ಕರಾವಳಿ

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ

ಸಮಗ್ರ ನ್ಯೂಸ್: ಇಂದಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಲ್ಲಿ 2000 ಮುಖಬೆಲೆಯ ನೋಟುಗಳ ವಿನಿಮಯ ಆರಂಭಿಸಲಾಗುತ್ತಿದೆ. ಕೌಂಟರ್ನಲ್ಲಿ 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡುವ ಸೌಲಭ್ಯವನ್ನು ಸಾರ್ವಜನಿಕರಿಗೆ ಸಾಮಾನ್ಯ ರೀತಿಯಲ್ಲಿ ಒದಗಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೇಳಿದೆ. ಮೇ.23ರ ಮಂಗಳವಾರದ ಇಂದಿನಿಂದ ಹಿಂಪಡೆಯಲಾದಂತ 2,000 ರೂಪಾಯಿ ಮುಖಬಲೆಯ ನೋಟುಗಳನ್ನು ಯಾವುದೇ ಬ್ಯಾಂಕಿನಲ್ಲಿ ನೀಡಿ, ಇತರೆ ಮುಖ ಬೆಲೆಯ ನೋಟುಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸಿದೆ. 2000 ಮುಖಬೆಲೆಯ ನೋಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವುದನ್ನು

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ Read More »

ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ‘ಗಿರಿಜನರ ಜೊತೆ ಒಡನಾಟ’ ಶಿಬಿರ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯ ಸ್ನಾನತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ, ಕೊಣಾಜೆ ಇದರ ಆಶ್ರಯದಲ್ಲಿ ಗಡಿನಾಡ ಗಿರಿಜನರ ಜೊತೆ ಒಡನಾಟದ ಪಯಣ ಶಿಬಿರವು ದಿನಾಂಕ 20 ಮೆ 2023 ರಿಂದ 26 ಮೇ 2023ರವರೆಗೆ ನಡೆಯಲಿದ್ದು, ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವು 20 ಮೇ 2023 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಾದ ಶೇಖರ್ ಇವರು ಶಿಬಿರದ ಕುರಿತು ಸಲಹೆಗಳನ್ನು ನೀಡುವುದರ ಮೂಲಕ ಕಾರ್ಯಕ್ರಮದ

ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ‘ಗಿರಿಜನರ ಜೊತೆ ಒಡನಾಟ’ ಶಿಬಿರ Read More »

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದ್ದು, ವರುಣಾರ್ಭಟಕ್ಕೆ 8 ಮಂದಿ ಬಲಿಯಾಗಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತಿಹೆಚ್ಚು ಬೆಳೆ ನಷ್ಟ ಕೋಲಾರದಲ್ಲಿ ಆಗಿದ್ದು, 7,166 ಎಕರೆ ಬೆಳೆಹಾನಿಯಾಗಿದೆ. ಕೊಪ್ಪಳದಲ್ಲಿ 618 ಕ್ಕೂ ಹೆಚ್ಚು ಎಕರೆ, ದಾವಣಗೆರೆಯಲ್ಲಿ 153 ಎಕರೆ, ಚಿಕ್ಕಬಳ್ಳಾಪುರದಲ್ಲಿ 100 ಎಕರೆ, ಹಾವೇರಿಯಲ್ಲಿ 16 ಎಕರೆ, ಚಿತ್ರದುರ್ಗ 39 ಎಕರೆ, ಹಾವೇರಿಯಲ್ಲಿ 16 ಎಕರೆ ಬೆಳೆ ನಷ್ಟವಾಗಿದೆ. ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಮತ್ತೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ Read More »

ಸುಳ್ಯ: ಕೊಡಿಯಾಲಬೈಲ್‌ ನಲ್ಲಿ ಪರಿವಾರ ದೈವಗಳ ನೇಮೋತ್ಸವ

ಸಮಗ್ರ ನ್ಯೂಸ್: ಮೇ 22, ಕೊಡಿಯಾಲಬೈಲಿನ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಸ್ಥಾನದಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಿತು. ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಮೇ 20 ರಿಂದ 22ನೇ ಸೋಮವಾರದ ತನಕ ನಡೆಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಮನರಂಜಿಸಲಾಯಿತು. ಮೇ 21ರ ರಾತ್ರಿ ಶ್ರೀ

ಸುಳ್ಯ: ಕೊಡಿಯಾಲಬೈಲ್‌ ನಲ್ಲಿ ಪರಿವಾರ ದೈವಗಳ ನೇಮೋತ್ಸವ Read More »

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಮೇ 22, ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ. ಶೇಖಮಲೆಯ ಜಾರತ್ತಾರು ನಿವಾಸಿ ಆನಂದ ರವರ ಪುತ್ರ ರಿತೇಶ್(18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಇಂದು ಮಧ್ಯಾಹ್ನ ಮನೆಯ ಪಕ್ಕದಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾನೆ. ಈತ ಪುತ್ತೂರಿನ ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜಿನ ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ಅವನ ಸ್ನೇಹಿತರಿಂದ ತಿಳಿದು ಬಂದಿದೆ. ಹದಿನೆಂಟರ ಹರೆಯದ ರಿತೇಶ್

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಹೊಸದೊಂದು ಸಂಘಟನೆ ಕಟ್ಟಿದ ಅರುಣ್ ಕುಮಾರ್ ಪುತ್ತಿಲ| ಬಿಜೆಪಿಗೆ ಸೆಡ್ಡು ಹೊಡೆದು ಲೋಕಾರ್ಪಣೆಗೊಂಡ ‘ಪುತ್ತಿಲ ಪರಿವಾರ’

ಸಮಗ್ರ ನ್ಯೂಸ್: ಬಿಜೆಪಿಯಿಂದ ಬಂಡಾಯ ಎದ್ದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ಕಳುಹಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಇದೀಗ ಸಂಘ ಪರಿವಾರಕ್ಕೆ ಸಡ್ಡು ಹೊಡೆಯಲು ಮತ್ತೊಂದು ಸಂಘಟನೆ ರೂಪುಗೊಂಡಿದೆ. ಪುತ್ತಿಲ ಪರಿವಾರ ಹೆಸರಿನಲ್ಲಿ ಹೊಸ ಸಂಘಟನೆ ಇಂದು ಲೋಕಾರ್ಪಣೆಗೊಂಡಿದೆ. ಇಂದು ನಡೆದ ಪುತ್ತಿಲ ಬೆಂಬಲಿಗರ ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಪಾದಯಾತ್ರೆ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಈ ಹೊಸ ಸಂಘಟನೆ ಹುಟ್ಟುಕೊಂಡಿದೆ.

ಹೊಸದೊಂದು ಸಂಘಟನೆ ಕಟ್ಟಿದ ಅರುಣ್ ಕುಮಾರ್ ಪುತ್ತಿಲ| ಬಿಜೆಪಿಗೆ ಸೆಡ್ಡು ಹೊಡೆದು ಲೋಕಾರ್ಪಣೆಗೊಂಡ ‘ಪುತ್ತಿಲ ಪರಿವಾರ’ Read More »

Weather report| ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ಹವಾಮಾನ ಇಲಾಖೆಯಿಂದ ಈ ಕುರಿತಾಗಿ ಮುನ್ಸೂಚನೆ ನೀಡಲಾಗಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ರಾಮನಗರ, ವಿಜಯನಗರ, ಕೋಲಾರ, ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೋಮವಾರ ಗುಡುಗು ಸಹಿತ ಮಳೆಯಾಗುವ

Weather report| ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆ Read More »

ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ

ಸಮಗ್ರ ನ್ಯೂಸ್: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ(71) ಅಲ್ಪಕಾಲದ ಅಸೌಖ್ಯದಿಂದ ಇದ್ದ ಇವರು ಉಡುಪಿಯ ಬಡಗುಪೇಟೆಯ ತಮ್ಮ ಮನೆಯಲ್ಲಿ ಇಂದು ನಿಧನರಾಗಿದ್ದಾರೆ. 1952 ರಲ್ಲಿ ಹುಟ್ಟಿದ ಅವರು, 1994 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ(ಕೆಸಿಪಿ) ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅನಂತರ ಕೆಸಿಪಿ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿತ್ತು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಎಂಎಲ್ ಎ ಆಗಿ ಮರು ಆಯ್ಕೆಯಾಗಿದ್ದರು. ಅನಂತರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಎರಡು ಗಂಡು,

ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ Read More »

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಟಾನಕ್ಕೆ ತರಲಿರುವ ಗ್ಯಾರಂಟಿ ಯೋಜನೆಗಳನ್ನು ಬಹಿಷ್ಕರಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ ಎಂಬ ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನೀವು ಉಚಿತ ಯೋಜನೆಗಳನ್ನು ಪಡೆದರೆ ನನ್ನ ಮಾನ ಹರಾಜು ಹಾಕಿದಂತೆ, ಸ್ವಾಭಿಮಾನ ಇರುವ ನಾವು ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಬೇಡ, ಯೋಜನೆಗಳನ್ನು ಬಹಿಷ್ಕರಿಸಿ ನನ್ನ ಮಾನ ಉಳಿಸಿ’ ಎಂದು ಮನವಿ ಮಾಡಲಾದ ಪೋಸ್ಟರ್ ಅನ್ನು ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿದ್ದಾರೆ.

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ? Read More »

ಸುಳ್ಯ: ಸಿದ್ದರಾಮಯ್ಯ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಕರ್ನಾಟಕದ ನೂತನ ಸಿಎಂ ಆಗಿ ಪದಗ್ರಹಣ ವಹಿಸಿಕೊಂಡ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಹರಿದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆಯಲ್ಲಿ ನಡೆದಿದೆ. ಇಲ್ಲಿನ ಬಸ್ ತಂಗುದಾಣ ಪಕ್ಕ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ಅನ್ನು ಅವರ ಅಭಿಮಾನಿ ಬಳಗಿದಂದ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ಈ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಸಿದ್ದರಾಮಯ್ಯ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು Read More »