ಕರಾವಳಿ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ| ಸೆ.29ರ ವರೆಗೆ ರಾಜ್ಯದ ಹಲವೆಡೆ ಮಳೆ‌ ಸಂಭವ

ಸಮಗ್ರ ನ್ಯೂಸ್: ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಯಾದಗಿರಿ, ಕೊಪ್ಪಳ, ಗದಗ,

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ| ಸೆ.29ರ ವರೆಗೆ ರಾಜ್ಯದ ಹಲವೆಡೆ ಮಳೆ‌ ಸಂಭವ Read More »

ಕರಾವಳಿಯಲ್ಲಿ ಪಿಎಫ್ಐ ಮೇಲೆ ಮತ್ತೊಮ್ಮೆ ದಾಳಿ| ಹಲವು ಮುಖಂಡರು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಅವಿಭಜಿತ ದ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ತಡರಾತ್ರಿ ಎನ್ಐಎ ದಾಳಿ ನಡೆಸಿದ್ದು, ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಹಲವು ಮಂದಿ ನಾಯಕರನ್ನು ಪೊಲೀಸರು ಸೋಮವಾರ ತಡರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ, ತಲಪಾಡಿ, ಮಂಗಳೂರು ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕೆಲವು ಪ್ರದೇಶದ ಮನೆಗಳಿಂದ ಹಲವು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮಂದಿಯನ್ನು ಸೆಕ್ಷನ್ 107,

ಕರಾವಳಿಯಲ್ಲಿ ಪಿಎಫ್ಐ ಮೇಲೆ ಮತ್ತೊಮ್ಮೆ ದಾಳಿ| ಹಲವು ಮುಖಂಡರು ಪೊಲೀಸ್ ವಶಕ್ಕೆ Read More »

ಸುಳ್ಯ: 7 ವರ್ಷ ಕಳೆದರೂ ಪೂರ್ಣಗೊಳ್ಳದ ಅಂಬೇಡ್ಕರ್ ಭವನ| ಹೋರಾಟದ ಎಚ್ಚರಿಕೆ ನೀಡಿದ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಂಬೇಡ್ಕರ್ ಭವನ ಸುಮಾರು ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಅಂಬೇಡ್ಕರ್ ಭವನ ಇದುವರೆಗೂ ಸಂಪೂರ್ಣವಾಗಿಲ್ಲ. ತಕ್ಷಣ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಹಲವು ಸಭೆಗಳಲ್ಲಿ ಒಂದು ವರ್ಷದೊಳಗಡೆ ಸಂಪೂರ್ಣ ಮಾಡಿಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು ಸುಮಾರು 7 ವರ್ಷ ಕಳೆದಿದೆ ಇನ್ನು ಸಂಪೂರ್ಣವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲಸ ಸ್ಟಾರ್ಟ್ ಮಾಡುತ್ತಾರೆ, ಮತ್ತೆ ಅರ್ಧದಲ್ಲಿ ನಿಲ್ಲುತ್ತದೆ, ಮತ್ತೆ ಇವಾಗ ಎಲೆಕ್ಷನ್

ಸುಳ್ಯ: 7 ವರ್ಷ ಕಳೆದರೂ ಪೂರ್ಣಗೊಳ್ಳದ ಅಂಬೇಡ್ಕರ್ ಭವನ| ಹೋರಾಟದ ಎಚ್ಚರಿಕೆ ನೀಡಿದ ರಕ್ಷಣಾ ವೇದಿಕೆ Read More »

ಮಕ್ಕಳಿಗೆ‌ ಸಂಸ್ಕಾರವನ್ನು ಕಲಿಸುವ ಅವಶ್ಯಕತೆ ಇದೆ – ಕಿಶೋರ್ ಕುಮಾರ್

ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗಿ‌ ಭಾರತೀಯ ಸಂಸ್ಕಾರ ಮರೆಯಾಗುತ್ತಿದೆ. ಆದ್ದರಿಂದ ಇಂದು ಸಂಸ್ಕ್ರತಿಗಳ ಉಳಿವಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯವಿದೆ. ಇವನ್ನು ಹಿರಿಯರನ್ನು ಗೌರವಿಸುವ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು. ಅವರು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ, ವಾರ್ಷಿಕ ಮಹಾಸಭೆ, ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಸಹಯೋಗದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಉದ್ಘಾಟನೆ ಹಾಗು

ಮಕ್ಕಳಿಗೆ‌ ಸಂಸ್ಕಾರವನ್ನು ಕಲಿಸುವ ಅವಶ್ಯಕತೆ ಇದೆ – ಕಿಶೋರ್ ಕುಮಾರ್ Read More »

ದಸರಾ ರಜೆ ನೀಡುವಲ್ಲಿ ಜಿಲ್ಲಾಡಳಿತಕ್ಕೆ ಕನ್ಪ್ಯೂಷನ್| ಒಂದೇ ದಿನದಲ್ಲಿ ಮತ್ತೆ ರಜೆ ಬದಲಾವಣೆ

ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ. 28ರಿಂದ ಅ. 1ರ ವರೆಗೆ ಹೆಚ್ಚುವರಿಯಾಗಿ (4 ದಿನಗಳು) ನೀಡಲು ಸರಕಾರ ಶುಕ್ರವಾರ ಆದೇಶಿಸಿತ್ತು. ಆದರೆ ಜಿಲ್ಲಾಧಿಕಾರಿಗಳು ಶನಿವಾರ ಸಂಜೆ ವೇಳೆಗೆ ‌ಮತ್ತೆ ರಜೆಯನ್ನು ಪರಿಷ್ಕರಣೆ ಮಾಡಿದ್ದು, ಮತ್ತೆ ಜಿಲ್ಲೆಯಾದ್ಯಂತ ಸೆ.28ರಿಂದ ದಸರಾ ರಜೆ ಘೋಷಿಸಿ ಆದೇಶಿಸಿದ್ದಾರೆ. 2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಶಾಲೆಗಳಿಗೆ ದಸರಾ ರಜೆಯನ್ನು

ದಸರಾ ರಜೆ ನೀಡುವಲ್ಲಿ ಜಿಲ್ಲಾಡಳಿತಕ್ಕೆ ಕನ್ಪ್ಯೂಷನ್| ಒಂದೇ ದಿನದಲ್ಲಿ ಮತ್ತೆ ರಜೆ ಬದಲಾವಣೆ Read More »

ಬೆಳ್ತಂಗಡಿ ; ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಯುವಕನೊಬ್ಬ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೆರಿಯ ಗ್ರಾಮದ ಚಂದ್ರಶೇಖರ್ (24) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಗಾರೆ ಮತ್ತು ವೈರಿಂಗ್ ಕೆಲಸ ಮಾಡುತ್ತಿದ್ದ ಈತ , ಗೆಳೆಯರ ಜೊತೆಗೆ ಸೇರಿ ಶಬರಿ ಎಂಬ ಸ್ವಸಹಾಯ ಸಂಘ ರಚಿಸಿದ್ದು, ಈ ಸಂಘದ ಮೂಲಕ ಉಜಿರೆಯ ಖಾಸಗಿ ಬ್ಯಾಂಕಿನಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಎಂಟು ಜನ ಹಂಚಿಕೊಂಡಿದ್ದರು. ಆದರೆ ಚಂದ್ರಶೇಖರ್ ತೆಗೆದ

ಬೆಳ್ತಂಗಡಿ ; ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು Read More »

ಕರಾವಳಿಗೆ ಕಾಲಿಟ್ಟ ಪೋಸ್ಟರ್ ಅಭಿಯಾನ| ಬೆಳ್ತಂಗಡಿ ಶಾಸಕರಿಗೆ ತಟ್ಟಿದ ‘PAY MLA’ ಬಿಸಿ|

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ ಇದೀಗ ಕರಾವಳಿಗೂ ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಎಂಟ್ರಿ ಕೊಟ್ಟಿದ್ದು, ಶಾಸಕರ ಫೋಟೋ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಹಾಕಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದು, ಬೆಳ್ತಂಗಡಿಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ಪೇ ಎಂಎಲ್ ಎ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ

ಕರಾವಳಿಗೆ ಕಾಲಿಟ್ಟ ಪೋಸ್ಟರ್ ಅಭಿಯಾನ| ಬೆಳ್ತಂಗಡಿ ಶಾಸಕರಿಗೆ ತಟ್ಟಿದ ‘PAY MLA’ ಬಿಸಿ| Read More »

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು

ಸಮಗ್ರ ನ್ಯೂಸ್: ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಭಾಸ್ಕರ ಶೆಟ್ಟಿ ತಾಯಿ‌ ಗುಲಾಬಿ‌ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಹಣ ಇದ್ದವರಿಗೆ ಒಂದು ಕಾನೂನು, ಪಾಪದವರಿಗೆ ಇನ್ನೊಂದು ಕಾನೂನಾ? ಜೀವಾವಧಿ ಶಿಕ್ಷೆ ಪ್ರಕಟ ಆದವರಿಗೆ ಜಾಮೀನು ಹೇಗೆ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ. ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ರಾಜೇಶ್ವರಿ ಶೆಟ್ಟಿ, ನವನೀತ್, ನಿರಂಜನ್ ಭಟ್‌ಗೆ ಜಾಮೀನು ಮಂಜೂರು ಮಾಡಿದೆ. ಜೂನ್ 8,

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು Read More »

ದಸರಾ ಹಿನ್ನಲೆ; ಮಂಗಳೂರು ತಾಲೂಕಿನ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನ ರಜೆ

ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ. 28ರಿಂದ ಅ. 1ರ ವರೆಗೆ ಹೆಚ್ಚುವರಿಯಾಗಿ (4 ದಿನಗಳು) ನೀಡಲು ಸರಕಾರ ಶುಕ್ರವಾರ ಆದೇಶಿಸಿದೆ. ಆದರೆ ಇದು ದ.ಕ. ಜಿಲ್ಲೆಯ ಇತರ ತಾಲೂಕುಗಳಿಗೆ ಅನ್ವಯಿಸುವುದಿಲ್ಲ. 2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ ಅ. 16ರ ವರೆಗೆ ನಿಗದಿಪಡಿಸಲಾಗಿತ್ತು. ಸರಕಾರ ಇದೀಗ ಮಂಗಳೂರು

ದಸರಾ ಹಿನ್ನಲೆ; ಮಂಗಳೂರು ತಾಲೂಕಿನ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನ ರಜೆ Read More »

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ Read More »