ಕರಾವಳಿ

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ

ಸಮಗ್ರ ನ್ಯೂಸ್: ಮಂಗಳೂರು ವಿ.ವಿ ಯಿಂದ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು,ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಕ್ಲಾಕ್ ಟವರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. UUCMS ತಂತ್ರಾಂಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ . ವಿದ್ಯಾರ್ಥಿಗೆ ದೊರೆಯುವ ಎಲ್ಲಾ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತೆ ಹಾಗೂ ಬೇರೆ ಕಾಲೇಜಿಗೆ ವರ್ಗಾವಣೆಯನ್ನು ವಿದ್ಯಾರ್ಥಿ ಪಡೆಯದ ರೀತಿ

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ Read More »

ಕಡಬ: ಕಂಬಳಿ ಮಾರಲು ಬಂದವರಿಂದ ಒಂಟಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಕಿರುಚಾಟಕ್ಕೆ ಪರಾರಿಯಾದವರ‌ ಕಾರು ಅಪಘಾತ

ಸಮಗ್ರ ನ್ಯೂಸ್: ಕಂಬಳಿ ಮಾರುವ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಡಬದ ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ನಡೆದಿದೆ. ಮಹಿಳೆ ಕಿರುಚಾಡಿಕೊಂಡಾಗ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಳಲಿಯ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮಿಯಾಸುದ್ದಿನ್ ಅಪಘಾತದಲ್ಲಿ ಗಾಯಗೊಂಡವರು. ಇವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಕಂಬಳಿ ಮಾರಲು ಬಂದವರಿಂದ ಒಂಟಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಕಿರುಚಾಟಕ್ಕೆ ಪರಾರಿಯಾದವರ‌ ಕಾರು ಅಪಘಾತ Read More »

ಸುಳ್ಯ: ರಾತ್ರೋರಾತ್ರಿ ತಲೆ ಎತ್ತಿದ ವೈನ್ ಶಾಪ್| ಗ್ರಾಮೀಣ ಜನರಿಗೆ ಫುಲ್ ಶಾಕ್

ಸಮಗ್ರ ನ್ಯೂಸ್: ಹೋರಾಟಗಾರರು ನಮ್ಮೂರಲ್ಲಿ ಮದ್ಯದ ಅಂಗಡಿ ಬೇಡ ಎಂದು ಹೋರಾಟ, ಪ್ರತಿಭಟನೆ ಮಾಡುತ್ತಿರುವಾಗಲೇ ಪಕ್ಕದ‌ ಊರಲ್ಲಿ ರಾತ್ರೋರಾತ್ರಿ ವೈನ್ ಶಾಪ್ ಒಂದು ತಲೆ‌ ಎತ್ತಿದ್ದು‌‌ ಗ್ರಾಮಸ್ಥರು ಫುಲ್ ಶಾಕ್ ಅನುಭವಿಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನಲ್ಲಿ ನಡೆದಿದೆ. ಕಳೆದೆರಡು ವಾರಗಳ ಹಿಂದೆ ಕೊಲ್ಲಮೊಗ್ರುವಿಗೆ 6 ಕಿ.ಮೀ ದೂರವಿರುವ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಗ್ರಾಮದ ಸಮಾನ ಮನಸ್ಕ ಜನರು ಒಟ್ಟಾಗಿ ಮದ್ಯದಂಗಡಿ ವಿರುದ್ದ ಮುಗಿಬಿದ್ದಿದ್ದರು.

ಸುಳ್ಯ: ರಾತ್ರೋರಾತ್ರಿ ತಲೆ ಎತ್ತಿದ ವೈನ್ ಶಾಪ್| ಗ್ರಾಮೀಣ ಜನರಿಗೆ ಫುಲ್ ಶಾಕ್ Read More »

ಹಿರಿಯ ದೈವಪಾತ್ರಿಗಳಿಗೆ ₹2000 ಮಾಸಾಶನ – ಸಚಿವ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ದೈವ ನರ್ತನ ಮಾಡುವವರಿಗೆ ಸಚಿವ ಸುನೀಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದು, 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಎರಡು ಸಾವಿರ ಮಾಸಾಶನ ನೀಡಲು ತೀರ್ಮಾನಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, 60 ವರ್ಷ ಮೇಲ್ಪಟ್ಟ ದೈವ ನರ್ತನ ಮಾಡುವವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 2000 ಮಾಸಾಶನ ನೀಡಲಿದೆ ಎಂದರು. ನಂತರ ಈ ಬಗ್ಗೆ ಮಾತನಾಡಿದ ಸಚಿವರು ದೈವಾರಾಧನೆ ನಮ್ಮ ತುಳುನಾಡಿನ

ಹಿರಿಯ ದೈವಪಾತ್ರಿಗಳಿಗೆ ₹2000 ಮಾಸಾಶನ – ಸಚಿವ ಸುನಿಲ್ ಕುಮಾರ್ Read More »

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಯಾತ್ರಾರ್ಥಿಗಳಿಗೆ ಮಹತ್ವದ ಸೂಚನೆ| ಗ್ರಹಣ ಹಿನ್ನೆಲೆಯಲ್ಲಿ ದರ್ಶನ ಸಮಯ ಬದಲಾವಣೆ

ಸಮಗ್ರ ನ್ಯೂಸ್: ಅಕ್ಟೋಬರ್ 25 ರಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸೂರ್ಯಗ್ರಹಣದ ಪ್ರಯುಕ್ತ ಮಧ್ಯಾಹ್ನ 2.30 ರಿಂದ ರಾತ್ರಿ 7.30 ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅನ್ನಪ್ರಸಾದವು ಮಧ್ಯಾಹ್ನ 2.30 ಕ್ಕೆ ಕೊನೆಗೊಂಡು ರಾತ್ರಿ 7.30 ರ ಬಳಿಕವೆ ನಡೆಯಲಿದೆ. ಅಕ್ಟೋಬರ್ 25 ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಯಾತ್ರಾರ್ಥಿಗಳಿಗೆ ಮಹತ್ವದ ಸೂಚನೆ| ಗ್ರಹಣ ಹಿನ್ನೆಲೆಯಲ್ಲಿ ದರ್ಶನ ಸಮಯ ಬದಲಾವಣೆ Read More »

ಅಡಿಕೆ ಎಲೆಚುಕ್ಕೆ ರೋಗ ವೈಜ್ಞಾನಿಕ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ನಿರ್ದೇಶನ ನೀಡಿದ ಕೇಂದ್ರ ಸಚಿವ ತೋಮರ್

ಸಮಗ್ರ ನ್ಯೂಸ್: ಕರ್ನಾಟಕದ ಮಲೆನಾಡು ಹಾಗೂ ಇತರ ಭಾಗಗಳಲ್ಲಿ ಅಡಿಕೆ ಬೆಳೆಗೆ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ವೈಜ್ಞಾನಿಕ ಅಧ್ಯಯನಕ್ಕೆ ತಜ್ಞರ ಸಮಿತಿಯೊಂದನ್ನು ಕೇಂದ್ರದ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮಾರ್ ರಚಿಸಲು ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಹೊಸದಿಲ್ಲಿಯಲ್ಲಿ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸದರ ಕಚೇರಿ

ಅಡಿಕೆ ಎಲೆಚುಕ್ಕೆ ರೋಗ ವೈಜ್ಞಾನಿಕ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ನಿರ್ದೇಶನ ನೀಡಿದ ಕೇಂದ್ರ ಸಚಿವ ತೋಮರ್ Read More »

ಮಂಗಳೂರು: ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

ಸಮಗ್ರ ನ್ಯೂಸ್: ಮಂಗಳೂರಿನಿಂದ ಉಡುಪಿಗೆ ಎಪಿಎಮ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಜಯವಾಡದ ಐಶ್ವರ್ಯ ಎಂಬವರ ಪರ್ಸ್ ಕಳೆದು ಹೋಗಿತ್ತು. ಈ ಕುರಿತು ಬಸ್ ನಿರ್ವಾಹಕ ವೆಂಕಟೇಶ್ ಹೇಮಳರನ್ನು ಸಂಪರ್ಕಿಸಿದಾಗ ಬಸ್ ಭಟ್ಕಳ ತಲುಪಿದ್ದು ಮಾರನೇ ದಿನ ವೆಂಕಟೇಶ್ ಅವರು ಪರ್ಸ್ ತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸ್ ನಲ್ಲಿ 10,000 ನಗದು, ಚಿನ್ನದ ಒಲೆ, ಐಡಿ ಕಾರ್ಡ್ ಮತ್ತು ಎಂಬಿಬಿಎಸ್ ಕಾರ್ಡ್ ಇತ್ತೆಂದು ತಿಳಿದುಬಂದಿದೆ. ಸ್ಥಳಿಯರು ವೆಂಕಟೇಶ್ ಹೇಮಳ ರ ಪ್ರಾಮಾಣಿಕತೆಯನ್ನು ಅಭಿನಂದಿಸಿದ್ದಾರೆ. ಯುವತಿ

ಮಂಗಳೂರು: ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ Read More »

ಮಂಗಳೂರು:ಸುರತ್ಕಲ್ ಟೋಲ್ ಗೇಟ್ ತೆರವಿಗೆ ಉಗ್ರ ಪ್ರತಿಭಟನೆ; ಹಲವರು ಅರೆಸ್ಟ್| ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಸಮಗ್ರ ನ್ಯೂಸ್: ಮಂಗಳೂರು ಬಳಿಯ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಟೋಲ್ ಗೇಟ್ ಕಿತ್ತುಹಾಕಲು ಸಾರ್ವಜನಿಕರು ಕರೆ ನೀಡಿರುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ಗೆ ನುಗ್ಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯತೆಗೆ ಹೆದ್ದಾರಿ 66ರಲ್ಲಿರುವ ಈ ಟೋಲ್‌ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದು, ಸರ್ಕಾರ ತೆಗೆದುಕೊಂಡಿದ್ದ ಅವಧಿ ಮುಗಿದಿದ್ದರಿಂದ ಇದೇ 18ರಂದು ತಾವೇ ಟೋಲ್‌ಗೇಟ್‌ ತೆರವುಗೊಳಿಸುವುದಾಗಿ ಹೋರಾಟಗಾರರು ಬೆದರಿಕೆ ಹಾಕಿದ್ದರು. ಈ ನಡುವೆ, ಪೊಲೀಸರು ಹೋರಾಟಗಾರರಿಗೆ ರಾತ್ರಿ ನೋಟಿಸ್‌ ಜಾರಿ

ಮಂಗಳೂರು:ಸುರತ್ಕಲ್ ಟೋಲ್ ಗೇಟ್ ತೆರವಿಗೆ ಉಗ್ರ ಪ್ರತಿಭಟನೆ; ಹಲವರು ಅರೆಸ್ಟ್| ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ತಡೆದ ಪ್ರಕರಣ| ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಕಾರನ್ನು ಬೆನ್ನತ್ತಿ ಅಡ್ಡಗಟ್ಟಿ ಮಾರಕಾಯುಧ ತೋರಿಸಿ ಬೆದರಿಕೆಯೊಡ್ಡಿರುವ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ತನಿಖಾಧಿಕಾರಿಯಲ್ಲಿರುವ ದಾಖಲೆಗಳನ್ನು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಿಐಡಿ ತನಿಖಾ ಕಚೇರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಡಿಜಿಪಿಯವರ ಪರವಾಗಿ ಆರ್‌. ಹಿತೇಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಹರೀಶ್‌ ಪೂಂಜಾ ಅವರು ಅ. 13ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ತಡೆದ ಪ್ರಕರಣ| ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ Read More »

ಸುಳ್ಯ: ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ!?

ಸಮಗ್ರ ನ್ಯೂಸ್: ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಾಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಾಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗಿದೆ. ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಾಗ್ರಿ ಇದ್ದ ಜಾಗದ

ಸುಳ್ಯ: ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ!? Read More »