ಕರಾವಳಿ

ಬಂಟ್ವಾಳ: ವಿದ್ಯಾರ್ಥಿಗಳಿಗೆ ಮತಾಂತರಕ್ಕೆ ಸಂಬಂಧಪಟ್ಟ ಪಾಠ|ಶೈಕ್ಷಣಿಕ ಕಾರ್ಯಾಗಾರ ನಿಲ್ಲಿಸಿದ ಹಿಂಜಾವೇ

ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದಲ್ಲಿ ಯಂಗ್ ಮೆನ್ಸ್ ಅಸೋಸಿಯೇಷನ್‌ನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಹೆಸರಿನಲ್ಲಿ ಮತಾಂತರಕ್ಕೆ ಸಂಬಂಧಪಟ್ಟಂತೆ ಹಲವಾರು ವಿಚಾರಗಳು ವಿವಾದಕ್ಕೆ ಕಾರಣವಾಗಿದೆ. ಶೈಕ್ಷಣಿಕ ಕಾರ್ಯಾಗಾರ ಎನ್ನುವ ಹೆಸರಿನಲ್ಲಿ ಮತಾಂತರಕ್ಕೆ ಪ್ರಚೋದನೆಯಾಗವಂತಹ ಪಾಠ ಮಾಡಲಾಗಿದೆ ಎನ್ನುವ ವಿಚಾರ ಕರಾವಳಿಯ ಗಡಿಭಾಗದಲ್ಲಿ ವಿವಾದಕ್ಕೆ ಕಾರಣವಾಗಿದೆ. ಖಾಸಗಿ ಹಾಲ್‌ನಲ್ಲಿ ಮುಸ್ಲಿಂ ಸಂಘಟನೆಯೊಂದರಿಂದ ಕಾರ್ಯಾಗಾರ ನಡೆದಿದ್ದು, ಕಾರ್ಯಾಗಾರಕ್ಕೆ ಸ್ಥಳೀಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗಿತ್ತು. ಅಲ್ಲಿ ಕೋಮುಪ್ರಚೋದನೆ ಮಾಡಿ ಮತ ಪ್ರಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ಅಲ್ಲಿಗೆ

ಬಂಟ್ವಾಳ: ವಿದ್ಯಾರ್ಥಿಗಳಿಗೆ ಮತಾಂತರಕ್ಕೆ ಸಂಬಂಧಪಟ್ಟ ಪಾಠ|ಶೈಕ್ಷಣಿಕ ಕಾರ್ಯಾಗಾರ ನಿಲ್ಲಿಸಿದ ಹಿಂಜಾವೇ Read More »

ಸುಳ್ಯ: ಮಹಾ ಶವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದುಲಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮವು ನೆರವೇರಿತು. ಮುತ್ತಿನ ಖ್ಯಾತ ಕೃಷಿಕರಾದ ಶ್ರೀ ಸಿ ಕೆ ನವೀನ್ ಚಾತುಬಾಯಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಮತ್ತು ಗಾಯಕ ಹಾಗೂ ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿ ಕಾರ್ಯಕ್ರಮ ನಿರೂಪಿಸಿದರು . .

ಸುಳ್ಯ: ಮಹಾ ಶವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮ Read More »

ಫೆ-26: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಸಂಗೀತ ಸ್ಪರ್ಧೆ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು 4 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಫೆ. 26 ಕ್ಕೆ ಭಾನುವಾರ ದಿನ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಹಾಡಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಬಹುದಾಗಿದೆ . ಯಾವುದೇ ಗೀತೆಯನ್ನು ಪೂರ್ಣವಾಗಿ ಹಾಡಲು ಅವಕಾಶ ಮಾಡಿಕೊಡಲಾಗುವದು. ಕರೋಕೆ ಸಂಗೀತದಲ್ಲಿ ಹಾಡಬೇಕು. ಸಂಗೀತ ಇಲ್ಲದೆಯೂ ಹಾಡಬಹುದು. ಕಿರಿಯ ಗಾಯಕರು ಮತ್ತು ಹಿರಿಯ ಗಾಯಕರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಒಬ್ಬರಿಗೆ ಪ್ರವೇಶ

ಫೆ-26: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಸಂಗೀತ ಸ್ಪರ್ಧೆ Read More »

ಸ್ವಂತ ಅಳಿಯನನ್ನೇ ಅಪಹರಿಸಿದ ಪ್ರಕರಣ| ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಸೇರಿ 6 ಮಂದಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಅಳಿಯನ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ‌, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಆರು ಮಂದಿ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನ್ನನ್ನು ಅಪಹರಣ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಳಿಯ ನವೀನ್ ಗೌಡ ನೀಡಿದ ದೂರಿನಂತೆ ದಿವ್ಯಪ್ರಭಾ, ಅವರ ಪುತ್ರಿ ಸ್ಪಂದನಾ(ನವೀನ್ ಪತ್ನಿ), ದಿವ್ಯಪ್ರಭಾರ ಪತಿ ಪರಶುರಾಮ ಸೇರಿ ಆರು ಜನರ ಮೇಲೆ ಎಫ್.ಐ.ಆರ್. ದಾಖಲು

ಸ್ವಂತ ಅಳಿಯನನ್ನೇ ಅಪಹರಿಸಿದ ಪ್ರಕರಣ| ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಸೇರಿ 6 ಮಂದಿ ವಿರುದ್ಧ ಎಫ್ಐಆರ್ Read More »

ಪಣಂಬೂರು ಬೀಚ್ ನಲ್ಲಿ ಡಿಜೆ ಪಾರ್ಟಿ ಆಯೋಜನೆ| ಯುವಕರ ದಾರಿ ತಪ್ಪಿಸಲು ಪೊಲೀಸರಿಗೆ ‘ಕೈ’ ಬಿಸಿ ಮಾಡಿದವರಾರು? ಸಂಘಟನೆಗಳಿಂದ ಕಿಡಿ…

ಸಮಗ್ರ ನ್ಯೂಸ್: ಪ್ರಸಿದ್ಧ ವಿಹಾರ ತಾಣ ಪಣಂಬೂರು ಬೀಚ್ ನಲ್ಲಿ ಫೆ.19ರ ಸಂಜೆ 4:30ರಿಂದ ಡಿಜೆ ಪಾರ್ಟಿಯೊಂದನ್ನು ಆಯೋಜಿಸಲಾಗಿದ್ದು ಈಗಾಗಲೇ ಅದರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಈ ಮಧ್ಯೆ ಡಿಜೆ ಪಾರ್ಟಿ ಹೆಸರಲ್ಲಿ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಾರಿ ತಪ್ಪುತ್ತಿದ್ದಾರೆ, ಪೊಲೀಸ್ ಇಲಾಖೆ ಅನುಮತಿ ನೀಡಿದ್ದಾದರೂ ಹೇಗೆ ಎಂದು ಹಿಂದೂ ಸಂಘಟನೆಗಳು ಕೆಂಗಣ್ಣು ಬೀರಿವೆ. ಬೀಚ್ ಪ್ರವಾಸೋದ್ಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕಾಡೆ ಮಲಗಿದೆ. ಸಂಜೆ ಆರು ಗಂಟೆಯ ಬಳಿಕ ಜನಸಾಮಾನ್ಯರ ವಿಹಾರಕ್ಕೆ ಪೊಲೀಸರೇ

ಪಣಂಬೂರು ಬೀಚ್ ನಲ್ಲಿ ಡಿಜೆ ಪಾರ್ಟಿ ಆಯೋಜನೆ| ಯುವಕರ ದಾರಿ ತಪ್ಪಿಸಲು ಪೊಲೀಸರಿಗೆ ‘ಕೈ’ ಬಿಸಿ ಮಾಡಿದವರಾರು? ಸಂಘಟನೆಗಳಿಂದ ಕಿಡಿ… Read More »

ಬಂಟ್ವಾಳ: ಗಾಂಜಾ ಅಮಲಿನಲ್ಲಿ ಸ್ನೇಹಿತನಿಗೆ ಚೂರಿ ಇರಿತ

ಸಮಗ್ರ ನ್ಯೂಸ್: ಗಾಂಜಾ ಅಮಲಿನಲ್ಲಿ ಸ್ನೇಹಿತನಿಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಪಾಣೆಮಂಗಳೂರು ನೆಹರು ನಗರದ ನಿವಾಸಿಯಾಗಿರುವ ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ನಿಸಾರ್ ಚೂರಿದು ಇರಿದು ಪರಾರಿಯಾಗಿದ್ದಾನೆ. ನಿಸಾರ್ ಕೂಡ ನೆಹರು ನಗರದ ನಿವಾಸಿಗಳಾಗಿದ್ದು, ಇಬ್ಬರೂ ಕೂಡ ಗಾಂಜ ವ್ಯಸನಿಗಳಾಗಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆ ಇವರಿಬ್ಬರು ನೆಹರು ನಗರದ ಬಳಿ ಬಂದಿದ್ದು , ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು

ಬಂಟ್ವಾಳ: ಗಾಂಜಾ ಅಮಲಿನಲ್ಲಿ ಸ್ನೇಹಿತನಿಗೆ ಚೂರಿ ಇರಿತ Read More »

ವಿಟ್ಲ: ಆಟೊ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಆಟೊ ಚಾಲಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕನ್ಯಾನದಲ್ಲಿ ಫೆ.18ರಂದು ನಡೆದಿದೆ. ಮೃತರನ್ನು ಆಟೊ ಚಾಲಕ ದಿನೇಶ್ ಬೈರಿಕಟ್ಟೆ (32) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ದಿನೇಶ್, ಆಟೊ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.

ವಿಟ್ಲ: ಆಟೊ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಕಳೆಗಟ್ಟಿದ ಶಿವರಾತ್ರಿ; ಕರಾವಳಿಯ ಶಿವದೇಗುಲಗಳಲ್ಲಿ ಇಂದು ವಿಶೇಷ ಪೂಜೆ

ಸಮಗ್ರ ನ್ಯೂಸ್: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕರಾವಳಿಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಶ್ರೀ ಮಂಗಳಾದೇವಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ಕ್ಷೇತ್ರ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾ ನ ಸೇರಿದಂತೆ ನಗರದ ವಿವಿಧ ಸನ್ನಿಧಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 18ರಂದು ಸಂಜೆ 6ಕ್ಕೆ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ

ಕಳೆಗಟ್ಟಿದ ಶಿವರಾತ್ರಿ; ಕರಾವಳಿಯ ಶಿವದೇಗುಲಗಳಲ್ಲಿ ಇಂದು ವಿಶೇಷ ಪೂಜೆ Read More »

ಮಂಗಳೂರು: ಬಸ್ ಢಿಕ್ಕಿ- ವೃದ್ದೆ ಮೃತ್ಯು

ಸಮಗ್ರ ನ್ಯೂಸ್: ರಸ್ತೆ ದಾಟುತ್ತಿದ್ದ ವೃದ್ದೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಗುರುವಾರ ಸಂಭವಿಸಿದೆ. ಮೃತರಾದವರನ್ನು ಆಕಾಶಭವನ ನಿವಾಸಿ ಶ್ರೀಮತಿ ಗೀತಾ (74 ವರ್ಷ) ಎಂದು ಗುರುತಿಸಲಾಗಿದೆ. ಬಸ್ಸು ಚಾಲಕ ವನೀಶ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೀತಾ ಅವರಿಗೆ ಢಿಕ್ಕಿ

ಮಂಗಳೂರು: ಬಸ್ ಢಿಕ್ಕಿ- ವೃದ್ದೆ ಮೃತ್ಯು Read More »

ಉಜಿರೆ: ಕಾಲೇಜಿನ ವಿಧ್ಯಾರ್ಥಿನಿ ನಾಪತ್ತೆ

ಸಮಗ್ರ ನ್ಯೂಸ್: ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿ ದೀಕ್ಷಿತಾ (18) ಎಂದು ಗುರುತಿಸಲಾಗಿದೆ. ಇವರು ಉಜಿರೆ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದು, ಈಕೆ ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಹಾಸ್ಟೆಲ್ ನಿಂದ ಮನೆಗೆಂದು ಹೋದವಳು ಮನೆಗೆ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ದೂರಲಾಗಿದೆ. ಮಗಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆಯ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಿದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ

ಉಜಿರೆ: ಕಾಲೇಜಿನ ವಿಧ್ಯಾರ್ಥಿನಿ ನಾಪತ್ತೆ Read More »