ಕರಾವಳಿ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಬೈಕ್ ಪಲ್ಟಿ; ಸವಾರ ಸಾವು

ಸಮಗ್ರ ನ್ಯೂಸ್ : ಬೈಕ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ರಾತ್ರಿ ಮುಂಡಾಜೆ ಗ್ರಾಮದ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೀಪ ಬಳಿ ಸಂಭವಿಸಿದೆ. ಮೃತ ವ್ಯಕ್ತಿ ಅಣಿಯೂರು ನಿವಾಸಿಯಾಗಿರುವ ಪ್ರದೀಪ್ ಗೌಡ(22) ಎಂದು ಗುರುತಿಸಲಾಗಿದೆ. ಇವರು ರಾತ್ರಿಯ ವೇಳೆ ತಮ್ಮ ಸಂಬಂಧಿಕರಲ್ಲಿಗೆ ಹೋಗುತ್ತಿದ್ದಾಗ ಇವರೇ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಹೊರಗೆ ಚಲಿಸಿ ಮನೆಯೊಂದರ ಗೇಟಿಗೆ ಡಿಕ್ಕಿ ಹೊಡೆದಿದೆ . ಅಪಘಾತದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಬೈಕ್ ಪಲ್ಟಿ; ಸವಾರ ಸಾವು Read More »

ಬೆಳ್ತಂಗಡಿ: ರಿಕ್ಷಾ-ಬೈಕ್ ಡಿಕ್ಕಿ; ಯುವಕ ಮೃತ್ಯು

ಸಮಗ್ರ ನ್ಯೂಸ್: ರಿಕ್ಷಾ ಹಾಗೂ ಬೈಕ್ ನಡುವೆ ಡಿಕ್ಕಿ‌ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ಮಡಂತ್ಯಾರ್ ಸಮೀಪದ ಪಾರೆಂಕಿ ರಸ್ತೆಯಲ್ಲಿ ಸಂಭವಿಸಿದೆ. ಮಡಂತ್ಯಾರ್ ಸೆಕ್ರೆಟ್ ಹಾರ್ಟ್ ಕಾಲೇಜಿನ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಪಾರೆಂಕಿಯ ಶಿವಪ್ರಸಾದ್ ಮೃತಪಟ್ಟವರು. ಇವರು ಕಾಲೇಜಿನಿಂದ ಸಂಜೆ ಮನೆಗೆ ತೆರಳುತ್ತಿದ್ದಾಗ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಧ್ಯರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪುಂಜಾಲಕಟ್ಟೆ

ಬೆಳ್ತಂಗಡಿ: ರಿಕ್ಷಾ-ಬೈಕ್ ಡಿಕ್ಕಿ; ಯುವಕ ಮೃತ್ಯು Read More »

ಕುಕ್ಕೆ ಸುಬ್ರಹ್ಮಣ್ಯ: ಮತ್ತೆ ಧರ್ಮ ದಂಗಲ್| ಪ್ರತ್ಯಕ್ಷವಾಯ್ತು ಅನ್ಯಧರ್ಮೀಯರ ವ್ಯಾಪಾರ ನಿಷೇಧಿಸಿದ ಬ್ಯಾನರ್

ಸಮಗ್ರ ನ್ಯೂಸ್: ರಾಜ್ಯದ ನಂಬರ್ ವನ್ ಯಾತ್ರಾಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂಭ್ರಮ ಹೆಚ್ಚುತ್ತಿದೆ. ದೇಗುಲದಲ್ಲಿ ಇದೀಗ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಭಕ್ತಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಕೆಲಕಾಲ ಸ್ತಬ್ಧವಾಗಿದ್ದ ಧರ್ಮ ದಂಗಲ್ ಕೂಡಾ ಶುರುವಾಗುವ ಲಕ್ಷಣ ಕಂಡುಬಂದಿದೆ. ದೇವಳದ ಚಂಪಾಷಷ್ಠಿಯ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಮತ್ತೊಂದು ವಿವಾದಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಾಕ್ಷಿಯಾಗುವ ಲಕ್ಷಣಗಳು ಕಂಡುಬಂದಿದೆ. ಕುಮಾರಧಾರ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದೂ

ಕುಕ್ಕೆ ಸುಬ್ರಹ್ಮಣ್ಯ: ಮತ್ತೆ ಧರ್ಮ ದಂಗಲ್| ಪ್ರತ್ಯಕ್ಷವಾಯ್ತು ಅನ್ಯಧರ್ಮೀಯರ ವ್ಯಾಪಾರ ನಿಷೇಧಿಸಿದ ಬ್ಯಾನರ್ Read More »

ಸುಳ್ಯ: ಈ ಬ್ಯಾಂಕ್ ಅಧಿಕಾರಿಗೆ ಎಟಿಎಂ‌ ಸೆಂಟರ್ ‌ಬ್ಯಾಟರಿ ಚಾರ್ಜಿಂಗ್ ಪಾಯಿಂಟ್| ಯಾರದ್ದೋ ಪವರ್, ಪುಕ್ಸಟ್ಟೆ ಚಾರ್ಜ್!!

ಸಮಗ್ರ ನ್ಯೂಸ್: ನಾವೆಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ನಮ್ಮ ಮನೆಯಲ್ಲೇ ಪ್ಲಗ್ ಇನ್ ಮಾಡಿ ಚಾರ್ಜ್ ಮಾಡಿದ್ರೆ ಇಲ್ಲೊಬ್ಬ ಬ್ಯಾಂಕ್ ಅಧಿಕಾರಿ ಬ್ಯಾಂಕ್ ನ ಎಟಿಎಂ ಸೆಂಟರ್ ಅನ್ನೇ ತನ್ನ ಸ್ಕೂಟರ್ ನ ಚಾರ್ಜಿಂಗ್ ಪಾಯಿಂಟ್ ಮಾಡ್ಕೊಂಡಿದಾನೆ. ತಿಂಗಳಲ್ಲಿ ಬರೋಬ್ಬರಿ ಸಂಬಳ ಎಣಿಸಿದ್ರೂ ಈ ಅಧಿಕಾರಿಗೆ ಎಲ್ಲವೂ ಪುಕ್ಸಟ್ಟೆನೇ ಆಗ್ಬೇಕು. ಯಾರು ಈ ಮಹಾನುಭಾವ ಅಂತ ಕೇಳಿದ್ರಾ? ಮುಂದೆ ಓದಿ… ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಎಂಬ ಗ್ರಾಮದಲ್ಲಿ ಒಂದು ಎಸ್ ಬಿಐ ಬ್ಯಾಂಕ್ ಶಾಖೆಯಿದೆ. ಇದರ

ಸುಳ್ಯ: ಈ ಬ್ಯಾಂಕ್ ಅಧಿಕಾರಿಗೆ ಎಟಿಎಂ‌ ಸೆಂಟರ್ ‌ಬ್ಯಾಟರಿ ಚಾರ್ಜಿಂಗ್ ಪಾಯಿಂಟ್| ಯಾರದ್ದೋ ಪವರ್, ಪುಕ್ಸಟ್ಟೆ ಚಾರ್ಜ್!! Read More »

ಹಣಕ್ಕಾಗಿ ದೈವದ ಕಟ್ಟೆ ನಿರ್ಮಿಸಿ ಅಪಚಾರ ಮಾಡಿದರೆ ಜೋಕೆ| ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ಕಾಂತಾರ ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದೆ. ದೈವಾರಾಧನೆಕುರಿತು ಚಿತ್ರದಲ್ಲಿ ಅದ್ಬುತವಾಗಿ ತೋರಿಸಲಾಗಿದೆ. ಈ ಸಿನಿಮಾ ಸಕ್ಸಸ್​ ಆದ ಬಳಿಕ ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ. ಇದೀಗ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ದೈವದ ಹೆಸರಲ್ಲಿ ಅನೇಕರು ಹಣ ಮಾಡಲು ಹೊರಟಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಕೆಲವೊಂದು ಪೋಸ್ಟ್​ಗಳು ಹರಿದಾಡುತ್ತಿದೆ. ಅಂಥವರಿಗೆ ತುಳುನಾಡ ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು, ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು, ಪ್ರಚಾರಕ್ಕಾಗಿ,

ಹಣಕ್ಕಾಗಿ ದೈವದ ಕಟ್ಟೆ ನಿರ್ಮಿಸಿ ಅಪಚಾರ ಮಾಡಿದರೆ ಜೋಕೆ| ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ Read More »

ಕರುನಾಡಿನಲ್ಲಿ ಕನ್ನಡಿಗನಿಗೇ ಉದ್ಯೋಗದಲ್ಲಿ ಆದ್ಯತೆ

ಸಮಗ್ರ ನ್ಯೂಸ್: ಕೊನೆಗೂ ಕನ್ನಡಿಗರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರವು ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 70% ರಷ್ಟು ಕೆಲಸ ನೀಡುವ ಉದ್ದೇಶದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಉದ್ಯಮ ಚಟುವಟಿಕೆ ಆರಂಭಿಸುವ ಪ್ರತಿ ಸಂಸ್ಥೆಯು ಸ್ಥಳೀಯ ಕನ್ನಡಿಗರಿಗೆ ಶೇ. 70 ರಷ್ಟು ಉದ್ಯೋಗ ನೀಡುವುದು ಕಡ್ಡಾಯ. ಉಲ್ಲಂಘಿಸಿದ ಉದ್ದಿಮೆಗೆ

ಕರುನಾಡಿನಲ್ಲಿ ಕನ್ನಡಿಗನಿಗೇ ಉದ್ಯೋಗದಲ್ಲಿ ಆದ್ಯತೆ Read More »

ಅಡಿಕೆಗೆ ಎಲೆಚುಕ್ಕಿ ರೋಗವೇ? ಸದ್ಯಕ್ಕೆ ಕುರಿ, ಕೋಳಿಗೊಬ್ಬರ ಬಳಕೆ ನಿಲ್ಲಿಸಿ

ಸಮಗ್ರ ನ್ಯೂಸ್: ಸದ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ನೆಮ್ಮದಿ ಕೆಡಿಸಿರುವುದು ಎಲೆ ಚುಕ್ಕಿ ರೋಗ. ಇದಕ್ಕೆ ಹಲವು ಔಷಧಿಗಳನ್ನು ಬಳಕೆ ಮಾಡಿದ್ರೂ‌ ರೋಗ ಹತೋಟಿಗೆ ಬರುತ್ತಿಲ್ಲ. ಹಾಗಾದ್ರೆ ಈ ರೋಗವನ್ನು ಬಗ್ಗುಬಡಿಯುವ ವಿಧಾನವೇನು? ತಿಳ್ಕೊಳ್ಳೋಣ ಬನ್ನಿ… ಕೃಷಿ ತೋಟಗಳಿಗೆ ಈಗ ಕೊಟ್ಟಿಗೆ ಗೊಬ್ಬರದ ಬದಲಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಬಳಕೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಗೊಬ್ಬರವನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು. ಎಲೆ ಚುಕ್ಕೆ ರೋಗ ಬರೇ ಅಡಿಕೆಗೆ ಮಾತ್ರವಲ್ಲ, ಬೇರೆ

ಅಡಿಕೆಗೆ ಎಲೆಚುಕ್ಕಿ ರೋಗವೇ? ಸದ್ಯಕ್ಕೆ ಕುರಿ, ಕೋಳಿಗೊಬ್ಬರ ಬಳಕೆ ನಿಲ್ಲಿಸಿ Read More »

ಮಂಗಳೂರು: ಆಧಾರ್ ಕಳೆದು ಹೋಗಿದ್ರೆ ನಿರ್ಲಕ್ಷ್ಯವಹಿಸದಿರಿ|ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ|
ಎಡಿಜಿಪಿ ಅಲೋಕ್ ಕುಮಾರ್

ಸಮಗ್ರ ನ್ಯೂಸ್: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾರಿಕ್ ಬಳಿ ಇದ್ದಿದ್ದು ಪ್ರೇಮ್‌ರಾಜ್ ಎನ್ನುವವರ ಆಧಾರ್‌ಕಾರ್ಡ್. ಪ್ರೇಮ್‌ರಾಜ್ ತನ್ನ ಆಧಾರ್‌ಕಾರ್ಡ್ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರೇಮ್‌ರಾಜ್ ಆರೋಪಿ ಆಗುವ ಸಾಧ್ಯತೆ ಇತ್ತು. ಆದರೆ ಎಡಿಜಿಪಿ ಅಲೋಕ್ ಕುಮಾರ್ ಪ್ರೇಮ್‌ರಾಜ್ ಜತೆ ಮಾತುಕತೆ ನಡೆಸಿದ್ದರು. ಹೀಗಾಗಿ ಸತ್ಯ ವಿಚಾರ ಬಹಿರಂಗೊಂಡ ಹಿನ್ನಲೆ ಯಾವುದೇ

ಮಂಗಳೂರು: ಆಧಾರ್ ಕಳೆದು ಹೋಗಿದ್ರೆ ನಿರ್ಲಕ್ಷ್ಯವಹಿಸದಿರಿ|ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ|
ಎಡಿಜಿಪಿ ಅಲೋಕ್ ಕುಮಾರ್
Read More »

ಸುಳ್ಯ: ಪತ್ನಿಯನ್ನು ಕೊಂದು ಗೋಣಿಚೀಲದೊಳಗೆ ತುಂಬಿಸಿ ಪತಿ ಪರಾರಿ

ಸಮಗ್ರ ನ್ಯೂಸ್: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪತಿ ಪರಾರಿಯಾದ ಘಟನೆ ಸುಳ್ಯ ನಗರದ ಬೀರಮಂಗಲದಲ್ಲಿ ನಡೆದಿದೆ. ಬಾಡಿಗೆ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ಹೇಳ ಲಾಗಿದೆ. ಈತ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ ತೆರಳಿದ್ದ. ಇಂದು ಪಕ್ಕದ ರೂಂ

ಸುಳ್ಯ: ಪತ್ನಿಯನ್ನು ಕೊಂದು ಗೋಣಿಚೀಲದೊಳಗೆ ತುಂಬಿಸಿ ಪತಿ ಪರಾರಿ Read More »

ಮಂಗಳೂರು ಸ್ಪೋಟ ಪ್ರಕರಣ| ಶಾರೀಕ್ ಗೆ ಪಂಪ್ವೆಲ್ ಪ್ಲೈ ಜಂಕ್ಷನ್ ಟಾರ್ಗೆಟ್ ಆಗಿತ್ತು!!

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ್ ಪ್ರಕರಣದಲ್ಲಿ ಒಂದೊಂದೇ ಆಘಾತಕಾರಿ‌ ಅಂಶಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಸೆರೆ ಸಿಕ್ಕ ಶಾರೀಕ್ ಪಂಪ್‌ವೆಲ್‌ ಫ್ಲೈ ಓವರ್‌ಬಳಿ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಪಂಪ್ ವೆಲ್ ಜಂಕ್ಷನ್ ಕೇರಳಕ್ಕೆ ಹೋಗುವ ವಾಹನಗಳ ಜೊತೆ ಹಾಸನ, ಕೊಡಗು, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳ ಜನನಿಬಿಡ ಪ್ರದೇಶ. ನಗರಕ್ಕೆ ವಾಹನಗಳ ಪ್ರವೇಶ ಮತ್ತು ನಿರ್ಗಮನ ಈ ರಸ್ತೆಯ ಮೂಲಕವೇ ಆಗುತ್ತದೆ. ಮಂಗಳೂರಿಗೆ

ಮಂಗಳೂರು ಸ್ಪೋಟ ಪ್ರಕರಣ| ಶಾರೀಕ್ ಗೆ ಪಂಪ್ವೆಲ್ ಪ್ಲೈ ಜಂಕ್ಷನ್ ಟಾರ್ಗೆಟ್ ಆಗಿತ್ತು!! Read More »