ವಿವಿಧ ಕಂಪೆನಿಗಳಿಂದ ನೇರ ಸಂದರ್ಶನ Read More »

ಸುಳ್ಯ: ಗಿಡಗಂಟಿಗಳಿಂದ ಕೂಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಮುಕ್ತಿ ನೀಡಿದ ಮೆಸ್ಕಾಂ

ಸಮಗ್ರ ನ್ಯೂಸ್: ಸುಳ್ಯ ನಗರ ಸಮೀಪದ ನಾಗಪಟ್ಟಣಕ್ಕೆ ಹೋಗುವ ರಸ್ತೆ ಕಲ್ಲು ಮುಟ್ಟಲು ಬಸ್ ಸ್ಟಾಂಡಿನ ಎದುರುಗಡೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ, ಎಚ್ ಪಿ ಲೈನಿನ ಕಂಬಕ್ಕೆ ಸಂಪೂರ್ಣವಾಗಿ ಮುಚ್ಚಿ ಹೋಗಿತ್ತು. ಈ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ‘ಸಮಗ್ರ ಸಮಾಚಾರ’ಕ್ಕೆ ಮಾಹಿತಿ ನೀಡಿದ್ದರು. ಈ ಕುರಿತು “ವಿದ್ಯುತ್ ಕಂಬವನ್ನು ವಶ ಪಡಿಸಿಕೊಂಡ ಗಿಡ-ಮರ” ಎಂಬ ಶೀರ್ಷಿಕೆಯಲ್ಲಿ ವರದಿ ಬಿತ್ತರಿಸಿತ್ತು. ಇದಲ್ಲದೆ ಸ್ವಚ್ಛ ಗೊಳಿಸದಿದಲ್ಲಿ ಮೆಸ್ಕಾಂ ಇಲಾಖೆಯ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಕೂಡ

ಸುಳ್ಯ: ಗಿಡಗಂಟಿಗಳಿಂದ ಕೂಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಮುಕ್ತಿ ನೀಡಿದ ಮೆಸ್ಕಾಂ Read More »

ಪ್ರವೀಣ್ ನೆಟ್ಟಾರ್ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಸರಕಾರದ ವತಿಯಿಂದ ನೀಡಲಾದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಸೋಮವಾರ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ತಿಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ಕಛೇರಿಯಲ್ಲಿ ಪ್ರವೀಣ್ ಪತ್ನಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ಕೂಡಲೇ ನೆರವೇರಿಸಬೇಕು. ಹಿಂದೆಯೂ ಇದೇ ರೀತಿಯ ಆಶ್ವಾಸನೆ ನೀಡಿ ಈಡೇರಿಸಿಲ್ಲ. ಅದು ಪರೇಶ್

ಪ್ರವೀಣ್ ನೆಟ್ಟಾರ್ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ Read More »

ಮದರಸಾದಲ್ಲಿ ಬಾಲಕನಿಗೆ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡಿದ ಶಿಕ್ಷಕ, ಆರೋಪಿ ಬಂಧನ

ಮಂಗಳೂರು: ಮದರಸಾದಲ್ಲಿ 11ರ ಹರೆಯದ ಬಾಲಕನಿಗೆ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡಿದ ಉಸ್ತಾನ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹರೇಕಳ ಗ್ರಾಮದ ದೇರಿಕಟ್ಟೆ ಎಂಬಲ್ಲಿ ಮದರಸಾದ ಶಿಕ್ಷಕ ಹಲ್ಲೆ ನಡೆಸಿದ ಘಟನೆಯೊಂದು  ನಡೆದಿತ್ತು. ನೊಂದ ಬಾಲಕನ ತಂದೆ ಮೊಹಮ್ಮದ್ ಎಂಬವರು ನೀಡಿದ ದೂರಿನ ಹಿನ್ನೆಲೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ ಬಾಲಕನಿಗೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ವೇಳೆ ಸಂಭವಿಸಿದೆ. ದೂರಿನ ಹಿನ್ನೆಲೆ ಶಿಕ್ಷಕ ಉಸ್ತದ್ ಯಹ್ಯಾ ಫೈಝಿಯನ್ನು ಬಂಧಿಸಲಾಗಿದೆ. ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ

ಮದರಸಾದಲ್ಲಿ ಬಾಲಕನಿಗೆ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡಿದ ಶಿಕ್ಷಕ, ಆರೋಪಿ ಬಂಧನ Read More »