ಕರಾವಳಿ

ಬ್ಯಾಟ್ ಹಿಡಿದು ಕ್ರೀಸ್ ಗಿಳಿದ ಅರುಣ್ ಕುಮಾರ್ ಪುತ್ತಿಲ| ಪುತ್ತೂರಲ್ಲಿ ಗೆಲುವಿನ ಸಿಕ್ಸರ್ ಬಾರಿಸ್ತಾರಾ ಬಂಡಾಯ ನಾಯಕ!?

ಸಮಗ್ರ ನ್ಯೂಸ್: ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಒತ್ತಡದ ನಡುವೆಯೂ ಬಂಡಾಯ ಕಣಕ್ಕಿಳಿದ ಅರುಣ್ ಪುತ್ತಿಲ ತಮ್ಮ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿದ್ದಾರೆ. ಅಲ್ಲದೆ, ತಮ್ಮ ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ಬ್ಯಾಟ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅರುಣ್ ಪುತ್ತಿಲ ಕ್ರೀಸಿಗಿಳಿದು ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದಾರೆ. ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಪರವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಫೇಸ್ಬುಕ್ ಜಾಲತಾಣದಲ್ಲಿ ಅರುಣ್ ಪುತ್ತಿಲ ಪರ ಅಭಿಯಾನ

ಬ್ಯಾಟ್ ಹಿಡಿದು ಕ್ರೀಸ್ ಗಿಳಿದ ಅರುಣ್ ಕುಮಾರ್ ಪುತ್ತಿಲ| ಪುತ್ತೂರಲ್ಲಿ ಗೆಲುವಿನ ಸಿಕ್ಸರ್ ಬಾರಿಸ್ತಾರಾ ಬಂಡಾಯ ನಾಯಕ!? Read More »

ಬೆಳ್ತಂಗಡಿ: ಗೆಳೆಯರೊಂದಿಗೆ ನದಿಗೆ ತೆರಳಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಗೆಳೆಯನೊಂದಿಗೆ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪುದುವೆಟ್ಟು ಗ್ರಾಮದ ಶಾಂತಿ ಹೊಳೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಕಂಚೇರಿ ಕಂಡ ನಿವಾಸಿ ಜೈಸನ್‌ ಪಿ.ವಿ. (34) ತನ್ನ ಅಕ್ಕನ ಮನೆಗೆ ಬಂದಿದ್ದು ಗೆಳೆಯ ಸ್ಟ್ಯಾನ್ಲಿಯೊಂದಿಗೆ ರವಿವಾರ ಪುದುವೆಟ್ಟು ಗ್ರಾಮದ ಶಾಂತಿಯ ಹೊಳೆಗೆ ಸ್ನಾನಕ್ಕೆಂದು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಸ್ನಾನಕ್ಕೆ ಇಳಿದ ಜೈಸನ್‌ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಅವರ ಮೃತದೇಹವು ಪತ್ತೆಯಾಗಿದೆ. ಈ ಬಗ್ಗೆ

ಬೆಳ್ತಂಗಡಿ: ಗೆಳೆಯರೊಂದಿಗೆ ನದಿಗೆ ತೆರಳಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ Read More »

ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ್ದ 72 ಜನರಲ್ಲಿ 12 ಜನರು ನಾಮಪತ್ರ ಹಿಂತೆಗೆದುಕೊಂಡುದರಿಂದ ಈಗ ಸ್ಪರ್ಧೆಯಲ್ಲಿ 60 ಮಂದಿ ಉಳಿದಿದ್ದಾರೆ. ಮಂಗಳೂರು ಉತ್ತರದಲ್ಲಿ 10, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಮಂಗಳೂರು ದಕ್ಷಿಣಗಳಲ್ಲಿ ತಲಾ 8, ಬಂಟ್ವಾಳ 6, ಮಂಗಳೂರು ಉಳ್ಳಾಲದಲ್ಲಿ 4 ಮಂದಿ ಉಳಿದಿದ್ದಾರೆ. ಮೇ.10 ರಂದು ಚುನಾವಣೆ ನಡೆಯಲಿದ್ದು, ಮೇ. 13ಕ್ಕೆ ಈ ಸ್ಪರ್ಧಾಳುಗಳ ಭವಿಷ್ಯ ತಿಳಿಯಲಿದೆ.

ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ Read More »

ಬೆಳ್ತಂಗಡಿ: ಮಾಜಿ‌ ಶಾಸಕ,‌ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಬಳಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಮನೆ ಮೇಲೆ‌ ಏ.24 ರಂದು ಬೆಳಗ್ಗೆ 6:30 ಕ್ಕೆ ಆದಾಯ‌ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದು, ಹಲವು ಸೊತ್ತು‌ ಹಾಗೂ ದಾಖಲೆಗಳು ವಶವಾಗಿವೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ಏಕಕಾಲದಲ್ಲಿ ಏ.24 ರ ಬೆಳಗ್ಗೆ 6:30 ಕ್ಕೆ ದಾಳಿ ಮಾಡಿದ್ದರು.

ಬೆಳ್ತಂಗಡಿ: ಮಾಜಿ‌ ಶಾಸಕ,‌ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಬಳಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್ Read More »

ಹವಾಮಾನ ವರದಿ| ಇನ್ನಾದರೂ ಬಂದೀತೇ ಮಳೆ? ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಮಗ್ರ ನ್ಯೂಸ್: ಬಿಸಿಲ ಬೇಗೆಗೆ ಕಾದು ಕೆಂಪಾಗಿರುವ ಇಳೆಗೆ ಮಳೆಯ ಸಿಂಚನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದಿನಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರದಿಂದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಬಾಗಲಕೋಟೆ, ಕಲಬುರ್ಗಿ, ಬೀದರ್, ಬೆಳಗಾವಿ, ರಾಯಚೂರು, ಕೊಪ್ಪಳ, ಯಾದಗಿರಿ, ಜಿಲ್ಲೆಗಳಲ್ಲಿ

ಹವಾಮಾನ ವರದಿ| ಇನ್ನಾದರೂ ಬಂದೀತೇ ಮಳೆ? ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಸುಬ್ರಹ್ಮಣ್ಯ: ಕಾಡಾನೆ ಪ್ರತ್ಯಕ್ಷ; ಅಸ್ವಸ್ಥಗೊಂಡಿರುವ ಶಂಕೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಅಸ್ವಸ್ಥಗೊಂಡಿರುವ ಶಂಕೆ ಸ್ಥಳೀಯವಾಗಿ ವ್ಯಕ್ತವಾಗಿದೆ. ರವಿವಾರ ಸಂಜೆಯಿಂದ ರಾತ್ರಿವರೆಗೆ ಚೇರು ಭಾಗದಲ್ಲಿ ಸಂಚರಿಸಿರುವ ಕಾಡಾನೆ ಸೋಮವಾರ ಬೆಳಗ್ಗೆ ಎರ್ಮಾಯಿಲ್ ಭಾಗದಲ್ಲಿ ಕಾಣಸಿಕ್ಕಿದೆ. ಆನೆ ನೋಡಲು ತೀರಾ ಅಸ್ವಸ್ಥಗೊಂಡಿರುವಂತೆ ಕಂಡಿದ್ದು, ನಡೆದಾಡಲು ಕಷ್ಟಪಡುತ್ತಿದ್ದು, ಎಡಗಾಲಿಗೆ ಬಲವಾದ ಗಾಯವಾಗಿದ್ದು, ತಿಂದ ಆಹಾರ ಜಗಿದು ಅಲ್ಲಲ್ಲೇ ಉಗುಲಿ ಹೋಗುತ್ತಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಗಮನ ಹರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ. ಈ ಬಗೆಗಿನ ಬರಹವೂ ವೈರಲ್

ಸುಬ್ರಹ್ಮಣ್ಯ: ಕಾಡಾನೆ ಪ್ರತ್ಯಕ್ಷ; ಅಸ್ವಸ್ಥಗೊಂಡಿರುವ ಶಂಕೆ Read More »

ಸುಳ್ಯ: ಮಾಜಿ‌ ಶಾಸಕ ಕೆ.ಕುಶಲ ಪುತ್ರ ಸುಧೀರ್ ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆ

ಸಮಗ್ರ ನ್ಯೂಸ್: ಸುಳ್ಯದ‌ ಮಾಜಿ ಶಾಸಕ ಕೆ ಕುಶಲರವರ ಮಗ ಸುಧೀರ್ ಬೆಳ್ಳಾಳ್ಕರ್ ರವರು ಇಂದು ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಸಿದ್ದಾಂತವನ್ನು ಒಪ್ಪಿ ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ನೇಮಕಗೊಂಡಿದ್ದಾರೆ. ಪಕ್ಷದ ಸಂಪೂರ್ಣ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಕೆ.ಆರ್.ಎಸ್ ಪಕ್ಷದ ಅಧ್ಯಕ್ಷರು ಅವಿನಾಶ್ ಕಾರಿಂಜ, ಪ್ರದಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್ ರವರು ಸುದೀರ್ ರನ್ನು ಬರಮಾಡಿಕೊಂಡರು.

ಸುಳ್ಯ: ಮಾಜಿ‌ ಶಾಸಕ ಕೆ.ಕುಶಲ ಪುತ್ರ ಸುಧೀರ್ ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆ Read More »

ಬೆಳ್ತಂಗಡಿ: ಮಾಜಿ ಸಚಿವ ಗಂಗಾಧರ ಗೌಡ ಮನೆ‌ ಮೇಲೆ ಐಟಿ ದಾಳಿ

ಸಮಗ್ರ ನ್ಯೂಸ್: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಮೂರು ಸ್ಥಳಗಳಿಗೆ ಇಂದು ಏ.24 ರಂದು ಬೆಳಗ್ಗೆ ದಾಳಿ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟುನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇಂದು ಬೆಳಗ್ಗೆ 6.30 ರ ಸುಮಾರಿಗೆ ಇನೋವಾ ಕಾರಿನಲ್ಲಿ

ಬೆಳ್ತಂಗಡಿ: ಮಾಜಿ ಸಚಿವ ಗಂಗಾಧರ ಗೌಡ ಮನೆ‌ ಮೇಲೆ ಐಟಿ ದಾಳಿ Read More »

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ

ಸಮಗ್ರ ನ್ಯೂಸ್: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರು ಇಂದು ಕಟೀಲಿಗೆ ಭೇಟಿ ನೀಡಿದ್ದರು. ಕುಟುಂಬ ಸಮೇತವಾಗಿ ಆಗಮಿಸಿದ್ದ ಶಿಲ್ಪಾ ಶೆಟ್ಟಿ ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌ಮೂಲತಃ ಕತಾವಳಿಯವರಾದ ಶಿಲ್ಪಾಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದಾರೆ.ಆದರೆ ಅವರು ತಮ್ಮ ಹುಟ್ಟೂರನ್ನು ಮರೆತಿಲ್ಲ. ಆಗಾಗ, ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುತ್ತಾರೆ. ಭೂತ ಕೋಲಾ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಗಳ ದೇಗುಲಗಳ ದರ್ಶನವೂ ಮಾಡುತ್ತಿದ್ದಾರೆ.

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ Read More »

ಎಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ

ಸಮಗ್ರ ನ್ಯೂಸ್: ಎಪ್ರಿಲ್ 27 ರಂದು ಮಂಗಳೂರಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಎಪ್ರಿಲ್ 27ರಂದು ಕಾಪುವಿಗೆ ಆಗಮಿಸುವ ರಾಹುಲ್ ಗಾಂಧಿ ಅಲ್ಲಿನ ಮೀನುಗಾರರ ಜೊತೆಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎ.24ರಂದು ಮಂಗಳೂರಿಗೆ ಆಗಮಿಸಿ ಎ.25ರಂದು ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳಿಗೆ

ಎಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ Read More »