ಕರಾವಳಿ

ಕಡಬ: ಅಟೋ ರಿಕ್ಷಾ- ಪಿಕಪ್ ನಡುವೆ ಅಪಘಾತ| 4 ವರ್ಷದ ಕಂದಮ್ಮನ ಬಲಿ ಪಡೆದ‌ ಜವರಾಯ

ಸಮಗ್ರ ನ್ಯೂಸ್: ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 4ವರ್ಷದ ಬಾಲಕ ಮೃತಪಟ್ಟ ಘಟನೆ ಕಡಬ ತಾಲೂಕಿನ ಕಡಬ – ಪಂಜ ರಸ್ತೆಯ ಕೋಡಿಂಬಾಳ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ರಿಕ್ಷಾ ಹಾಗೂ ಪಿಕಪ್ ನಡುವೆ ಕೋಡಿಂಬಾಳ ಸಮೀಪ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನವೀನ್ ಎಂಬವರ ಪುತ್ರ ಹಾರ್ದಿಕ್ (4) ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ

ಕಡಬ: ಅಟೋ ರಿಕ್ಷಾ- ಪಿಕಪ್ ನಡುವೆ ಅಪಘಾತ| 4 ವರ್ಷದ ಕಂದಮ್ಮನ ಬಲಿ ಪಡೆದ‌ ಜವರಾಯ Read More »

ಉಡುಪಿ: 100 ರೂಪಾಯಿ ಚಡ್ಡಿಗಾಗಿ ಸಮುದ್ರಕ್ಕೆ ಹಾರಿದ ಯುವಕ|ಬೋಟಿನಿಂದ ರಕ್ಷಣೆ

ಸಮಗ್ರ ನ್ಯೂಸ್: ನೀರಿಗೆ ಬಿದ್ದ ಚಡ್ಡಿಯನ್ನು ತೆಗೆಯಲು ಇಳಿದ ಯುವಕನೊಬ್ಬ ಮೇಲಕ್ಕೆ ಬಾರಲಾಗದೇ ನಗೆಪಾಟಲೀಗೀಡಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೀರಿಗೆ ಇಳಿದ ಯುವಕನನ್ನು ಬೋಟಿನಲ್ಲಿದ್ದ ಯುವಕರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಮೇಲ್ಭಾಗದಲ್ಲಿದ್ದವರು ಎಂತಾ ಕರ್ಮ ಮಾರಾಯ…ಚಡ್ಡಿ ತೆಗೆಯಲು ಯಾರಾದರು ನೀರಿಗೆ ಹಾರ್ತಾರಾ…ಅದು ನೂರು ರೂಪಾಯಿಗೆ ಸಿಗುತ್ತದೆ….ಎಂದು ಹೇಳುವುದು ಕೂಡಾ ವಿಡಿಯೋದಲ್ಲಿ ಕೇಳುತ್ತಿದೆ. ಕರಾವಳಿಯ ಮೀನುಗಾರಿಕಾ ಬಂದರೊಂದರಲ್ಲಿ ನಡೆದ ಪ್ರಸಂಗ ಇದು. ಮೀನುಗಾರಿಕೆ ದೋಣಿಯ ಕಾರ್ಮಿಕರೊಬ್ಬರ ಅಂಡರ್ ವೇರ್ ನೀರಿಗೆ ಬಿದ್ದಿದ್ದು, ಅದನ್ನು

ಉಡುಪಿ: 100 ರೂಪಾಯಿ ಚಡ್ಡಿಗಾಗಿ ಸಮುದ್ರಕ್ಕೆ ಹಾರಿದ ಯುವಕ|ಬೋಟಿನಿಂದ ರಕ್ಷಣೆ Read More »

ಪುತ್ತೂರು: ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಸಮಗ್ರ ನ್ಯೂಸ್: ಪುತ್ತೂರಿನ ವಸತಿ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದ ಮೈಸೂರಿನವರಾದ ತಿಪ್ಪೇಶ್ ಮತ್ತು ಅಭೀಷೆಕ್ ನವೆಂಬರ್ 7ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಶಾಲೆ ಮುಗಿಸಿದ ಇಬ್ಬರೂ ಮತ್ತೆ ತಮ್ಮ ಹಾಸ್ಟೆಲ್‌ಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಶಾಲಾ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿದೆ.

ಪುತ್ತೂರು: ಇಬ್ಬರು ವಿದ್ಯಾರ್ಥಿಗಳು ನಾಪತ್ತೆ Read More »

ಚಲಿಸುತ್ತಿದ್ದ ಬಸ್ ಗೆ ತಲೆಯಿಂದ ಡಿಚ್ಚಿ ಹೊಡೆದ ಬ್ರೆಜಿಲ್ ಫುಟ್ಬಾಲ್ ತಾರೆ ನೇಮಾರ್ ಅವರ ಅಭಿಮಾನಿ

ಕೇರಳ: ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜುಗೆ ಯುವಕನೊಬ್ಬ ಹಾರಿ ತಲೆಯಿಂದ ಗಾಜು ಒಡೆದು ಹಾಕಿರುವ ವಿಲಕ್ಷಣ ಘಟನೆ ಮಲಪ್ಪುರಂ ಜಿಲ್ಲೆಯ ಪೆರಿಂತಲ್ ಮನ್ನಾದಲ್ಲಿ ಜುಬಿಲಿ ಜಂಕ್ಷನ್‌ನಲ್ಲಿ ನಡೆದಿದೆ. ಖಾಸಗಿ ಬಸ್​ ಮಂಕಡಾ ಕಡೆಗೆ ತೆರಳುತ್ತಿತ್ತು, ಈ ವೇಳೆ ಬಸ್​ ಎದುರಿಗೆ ಓಡಿ ಬಂದು, ಮೇಲಕ್ಕೆ ಜಿಗಿದು ತಲೆಯಿಂದ ಡಿಕ್ಕಿ ಹೊಡೆದು ವಿಂಡ್​ಶೀಲ್ಡ್​ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಬಸ್​ ಗುದ್ದಿದ ರಭಸಕ್ಕೆ ಯುವಕನು ಕೂಡ ಕೊಂಚ ದೂರ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡ್​ಗಳ ಕಾಲ ನೆಲದ ಮೇಲೆಯೇ

ಚಲಿಸುತ್ತಿದ್ದ ಬಸ್ ಗೆ ತಲೆಯಿಂದ ಡಿಚ್ಚಿ ಹೊಡೆದ ಬ್ರೆಜಿಲ್ ಫುಟ್ಬಾಲ್ ತಾರೆ ನೇಮಾರ್ ಅವರ ಅಭಿಮಾನಿ Read More »

ಪುತ್ತೂರು: 8ನೇ ತರಗತಿಯ ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್: ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅನಾರೋಗ್ಯದಿಂದಾಗಿ ನಿಧನರಾಗಿರುವ ಘಟನೆ ನ.10ರಂದು ನಡೆದಿದೆ. ಮೃತರನ್ನು ಕೃತಿ ಕೆ.ಎ (13) ಎಂದು ಗುರುತಿಸಲಾಗಿದೆ. ಬನ್ನೂರಿನ ಸೇಡಿಯಾಪು ಕಂಜೂರು ನಿವಾಸಿಗಳಾದ ಆನಂದ ಕುಲಾಲ್‌ ಮತ್ತು ಪದ್ಮಾವತಿ ದಂಪತಿ ಪುತಿ ಕೃತಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇನ್ನು ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ರಜೆ ಕೊಡಲಾಗಿದೆ.

ಪುತ್ತೂರು: 8ನೇ ತರಗತಿಯ ವಿದ್ಯಾರ್ಥಿನಿ ಮೃತ್ಯು Read More »

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!!

ಸಮಗ್ರ ನ್ಯೂಸ್: ಅಪ್ರಾಪ್ತ ಶಾಲಾ ಬಾಲಕನ ಮೇಲೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬುರ್ಖಾಧಾರಿ ಮಹಿಳೆ ಹಾಗೂ ಯುವಕನೋರ್ವ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವುದೇಕೆ ಎನ್ನುವುದು ಬಯಲಾಗಿಲ್ಲ. ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದಿದ್ದಲ್ಲಿ ನೈತಿಕ ಪೊಲೀಸ್ ಗಿರಿ ನಿಯಂತ್ರಿಸುವುದು ಕಷ್ಟ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರು

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!! Read More »

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ವಿವಿಧ ಕಾರ್ಯಕ್ರಮಗಳ ಅನಾವರಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಲ್ಲಿನ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕರ್ನಾಟಕದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿ ಕೂಡ ಸಿದ್ಧಗೊಂಡಿದೆ. ನವೆಂಬರ್ 11ರಂದು ಬೆಳಿಗ್ಗೆ 10

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ವಿವಿಧ ಕಾರ್ಯಕ್ರಮಗಳ ಅನಾವರಣ Read More »

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿ ನಾಪತ್ತೆ

ಸಮಗ್ರ ನ್ಯೂಸ್: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ಕಂಬಳಬೆಟ್ಟು ನಿವಾಸಿ ದಿವಂಗತ ಆನಂದ ಅವರ ಪುತ್ರಿ ಸುಶ್ಮಿತಾ (21) ನಾಪತ್ತೆಯಾದ ಯುವತಿ. ನ. 8 ಮಂಗಳವಾರ ಬೆಳಿಗ್ಗೆ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಕೆಲಸಕ್ಕೆ ಇಂಟರ್‌ವ್ಯೂ ಲೆಟರ್ ಬಂದಿದ್ದು, ಹಾಗಾಗಿ ನಾನು ಹೋಗಿ ಬರುತ್ತೇನೆ ಎಂದು ಮನೆಯವರಲ್ಲಿ ಹೇಳಿ ತೆರಳಿದ್ದು, ನಂತರ ಮನೆಗೆ ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಆಕೆಯ ಹೆತ್ತವರು

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿ ನಾಪತ್ತೆ Read More »

‘ಕಾಂತಾರ’ ಬಳಿಕ ಗಡಿದಾಟಲಿದ್ದಾನೆ ‘ಶಿವದೂತೆ ಗುಳಿಗೆ’ | ತುಳು ರಂಗಭೂಮಿಯ ಕ್ರಾಂತಿ ಕನ್ನಡ, ಹಿಂದಿಯಲ್ಲಿ ಪ್ರದರ್ಶನಕ್ಕೆ ಸಜ್ಜು!

ಸಮಗ್ರ ನ್ಯೂಸ್: ತುಳುನಾಡಿನ ದೈವಗಳಾದ ಪಂಜುರ್ಲಿ, ಗುಳಿಗನ ಕಥೆಯಾಧಾರಿತ “ಕಾಂತಾರ’ ಸಿನೆಮಾ ದೇಶ-ವಿದೇಶದಲ್ಲಿ ಮೋಡಿ ಮಾಡುತ್ತಿರುವ ಮಧ್ಯೆಯೇ, ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ “ಶಿವದೂತೆ ಗುಳಿಗೆ’ ತುಳು ನಾಟಕ ಇದೀಗ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ! “ಕಾಂತಾರ’ ಸಿನೆಮಾದಲ್ಲಿ 20 ನಿಮಿಷ ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಪ್ರದರ್ಶನವಿದ್ದರೆ, ಶಿವದೂತೆ ಗುಳಿಗೆ ನಾಟಕವು ಪೂರ್ಣ ಗುಳಿಗನ ಕಥೆಯಾಧಾರಿತವಾಗಿದೆ. ವಿಶೇಷವೆಂದರೆ, ಕಾಂತಾರದಲ್ಲಿ “ಗುರುವ’ನಾಗಿ ಮಿಂಚಿರುವ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ಅವರೇ ಶಿವದೂತೆ

‘ಕಾಂತಾರ’ ಬಳಿಕ ಗಡಿದಾಟಲಿದ್ದಾನೆ ‘ಶಿವದೂತೆ ಗುಳಿಗೆ’ | ತುಳು ರಂಗಭೂಮಿಯ ಕ್ರಾಂತಿ ಕನ್ನಡ, ಹಿಂದಿಯಲ್ಲಿ ಪ್ರದರ್ಶನಕ್ಕೆ ಸಜ್ಜು! Read More »

ಸುಳ್ಯ: ಸೇತುವೆ, ರಸ್ತೆ ಸಂಪರ್ಕ ಸರಿ ಮಾಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಿಎಂ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸೇತುವೆ ಹಾಗೂ ರಸ್ತೆ ಸಂಪರ್ಕ ಸರಿ ಮಾಡುವಂತೆ ಮುಖ್ಯಮಂತ್ರಿಯವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಉಬರಡ್ಕದ ಅಮೈ ಪಾಲಡ್ಕ ಎಂಬಲ್ಲಿ ಹೊಸ ಸೇತುವೆ, ಯಾವಟೆ ಕಟ್ಟಕೋಡಿ ಅಚ್ಚು ಪಲ್ಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ, ಮಂಜಿಕಾನ ಬದನೆಕಜೆ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಮತ್ತು ಅದೇ ರಸ್ತೆಯಲ್ಲಿ ನದಿಗೆ ಸೇತುವೆ, ಇವೆಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಇರುವಂತಹ ಜಾಗ ಆದ ಕಾರಣ ಆದಷ್ಟು ಬೇಗ ಸೇತುವೆ ಮತ್ತು ಕಾಂಕ್ರೀಟಿಕರಣ

ಸುಳ್ಯ: ಸೇತುವೆ, ರಸ್ತೆ ಸಂಪರ್ಕ ಸರಿ ಮಾಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಿಎಂ ಗೆ ಮನವಿ Read More »