ಕರಾವಳಿ

ಬಂಟ್ವಾಳ:ದಿಢೀರ್ ಏರಿಕೆಯಾದ ನೀರಿನ ಹರಿವು|ಹೊಳೆ ಮಧ್ಯದಲ್ಲಿ ಬಾಕಿಯಾದ ಲಾರಿ

ಸಮಗ್ರ ನ್ಯೂಸ್: ನದಿ ನೀರಿನ ಹರಿವು ದಿಢೀರ್ ಏರಿಕೆಯಾಗಿ ಸೇತುವೆ ನಿರ್ಮಾಣ ಕಾಮಗಾರಿನಿರತ ಲಾರಿಯೊಂದಿ ಹೊಳೆ ಮಧ್ಯದಲ್ಲಿ ಬಾಕಿಯಾದ ಘಟನೆ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಮಂಗಳವಾರ ನಡೆದಿದೆ. ಮಳೆಯ ಹಿನ್ನಲೆಯಲ್ಲಿ ಸೇತುವೆಯ ಬಾಕಿಯುಳಿದ ಪಿಲ್ಲರ್‌ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಹೀಗಾಗಿ ಮಂಗಳವಾರ ನದಿಗೆ ಮಣ್ಣು ಹಾಕಿ ಲಾರಿ ನದಿಯಿಂದ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ನದಿ ನೀರು ಹೆಚ್ಚಳವಾಗಿದೆ. ಅಲ್ಲದೆ ಒಂದು ಭಾಗದ ಮಣ್ಣು ಕೂಡಾ ಕೊಚ್ಚಿ ಹೋಗಿದೆ. ಇದರಿಂದ ದಡಕ್ಕೆ ಬರಲಾಗದೆ

ಬಂಟ್ವಾಳ:ದಿಢೀರ್ ಏರಿಕೆಯಾದ ನೀರಿನ ಹರಿವು|ಹೊಳೆ ಮಧ್ಯದಲ್ಲಿ ಬಾಕಿಯಾದ ಲಾರಿ Read More »

ಮಹರಾಷ್ಟ್ರದಲ್ಲಿ ಅಪಘಾತ| ಸುರತ್ಕಲ್‌‌ನ ಯುವಕ ಮೃತ್ಯು

ಸಮಗ್ರ ನ್ಯೂಸ್: ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಮೀನಿನ ಲಾರಿಯೊಂದು ಮಹರಾಷ್ಟ್ರದ ಖಂಡಾಲಾ ಘಾಟ್ ಬಳಿ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕ ಸುರತ್ಕಲ್‌‌ನ ಕೃಷ್ಣಾಪುರದ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಕೃಷ್ಣಾಪುರ ನಿವಾಸಿ ಅಲ್ತಾಫ್ ಹುಸೇನ್ ಅವರ ಪುತ್ರ ಅಜ್ಮಲ್ (23) ಮೃತಪಟ್ಟ ಲಾರಿ ಚಾಲಕ. ಕುಂದಾಪುರ ಮೂಲದ ಲಾರಿಯಲ್ಲಿ ನಿನ್ನೆ ರಾತ್ರಿ ಅಜ್ಮಲ್ ಚಾಲಕನಾಗಿ ಮುಂಬೈಗೆ ತೆರಳಿದ್ದು, ಇಂದು ಖಂಡಾಲಾ ಘಾಟ್ ನಲ್ಲಿ ಲಾರಿ ಉರುಳಿಬಿದ್ದಿದೆ. ಚಾಲಕ ಅಜ್ಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ

ಮಹರಾಷ್ಟ್ರದಲ್ಲಿ ಅಪಘಾತ| ಸುರತ್ಕಲ್‌‌ನ ಯುವಕ ಮೃತ್ಯು Read More »

ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದ ಸಪ್ತಮಿ ಗೌಡ

ಸಮಗ್ರ ನ್ಯೂಸ್: ಕಾಂತಾರ ಚಿತ್ರ 50ನೇ ದಿನ ಪೂರೈಸಿದ ದಾಖಲೆ ಬರೆಯುತ್ತಿರುವ ಬೆನ್ನಲ್ಲೇ ಕಾಂತಾರದ ನಟಿ ಲೀಲಾ ಇದೀಗ ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದರು. ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರು, ಸಿನಿಮಾದ ಸಹನಟರು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು

ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದ ಸಪ್ತಮಿ ಗೌಡ Read More »

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಕ್ರಿ.ಶ. 1837ರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಮಂಗಳವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ Read More »

ಶೀಘ್ರದಲ್ಲೇ ತೆರೆಕಾಣಲಿದೆ ತುಳು ‘ಕಾಂತಾರ’

ಸಮಗ್ರ ನ್ಯೂಸ್: ವಿಶ್ವದಲ್ಲಿ ಅಪಾರ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು, ಸಿನಿಮಾ ಬಂದು ೫೦ ದಿನವಾದ್ರೂ ಅಬ್ಬರ ಕಡಿಮೆಯಾಗಿಲ್ಲ. ಕನ್ನಡದಲ್ಲಿ ತೆರೆಕಂಡು ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದ್ದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ

ಶೀಘ್ರದಲ್ಲೇ ತೆರೆಕಾಣಲಿದೆ ತುಳು ‘ಕಾಂತಾರ’ Read More »

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ

ಸಮಗ್ರ ನ್ಯೂಸ್: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ನ.14 ರ ರಾತ್ರಿ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ ಕಾರ್ತಿಕ್ (16) ಮೃತಪಟ್ಟ ಬಾಲಕ. ರಾತ್ರಿ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು, 9.30 ರ ಸುಮಾರಿಗೆ ಜೋರಾಗಿ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ .ಈ ವೇಳೆ ಮನೆಮಂದಿ ಹಾಲ್ ಗೆ ಓಡಿ ಬಂದಿದ್ದು, ಅದರೆ ಕಾರ್ತಿಕ್ ಏಳದೆ

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ Read More »

ಮಂಗಳೂರು: ಪಶ್ಚಿಮ ವಲಯ ಐಜಿಪಿಯಾಗಿ‌ ಡಾ. ಚಂದ್ರಗುಪ್ತ ನೇಮಕ

ಸಮಗ್ರ ನ್ಯೂಸ್: ಪಶ್ಚಿಮ ವಲಯ (ಮಂಗಳೂರು) ನೂತನ ಐಜಿಪಿಯಾಗಿ ಡಾ.ಚಂದ್ರಗುಪ್ತ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. 2006ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಚಂದ್ರಗುಪ್ತ ಈವರೆಗೆ ಮೈಸೂರು ನಗರದ ಪೊಲೀಸ್ ಆಯುಕ್ತರು ಹಾಗೂ ಡಿಐಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈವರೆಗೆ ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವಜ್ಯೋತಿ ರೇ ಅವರನ್ನು ಮಾನವ ಹಕ್ಕುಗಳು ಮತ್ತು ಕುಂದು ಕೊರತೆ ವಿಭಾಗದ ಐಜಿಪಿಯಾಗಿ ನೇಮಕಗೊಳಿಸಲಾಗಿದೆ.

ಮಂಗಳೂರು: ಪಶ್ಚಿಮ ವಲಯ ಐಜಿಪಿಯಾಗಿ‌ ಡಾ. ಚಂದ್ರಗುಪ್ತ ನೇಮಕ Read More »

ಸುಳ್ಯ: ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ| ಆರೋಪ ಸುಳ್ಳು ಎಂದವರು ಕಾನತ್ತೂರು ದೈವಸ್ಥಾನಕ್ಕೆ ಬರಲಿ| ಭಜರಂಗಿಗಳಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸವಾಲು

ಸಮಗ್ರ ನ್ಯೂಸ್: ಸುಳ್ಯದ ಚೊಕ್ಕಾಡಿಯಲ್ಲಿ ನ.5 ರಂದು ನಡೆದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಈ ರೀತಿಯ ಯಾವುದೆ ಪ್ರಕರಣ ನಡೆದಿಲ್ಲ ಎಂದ ಭಜರಂಗದಳದವರುಕಾನತ್ತೂರು ದೈವಸ್ಥಾನಕ್ಕೆ ಬರಲಿ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಸವಾಲು ಹಾಕಿದ್ದಾರೆ. ನ.14 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಗೋಪೂಜೆ ಕಾರ್ಯಕ್ರಮದ ವಠಾರದಲ್ಲಿ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ನೊಂದ ಬಾಲಕಿ ನಮ್ಮ ಸಂಘಟನೆಗೆ ದೂರು ನೀಡಿದ್ದಾರೆ.‌ ಆದರೆ

ಸುಳ್ಯ: ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ| ಆರೋಪ ಸುಳ್ಳು ಎಂದವರು ಕಾನತ್ತೂರು ದೈವಸ್ಥಾನಕ್ಕೆ ಬರಲಿ| ಭಜರಂಗಿಗಳಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸವಾಲು Read More »

ಕೊನೆಗೂ ಸುರತ್ಕಲ್ ಟೋಲ್ ಗೇಟ್ ರದ್ದು

ಸಮಗ್ರ ನ್ಯೂಸ್: ಹಲವು ತಿಂಗಳಿಂದ ಭಾರೀ ವಿವಾದಕ್ಕೆ ಕಾರಣವಾಗಿದ್ದ ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಟೋಲ್‌ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದು ಇದೀಗ ಟೋಲ್ ಸಂಗ್ರಹ ರದ್ದುಪಡಿಸಿರುವುದರ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಕೊನೆಗೂ ಸುರತ್ಕಲ್ ಟೋಲ್ ಗೇಟ್ ರದ್ದು Read More »

ಮುರುಘಾ ಶ್ರೀ ವಿರುದ್ದ ಷಡ್ಯಂತ್ರ| ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್: ಫೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧ ಪಿತೂರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಬಸವರಾಜೇಂದ್ರ, ಬಸವರಾಜನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗದ 1 ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಹಾಗೂ ಮುರುಘಾ ಮಠದ ಶಾಲೆಯ ಶಿಕ್ಷಕ ರಾಜೇಂದ್ರ ಅವರು ಮುರುಘಶ್ರೀ ವಿರುದ್ಧ ಪಿತೂರಿ ನಡೆಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇಂದು ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿದ್ದು,

ಮುರುಘಾ ಶ್ರೀ ವಿರುದ್ದ ಷಡ್ಯಂತ್ರ| ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ Read More »